INVITE – ಸಂಸ್ಕಾರ

5X2

Advertisements

ನಮಗೆ ಮದುವೆ ಕವರೇಜ್ ಇದೆ ಮಾರಾಯ್ರೆ….

ರೈತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ನೋಡಿ,

ಇಲ್ಲ, ನಮಗೆ ಮದುವೆ ಕವರೇಜ್ ಇದೆ ಮಾರಾಯ್ರೆ

ಸಾಹಿತಿಯೊಬ್ಬರು ಹತ್ಯೆಯಾದರು ನೋಡಿ

ಇಲ್ಲ, ನಮಗೆ ಮದುವೆ ಕವರೇಜ್ ಇದೆ ಮಾರಾಯ್ರೆ

ಒಆರ್ ಓಪಿಯಲ್ಲಿ ಮತ್ತೊಬ್ಬ ನಿವೃತ್ತ ಯೋಧ ಅಸ್ವಸ್ಥರಾದರಂತೆ ನೋಡಿ

ಇಲ್ಲ, ನಮಗೆ ಮದುವೆ ಕವರೇಜ್ ಇದೆ ಮಾರಾಯ್ರೆ

ಜಮ್ಮು ಗಡಿಯಲ್ಲಿ ಭಾರತೀಯ ಯೋಧನೊಬ್ಬ ಹುತಾತ್ಮನಾದನಂತೆ ನೋಡಿ

ಇಲ್ಲ, ನಮಗೆ ಮದುವೆ ಕವರೇಜ್ ಇದೆ ಮಾರಾಯ್ರೆ

ಈ ಬಾರಿ ಬರಗಾಲವಂತೆ ನೋಡಿ

ಇಲ್ಲ, ನಮಗೆ ಮದುವೆ ಕವರೇಜ್ ಇದೆ ಮಾರಾಯ್ರೆ

ಬಿಬಿಎಂಪಿಯ ಕೆಲ ಕಾರ್ಪೋರೇಟರ್ ಗಳು ಹರಾಜಿಗಿದ್ದಾರಂತೆ ನೋಡಿ

ಇಲ್ಲ, ನಮಗೆ ಮದುವೆ ಕವರೇಜ್ ಇದೆ ಮಾರಾಯ್ರೆ

ಶಾಲಾ ಮಕ್ಕಳಿಗೆ ಆ ಹಳ್ಳಿಯಲ್ಲಿ ಬಿಸಿಯೂಟ ಸಿಗುತ್ತಿಲ್ಲವಂತೆ ನೋಡಿ

ಇಲ್ಲ, ನಮಗೆ ಮದುವೆ ಕವರೇಜ್ ಇದೆ ಮಾರಾಯ್ರೆ

ನಿಮಗೆ ತಲೆ ಕೆಟ್ಟಿದೆಯಾ ನೋಡಿ

ಹೌದು, ನಮಗೆ ಮದುವೆ ಕವರೇಜ್ ಇದೆ ಮಾರಾಯ್ರೆ