ಶಕುಂತಲಾದೇವಿ ಪುಸ್ತಕ ಬಿಡುಗೆಡೆಗೆ ಆತ್ಮೀಯ ಕರೆಯೋಲೆ

ನನ್ನ ನಾಲ್ಕನೇ ಪುಸ್ತಕ ಶಕುಂತಲಾದೇವಿ ಮಾರ್ಚ್ 8 ರಂದು ಬಿಡುಗಡೆಯಾಗುತ್ತಿದೆ. ಬಿಡುವು ಮಾಡಿಕೊಂಡು ಖಂಡಿತ ಬನ್ನಿ. ಇದು ಪ್ರೀತಿಯ ಕರೆಯೋಲೆ. ನಿಮ್ಮ ಭೇಟಿಯ ನಿರೇಕ್ಷೆಯಲ್ಲಿರುತ್ತೇನೆ. ಭಾರತ ಭಾರತಿ ಪುಸ್ತಕ ಮಾಲೆಯ ಸರಣಿಯಲ್ಲಿ ಒಟ್ಟು 50 ಪುಸ್ತಕಗಳು ಬಿಡುಗಡೆಯಾಗುತ್ತಿವೆ. ಅದರಲ್ಲಿ ಶಕುಂತಲಾದೇವಿ ಕೂಡ ಒಂದು.
ವಿಶ್ವಾಸಿ
ಸುಘೋಷ್ ಎಸ್. ನಿಗಳೆ.

ಭಾರತ-ಭಾರತಿ ಪುಸ್ತಕ ಸಂಪದ-೨ನೇ ಸರಣಿಯ ಐವತ್ತು ಪುಸ್ತಕಗಳ ಲೋಕಾರ್ಪಣೆ ಸಮಾರಂಭ
ಅನಾದಿಕಾಲದಿಂದ ಆಧುನಿಕ ಕಾಲದವರೆಗಿನ ಭಾರತಮಾತೆಯ ಪತ್ರರತ್ನರ ಬದುಕಿನ ಕ್ಷಣಗಳ ಮೇಲೆ ಬೆಳಕು ಚೆಲ್ಲಿ; ಯಾಕೆ ಬದುಕಬೇಕು-ಹೇಗೆ ಬದುಕಬೇಕು – ಎಂಬುದಕ್ಕೆ ಎಳೆಯರಿಗೆ ಮಾರ್ಗದರ್ಶಿಯಾಗಿ; ಆದರ್ಶದ ಕನಸುಕಟ್ಟಬಲ್ಲ ರಾಷ್ಟ್ರೋತ್ಥಾನ ಸಾಹಿತ್ಯದ ಹೆಮ್ಮೆಯ ಪುಸ್ತಕಮಾಲೆಯೇ ಭಾರತ-ಭಾರತಿ ಪುಸ್ತಕ ಸಂಪದ ಮಾಲೆ.
೭೦ರ ದಶಕದಲ್ಲಿ ಪ್ರೋ|| ಎಲ್.ಎಸ್. ಶೇಷಗಿರಿರಾವ್ ಅವರ ಪ್ರಧಾನ ಸಂಪಾದಕತ್ವದಲ್ಲಿ ’ಭಾರತ-ಭಾರತಿ’ ಪುಸ್ತಕ ಸಂಪದಮಾಲೆ ಪ್ರಾರಂಭವಾಯಿತು. ನಾಡು-ನುಡಿ-ಸಂಸ್ಕೃತಿಯ ಏಳ್ಗೆಗಾಗಿ ಬದುಕಿದ ಭಾರತೀಯ ಸಾಧನಾಶೀಲ ಹಿರಿಯರ ಜೀವನಚರಿತ್ರೆಗಳನ್ನು ಪ್ರಕಟಿಸುವ ಈ ಯೋಜನೆಯಲ್ಲಿ 510 ಶೀರ್ಷಿಕೆಗಳು ಪ್ರಕಟವಾಗಿ ಲಕ್ಷಾಂತರ ಓದುಗರನ್ನು ತಲಪಿ ಇಂದಿಗೂ ರಾಜ್ಯಾದ್ಯಂತ ಮನೆಮಾತಾಗಿದೆ.
ಮಕ್ಕಳಸಾಹಿತ್ಯದಲ್ಲಿ ಮೈಲಿಗಲ್ಲನ್ನು ಸ್ಥಾಪಿಸಿ, ಇಂದಿಗೂ ಬಹುಜನಪ್ರಿಯವಾಗಿರುವ ಭಾರತ-ಭಾರತಿ ಪುಸ್ತಕ ಸಂಪದ ಮಾಲೆಗೆ ಇನ್ನಷ್ಟು ಮಹಾಪುರುಷರ ಬದುಕನ್ನು ಕಟ್ಟಿಕೊಡುವ ಸಲುವಾಗಿ ಸಾಹಿತಿ ’ಚಿರಂಜೀವಿ’ ಅವರ ಸಂಪಾದಕತ್ವದಲ್ಲಿ ೨೦೧೨ ರಲ್ಲಿ ಭಾರತ-ಭಾರತಿ-2 ಕಾರ್ಯ ಪ್ರಾರಂಭಿಸಲಾಗಿದೆ. ಈಗಾಗಲೇ (ಜನವರಿ ೨೦೧೪) ಮೊದಲ ಕಂತಿನ 50 ಶೀರ್ಷಿಕೆಗಳ ಪುಸ್ತಕಗಳು ಪ್ರಕಟಣೆಗೊಂಡಿದ್ದು, ಮುಂದಿನ ೫೦ ಪುಸ್ತಕಗಳ ಬಿಡುಗಡೆ ಕಾರ್ಯಕ್ರಮ ನಡೆಯಲಿದೆ.

ದಿನಾಂಕ : 8-3-2015 ಭಾನುವಾರ ಬೆಳಗ್ಗೆ 10.30ಕ್ಕೆ
ಸ್ಥಳ : “ಕೇಶವಶಿಲ್ಪ”, ಕೆಂಪೇಗೌಡನಗರ, ಬೆಂಗಳೂರು -19
ಮಾಹಿತಿಗಾಗಿ : 080 -26612730

bbharathi release invitation

ಹೀಗೊಂದು ಪ್ರಾರ್ಥನೆ….

ಇದನ್ನು ಬರೆದಿದ್ದು ನನ್ನ ದೊಡ್ಡಮ್ಮ ದಿ. ಶ್ರೀಮತಿ. ಶೋಭಾ ಹಳಬೆ. ಟ್ಯೂನ್  ಹಾಕಿರುವುದು ಮತ್ತು ಹಾಡಿರುವುದು ನನ್ನ ಆತ್ಮೀಯ ಮಿತ್ರ ವಿಜಯೇಂದ್ರ ಅಥಣೀಕರ.