ಶ್ರದ್ಧ ಹಾಗೂ ಸ್ಟೇನ್ ಲೆಸ್ ಸ್ಟೀಲ್ ಪಾತ್ರೆಗಳು

...

ಟಿಕೆಟ್ ಗಳಿಗೆ : 9880695659
Online Tickets : http://indianstage.in/EventDetails.do?eventId=5142#.UiXGyT_3Oxh

ನಮ್ಮ ದಿನ ನಿತ್ಯದ ಜಂಜಾಟದಲ್ಲಿ ಏನೆಲ್ಲಾ ಮರೆತಿದ್ದೇವೆ ಎಂದು ನೆನಪಿಸಲು ವಟಿ ಕುಟೀರ ಎರೆಡು ಸುಂದರ ನಾಟಕಗಳನ್ನು ಸೆಪ್ಟೆಂಬರ್ ೧೧ ಮತ್ತು ೧೨ರಂದು ರಂಗಶಂಕರದಲ್ಲಿ ನಿಮ್ಮ ಮುಂದೆ ತರಲಿದೆ.

ಮೌಲ್ಯಗಳ ಮರೆತಿರುವ ಈ ಕಾಲದಲ್ಲಿ ಈ ರಂಗ ಪ್ರಯೋಗ ಸ್ವಾಗತಾರ್ಹ, ವಸುಧೇಂದ್ರ ಅವರ ಸ್ಟೇನ್ ಲೆಸ್ ಸ್ಟೀಲ್ ಪಾತ್ರೆ ಹಾಗು ಶ್ರೀನಿವಾಸ್ ವೈದ್ಯರ ಶ್ರದ್ಧಾ. ತಾಯಿ ತಂದೆ ಇಬ್ಬರು ಕಣ್ಣಿಗೆ ಕಾಣುವ ದೇವರು ಎನ್ನುವ ಹಿರಿಯರ ನಾಣುಡಿಯನ್ನು ಆಧುನಿಕತೆಗೆ ಸಿಲುಕಿ ಬದಲಾಗಿದೆ, ತಂದೆ, ತಾಯಿಯನ್ನು ಮೂಲೆಗುಂಪಾಗಿಸಿ ರಜ ಸಿಕ್ಕಾಗಲೆಲ್ಲ ದೇವರನ್ನು ಹುಡುಕುತ್ತ ಊರು ಕೇರಿಯಾದಿಗೆ ಹುಡುಕುತ್ತಾ ಸಾಗಿದ್ದಾನೆ. ಈ ರಂಗ ಪ್ರಯೋಗದ ಸಾರ್ಥಕತೆ ತಂದೆ ತಾಯಿಯನ್ನು ಪ್ರೀತಿಸುವವರು ಪ್ರತಿಯೊಬ್ಬರೂ ನೋಡಿದಾಗ ಮಾತ್ರ.

ಮಡದಿಯಾಗಿ ಹೊಸ ಮನೆ ಸೇರುವ ಹೆಣ್ಣು, ಆ ಮನೆಯ ಸೊಸೆಯಾಗಿ ಬೆಳಗುವ ನಂದಾದೀಪವಾಗಿ, ಅಮ್ಮನಾಗಿ, ಅಜ್ಜಿಯಾಗಿ ಆಯಾ ಪಾತ್ರಗಳಿಗೆ ಒಗ್ಗಿಕೊಳ್ಳುವಂತೆ ಅವಳ ಸುತ್ತ ಹುಟ್ಟಿ ನಿಲ್ಲುವ ಸಮಸ್ಯೆಗಳನ್ನು ಎದೆ ಗುಂದದೆ ಹೇಗೆ ನಿಭಾಯಿಸುತ್ತಾಳೆ, ಹಾಗೆಯೇ ರೈಲಿನಲ್ಲಿ ತಿರುಪತಿಗೆ ಹೋಗುವಾಗ ಕಳೆದು ಹೋದ ಲೋಟವನ್ನು ಮರೆಯುವುದೇ ಇಲ್ಲ. ಫಳ ಫಳ ಹೊಳೆಯುವ ಪಾತ್ರೆಗಳಲ್ಲಿ ತನ್ನ ಬದುಕಿನ ಸಾರ್ಥಕತೆ ಕಂಡುಕೊಳ್ಳುವ ಅಮ್ಮ ತಾನಿರಲಿ ಬಿಡಲಿ ನಮ್ಮ ಮನದಲ್ಲಿ ನಮ್ಮೊಂದಿಗೆ ಸದಾ ಇರುತ್ತಾಳೆ.

ಅಪ್ಪ ಬರಲಿ ಇರು ನೀ ಮಾಡಿದ್ದು ಹೇಳ್ತೀನಿ ಅಂದಾಗ ಎಲ್ಲಾ ಮಕ್ಕಳು ಹೆದರುವುದು ಸಹಜ, ಗಡಸು ಸ್ವಭಾವ, ಕೋಪಿಷ್ಠ, ಬಹಳ ಶಿಸ್ತು ಎನ್ನುವ ಪದಗಳೇ ಅಪ್ಪನನ್ನು ಪ್ರತಿಬಿಂಬಿಸುವುದು ಸಹಜ ಆದರೆ ಅದರ ಹಿಂದೊಂದು ಪ್ರೀತಿಸುವ ಮನಸಿದೆ, ಆಶಿಸುವ ಹೃದಯವಿದೆ, ಪ್ರೋತ್ಸಾಹಿಸುವ ಶ್ರೀಮಂತಿಕೆ ಇದೆ ಎನ್ನುವುದು ಅರಿಯದೆ ಹೋಗಿದ್ದೇವೆ. ಚಳಿಯಿರಲಿ, ಮಳೆಯಿರಲಿ, ಸುಡುವ ಬಿಸಿಲೆ ಇರಲಿ ನಮ್ಮನ್ನು ರಕ್ಷಿಸುವ ಅಪ್ಪನ ಆ ಔದಾರ್ಯತೆ ನಮ್ಮನ್ನು ಸೋಕಿದಾಗ ಅವರ ತ್ಯಾಗದ ಮುಂದೆ ನಾವು ಕುಬ್ಜರಾಗಿಬಿದುತ್ತೇವೆ.

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s