ಆಪ ಕೀ ಯಾದ್ ಆತೀ ರಹೀ….

ಹ್ಯಾಟ್ಸಾಫ್ ಟು – ಮಕದೂಮ್ ಮೋಯುದ್ದೀನ್

ಆಪ ಕೀ ಯಾದ್ ಆ ತೀ ರಹೀ, ರಾತ ಭರ್
ಚಶ್ಮ್ ಎ ನಮ್ ಮುಸ್ಕುರಾತೀ ರಹೀ

ರಾತ ಭರ್ ದರ್ದ್ ಕೀ ಶಮ್ಮಾ ಜಲ್ ತೀ ರಹೀ
ಗಮ್ ಕಿ ಲಾ ಥರ್ ಥರಾ ತೀ ರಹೀ

ಬಾಸುರೀ ಕೀ ಸುರೀಲಿ ಸುಹಾನಿ ಸದಾ
ಯಾದ ಬನ್ ಬನ್ ಕೆ ಆತಿ ರಹೀ
ರಾತ ಭರ್, ಚಶ್ಮೆ ನಮ್ ಮುಸ್ಕುರಾತೀ ರಹೀ

ಯಾದ ಕೇ ಚಾಂದ್ ದಿಲ್ ಮೇ ಉತರ್ ತೇ ರಹೇ
ಚಾಂದನೀ ಜಗಮಗಾತೀ ರಹೀ
ರಾತ ಭರ್, ಆಪ್ ಕೀ ಯಾದ್ ಆತೀ ರಹೀ

ಕೋಯಿ ದಿವಾನಾ ಗಲಿಯೋಂ ಮೇ ಫಿರತಾ ರಹಾ
ಕೋಯಿ ಆವಾಜ್ ಆತೀ ರಹೀ
ಚಶ್ಮ್ ಎ ನಮ್ ಮುಸ್ಕುರಾತೀ ರಹೀ

ಹೀಗೊಂದು ಮುಖಾಮುಖಿ

ಬಸವನಗುಡಿ ರಸ್ತೆಯ ಒಂದು ಸಿಗ್ನಲ್. ಕೆಂಪು ದೀಪ ಇನ್ನೂ 100 ಸೆಕೆಂಡ್ ತೋರಿಸುತ್ತಿದ್ದುದರಿಂದ ಬೈಕ್ ಆಫ್ ಮಾಡಿ ನಿಲ್ಲಿಸಿದ್ದೆ. ಪಕ್ಕದಲ್ಲಿ ಹೈ ಎಂಡ್ ಕಾರೊಂದು ಬಂದು ನಿಂತಿತು. ಒಳಗಿದ್ದವರು ಸುಮಾರು 50 ರ ಆಸುಪಾಸಿನ ಇಬ್ಬರು ವ್ಯಕ್ತಿಗಳು. ಬಿಸ್ಕಿಟ್ ತಿನ್ನುತ್ತಿದ್ದರು. ಇನ್ನೇನು ಸಿಗ್ನಲ್ ಬಿಟ್ಟಿತು ಎನ್ನುವಷ್ಟರಲ್ಲಿ ಬಿಸ್ಕೆಟ್ ರ್ಯಾಪರನ್ನು ಹೊರಗೆ ಎಸೆದು ಕಾರ್ ಮೂವ್ ಮಾಡಿದರು.

ನಾನು – ಏನ್ ಸಾರ್, ರ್ಯಾಪರ್ ಹೀಗೆ ರಸ್ತೆ ಮೇಲೆ ಬಿಸಾಡ್ತೀರಲ್ಲ?

ಆತ – ನೀನೇ ಎತ್ಕೊಂಡು ಬಿಡು..

ನಾನು – ಯಾಕೆ, ಬೆಂಗಳೂರು ನಿಮ್ಮದಲ್ವ?

ಆತ – ರ್ರೀ…ಇರ್ಲಿ ಬಿಡ್ರಿ, ನಾಳೆ ಕಸ ಎತ್ತೋರು ಬಂದು ಕ್ಲೀನ್ ಮಾಡ್ತಾರೆ. ನೀವ್ಯಾಕೆ ತಲೆ ಕೆಡಿಸ್ಕೋತೀರಾ?

ಕೊನೆಗೂ ನನಗೆ ಉಳಿದ ಪ್ರಶ್ನೆ, ಕೂತಿರೋದು ಹೈ ಎಂಡ್ ಕಾರ್ ನಲ್ಲಿ. ಆದರೆ ಬುದ್ಧಿ ಮಾತ್ರ ಯಾಕೆ ಲೋ ಎಂಡ್?

ಇಂದು ರಾತ್ರಿ ‘ಥಟ್ ಅಂತ ಹೇಳ್ತೇನೆ….’

ಇಂದು ರಾತ್ರಿ ‘ಥಟ್ ಅಂತ ಹೇಳಿ’ ಕಾರ್ಯಕ್ರಮದಲ್ಲಿ ನಾನು ಹಾಗೂ ರಾಜಶ್ರೀ ಭಾಗವಹಿಸಿದ್ದೇವೆ. ಸುಮಾರು 10 ವರ್ಷಗಳ ಹಿಂದೆ ನಾನು ಮತ್ತು ರಾಜಶ್ರೀ ನಾಟಕಗಳನ್ನು ಮಾಡಿದ್ದೆವು. ಅದಾದ ನಂತರ ಮತ್ತೆ ವೇದಿಕೆ ಹಂಚಿಕೊಂಡದ್ದು ‘ಥಟ್’ ನಲ್ಲಿ. ಅವಕಾಶ ಮಾಡಿಕೊಟ್ಟ ಆರತಿ ಮೇಡಂ ಗೆ ಥ್ಯಾಂಕ್ಸ್.
1

ವೋಟ್ ಕರೋ, ಖುಷ್ ರಹೋ

ವೋಟಿಂಗ್ ದಿನದಂದು ಔಟಿಂಗ್ ಪ್ಲಾನ್ ಮಾಡಿದವರು,
ವೋಟರ್ ಲಿಸ್ಟ್ ನಲ್ಲಿ ಹೆಸರನ್ನೇ ಸೇರಿಸದವರು,
ಆಫೀಸು ರಜೆ ಕೊಟ್ಟರೂ ಮಜಾ ಮಾಡಲು ಹೋಗುವವರು,
ಒಮ್ಮೆ, ಒಮ್ಮೆ, ಒಮ್ಮೆ…ಯೋಚಿಸಿ
ಮೈನಸ್ 40 ಡಿಗ್ರಿ ಸೆಂಟಿಗ್ರೇಡ್ ನಲ್ಲಿ ಗಡಿ ಕಾಯುವ ಯೋಧನನ್ನು, ಇಲೆಕ್ಷನ್ ಗಾಗಿ ದಿನಗಟ್ಟಲೆ ಸರಿಯಾದ ಊಟ ನಿದ್ರೆಯಿಲ್ಲದೆ ತೊಳಲಾಡುವ ಪೋಲಿಸಪ್ಪನನ್ನು, ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ರೈತನನ್ನು, ದೇಶವನ್ನು ಕಿತ್ತುತಿನ್ನುತ್ತಿರುವ ಭ್ರಷ್ಟ ರಾಜಕಾರಣಿಯನ್ನು, ಬರ್ತ್ ಸರ್ಟಿಫಿಕೆಟ್ ನಿಂದ ಡೆತ್ ಸರ್ಟಿಫಿಕೆಟ್ ವರೆಗೆ ಎಲ್ಲ ರೀತಿಯ ದಾಖಲೆಗಳನ್ನು ಕೊಡಲು ಲಂಚ ಕೇಳುತ್ತಿರುವ ಕೊಳಕು ಅಧಿಕಾರಿಯನ್ನು, ಅಕ್ರಮವಾಗಿ ಕೋಟಿ ಕೋಟಿ ದುಡ್ಡು ಮಾಡಿ ಕೊಬ್ಬಿರುವ ಬಿಝಿನೆಸ್ ಟೈಕೂನ್ ನನ್ನು, ಇಲ್ಲಿಯ ಸಿಸ್ಟಮ್ ಸರಿಯಿಲ್ಲ ಎಂದು ಫಾರಿನ್ ನಲ್ಲಿ ಸೆಟ್ಲ್ ಆಗಿರುವ ಹಿಪಾಕ್ರೇಟ್ ಜನರನ್ನು, ಮಂಜುನಾಥ್, ಸತ್ಯೇಂದ್ರ ದುಬೆಯಂತಹ ವಿಷಲ್ ಬ್ಲೋವರ್ ಗಳನ್ನು, ಇಲ್ಲಿಯವರೆಗೆ ನಡೆದಿರುವ ಎಲ್ಲ ಹಗರಣಗಳನ್ನು, ನೆನೆಯಿರಿ.
ವೋಟ್ ಮಾಡಿ. ನಾವು ವೋಟ್ ಮಾಡದಿದ್ದರೆ, ವ್ಯವಸ್ಥೆಯನ್ನು ದೂರುವ ಹಕ್ಕು ನಮಗಿಲ್ಲ. ವೋಟ್ ಕರೋ, ಖುಷ್ ರಹೋ.

ಸ್ಮರಣೆ

ಡಾ. ಭೀಮರಾವ್ ಅಂಬೇಡ್ಕರ್ ಅವರ 123 ನೇ ಜನ್ಮದಿನಾಚರಣೆ.
1234

ಆಗ ಫನುಸ್, ಈಗ ಕಲಾವತಿ – ಅಂತಹ ವ್ಯತ್ಯಾಸವೇನೂ ಇಲ್ಲ

ಸುದ್ದಿ ಕೃಪೆ - ವಿಜಯ ಕರ್ನಾಟಕ 09-04-2014
ಸುದ್ದಿ ಕೃಪೆ – ವಿಜಯ ಕರ್ನಾಟಕ 09-04-2014

ಅಡಕೆಗೆ ಕೊಳೆ ರೋಗ, ಜೇನಿಗೆ ಪ್ರಾಣ ಸಂಕಟ

12
ಹೋದ ಬಾರಿ ಕೊಪ್ಪ ಭಾಗದಲ್ಲಿ ಅಡಕೆಗೆ ಕೊಳೆ ರೋಗ ಬಂದು ಅಡಕೆ ಬೆಳೆಗಾರರು ದೊಡ್ಡಮಟ್ಟದ ನಷ್ಟವನ್ನು ಅನುವಭಸಿದ್ದರು. ಅದೇ ವೇಳೆ, ಅಡಕೆಗೆ ಒಳ್ಳೆ ಬೆಲೆಯೂ ಬಂದಿತ್ತು. ಒಳ್ಳೆ ಬೆಲೆ ಈಗಲೂ ಮುಂದುವರೆದಿದೆ. ಈ ವರ್ಷವಾದರೂ ಶತಾಯಗತಾಯ ಅಡಕೆಯನ್ನು ಕೊಳೆ ರೋಗದಿಂದ ಉಳಿಸಿಕೊಳ್ಳಬೇಕೆಂದು ಔಷಧಿ ಹೊಡೆಯುತ್ತಿದ್ದಾರೆ. ಅದರಲ್ಲಿನ ಒಂದು ರಾಸಾಯನಿಕ ಮೆಟಾಸಿಡ್. ಆದರೆ ಮೆಟಾಸಿಡ್ ಹೊಡೆಯುತ್ತಿರುವುದರಿಂದ ಅಡಕೆ ಹೂವಿನಿಂದ ಮಧು ಸಂಗ್ರಹಿಸಲು ಬರುತ್ತಿರುವ ಜೇನುಗಳು ಮೆಟಾಸಿಡ್ ನಿಂದಾಗಿ ಸಾವನ್ನಪ್ಪುತ್ತಿವೆ. ಅಡಕೆಯೂ ಬೇಕು, ಜೇನೂ ಬೇಕು. ಉಪಾಯವೇನು?