ಯಾಕೆಂದರೆ ನಾನು ಯಾವುದಕ್ಕೂ ರಿಸ್ಕ್ ತೆಗೆದುಕೊಳ್ಳುವುದಿಲ್ಲ…

ಮರಾಠಿ ಮೂಲ – ಅನಾಮಿಕ. ಕನ್ನಡಕ್ಕೆ- ಶಶಿಕಾಂತ್ ಎಸ್. ಎಮ್.

ರಿಸ್ಕ್
 

ಪೆಗ್ 1
ಹೆಂಡ ಕುಡಿಯುವಾಗ ನಾನು ಯಾವುದೇ ರಿಸ್ಕ್ ತೆಗೆದುಕೊಳ್ಳ್ಳುವುದಿಲ್ಲ.
ಸಂಜೆ ನಾನು ಮನೆಗೆ ಬರುವಾಗ ನನ್ನ ಹೆಂಡತಿ ಅಡುಗೆ ಮಾಡುತ್ತಿರುತ್ತಾಳೆ.
ಸೆಲ್ಫ್ ಮೇಲಿನ ಶಬ್ಧ ಕೇಳಿಸುತ್ತಿರುತ್ತದೆ.
ನಾನು ಸದ್ದಿಲ್ಲದಂತೆ ಮೆಲ್ಲಗೆ ಮನೆಗೆ ಬರುತ್ತೇನೆ.
ನನ್ನ ಕಪ್ಪು ಅಲಮೇರುವಿನಿಂದ ಬಾಟ್ಲಿ ತೆಗೆಯುತ್ತೇನೆ.
ಗಾಂಧೀಜಿ ಪೋಟೊದೊಳಗಿಂದಲೇ ನಗುತ್ತಿರುತ್ತಾರೆ.
ಈ ಕಿವಿಯ ವಿಚಾರ ಆ ಕಿವಿಗೆ ಬೀಳುವುದೇ ಇಲ್ಲ
ಯಾಕೆಂದರೆ ನಾನು ಯಾವುದಕ್ಕೂ ರಿಸ್ಕ್ ತೆಗೆದುಕೊಳ್ಳುವುದಿಲ್ಲ.

ಉಪಯೋಗಿಸದೇ ಇರುವ ಬಾತ್ರೂಮಿನ ಮೇಲಿರುವ ಗೂಡಿನೊಳಗಿನಲ್ಲಿರುವ ಲೋಟ ತೆಗೆಯುತ್ತೇನೆ.
ಅದರಲ್ಲಿ ಪೆಗ್ ಹಾಕಿ ಆಸ್ವಾದಿಸುತ್ತೇನೆ.
ಲೋಟವನ್ನು ತೊಳೆದು ಮತ್ತೆ ಗೂಡಿನಲ್ಲಿಡುತ್ತೇನೆ.
ಅಫ್ಕೋಸರ್್ ಬಾಟ್ಲಿಯನ್ನು ಕಪ್ಪು ಅಲಮೇರುವಿನಲ್ಲಿಡುತ್ತೇನೆ.
ಗಾಂಧೀಜಿ ಮುಸು ಮುಸು ನಗುತ್ತಿರುತ್ತಾರೆ.
ಅಡುಗೆ ಮನೆಗೆ ಹೋಗಿ ನೋಡುತ್ತೇನೆ.
ಹೆಂಡತಿ ಹಿಟ್ಟು ಮಿದಿಯುತ್ತಿರುತ್ತಾಳೆ.
ಈ ಕಿವಿಯ ವಿಚಾರ ಆ ಕಿವಿಗೆ ಬೀಳುವುದಿಲ್ಲ.
ಯಾಕೆಂದರೆ ನಾನು ಯಾವುದಕ್ಕೂ ರಿಸ್ಕ್ ತೆಗೆದುಕೊಳ್ಳುವುದಿಲ್ಲ.
ನಾನು : ಗೌಡರ ಮಗಳ ಮದುವೆ ನಿಶ್ಚಯವಾಯ್ತೆ?
ಆಕೆ : ಅವರು ಸರಿಯಾಗಿದ್ದರೆ ತಾನೆ ಯಾವುದಾದರೂ ಒಳ್ಳೆಯ ಸಂಬಂಧ ಬರೋಕೆ.

ಪೆಗ್ 2
ನಾನು ಮತ್ತೆ ಹೊರಗೆ ಬರುತ್ತೇನೆ, ಕಪ್ಪು ಅಲಮೇರುವಿನಿಂದ ಶಬ್ಧ ಬರುತ್ತದೆ.
ಉಳಿದಿರುವ ಬಾಟ್ಲಿಯನ್ನು ಸದ್ದಿಲ್ಲದೇ ತೆಗೆಯುತ್ತೇನೆ
ಸ್ವಲ್ಪ ಪೆಗ್ ಹಾಕಿಕೊಂಡು ಆಸ್ವಾದಿಸುತ್ತೇನೆ.
ಬಾಟ್ಲಿಯನ್ನು ತೊಳೆದು ಬಾತ್ರೂಮಿನಲ್ಲಿ ಇಡುತ್ತೇನೆ.
ಕಪ್ಪು ಲೋಟವನ್ನೂ ಅಲಮೇರುವಿನಲ್ಲಿಡುತ್ತೇನೆ.
ಈ ಕಿವಿಯ ವಿಚಾರ ಆ ಕಿವಿಗೆ ಬೀಳುವುದಿಲ್ಲ.
ಯಾಕೆಂದರೆ ನಾನು ಯಾವುದಕ್ಕೂ ರಿಸ್ಕ್ ತೆಗೆದುಕೊಳ್ಳುವುದಿಲ್ಲ.
ನಾನು : ಅಫ್ಕೋಸರ್್, ಗೌಡರ ಮಗಳು ಮದುವೆ ವಯಸ್ಸಿಗೆ ಬಂದಿದ್ದಾಳಾ?
ಆಕೆ : ಬರದೇ ಏನು? ಎರಡು ಕತ್ತೆಯ ವಯಸ್ಸಾಗಿದೆ.
ನಾನು : (ನಾಲಿಗೆಗೆ ಬಂದ ಮಾತನನ್ನು ತಡೆದುಕೊಂಡು) ಹೌದಾ !

ಪೆಗ್ 3
ನಾನು ಮತ್ತೆ ಕಪ್ಪು ಅಲಮೇರುವಿನಿಂದ ಹಿಟ್ಟನ್ನು ತೆಗೆಯುತ್ತೇನೆ.
ಅಲಮೇರುವಿನ ಜಾಗ ತನಗೆ ತಾನೇ ಬದಲಾಗುತ್ತದೆ.
ಗೂಡಿನಿಂದ ಬಾಟ್ಲಿ ತೆಗೆದು ಬಾತ್ರೂಮಿನಲ್ಲಿ ಪೆಗ್ ಹಾಕುತ್ತೇನೆ.
ಗಾಂಧೀಜಿ ಜೋರು ಜೋರಾಗಿ ನಗುತ್ತಿರುತ್ತಾರೆ.
ಗೂಡನ್ನು ಹಿಟ್ಟಿನಲ್ಲಿಟ್ಟು, ಗಾಂಧೀಜಿಯ ಪೋಟೋವನ್ನು ತೊಳೆದು ಅಲಮೇರುವಿನಲ್ಲಿಡುತ್ತೇನೆ.
ಹೆಂಡತಿ ಗ್ಯಾಸ್ ಮೇಲೆ ಬಾತ್ರೂಮ್ ಇಡುತ್ತಾಳೆ.
ಈ ಬಾಟ್ಲಿಯ ವಿಚಾರ ಆ ಬಾಟ್ಲಿಗೆ ಬೀಳುವುದಿಲ್ಲ.
ಯಾಕೆಂದರೆ ನಾನು ಯಾವುದಕ್ಕೂ ರಿಸ್ಕ್ ತೆಗೆದುಕೊಳ್ಳುವುದಿಲ್ಲ.
ನಾನು : (ಸಿಟ್ಟಿನಿಂದ) ಗೌಡ್ರಿಗೆ ಕತ್ತೆ ಅಂತೀಯಾ? ಇನ್ನೊಂದು ಸಾರಿ ಹೇಳಿದರೆ ನಾಲಿಗೆ ಕಿತ್ತಾಕ್ತೀನಿ.
ಆಕೆ : ಸುಮ್ಸುಮ್ನೆ ಏನೇನೋ ಮಾತಾಡ್ಬೇಡಾ, ಆಚೆಗೆ ಹೋಗಿ ಬಿದ್ಕಾ.

ಪೆಗ್ 4
ನಾನು ಹಿಟ್ಟಿನಿಂದ ಬಾಟ್ಲಿ ತೆಗೆಯುತ್ತೇನೆ.
ಕಪ್ಪು ಅಲಮೇರುಗೆ ಹೋಗಿ ಒಂದು ಪೆಗ್ ಗುಟುಕಿಸುತ್ತೇನೆ.
ಬಾತ್ರೂಮ್ ತೊಳೆದು ಗೂಡಿನಲ್ಲಿಡುತ್ತೇನೆ.
ಹೆಂಡತಿ ನನ್ನನ್ನು ನೋಡಿ ನಗುತ್ತಿರುತ್ತಾಳೆ.
ಗಾಂಧೀಜಿ ಅಡುಗೆ ಮಾಡುತ್ತಲೇ ಇರುತ್ತಾರೆ.
ಈ ಗೌಡನ ವಿಚಾರ ಆ ಗೌಡನಿಗೆ ಬೀಳುವುದಿಲ್ಲ.
ಯಾಕೆಂದರೆ ನಾನು ಯಾವುದಕ್ಕೂ ರಿಸ್ಕ್ ತೆಗೆದುಕೊಳ್ಳುವುದಿಲ್ಲ.
ನಾನು : (ನಗು ನಗುತ್ತ) ಏನು, ಗೌಡ ಕತ್ತೆಯ ಜೊತೆಗೆ ಮದುವೆ ಆದ್ನಾ?
ಆಕೆ : ( ಕಿರುಚುತ್ತ್ತಾ) ತಲೆಯ ಮೇಲೆ ನೀರು ಸುರಿತೀನಿ ಈಗಾ ! !
ನಾನು ಮತ್ತೆ ಅಡುಗೆ ಮನೆಗೆ ಹೋಗುತ್ತೇನೆ, ಸುಮ್ಮನೆ ಗೂಡಿನಲ್ಲಿ ಕುಳತುಕೊಳ್ಳುತ್ತೇನೆ.
ಲೋಟವೂ ಗೂಡಿನಲ್ಲಿರುತ್ತದೆ.
ಹೊರಗಿನ ಕೋಣೆಯಿಂದ ಬಾಟ್ಲಿಗಳ ಸದ್ದು ಕೇಳಿಸುತ್ತಿರುತ್ತದೆ.
ನಾನು ಹೋಗಿ ನೋಡುತ್ತೇನೆ, ಬಾತ್ರೂಮಿನಲ್ಲಿ ಹೆಂಡತಿ ಹೆಂಡವನ್ನು ಆಸ್ವಾದಿಸುತ್ತಿರುತ್ತಾಳೆ.
ಈ ಕತ್ತೆಯ ವಿಚಾರ ಆ ಕತ್ತೆಗೆ  ಬೀಳುವುದಿಲ್ಲ.
ಯಾಕೆಂದರೆ ಗಾಂಧೀಜಿ ಯಾವುದಕ್ಕೂ ರಿಸ್ಕ್ ತೆಗೆದುಕೊಳ್ಳುವುದಿಲ್ಲ.
ಅಲ್ಲಿಯ ತನಕ ಗೌಡನ ಅಡುಗೆ ಇನ್ನೂ ಮುಗಿದೇ ಇರುವುದಿಲ್ಲ.
ನಾನು ಪೋಟೋದೊಳಗಿಂದ ಹೆಂಡತಿಯನ್ನು ನೋಡಿ ನಗುತ್ತಿರುತ್ತೇನೆ.
ಯಾಕೆಂದರೆ ನಾನು ಯಾವುದಕ್ಕೂ ರಿಸ್ಕ್ ತೆಗೆದುಕೊಳ್ಳುವುದಿಲ್ಲ.

‘ಹದಿಹರೆಯದವರಿಗೆ ಧಾರ್ಮಿಕ ವಿವೇಕ’ ಪುಸ್ತಕ ಲಭ್ಯ

Dharmika Viveka Kannada Cover page

ಇದು ನನ್ನ ಅನುವಾದಿತ ಪುಸ್ತಕ ‘ಹದಿಹರೆಯದವರಿಗೆ ಧಾರ್ಮಿಕ ವಿವೇಕ’. ಮೂಲ ಇಂಗ್ಲೀಷ್ : ಡಾ. ಮನೀಷ್ ಮೋಕ್ಷಗುಂಡಂ. ಪ್ರಕಾಶಕರು: ಮಹಾ ಪಬ್ಲಿಕೇಷನ್ಸ್. ಬೆಲೆ ರೂ. 90. ಪ್ರತಿಗಳಿಗಾಗಿ ದಯವಿಟ್ಟು ನಿಮ್ಮ ವಿಳಾಸವನ್ನು mailcautiousmind@gmail.com ಗೆ ಮೇಲ್ ಮಾಡಿ. ಸಗಟು ಖರೀದಿಗೆ ಮತ್ತು ಶಾಲಾ-ಕಾಲೇಜುಗಳಿಗೆ ರಿಯಾಯತಿ ಇದೆ.

ಪುಸ್ತಕ ಬಿಡುಗಡೆಯ ಫೋಟೋಗಳು

1 2 3 5 6

ನನ್ನ ಎರಡನೆಯ ಪುಸ್ತಕ(ಅನುವಾದ) ಹದಿಹರೆಯದವರಿಗೆ ಧಾರ್ಮಿಕ ವಿವೇಕ ಬೆಂಗಳೂರಿನಲ್ಲಿ ಸೆಪ್ಟೆಂಬರ್ 10 ರಂದು ಲೋಕಾರ್ಪಣೆಗೊಂಡಿತು. ಸಮಾರಂಭದ ಕೆಲ ಕ್ಷಣಗಳು ಇಲ್ಲಿವೆ.

ಇಂದು ನನ್ನ ಪುಸ್ತಕ ಲೋಕಾರ್ಪಣೆ

book-lokarpane-mailer

ಸುಚಿತ್ರಾ ಫಿಲ್ಮ್ ಸೊಸೈಟಿಯಲ್ಲಿ ಸಂಜೆ 6 ಗಂಟೆಗೆ ತಮ್ಮ ನಿರೀಕ್ಷೆಯಲ್ಲಿ…

INVITE – ನನ್ನ ಪುಸ್ತಕ ಬಿಡುಗಡೆಗೆ ಎರಡು ದಿನ ಮಾತ್ರ ಬಾಕಿ

invite-printಸೆಪ್ಟೆಂಬರ್ 10 ಕ್ಕೆ ಎರಡು ದಿನ ಮಾತ್ರ ಬಾಕಿ ಉಳಿದಿದೆ. ದಯವಿಟ್ಟು ಬನ್ನಿ, ಮಿತ್ರರನ್ನೂ ಕರೆತನ್ನಿ. 

INVITE – ನನ್ನದೂ ಸೇರಿ 5 ಪುಸ್ತಕಗಳ ಬಿಡುಗಡೆ

book-lokarpane-mailerನನ್ನ ಮತ್ತೊಂದು ಪುಸ್ತಕ ‘ಹದಿಹರೆಯದವರಿಗೆ ಧಾರ್ಮಿಕ ವಿವೇಕ'(ಇಂಗ್ಲೀಷ್ ಮೂಲ – ಡಾ. ಮನೀಷ್ ಮೋಕ್ಷಗುಂಡಂ, ಕನ್ನಡಕ್ಕೆ – ಸುಘೋಷ್ ಎಸ್ ನಿಗಳೆ) ಬಿಡುಗಡೆಗೆ ಸಿದ್ಧವಾಗಿದೆ. ಇದೇ ಸೆಪ್ಟೆಂಬರ್ 10 ರಂದು ಸಂಜೆ 6 ಗಂಟೆಗೆ ಸುಚಿತ್ರಾ ಫಿಲ್ಮ್ ಸೊಸೈಟಿಯಲ್ಲಿ ಲೋಕಾರ್ಪಣೆ. ದಯವಿಟ್ಟು ಬನ್ನಿ. ಪುಸ್ತಕ ಬಿಡುಗಡೆಯ ನಂತರ ಸಂವಾದ ಕಾರ್ಯಕ್ರಮ ನಡೆಯಲಿದೆ.