ಕರನಿರಾಕರಣೆಯ ವೀರಕಥೆ

ಇದು ‘ಕರನಿರಾಕರಣೆಯ ವೀರಕಥೆ’ ಎಂಬ ಪುಸ್ತಕದ 186ನೇ ಪುಟ. ಲೇಖಕ ಮತ್ತು ಸಂಪಾದಕರು ರಂಗನಾಥ ದಿವಾಕರ. ಪ್ರಕಟಣೆ ಲೋಕಶಿಕ್ಷಣ ಟ್ರಸ್ಟ್. ಪ್ರಥಮ ಮುದ್ರಣ 1955. ಸಿರಸಿ, ಅಂಕೋಲಾ, ಸಿದ್ದಾಪುರ ಹಾಗೂ ಹಿರೇಕೆರೂರುಗಳಲ್ಲಿ ನಡೆದ ಕರನಿರಾಕರಣೆ ಆಂದೋಲನದ ಸಂಕ್ಷಿಪ್ತ ವರ್ಣನೆ ಇಲ್ಲಿದೆ. ಇಲ್ಲಿ ಬಂದಿರುವ ಹೆಸರುಗಳಲ್ಲಿ ವಾಮನ ರಾಮರಾವ ಬೆಳಲೆ, ನನ್ನ ಅಜ್ಜ. ಅವರು ಸ್ವಾತಂತ್ರ್ಯ ಹೋರಾಟಗಾರರು ಎಂದು ಹೇಳಿಕೊಳ್ಳಲು ನನಗೆ ಹೆಮ್ಮೆ. ಅವರ ಕಾಲುಗಳ ಮೇಲೆ ಬ್ರಿಟಿಷರು ಹೊಡೆದಿದ್ದ ಹೊಡೆತಗಳ ಬಾಸುಂಡೆ ಗುರುತುಗಳು ಅವರ ಅಂತ್ಯಕಾಲದವರೆಗೂ ಇದ್ದವು ಎಂದು ಅಮ್ಮ ಹೇಳುತ್ತಿರುತ್ತಾಳೆ.

karanirakaraneya veerakathe

C5 ಹಾಗೂ NCC ಕುಡಿಯಿರಿ…

ಮೊನ್ನೆ ಮೈಸೂರಿಗೆ ಹೋಗುತ್ತಿದ್ದಾಗ, ಎಳನೀರು ಕುಡಿಯಲು ಒಂದೆಡೆ ಕಾರ್ ನಿಲ್ಲಿಸಿದೆವು. ಆ ಎಳನೀರು ಅಂಗಡಿಯಲ್ಲಿ ತೂಗುಹಾಕಿದ್ದ ಬೋರ್ಡ್ ಇದು.

IMG_20141108_105054-1

‘ಸ್ವಚ್ಛ ಭಾರತ’ದ ದುರಂತ ಚಿತ್ರ

ಪ್ರಧಾನಿ ಮೋದಿಯವರ ಸ್ವಚ್ಛ ಭಾರತ ಆಂದೋಲನವೇನೋ ಒಳ್ಳೆಯದೇ. ಆದರೆ ಅವುಗಳ ಅಣಕ ಹೇಗಾಗುತ್ತದೆ ಎಂಬುದಕ್ಕೆ ಇಲ್ಲೊಂದು ಉದಾಹರಣೆ. ‘ಇಲ್ಲಿ ಕಸ ಹಾಕಬಾರದು’ ನಿಜ. ಆದರೆ ಪಕ್ಕದಲ್ಲಿ ಹಾಕಬಹುದಲ್ವೆ?

IMG_20141105_135330

ಜಯಭಾರತ ಜನನಿಯ ತನುಜಾತೆ ಉರ್ದುವಿನಲ್ಲಿ….

ನನ್ನ ಉರ್ದು ಗುರುಗಳಾದ ಜನಾಬ್. ಮಾಹೇರ್ ಮನ್ಸೂರ್ ಅವರು ನಾಡಗೀತೆ ‘ಜಯಭಾರತ ಜನನಿಯ ತನುಜಾತೆ’ಯನ್ನು ಉರ್ದುವಿಗೆ ಅನುವಾದಿಸಿದ್ದಾರೆ. ಅದರ ಅನುವಾದ ಇಲ್ಲಿದೆ.

Urdu Jaybharatha