ಮತ್ತೆ 2004 ನೆನಪಾಗುತ್ತಿದೆ…

.....
…..

ಮತ್ತೆ 2004 ನೆನಪಾಗುತ್ತಿದೆ. ಮತ್ತೆ ಈಟಿವಿ ಸೇರಿದ್ದೇನೆ. ನನ್ನ ಕರಿಯರ್ ರೂಪಿಸುವಲ್ಲಿ ಈ ಟಿವಿಯ ಪಾತ್ರ ತುಂಬ ಮಹತ್ವದ್ದು. ಇಲೆಕ್ಟ್ರಾನಿಕ್ ಮೀಡಿಯಾದ ಪಟ್ಟುಗಳನ್ನು ಕಲಿಸಿದ್ದೇ ಈ ಟಿವಿ. ಸುದ್ದಿ, ಧಾರವಾಹಿ ಎಲ್ಲವೂ ಆಯ್ತು. ಆದರೆ ಈ ಬಾರಿ ನ್ಯೂಸೂ ಅಲ್ಲ, ಪ್ರೋಗ್ರಾಮೂ ಅಲ್ಲ….

…… ಬದಲಾಗಿ ಸ್ಟಾಂಡರ್ಡ್ ಆಂಡ್ ಪ್ರಾಕ್ಟಿಸಸ್ (S & P)ಎಂಬ ಹೊಸ ಜವಾಬ್ದಾರಿ.

BCCC ಅಂತ ಒಂದು ಮಂಡಳಿಯಿದೆ. ಇದರ ಪೂರ್ಣ ರೂಪ – Broadcasting Content Complaints Council. ಯಾವುದೇ ಟಿವಿ ಚ್ಯಾನಲ್ ಗಳಲ್ಲಿ ಪ್ರಸಾರವಾಗುವ ದೃಶ್ಯ, ಮಾತು, ಭಾಷೆ, ಜಾಹೀರಾತು ಕಾನೂನಿನ ಉಲ್ಲಂಘನೆಯಾಗಿದೆ, ಕೆಟ್ಟದಾಗಿದೆ, ಸದಭಿರುಚಿಯಿಂದ ಕೂಡಿಲ್ಲ, ಹಿಂಸೆ-ಕ್ರೌರ್ಯದ ವೈಭವೀಕರಣವಾಗಿದೆ, ದಾರಿ ತಪ್ಪಿಸುವಂತಿದೆ, ಕೆಟ್ಟ ಸಂದೇಶವನ್ನು ನೀಡುತ್ತಿದೆ, ತಪ್ಪು ಅಭಿಪ್ರಾಯವನ್ನು ಮೂಡಿಸುತ್ತಿದೆ ಎಂದು ಪ್ರೇಕ್ಷಕ ಭಾವಿಸಿದಲ್ಲಿ ಆತ ಚ್ಯಾನಲ್ ನ S & P ವಿಭಾಗಕ್ಕೆ ದೂರು ಸಲ್ಲಿಸಬಹುದು. ಇದಕ್ಕೆ ಚ್ಯಾನಲ್ ಸ್ಪಷ್ಟೀಕರಣವನ್ನು ನೀಡಬೇಕು. ಒಂದು ವೇಳೆ ಚ್ಯಾನಲ್ ನಿಂದ ತೃಪ್ತಿಕರ ಉತ್ತರ ಬಾರದೇ ಇದ್ದಲ್ಲಿ, BCCC ಗೆ ದೂರು ನೀಡಬಹುದು. ಸುಪ್ರಿಂ ಕೋರ್ಟ್ ಜಜ್ (ನಿವೃತ್ತ) ಚೇರ್ ಪರ್ಸನ್ ಆಗಿರುವ ಈ ಮಂಡಳಿಯಲ್ಲಿ ಶಬಾನಾ ಆಝ್ಮಿ ಸೇರಿದಂತೆ 12 ಜನ ಸದಸ್ಯರಿದ್ದಾರೆ. ಈ ಟಿವಿ ಕನ್ನಡದ S&P ಜವಾಬ್ದಾರಿ ನನ್ನದು. ನಮ್ಮ ವಾಹಿನಿಯಲ್ಲಿ ಪ್ರಸಾರವಾಗುವ ಕಾರ್ಯಕ್ರಮಗಳು (ಚಲನ ಚಿತ್ರ ಮತ್ತು ಸುದ್ದಿ, ಇದರಲ್ಲಿ ಸೇರಿಲ್ಲ. ಅದಕ್ಕೆ ಪ್ರತ್ಯೇಕವಾಗಿ CBFC ಹಾಗೂ NBA ಇದೆ). ಯಾವುದೇ ರೀತಿಯಲ್ಲಿ offending ಆಗಿರದಂತೆ, BCCC ಹೇಳಿರುವ ಸೂಚನೆಗಳ ಹಾಗೂ ಕೆಲ ನಿರ್ದಿಷ್ಟ ಕಾನೂನುಗಳ ಉಲ್ಲಂಘನೆ ಆಗಿರದಂತೆ ನೋಡಿಕೊಳ್ಳುವ ಜವಾಬ್ದಾರಿ ನನ್ನದು.

BCCC, ಅದರ ರಚನೆ, ಕಾರ್ಯ ನಿರ್ವಹಣೆ, ಇಲ್ಲಿಯವರೆಗೆ ಬಂದಿರುವ ದೂರುಗಳು, ಅದನ್ನು ಪರಿಹರಿಸಿರುವ ಬಗೆ ಇತ್ಯಾದಿಗಳ ಕುರಿತಂತೆ ವಿವರವಾದ ಮಾಹಿತಿಯನ್ನು ಬ್ಲಾಗಿನಲ್ಲಿ ಸರಣಿಯಾಗಿ ನೀಡುತ್ತೇನೆ.

ನಿಮ್ಮ ಹಾರೈಕೆ, ಆಶೀರ್ವಾದ, ಸಲಹೆ, ಸೂಚನೆ, ಪ್ರೀತಿ ಸದಾ ಇರಲಿ.

ಪ್ರೀತಿಯಿಂದ

ಸುಘೋಷ್ ಎಸ್. ನಿಗಳೆ