ನಗ್ನ ಹೆಂಗಸು ರಸ್ತೆ ಮೇಲೆ ನಡೆದು ಬಂದಾಗ…

.....
…..

ಇಂತಹ ಪರಿಸ್ಥಿತಿ ಎದುರಾದಾಗ ನಿಜಕ್ಕೂ ಏನು ಮಾಡಬೇಕು ತೋಚುವುದೇ ಇಲ್ಲ. ಇದು ನನ್ನ ಗೆಳಯನಿಗಾದ ಅನುಭವ. ಬನ್ನೇರುಘಟ್ಟದ ಶಾಪರ್ಸ್ ಟಾಪ್ ಬಳಿ ಶಾಪಿಂಗ್ ಮಾಡಿ ಈತ ಅದಷ್ಟೇ ತನ್ನ ಗರ್ಲ್ ಫ್ರೆಂಡ್ ಜೊತೆ ಹೊರಬಂದಿದ್ದಾನೆ. ರಸ್ತೆಯ ಮೇಲಿನ ದೃಶ್ಯ ನೋಡಿ ಯಾವ ರೀತಿ ಪ್ರತಿಕ್ರಿಯೆ ವ್ಯಕ್ತಪಡಿಸಬೇಕೋ ಗೊತ್ತಾಗಿಲ್ಲ. ಒಟ್ಟಿನಲ್ಲಿ ಆತನಿಗೆ ಶಾಕ್ ಆಗಿದೆ. ಮಾನಸಿಕ ಸ್ಥಿಮಿತ ಕಳೆದುಕೊಂಡ ನಡುವಯಸ್ಸಿನ ಹೆಂಗಸೊಬ್ಬಳು ಸಂಪೂರ್ಣ ನಗ್ನವಾಗಿ ನಡೆದುಕೊಂಡು ಹೋಗುತ್ತಿದ್ದಾಳೆ. ಹಲವಾರು ತಿಂಗಳುಗಳಿಂದ ಸ್ನಾನ ಮಾಡಿರದ ಕಾರಣ ಆಕೆಯ ತಲೆ ಕೂದಲು ಧೂಳು ಮಣ್ಣಿನಿಂದ ಸುಕ್ಕಾಗಿಹೋಗಿತ್ತು. ಮೈಮೇಲೆ ಅಲ್ಲಲ್ಲಿ ಗಾಯವಾಗಿರುವ ಗುರುತಿದೆ. ಸಂಪೂರ್ಣ ನಗ್ನ ದೇಹ ಕೊಳಕುಕೊಳಕಾಗಿದೆ. ಆದರೆ ಆಕೆ ತನಗೂ ಈ ಜಗತ್ತಿಗೂ ಸಂಬಂಧವೇ ಇಲ್ಲದಂತೆ ತನ್ನ ಪಾಡಿಗೆ ತಾನು ನಡೆದುಕೊಂಡು ಹೋಗುತ್ತಿದ್ದಾಳೆ. ಆಕೆಗೆ ಬಟ್ಟೆ ತೊಡಿಸುವ ಧೈರ್ಯ, ಔದಾರ್ಯ, ಸಮಯ ಯಾರಿಗೂ ಇಲ್ಲ. ಎಲ್ಲರೂ ಒಂದು ಕ್ಷಣ ಆಕೆಯನ್ನು ನೋಡಿ ನಾಚಿಕೆ, ಅಸಹ್ಯ, ಜಿಗುಪ್ಸೆಯ ಭಾವಗಳನ್ನು ಪ್ರದರ್ಶಿಸಿ ತಮ್ಮ ಪಾಡಿಗೆ ತಾವು ಹೋಗುವವರೇ.

ಇಂತಹವರಿಗಾಗಿಯೇ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಕಾರ್ಯನಿರ್ವಹಿಸುತ್ತಿದೆ. ಆದಷ್ಟು ಮಟ್ಟಿಗೆ ಚೆನ್ನಾಗಿಯೇ ಕೆಲಸ ಮಾಡುತ್ತಿದೆ. ಈ ಹಿಂದೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಕ್ಯಾಲೆಂಡರ್ ಒಂದನ್ನು ಡಿಸೈನ್ ಮಾಡುವ ಸಂದರ್ಭದಲ್ಲಿ ಫೋಟೋ ಶೂಟ್ ಗಾಗಿ ಪುನರ್ವಸತಿ ಕೇಂದ್ರವೊಂದಕ್ಕೆ ಹೋಗಿದ್ದೆ. ಅಲ್ಲಿನ ಪರಿಸ್ಥಿತಿ ನಿಜಕ್ಕೂ ಎಂತಹ ಕಲ್ಲುಹೃದಯದವರನ್ನೂ ಕರಗಿಸುವಂತಿತ್ತು. ಅಲ್ಲಿನ ಅಧಿಕಾರಿಯೊಬ್ಬರು ಮಾತನಾಡುತ್ತ ಹೇಳಿದ್ದರು, “ಇಲ್ಲಿ ಕೆಲಸಕ್ಕೆ ಯಾರೂ ಬರುವುದಿಲ್ಲ. ಕಳೆದ ಐದು ವರ್ಷಗಳಿಂದ ಇಲ್ಲಿ 6 ಪೋಸ್ಟ್ ಗಳು ಖಾಲಿ ಇವೆ. ಆದರೆ ಯಾರೂ ಬಂದಿಲ್ಲ. ಸಂಬಳ ಚೆನ್ನಾಗಿಯೇ ಆದೆ. ಆದರೆ ಮಾನಸಿಕ ಸ್ಥಿಮಿತ ಕಳೆದುಕೊಂಡ, ಕೆಲವೊಮ್ಮೆ ಹಿಂಸಾ ಪ್ರವೃತ್ತಿ ತೋರುವ, ಸದಾ ಜೊಲ್ಲು ಸುರಿಸಿಕೊಂಡು, ಇದ್ದಲ್ಲೇ ಶೌಚ ಮಾಡಿಕೊಳ್ಳುವ ಇಂತಹವರ ಸೇವೆಗಾಗಿ ಯಾರು ಬರುತ್ತಾರೆ ಹೇಳಿ?” ಅಂತ.

ಸಮಾಜ ಸಂವೇದನೆಯನ್ನು ಬೆಳಸಿಕೊಳ್ಳುವವರೆಗೂ ಈ ರೀತಿಯ ಘಟನೆಗಳು ನಡೆಯುತ್ತಲೇ ಇರುತ್ತವೆ.

Advertisements

2 thoughts on “ನಗ್ನ ಹೆಂಗಸು ರಸ್ತೆ ಮೇಲೆ ನಡೆದು ಬಂದಾಗ…

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s