ಪಾಪೋಹಂ ಪಾಪ ಕರ್ಮಾಹಂ

ಇತ್ತೀಚೆಗೆ ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದೆ. ಪುರೋಹಿತರು ಯಾನಿಕಾನಿಚ ಪಾಪಾನಿ ಹೇಳಿದ ಬಳಿಕ, ಪಾಪೋಹಂ ಪಾಪ ಕರ್ಮಾಹಂ ಪಾಪಾತ್ಮಾ ಪಾಪ ಸಂಭವಾ, ತ್ರಾಹಿಮಾಂ ಕೃಪಯಾ ದೇವ ಶರಣಾಗತ ವತ್ಸಲ ಶ್ಲೋಕವನ್ನು ಹೇಳದೇ, ಮುಂದಿನ ಶ್ಲೋಕವನ್ನು ಆರಂಭಿಸಿ ಹಾಗೆಯೇ ಆರತಿ ಬೆಳಗಿದರು. ಕಾರ್ಯಕ್ರಮದ ನಂತರ, ಪಾಪೋಹಂ ಶ್ಲೋಕ ಹೇಳಬಾರದು. ಕಾರಣ ನಾವ್ಯಾರೂ ಪಾಪಿಗಳಲ್ಲ ಎಂದು ಕೆಲವರು ಹೇಳಿದರೆ, ಮತ್ತೆ ಕೆಲವರು ಹಿರಿಯರು ಮಾಡಿಟ್ಟ ಶ್ಲೋಕ ನಾವೇಕೆ ಮುರಿಯಬೇಕು ಎಂದರು. ಈ ಶ್ಲೋಕದ ಸರಿಯಾದ ಅರ್ಥ ಮತ್ತು ಹಿನ್ನೆಲೆ ಗೊತ್ತಿದ್ದರೆ ದಯವಿಟ್ಟು ತಿಳಿಸಿ.