ಈ ಗಾದೆ ಮಾತುಗಳು ಯಾವ ರಾಜಕಾರಣಿಗೆ ಹೊಂದುತ್ತವೆ?

ಈ ಕೆಲ ಗಾದೆಮಾತುಗಳು ಯಾರಿಗೆ ಹೊಂದುತ್ತವೆ ಹೇಳಬಲ್ಲಿರಾ? ಅಂದಹಾಗೆ, ಎಲ್ಲವೂ ಕೂಡ ಕೇವಲ ಒಬ್ಬ ರಾಜಕಾರಣಿಗೇ ಅಪ್ಲೈ ಆಗುತ್ತವೆ…

1. ಕೊಟ್ಟ ಕುದುರೆಯನೇರಲರಿಯದೆ ಮತ್ತೊಂದು ಕುದುರೆಯನು ಬಯಸುವವರು ವೀರರೂ ಅಲ್ಲ, ಶೂರರು ಅಲ್ಲ.
2. ಅತಿ ಆಸೆ ಗತಿ ಗೇಡು
3. ಆಸೆಯೇ ದುಃಖಕ್ಕೆ ಮೂಲ.
4. ಬೆಳೆಯುವ ಸಿರಿ ಮೊಳಕೆಯಲ್ಲಿ.
5. ಅಡಕೆಗೆ ಹೋದ ಮಾನ ಆನೆ ಕೊಟ್ಟರೂ ಬಾರದು.
6.ಯುದ್ಧಕಾಲದಲ್ಲಿ ಶಸ್ತ್ರಾಭ್ಯಾಸ.
7.ಮಾತು ಆಡಿದರೆ ಹೋಯಿತು, ಮುತ್ತು ಒಡೆದರೆ ಹೋಯಿತು.
8.ಬೆಂಕಿ ಬಿದ್ದ ಮೇಲೆ ಬಾವಿ ತೋಡಿದರಂತೆ.
9. ಕುಣಿಯಲು ಬಾರದವನಿಗೆ ನೆಲ ಡೊಂಕು.
10. ಕೋತಿ ತಾನು ಕೆಡೋದಲ್ದೇ ವನಾನೆಲ್ಲ ಕೆಡಸ್ತಂತೆ….

ಇನ್ನೂ ಹಲವು ಗಾದೆ ಮಾತುಗಳು ಹೊಂದುತ್ತವೆ. ಸಧ್ಯಕ್ಕೆ ಇಷ್ಟು ಸಾಕು ಅಲ್ವೆ….:-)