“ಆಯ್ತಮ್ಮಾ, ಹೆಲ್ಮೆಟ್ ಏನ್ ಮಾಡ್ಬೇಕು?”

....
….

ರಾಜರಾಜೇಶ್ವರಿನಗರದ ಆರ್ಟಿಓ ಕಚೇರಿಯಲ್ಲಿ ಕೇಳಿಸಿದ್ದು. ಲರ್ನಿಂಗ್ ಲೈಸೆನ್ಸ್ ನೀಡುವ ಪ್ರಕ್ರಿಯೆ ನಡೆದಿತ್ತು. ಒಬ್ಬೊಬ್ಬರೇ ಅಧಿಕಾರಿಯ ಮುಂದೆ ಬರುವುದು ಆತ ಕೇಳುವ ಪ್ರಶ್ನೆಗಳಿಗೆ ಉತ್ತರಿಸುವುದು, ಸೈನ್ ಹಾಕುವುದು ನಡೆದಿತ್ತು. ಅಧಿಕಾರಿ ಕೊಂಚ ರಸಿಕ ಸ್ವಭಾವದವನು ಅನಿಸುತ್ತದೆ. ಲೈಸೆನ್ಸ್ ಪಡೆದುಕೊಳ್ಳಲು ಅತ್ಯಂತ ಮಾಡ್ ಡ್ರೆಸ್ಸಿನಲ್ಲಿ ಬಂದ ಹುಡುಗಿಯೊಬ್ಬಳೊಂದಿಗೆ ಆತ ನಡೆಸಿದ ಪ್ರಶ್ನೋತ್ತರ ಹೀಗಿತ್ತು.

ಅಧಿಕಾರಿ – (ಯಾವುದೋ ಸೈನ್ ತೋರಿಸಿ) ಇದು ಯಾವ ಸೈನ್?

ಹುಡುಗಿ – ನೋ ಪಾರ್ಕಿಂಗ್ ಸರ್…

ಅಧಿಕಾರಿ – ಹಂ…ಇದು…?

ಹುಡುಗಿ – ಯೂ ಟರ್ನ್ ಬ್ಯಾನ್ಡ್…

ಅಧಿಕಾರಿ – ಹಂ…ಸರಿ…ಗಾಡಿ ಓಡಿಸುವಾಗ ಏನೇನನ್ನು ಇಟ್ಟುಕೊಳ್ಳಬೇಕು?

ಹುಡುಗಿ – ಲೈಸೆನ್ಸ್, ಆರ್ ಸಿ ಬುಕ್, ಎಮಿಷನ್ ಸರ್ಟಿಫಿಕೇಟ್ ಹಾಗೂ ಅಂ……. ಇನ್ಶೂರೆನ್ಸ್ ಪೇಪರ್ಸ್ ಸಾರ್….

ಅಧಿಕಾರಿ – ಮತ್ತೆ ಹೆಲ್ಮೆಟ್ಟು?

ಹುಡುಗಿ – ಅದೂ ಹಾಕ್ಕೋಬೇಕು ಸಾರ್…

ಅಧಿಕಾರಿ – ಆಯ್ತಮ್ಮ, ಎಲ್ಲಿಗೆ ಹಾಕ್ಕೋಬೇಕು?

ಹುಡುಗಿ – ತಲೆಗೆ ಸಾರ್…

ಅಧಿಕಾರಿ – ಹುಂ…ಕರೆಕ್ಟ್. ಕೆಲವ್ರು ಕೈಗೆ ಹಾಕ್ಕೊಂಡು ಗಾಡಿ ಓಡಸ್ತಾ ಇರ್ತಾರೆ. ಅದಕ್ಕೆ ಕೇಳ್ದೆ….ಸರಿ ಹೋಗಿನ್ನು…..ನೆಕ್ಸ್ಟ್ ಯಾರ್ರೀ…