ಥೂ ದರಿದ್ರ

daridra (2)

ಮಗನನ್ನು ಕಾರಿನಲ್ಲಿ ಕರೆದುಕೊಂಡು ಹೋಗುತ್ತಿದ್ದೆ. ಗೊರಗುಂಟೆಪಾಳ್ಯದ ಬಳಿ ಸಿಗ್ನಲ್ ನಲ್ಲಿ ನಿಂತಿದ್ದೆ. ಮಗ ಹಿಂದಿನ ಸೀಟಿನಲ್ಲಿ ಕುಳಿತಿದ್ದ. ಸಿಗ್ನಲ್ ಗ್ರೀನ್ ಆದ ತಕ್ಷಣ ಇನ್ನೇನು ಹೊರಡಬೇಕು, ಅಷ್ಟರಲ್ಲಿ ಸಿಗ್ನಲ್ ರೆಡ್ ಆಗಿದ್ದರೂ ಮತ್ತೊಂದು ಕಡೆಯಿಂದ ಬಿಎಂಟಿಸಿ ಬಸ್ಸಿನ ಡ್ರೈವರ್ ಬಸ್ಸನ್ನು ನುಗ್ಗಿಸಿ ಪಾಸ್ ಆದ. ನಮ್ಮ ಕಾರ್ ಮುಂದಿದ್ದ ಬೈಕ್ ಸವಾರರು ಬೋ…ಮಗನೆ, ಗೂಬೆ, ಲೋಫರ್ ಮುಂತಾದ ಅಣಿಮುತ್ತುಗಳನ್ನು ಉದುರಿಸಿದರು. ನಾನೂ ಸುಮ್ಮನಿರಲಾರದೆ, “ಥೂ ದರಿದ್ರ” ಎಂದು ಉಗಿದೆ.

ಆ ಸಿಗ್ನಲ್ ನಂತರ ಮುಂದಿನ ಸಿಗ್ನಲ್ ನಲ್ಲಿ ನಿಂತಿದ್ದೆವು. ಇನ್ನೂ ಹಸಿರು ದೀಪ ಬೆಳಗದಿದ್ದರೂ, ಮುಂದೆ ನಿಂತಿದ್ದ ಕಾರ್ ಸಿಗ್ನಲ್ ಜಂಪ್ ಮಾಡಿ ಪಾಸ್ ಆಗಿಬಿಟ್ಟಿತು. ನನ್ನ ಮಗ ಥಟ್ಟನೆ ಅಂದ, “ಅಪ್ಪ, ಅಲ್ನೋಡು ಅಲ್ನೋಡು ಇನ್ನೊಬ್ಬ ದರಿದ್ರ” J

ಮಕ್ಕಳ, ಮುಂದೆ ತುಂಬಾ ಎಚ್ಚರಿಕೆಯಿಂದ ಇರಬೇಕು ಮಾರಾಯ್ರೇ….. J