ಸವಿತಾ ಹಾಲಪ್ಪನವರ್ ಸಾವು ಒಂದು ರೀತಿಯಲ್ಲಿ ಕೊಲೆಯಲ್ಲವೆ?

ಧರ್ಮ ಮುಖ್ಯವೋ ಅಥವಾ ಜೀವವೋ? ಸವಿತಾ ಸಾವಿನ ಬಳಿಕ ಈ ಪ್ರಶ್ನೆ ಮತ್ತೆ ಎದ್ದು ನಿಂತಿದೆ. ಜೀವ ವಿರೋಧಿ ನೀತಿಯ ಇಂತಹುಗಳನ್ನು ನಿಜಕ್ಕೂ ಧರ್ಮ ಎನ್ನಬೇಕೆ ಎಂಬ ಜಿಜ್ಞಾಸೆ ಮೂಡುತ್ತದೆ. ಅಹಿಂಸಾ ಪರಮೋ ಧರ್ಮ ಎಂಬ ನಿಲುವು ಒಂದೆಡೆಯಾದರೆ, ಧರ್ಮಕ್ಕಾಗಿ ಜೀವವನ್ನು ಕೊಲ್ಲುವ ಈ ರೀತಿಯ ಕಾನೂನು ಯಾವ ಪುರುಷಾರ್ಥಕ್ಕಾಗಿ? ಐರಿಶ್ ಕಾನೂನಿನಲ್ಲಿ ಬದಲಾವಣೆಯಾಗಬೇಕು ಎಂಬ ಆಗ್ರಹ ಕಳೆದ ಹಲವಾರು ವರ್ಷಗಳಿಂದ ಕೇಳಿಬರುತ್ತಿದೆ. ಸವಿತಾ ಸಾವಿನ ಬಳಿಕವಾದರೂ ಐರಿಶ್ ಸರ್ಕಾರ ಹಾಗೂ ಧರ್ಮಗುರುಗಳು ಕಣ್ಣುತೆರೆಯುತ್ತಾರೆಯೆ? ಅಷ್ಟಕ್ಕೂ ಸವಿತಾ ಸಾವು, ಸಾವಲ್ಲ. ಅದು ಪರೋಕ್ಷ ಕೊಲೆ ಎನಿಸುತ್ತದೆ.

ಮಾಧ್ಯಮ ರಂಗದ ಹೊಸ ರೋಗ

……..

ಯಾರೇ ಮಾಧ್ಯಮ ರಂಗ ಪ್ರವೇಶಿಸಿದರೂ, ಡೆಸ್ಕ್ ನಲ್ಲಿ ಮೊದಲು ಕೊಡುವ ಕೆಲಸವೇ ಇಂಗ್ಲೀಷ್ ಕಾಪಿಗಳನ್ನ ಕನ್ನಡಕ್ಕೆ ಅನುವಾದ ಮಾಡುವುದು. ಇಂಗ್ಲೀಷ್ ಹಾಗೂ ಕನ್ನಡ ಭಾಷೆ ಸುಧಾರಿಸಲಿ ಎಂಬ ಉದ್ದೇಶದ ಜೊತೆಗೆ, ಡೆಸ್ಕ್ ನ ಅವಿಭಾಜ್ಯ ಕೆಲಸಗಳಲ್ಲಿ ಇದು ಒಂದಾಗಿದೆ. ತುಂಬಾ ಮುಖ್ಯವಾದ ಅಥವಾ ತಾಂತ್ರಿಕ, ವೈಜ್ಞಾನಿಕ, ಆರ್ಥಿಕ ವರದಿಗಳನ್ನ ಮುಖ್ಯಸ್ಥರೇ ಅನುವಾದಿಸುತ್ತಾರೆ.

ಆದರೆ ಇತ್ತೀಚೆಗೆ ಹಲವು ಮಾಧ್ಯಮ ಸಂಸ್ಥೆಗಳಲ್ಲಿ ಹೊಸ ರಕ್ತಕ್ಕೆ ರೋಗವೊಂದು ಅಂಟಿಕೊಂಡಿದೆ. ಇಂಗ್ಲೀಷ್ ಕಾಪಿ ಕೊಟ್ಟ ತಕ್ಷಣ, google ಟ್ರಾನ್ಸ್ ಲೇಷನ್ ಗೆ ಹೋಗಿ ಛಕ್ಕಂತ ಅನುವಾದ ಮಾಡಿಬಿಡುವುದು. ಸಣ್ಣ ಪುಟ್ಟ ತಪ್ಪುಗಳನ್ನ ನಂತರ ಸರಿಪಡಿಸುವುದು. ಆದರೆ ಈ ರೀತಿ ಮಾಡುವುದರಿಂದ ತಲೆಗೇನೂ ಕೆಲಸವಿಲ್ಲ. ಇಂತಹ ತಲೆಗಳಿಗೆ ಮುಂದೆ ಭವಿಷ್ಯವೂ ಇಲ್ಲ ಬಿಡಿ.

ಕೃಷ್ಣಾರ್ಪಣಮಸ್ತು…