ಹೂವಿನ ಹಾಡು ಪುಸ್ತಕ ಬಿಡುಗಡೆಯಂದು

ಅಂಜಲಿ ರಾಮಣ್ಣ ಸಂಪಾದಿಸಿರುವ ಹೂವಿನ ಹಾಡು ಪುಸ್ತಕ ಬಿಡುಗಡೆಯ ವೇಳೆ ನಿರ್ದೇಶಕ ಪಿ. ಶೇಷಾದ್ರಿಯವರಿಂದ ಪುಸ್ತಕ ಸ್ವೀಕರಿಸುತ್ತಿರುವುದು.

....
….

ಸಿಟಿ ಮ್ಯಾಪ್ ಕೊಂಡರೆ ಮಾತ್ರ ಬಸ್ ಪಾಸ್

ಸುದ್ದಿ ಕೃಪೆ – ವಿಜಯ ಕರ್ನಾಟಕ – 16-12-2013

.....
…..

INVITE – ಹೂವಿನ ಹಾಡು ಪುಸ್ತಕದ ಬಿಡುಗಡೆ

ಅಸ್ತಿತ್ವ ಲೀಗಲ್ ಟ್ರಸ್ಟ್ ಸ್ವಾಗತಿಸುತ್ತಿದೆ ನಿಮ್ಮನ್ನು;
ASTITVA LEGAL TRUST INVITES YOU TO THE RELEASE OF BOOK
“ಹೂವಿನ ಹಾಡು ” ಪುಸ್ತಕ (ಸಂ.ಅಂಜಲಿ ರಾಮಣ್ಣ)
“HOOVINA HAADU “ (Edited by Smt.Anjali Ramanna)
ಅರ್ಪಣೆಯ ಸಮಾರಂಭಕ್ಕೆ ಬನ್ನಿ, ಜೊತೆಗಿದ್ದು ನಮ್ಮ ಹಾಡಿನ ಧ್ವನಿಯಾಗಿ
ದಿನಾಂಕ : ೧೪ – ಡಿಸೆಂಬರ್ – ೨೦೧೩, ಶನಿವಾರ
ಸಮಯ : ಸಂಜೆ ೬ ಗಂಟೆ
ಸ್ಥಳ : ಉಡ್ ರೋಸ್ ಕ್ಲಬ್
ಬ್ರಿಗೇಡ್ ಮಿಲೆನಿಯಂ ಆವರಣ
ಜೆ ಪಿ ನಗರ , ೭ನೇ ಹಂತ,
ಬೆಂಗಳೂರು-೫೬೦ ೦೭೮
ದೂರವಾಣಿ : ೦೮೦ ೧೯೯೫೯೯೯ Date: 14/ December/2013, Saturday
Time : Evening Six O’clock ( 6 PM)
Venue: Woodrose Club
Brigade Millennium Complex,
7th Phase JP Nagara,
Bangalore-560 078

Phone: 080 41995999

ಪುಸ್ತಕ ನಿಮಗೆ ಕೊಡುವವರು;
ಶ್ರೀ. ಪಿ. ಶೇಷಾದ್ರಿ Sri.P.Sheshadri
ರಾಷ್ಟ್ರ ಪ್ರಶಸ್ತಿ ವಿಜೇತ ಚಲನಚಿತ್ರ ನಿರ್ದೇಶಕರು National Award winning Film Maker

ಪುಸ್ತಕದ ಬಗ್ಗೆ ಮಾತನಾಡುವವರು;
ಶ್ರೀಮತಿ. ಸಿ.ಜಿ. ಮಂಜುಳ Smt.C.G.Manjula
ರಾಜ್ಯ ಪ್ರಶಸ್ತಿ ವಿಜೇತ ಹಿರಿಯ ಪತ್ರಕರ್ತೆ State Award winning Senior Journalist

ಬ್ರೇಕಿಂಗ್ ನ್ಯೂಸ್ – ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಇನ್ನಿಲ್ಲ

ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ನಿಧನರಾಗಿದ್ದಾರೆ. ಅವರಿಗೆ 60 ವರ್ಷ ವಯಸ್ಸಾಗಿತ್ತು. ಬೆಂಗಳೂರಿನ ವಿಕ್ರಮ್ ಆಸ್ಪತ್ರೆಯಲ್ಲಿ ನಿಧನ.
123

ಈ ಟಿವಿ ಕನ್ನಡದ 13 ನೇ ವಾರ್ಷಿಕೋತ್ಸವ…

ನನಗೆ ಮಾಧ್ಯಮವನ್ನು ಹೇಳಿಕೊಟ್ಟ, ಕಲಿಸಿಕೊಟ್ಟ, ಬದುಕು ಕೊಟ್ಟ ಈ ಟಿವಿ ಕನ್ನಡಕ್ಕೆ ಇಂದು 13ನೇ ವಾರ್ಷಿಕೋತ್ಸವದ ಸಂಭ್ರಮ!!

...

ಮೋದಿ ವಿರುದ್ಧದ ಅಸಹನೆ ನೋಡಿ ನಗುಬಂತು…

....
….

ಇಂದು ಬೆಳಿಗ್ಗೆ ಹಿಂದಿ ಹಾಗೂ ಇಂಗ್ಲೀಷ್ ನ್ಯೂಸ್ ಚಾನಲ್ ಗಳಲ್ಲಿ ನಾಲ್ಕು ರಾಜ್ಯಗಳ ಚುನಾವಣಾ ಫಲಿತಾಂಶ ವಿಶ್ಲೇಷಣೆಯದ್ದೇ ಆರ್ಭಟ. ಆದರೆ ಅವುಗಳ ವರದಿಯ ರೀತಿ ಮಾತ್ರ ನಗೆಬರಿಸುವಂತಿತ್ತು.
ರಾಜಸ್ಥಾನದಲ್ಲಿ ವಸುಂಧರಾ ರಾಜೆ ಗೆದ್ದಿದ್ದಾರೆ, ಆದರೆ ಮೋದಿ ಪ್ರಚಾರ ನಡೆಸಿದ ಯಾವುದೇ ಸ್ಥಳದಲ್ಲಿ ಬಿಜೆಪಿಯ ಸಾಧನೆ ಅಷ್ಟೇನೂ ಹೇಳಿಕೊಳ್ಳುವಂತೆ ಇಲ್ಲ.
ಮಧ್ಯಪ್ರದೇಶದಲ್ಲಿ ಜನ ವೋಟ್ ಹಾಕಿರುವುದು ಶಿವರಾಜ್ ಸಿಂಗ್ ರ ಆಡಳಿತಕ್ಕೆ ಹೊರತು, ಮೋದಿ ಪ್ರವಾಸಕ್ಕಲ್ಲ.
ಛತ್ತೀಸ್ ಗಡದಲ್ಲಿ ಕಾಂಗ್ರೆಸ್ ಪ್ರಚಾರವೇ ಚೆನ್ನಾಗಿರಲಿಲ್ಲ. ಇಲ್ಲಿಯಂತೂ ಮೋದಿ ಹೆಸರು ಮೋಡಿಯನ್ನೇ ಮಾಡಿಲ್ಲ, ಹೀಗಿರುವಾಗ ಮೋದಿ ಪ್ರಧಾನಿಯಾಗಲು ಸಾಧ್ಯವೆ? ಹೀಗೆ ಪುಂಖಾನುಪುಂಖವಾಗಿ ಚ್ಯಾನಲ್ ಗಳ ವರದಿ ಸಾಗಿತ್ತು.
ನಾನು ಮೋದಿ ಅಭಿಮಾನಿಯಲ್ಲ. ವಿರೋಧಿಯೂ ಅಲ್ಲ. ಓರ್ವ ಪತ್ರಕರ್ತನಾಗಿ ನಾನು ಮತ ಹಾಕುವುದು ವ್ಯಕ್ತಿಯ ಹಾಗೂ ಪಕ್ಷದ ಐದು ವರ್ಷಗಳ ಸಾಧನೆ ಮಾನದಂಡದ ಮೇಲೆ. ಆದರೆ ಓರ್ವ ಪತ್ರಕರ್ತನಾಗಿ ಈ ರೀತಿ ಜರ್ನಲಿಸಂ ಮಾಡುವುದನ್ನು ವಿರೋಧಿಸುತ್ತೇನೆ. ಇದ್ಯಾವ ಪತ್ರಿಕೋದ್ಯಮ ಸ್ವಾಮಿ?

ಚೀತಾಗೆ ಕನ್ನಡದಲ್ಲಿ ಏನೆನ್ನುತ್ತಾರೆ?

ಸುದ್ದಿ ಕೃಪೆ – ಕನ್ನಡ ಪ್ರಭ (ತಪ್ಪಾಯ್ತು ತಿದ್ಕೋತೀವಿ- -6-12-2013)

...

ಅಡಿಕೆ ಗೊನೆ ಕೊಯ್ಯುವವರನ್ನು ಈಗ ಹೀಗೆ ಒಲಿಸಿಕೊಳ್ಳಬೇಕು….

ಕೊಪ್ಪದಲ್ಲಿ ಅಡಿಕೆ ಕೊಯ್ಲು ಶುರುವಾಗಿದೆ. ಪ್ರತಿವರ್ಷದಂತೆ ಈ ವರ್ಷವೂ ಅಡಿಕೆ ಕೊಯ್ಯುವವರಿಗೆ ಭಾರೀ ಡಿಮ್ಯಾಂಡ್. ಒಂದೆಡೆ ಅಡಿಕೆ ಕೊಯ್ಯುವವರು ಸಿಗುತ್ತಿಲ್ಲ. ಸಿಕ್ಕರೂ ಅವರಿಗೆ ಕೆಲಸದ ಒತ್ತಡ. ನನ್ನಣ್ಣ, ಅಂತೂ ಇಂತೂ ಒಬ್ಬ ಅಡಿಕೆ ಕೊಯ್ಯುವವರನ್ನು ಕರೆದುಕೊಂಡುಬಂದಿದ್ದಾನೆ. ನನ್ನಣ್ಣ ಅವರಿಗೆ ಹೇಳಿರುವುದು, “ಇಬ್ಬರೂ ಸೇರಿ ಗೊನೆ ಕೊಯ್ಯೋಣ. ನಾನು ಕೊಯ್ದದ್ದನ್ನೂ ನಿಮ್ಮ ಲೆಕ್ಕಕ್ಕೇ ಸೇರಿಸುತ್ತೇನೆ” ಅಂತ. ಹೀಗಾಗಿ ಇದೀಗ ನಮ್ಮ ತೋಟದಲ್ಲಿ ಅಡಿಕೆ ಕೊಯ್ಲು ನಡೆದಿದೆ. 🙂

ಸಂಘಟನೆ ಬಲ ಇದ್ದರೆ ಲಂಚದ ಅಗತ್ಯ ಇಲ್ಲ

ಸುದ್ದಿ ಕೃಪೆ – ವಿಜಯ ಕರ್ನಾಟಕ – 03-12-2013

....
….

ಬ್ರೇಕಿಂಗ್ ನ್ಯೂಸ್ – ನನ್ನ ಬ್ಲಾಗ್ ಗೆ 1 ಲಕ್ಷ್ ಹಿಟ್ಸ್ ಸಂಭ್ರಮ

ಆ ಕ್ಷಣ ಬಂದೇ ಬಿಟ್ಟಿದೆ. ನನ್ನ ಬ್ಲಾಗ್ ಇಂದಿಗೆ 1 ಲಕ್ಷ ಹಿಟ್ ಗಳನ್ನು ಪೂರ್ತಿಗೊಳಿಸಿದೆ. ಬ್ಲಾಗನ್ನು ಓದಿದ, ಕಮೆಂಟಿಸಿದ, ಪೋಷಿಸಿದ, ತಿದ್ದಿ ತೀಡಿದ ಎಲ್ಲರಿಗೂ ಧನ್ಯವಾದಗಳು.
ಪ್ರೀತಿಯಿರಲಿ,
ಸುಘೋಷ್ ಎಸ್. ನಿಗಳೆ

.....
…..

ಎಚ್ ಐ ವಿ ವ್ಯಕ್ತಿಗಳ ವಿವಾಹಕ್ಕೆ ವೆಬ್ ಸೈಟ್

ಸುದ್ದಿ ಕೃಪೆ – ವಿಜಯವಾಣಿ – 02-12-2013

....
….