ಭಾರತೀಯ ಅಂಕಿಗಳು ಮತ್ತು ಶಕುಂತಲಾದೇವಿ ಪುಸ್ತಕ

Cover Pages_Page_15 ಇತ್ತೀಚೆಗೆ ಬಿಡುಗಡೆಯಾಗಿರುವ ನನ್ನ ‘ಶಕುಂತಲಾದೇವಿ’ ಪುಸ್ತಕದ ಕುರಿತು ಎಲ್ಲೆಡೆಯಿಂದ ಒಳ್ಳೆಯ ಅಭಿಪ್ರಾಯ ಬರುತ್ತಿದೆ. ಆದರೆ ಪುಸ್ತಕದಲ್ಲಿ ಕನ್ನಡದ ಅಂಕಿಗಳನ್ನು ಬಳಸಿದ್ದು ಹಲವರಿಗೆ ಇಷ್ಟವಾಗಿಲ್ಲ. ಕನ್ನಡದ ಅಂಕಿಗಳನ್ನು ಬಳಸಿದ್ದು ಯಾಕೆ? ಇಂಗ್ಲೀಷ್ ಅಂಕಿಗಳನ್ನು ಬಳಸಬೇಕಾಗಿತ್ತು, ಇದರಿಂದ ವಿದ್ಯಾರ್ಥಿಗಳಿಗೂ ಸುಲಭವಾಗುತ್ತಿತ್ತು. ಕನ್ನಡ ಅಂಕಿಗಳು ಯಾರಿಗೆ ಗೊತ್ತು ಹೇಳಿ ಎಂದು ಹಲವರು ಹೇಳುತ್ತಿದ್ದಾರೆ. ಆದರೆ ನನ್ನ ಪ್ರಶ್ನೆಯೆಂದರೆ ಕನ್ನಡದ ಅಂಕಿಗಳನ್ನು ಕನ್ನಡಿಗರು ಬಳಸದೇ ಇದ್ದರೆ, ತಮಿಳುರು, ಮಲೆಯಾಳಿಗಳು ಬಳಸುತ್ತಾರೆಯೆ? ಕನ್ನಡದ ಅಂಕಿಗಳನ್ನು ಕನ್ನಡಿಗರು ಓದದೇ ಹೋದರೆ, ಬರೆಯದೇ ಹೋದರೆ, ಬಳಸದೇ ಹೋದರೆ ಅವುಗಳ ಉಳಿವು ಹೇಗೆ? ಕೆಲ ವರ್ಷಗಳ ಹಿಂದೆ ನಾನು ಈಟಿವಿಯಲ್ಲಿದ್ದಾಗ ಕನ್ನಡ ರಾಜ್ಯೋತ್ಸವ ಬಂದಾಗ, ರಿಪೋರ್ಟರ್ಸ್ ಮೀಟಿಂಗ್ ನಲ್ಲಿ ಜಿ. ಎನ್. ಮೋಹನ್ ಸರ್ ಕೇಳಿದ್ದರು, “ಯಾವ ರೀತಿ ಸ್ಟೋರಿ ಮಾಡೋಣ?” ಎಂದು. ತುಂಬ ಚರ್ಚೆ ನಡೆದ ಬಳಿಕ, ಮೋಹನ್ ಸರ್ ಅವರೇ, “ಒಂದು ಕೆಲ್ಸ್ ಮಾಡಿ…ಕನ್ನಡ ಅಂಕಿಗಳನ್ನು ದೊಡ್ಡದಾಗಿ ಬರೆದುಕೊಂಡು ಮೈಕ್ ಹಿಡಿದುಕೊಂಡು ಹೋಗಿ. ಜನರನ್ನು ಇದು ಎಷ್ಟು ಕೇಳಿ. ಉತ್ತರ ಏನು ಬರುತ್ತದೋ ನೋಡಿ” ಅಂತ. ಸರಿ ಎಂದು ನಾವೆಲ್ಲ ಕನ್ನಡ ಅಂಕಿಗಳನ್ನು ಬರೆದುಕೊಂಡು ಬೆಂಗಳೂರಿನ ತುಂಬ ಜನರಿಗೆ ಇದು ಎಷ್ಟು ಎಂದು ಕೇಳುತ್ತ ಓಡಾಡಿದೆವು. ಶೇ. 90 ರಷ್ಟು ಕನ್ನಡಿಗರಿಗೆ ಕನ್ನಡ ಅಂಕಿಗಳ ಪರಿಚಯವೇ ಇರಲಿಲ್ಲ!! ಇದು ಕನ್ನಡ ಅಂಕಿಗಳ ಪರಿಸ್ಥಿತಿ. ಇದಕ್ಕೆ ಸಂಬಂಧಿಸಿಂತೆ ಇತ್ತೀಚೆಗೆ ರಾಜ್ಯಸಭೆಯಲ್ಲಿ ಸಂಸದ ತರುಣ್ ವಿಜಯ್ ಈ ಕುರಿತು ಕಳವಳ ವ್ಯಕ್ತಪಡಿಸಿರುವ ವರದಿ ಇಲ್ಲಿದೆ. 25954916