2013: ಕರ್ನಾಟಕದ ಚುನಾವಣೆ ಮೀಸಲು ಕ್ಷೇತ್ರ ಮತ್ತು ದಲಿತ ರಾಜಕಾರಣ

Photo courtesy - Indian Bharat
Photo courtesy – Indian Bharat

*ವಾದಿರಾಜ್.
ಕನರ್ಾಟಕದ ರಾಜಕೀಯ ಚಿತ್ರಣದ ಚಹರೆ ಬದಲಾಗಿದೆ. ಓಬಿಸಿ-ದಲಿತ ರಾಜಕಾರಣ ಮುಂಚೂಣಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಕನರ್ಾಟಕದಲ್ಲಿನ 36 ದಲಿತ ಮೀಸಲು ವಿಧಾನಸಭಾ ಕ್ಷೇತ್ರಗಳ ಚುನಾವಣೆಯ ಫಲಿತಾಂಶವನ್ನು ಪರಿಶೀಲಿಸುವ ಪ್ರಯತ್ನವಿದು.
ಈ 36 ಮೀಸಲು ಕ್ಷೇತ್ರಗಳ ಚುನಾವಣಾ ಫಲಿತಾಂಶ ‘ಯಾರಿಗೆ ಎಷ್ಟು’ ಲೆಕ್ಕವನ್ನಷ್ಟೆ ಕೊಡುವುದಿಲ್ಲ. ಬದಲಿಗೆ ಫಲಿತಾಂಶದ ಅಂತರ್ಯವನ್ನು ಕೆದಕಿದರೆ ಇನ್ನು ಅನೇಕ ಸಂಗತಿಗಳು ಪ್ರತಿಫಲಿಸುತ್ತವೆ.
ಈ ಸಲದ ಚುನಾವಣೆಯ ಹಿಂದೆ-ಮುಂದೆ ‘ದಲಿತ ರಾಜಕಾರಣ’ದ ಚೌಕಟ್ಟಿನಲ್ಲಿ ಅನೇಕ ವಿದ್ಯಮಾನಗಳು ನಡೆದುಹೋದವು.
* ಕಳೆದ ವಿಧಾನಸಭೆಯಲ್ಲಿ ಮೀಸಲು ಕ್ಷೇತ್ರದ 36 ಸ್ಥಾನಗಳಲ್ಲಿ ಬಿಜೆಪಿ ಕೈಯಲ್ಲಿ 28 ಸ್ಥಾನಗಳಿದ್ದವು. (ಸ್ವಂತ ಬಲ 24, ಬೆಂಬಲ ಕೊಟ್ಟ ಪಕ್ಷೇತರರು 3, ಅಪರೇಷನ್ ಕಮಲದ ಮೂಲಕ 1), ಅಂದರೆ ಬಿಜೆಪಿಗೆ ವೀರಶೈವರು, ಬ್ರಾಹ್ಮಣರಲ್ಲಿ ಸಿಕ್ಕ ಪ್ರಾತಿನಿಧ್ಯದಷ್ಟೆ ದಲಿತರಲ್ಲಿಯೂ (ಶೇ.75) ಸಿಕ್ಕಿತ್ತು. ಆದರೆ 5 ವರ್ಷದ ಆಡಳಿತದಲ್ಲಿ ವೀರಶೈವರು, ಬ್ರಾಹ್ಮಣರಿಗೆ ಕೊಟ್ಟ ಸ್ಥಾನಮಾನವನ್ನು ಬಿಜೆಪಿ ದಲಿತರಿಗೆ ಕೊಟ್ಟಿರಲಿಲ್ಲ.
* ದಲಿತ ರಾಜಕಾರಣದಲ್ಲಿನ ಬಿಜೆಪಿ ಪ್ರವೇಶ ದಲಿತರನ್ನು ಒಡೆಯಿತು. ಅಸ್ಪೃಶ್ಯ ಜಾತಿಗಳ ಏಕಸ್ವಾಮ್ಯ ಕಡಿಮೆಯಾಗಿ ‘ಸ್ಪೃಶ್ಯ’ ಜಾತಿಗಳೆನಿಸಿರುವ ಲಂಬಾಣಿ, ಬೋವಿಗಳ ಪ್ರಾಬಲ್ಯ ಹೆಚ್ಚಾಯಿತು.
* ಅದರಲ್ಲೂ ‘ಬಲ’ (ಛಲವಾದಿ, ಹೊಲೆಯ) ಗುಂಪಿನ ದಲಿತರನ್ನು ಬಿಜೆಪಿ ನಿರ್ಲಕ್ಷಿಸಿತು.
* ಒಳ ಮೀಸಲಾತಿ ಜಾರಿಗೆ ಬರಬೇಕು ಎನ್ನುವ ಒತ್ತಾಯ ವ್ಯಾಪಕತೆ ಪಡೆಯಿತು. ಈ ಕುರಿತಾಗಿ ನ್ಯಾಯಮೂತರ್ಿ ಸದಾಶಿವ ಆಯೋಗ ತನ್ನ ವರದಿಯನ್ನು ಸಕರ್ಾರಕ್ಕೆ ಸಲ್ಲಿಸಿತು. ಆದರೆ ದಲಿತರ ಒಳಪಂಗಡಗಳ ರಾಜಕೀಯದಲ್ಲಿ ಸಾಕಷ್ಟು ಲಾಭ ಪಡೆದಿದ್ದ ಬಿಜೆಪಿ ಸದಾಶಿವ ಆಯೋಗದ ವರದಿಯ ಬಗ್ಗೆ ಏನೂ ಮಾಡಿರಲಿಲ್ಲ.
ಇದೆಲ್ಲವೂ 2013 ಕನರ್ಾಟಕ ವಿಧಾನಸಭೆಯ ಚುನಾವಣೆಯ ಮೊದಲಿನ ವಿದ್ಯಮಾನಗಳು. ಚುನಾವಣೆಯ ನಂತರ ‘ದಲಿತ ರಾಜಕಾರಣ’ದಲ್ಲಿ ಮತ್ತಷ್ಟು ವಿದ್ಯಮಾನಗಳು ನಡೆದವು.
* ಕನರ್ಾಟಕದ 65 ವರ್ಷಗಳ ಪ್ರಜಾಪ್ರಭುತ್ವದ ಇತಿಹಾಸದಲ್ಲಿ ಮೊದಲ ಬಾರಿಗೆ ದಲಿತ ಮುಖ್ಯಮಂತ್ರಿಯ ಸಾಧ್ಯತೆ ದಟ್ಟವಾಯಿತು.
* ಸಿದ್ಧರಾಮಯ್ಯನವರಿಗೆ – ಕೇಂದ್ರ ಸಚಿವ ಮಲ್ಲಿಕಾಜರ್ುನ ಖಗರ್ೆ ತೀವ್ರ ಪೈಪೋಟಿ ನೀಡಿದರು.
* ಇನ್ನೊಂದೆಡೆ ರಾಜ್ಯ ಕಾಂಗ್ರೆಸ್ ಅಧ್ಯಕ್ಷರಾಗಿದ್ದ, ಚುನಾವಣೆಯಲ್ಲಿ ಕಾಂಗ್ರೆಸ್ನ ಚುಕ್ಕಾಣಿ ಹಿಡಿದಿದ್ದ               ಡಾ| ಜಿ. ಪರಮೇಶ್ವರರವರ ಆಘಾತಕಾರಿ ಸೋಲು. ಪರಮೇಶ್ವರ್ ರಾಜ್ಯದ ಜವಾಬ್ದಾರಿ ಹೊತ್ತಿದ್ದರಿಂದ ಕೊರಟಗೆರೆಯ ಮತದಾರರಿಗೆ ‘ನಾಟ್ ರೀಚಬಲ್’ ಆಗಿದ್ದರು. ಹಾಗಾಗಿ ಸೋಲಾಯಿತು ಎಂಬುದು ಮೇಲು ಮೇಲಿನ ಕಾರಣ. ಒಳಗೊಳಗೆ ‘ಜಾತಿ ರಾಜಕಾರಣ’ ಕೆಲಸ ಮಾಡಿದೆ.
ಈ ಎಲ್ಲಾ ವಿದ್ಯಮಾನಗಳ ಬೆಳಕಿನಲ್ಲಿ 36 ಮೀಸಲು ಕ್ಷೇತ್ರಗಳ ಫಲಿತಾಂಶ ಅಸಾಧಾರಣ ಮಹತ್ವ ಪಡೆದಿದೆ.
* ಕಳೆದ ಸಲ 6ಕ್ಕೆ ಇಳಿದಿದ್ದ ಕಾಂಗ್ರೆಸ್ಸಿನ ಶಕ್ತಿ 17ಕ್ಕೆ ಏರಿದೆ. ಅಷ್ಟೇ ಮಹತ್ವದ ಸಂಗತಿಯೆಂದರೆ ಬಿಜೆಪಿ 28 ರಿಂದ 7ಕ್ಕೆ ಕುಸಿದಿರುವುದು. ಅನಿರೀಕ್ಷಿತವೆಂಬಂತೆ ಜೆಡಿಎಸ್ 2ರಿಂದ 10ಕ್ಕೆ ಏರಿರುವುದು.
* ಅಚ್ಚರಿ ಎಂದರೆ ಕಾಂಗ್ರೆಸ್ 17 ಸ್ಥಾನಗಳಿಸಿತಾದರೂ ಮೊದಲಿದ್ದ 6 ಸ್ಥಾನದಲ್ಲಿ ನಾಲ್ಕನ್ನು ಕಳೆದುಕೊಂಡಿದೆ. ಬಿಜೆಪಿಯಿಂದ 15 ಸ್ಥಾನಗಳನ್ನು ಕಾಂಗ್ರೆಸ್ ಕಸಿದುಕೊಂಡಿದೆ. ಬಿಜೆಪಿಯಿಂದ 6, ಕಾಂಗ್ರೆಸ್ನಿಂದ 2 ಸ್ಥಾನ ಕಸಿದು ಹಿಂದಿನ ಎರಡನ್ನೂ ಉಳಿಸಿಕೊಂಡ ಜೆಡಿಎಸ್ 10ಕ್ಕೆ ಏರಿದೆ.
* ಬಿಜೆಪಿಯ ಪ್ರವೇಶದಿಂದ ದಲಿತರಲ್ಲಿನ ಒಳಜಾತಿ ಸಮೀಕರಣ ಪಲ್ಲಟಗೊಂಡಿದೆ ಎಂಬುದು 2008ರ ಫಲಿತಾಂಶದಲ್ಲಿ ಹೆಚ್ಚು ಚಚರ್ೆಗೆ ಕಾರಣವಾಗಿತ್ತು. 2013ರ ಫಲಿತಾಂಶದಲ್ಲಿ ಬಿಜೆಪಿಯ ಅಸ್ತಿತ್ವ ಕುಸಿದರೂ ‘ಒಳಜಾತಿ ಸಮೀಕರಣ’ದಲ್ಲಿ ಮಹತ್ವದ ಬದಲಾವಣೆ ಕಾಣಿಸುತ್ತಿಲ್ಲ.
* ಕಳೆದ ಸಲ 8 ಇದ್ದ ಲಂಬಾಣಿ ಶಾಸಕರ ಸಂಖ್ಯೆ 10ಕ್ಕೆ ಏರಿದೆ. ಕಾಂಗ್ರೆಸ್ಸ್ನಿಂದಲೇ ಐವರಿದ್ದಾರೆ. ಬೋವಿ ಸಮಾಜದ ಪ್ರಾತಿನಿಧ್ಯ 8 ರಿಂದ 5ಕ್ಕೆ ಇಳಿದಿದೆ.
* ಒಳ ಮೀಸಲಾತಿಯ ವಿಷಯದಲ್ಲಿ, ಸದಾಶಿವ ಆಯೋಗದ ವರದಿ ಜಾರಿಗೆ ತರಬೇಕೆಂದು ರಸ್ತೆಗಿಳಿದು ದೊಡ್ಡ ಪ್ರತಿಭಟನೆಯನ್ನು ಸಂಘಟಸಿದ ಮಾದಿಗ(ಎಡ) ಸಮುದಾಯದ ಪ್ರಾತಿನಿಧ್ಯ 7ರಿಂದ ಮುಂದೆ ಹೋಗಿಲ್ಲ. ಆದರೆ ಸದಾಶಿವ ಆಯೋಗದ ವರದಿ ಜಾರಿಗೆ ತರದೆ ದಲಿತರೊಳಗೆ ‘ಸಾಮಾಜಿಕ ನ್ಯಾಯ’ ಸಿಗುವುದು ಸಾಧ್ಯವಿಲ್ಲ ಎನ್ನುವುದನ್ನು ಈ ಸಲದ ಫಲಿತಾಂಶ ದೃಢಪಡಿಸಿದೆ.
ದಲಿತರಿಗೆ ಇರುವ ಶೇ.15ರ ಮೀಸಲಾತಿಯನ್ನು ಜನಸಂಖ್ಯೆಗನುಗುಣವಾಗಿ ‘ಒಳಮೀಸಲಾತಿ’ಯಾಗಿ ಹಂಚಬೇಕು. ಸದಾಶಿವ ಆಯೋಗ ‘ಬಲ’ ಸಮುದಾಯಗಳಿಗೆ ಶೇ.5, ‘ಎಡ’ ಸಮುದಾಯಗಳಿಗೆ ಶೇ.6, ಲಂಬಾಣಿ, ಬೋವಿ ಸಮುದಾಯಗಳಿಗೆ ಶೇ.3, ಉಳಿದ ದಲಿತರಿಗೆ ಶೇ.1 ಎಂದು ಶಿಫಾರಸ್ಸು ಮಾಡಿದೆ. ಈ ಲೆಕ್ಕಾಚಾರದಲ್ಲಿ ಎಡ ಸಮುದಾಯವೆನಿಸಿದ ಮಾದಿಗರಿಗೆ 15 ಶಾಸಕರಿರಬೇಕಿತ್ತು. ಆದರೆ ಈಗಿರುವುದು 7 ಮಾತ್ರ. ಅದೇ ಜನಸಂಖ್ಯೆ ಆಧಾರದಲ್ಲಿ ಶೇ.15ರೊಳಗೆ ಶೇ.3 ಎಂದು ಪರಿಗಣಿತವಾಗಿರುವ ಲಂಬಾಣಿ, ಬೋವಿ ಸಮುದಾಯಕ್ಕೆ ಗರಿಷ್ಟ 8 ಶಾಸಕರಿರಬೇಕಿತ್ತು. ಆದರೆ ಈಗ ಲಂಬಾಣಿ 10, ಬೋವಿ 5, ಒಟ್ಟು 15ಕ್ಕೆ ಬಂದಿದೆ. ಲಂಬಾಣಿ, ಬೋವಿ ಸಮಾಜದ ನೇತಾರರು ಸದಾಶಿವ ಆಯೋಗದ ವರದಿ ಕೊಡುವ ‘ಜನಸಂಖ್ಯಾ ಪ್ರಮಾಣ’ವನ್ನೇ ಅಲ್ಲಗೆಳೆಯುತ್ತಾರೆ. ಆದರೂ ದಲಿತರೊಳಗಿನ ‘ಸಾಮಾಜಿಕ ನ್ಯಾಯ’ದ ಪ್ರಶ್ನೆ ಜೀವಂತವಾಗಿಯೇ ಉಳಿದಿರುವುದರ ದ್ಯೋತಕವಿದು.
* ದಲಿತ ಮೀಸಲು ಕ್ಷೇತ್ರದಲ್ಲಿ ಗೆಲ್ಲುವವರು ದಲಿತರಾಗಿತ್ತಾರಾದರೂ ಗೆಲ್ಲಿಸುವವರು ದಲಿತರಾಗಿರುವುದಿಲ್ಲ. ದಲಿತ ಅಭ್ಯಥರ್ಿಗಳ ನಡುವೆ ಮತಹಂಚಿಕೆಯಾಗಿ ಕೊನೆಗೆ ಆ ಕ್ಷೇತ್ರದ ಬಲಿಷ್ಠ ಸವಣರ್ಿಯರ ಬೆಂಬಲದಲ್ಲಿ ‘ಗೆಲವು’ ಬಂದು ನಿಲ್ಲುತ್ತದೆ ಎಂಬುದು ಈ ಹಿಂದೆಯೇ ಚಚರ್ೆಯಾಗಿರುವ ಸಂಗತಿ. ಈ ಸಲದ ಫಲಿತಾಂಶವೂ ಈ ‘ಹಿಡಿತ’ದಲ್ಲೇ ಇದೆ. ಕೊರಟಗೆರೆಯೂ ಸೇರಿದಂತೆ ಜೆಡಿಎಸ್ನ ಪ್ರಾಬಲ್ಯವಿರುವ ಕ್ಷೇತ್ರಗಳಲ್ಲಿ ಈ ಸವಣರ್ಿಯ ಹಿಡಿತದ ವಾಸನೆ ದಟ್ಟವಾಗಿರುವುದನ್ನು ಕಾಣಬಹುದು. ಹಾಗೆಯೇ ಗೆದ್ದ ಆರೂ ಶಾಸಕರೂ ವೀರಶೈವರೇ ಆಗಿರುವ ಕೆಜೆಪಿಯ ‘ಮೀಸಲು ಕ್ಷೇತ್ರ’ದಲ್ಲಿನ ಸಾಧನೆ ನೋಡಿದರೆ ಜಾತಿವಾದದ ಇನ್ನಷ್ಟು ಮುಖಗಳು ಗೊತ್ತಾಗುತ್ತದೆ. ಕೆಜೆಪಿಗೆ 7ಕಡೆಗಳಲ್ಲಿ 2ನೇ ಸ್ಥಾನ, 11 ಕಡೆಗಳಲ್ಲಿ 3ನೇ ಸ್ಥಾನ ಬಂದಿರುವುದು, ಇಲ್ಲೆಲ್ಲ ಕೆಜೆಪಿಯ ಅಭ್ಯಥರ್ಿಗಳು ವೀರಶೈವ ಮತಗಳನ್ನು ಕತ್ತರಿಸಿರುವುದು ಬಿಜೆಪಿಯ ದಲಿತ ಅಭ್ಯಥರ್ಿಗಳ ಶೋಚನೀಯ ಸ್ಥಿತಿಗೆ ಕಾರಣವಾಗಿದೆ.
ದಲಿತ ರಾಜಕಾರಣದಲ್ಲಿ ಮಹಿಳೆಯರ ಸ್ಥಿತಿ-ಗತಿ, ಮೀಸಲಾತಿಯನ್ನು ದಕ್ಕಿಸಿಕೊಳ್ಳುವುದರಲ್ಲಿ ದಲಿತ ಮಹಿಳೆಯರಿಗಿರುವ ಅಡೆತಡೆಗಳು- ಇದು ಅತ್ಯಂತ ನಿರ್ಲಕ್ಷಕ್ಕೆ ಒಳಗಾಗಿರುವ ವಿಷಯ. ದಲಿತ ರಾಜಕಾರಣವಿರಲಿ ದಲಿತ ಸಾಹಿತ್ಯ, ದಲಿತ ವೈಚಾರಿಕತೆ, ದಲಿತ ಪ್ರಾಧ್ಯಾಪಕರು, ದಲಿತ ಅಧಿಕಾರಿಗಳ ಮಟ್ಟದಲ್ಲೂ ದಲಿತ ಮಹಿಳೆಯರಿಗೆ ಕನಿಷ್ಟ ಪ್ರಾತಿನಿಧ್ಯವೂ ಸಿಕ್ಕಿಲ್ಲ. ಸಿಗದಿರುವುದು ಮಾತ್ರವಲ್ಲ ಗಂಭೀರ ಚಚರ್ೆಗೂ ಇದು ಒಳಗಾಗಿಲ್ಲ.
ವಿಧಾನಪರಿಷತ್ತಿನಲ್ಲಿರುವ ಮೋಟಮ್ಮನವರ ಜೊತೆಗೆ ಈ ಸಲ ವಿಧಾನಸಭೆಗೆ ಜೆಡಿಎಸ್ನ ಶಾರದಾ ಪೂಯರ್ಾನಾಯ್ಕ ಬಿಜೆಪಿಯ ವೈ. ರಾಮಕ್ಕ ಪ್ರವೇಶಿಸಿದ್ದಾರೆ. ಶಿರಹಟ್ಟಿಯಲ್ಲಿ ಬಿಎಸ್ಆರ್ ಪಕ್ಷದ ಜಯಶ್ರೀ 26 ಸಾವಿರ ಮತಗಳಿಸಿ ಅಸ್ತಿತ್ವ ತೋರಿಸಿದ್ದಾರೆ. ಸಿ.ವಿ. ರಾಮನ್ನಗರದಲ್ಲಿ ಜೆಡಿಎಸ್ನ ಹೇಮಲತಾ ಹಾಗೂ ಪುಲಕೇಶಿನಗರದಲ್ಲಿ ಎಸ್ಡಿಪಿಐ ನ ಹೇಮಲತಾ ಹೆಚ್ಚಿನ ಮತ ಗಳಿಸದಿದ್ದರೂ 3ನೇ ಸ್ಥಾನಕ್ಕೆ ಬಂದಿದ್ದಾರೆ. ರಾಜಕೀಯ ಪಕ್ಷಗಳು ದಲಿತ ಮಹಿಳೆಯರನ್ನು ಸ್ಪಧರ್ೆಗೆ ಪರಿಶೀಲಿಸುವ ಸ್ಥಿತಿಯೂ ಇಲ್ಲದಿರುವುದು ಕಠೋರ ವಾಸ್ತವವಾಗಿದೆ.
ಕೇವಲ 5 ಸಾವಿರಕ್ಕೂ ಕಡಿಮೆ ಅಂತರದಲ್ಲಿ ಸೋಲು-ಗೆಲುವು ನಿಧರ್ಾರವಾಗಿರುವ ದಲಿತ ಮೀಸಲು ಕ್ಷೇತ್ರಗಳು 12. ಕಾಂಗ್ರೆಸ್ಗೆ 5 ಕ್ಷೇತ್ರಗಳು ನಷ್ಟವಾದರೆ, ಜೆಡಿಎಸ್, ಬಿಜೆಪಿ ತಲಾ 3 ಕ್ಷೇತ್ರಗಳನ್ನು ಕೂದಲೆಳೆಯಲ್ಲಿ ಕಳೆದುಕೊಂಡಿವೆ. ಯಾರೇ ಸ್ವಲ್ಪ ನಿಗಾ, ಕಾಳಜಿ ವಹಿಸಿದ್ದರೂ ಫಲಿತಾಂಶ ಬದಲಿಸಿಕೊಳ್ಳಬಹುದಿತ್ತು.
ದಲಿತರಿಗೆ ಮೀಸಲಾತಿ ಇದೆ ನಿಜ. ಆದರೆ ನಿರ್ಲಕ್ಷಿಸುವ ಜಾಯಮಾನ ತಪ್ಪಿದೆಯೇ? ಉತ್ತರ ಖಗರ್ೆ, ಪರಮೇಶ್ವರ್ಗೆ ಸಿಕ್ಕ ಹಾಗೇ ಕಾಣುತ್ತಿಲ್ಲ. ಇನ್ನೂ ದಲಿತ ಮಹಿಳೆಗೆ ಸಿಗುವುದು ಯಾವಾಗ?

Advertisements