ಶ್ರದ್ಧಾಂಜಲಿ

“ನಿನಗ್ಯಾಕೋ ಲಿಪ್ ಬಾಮು, ಲಿಪ್ ಸ್ಟಿಕ್ಕು….ಹಂಗನ ಗುಲಾಬಿ ತುಟಿ ಛಂದ ಕಾಣಸ್ತಾವ” ಎಂದು ಹೇಳುತ್ತ ಬೆಳಗಾವಿಯಲ್ಲಿ ನನ್ನ ಎಲ್ಲ ನಾಟಕಗಳಿಗೆ ನನಗೆ ಮೇಕಪ್ ಮಾಡಿದ ಶ್ರೀ. ಗಜಾನನ ಮಹಾಲೆ ನಿಧನರಾಗಿದ್ದಾರೆ. ಮಹಾಲೆಯವರ ಬಳಿ ಸಾಕಷ್ಟು ಕಲಿತಿದ್ದೇನೆ. ಮೇಕಪ್ ನ ಜೊತೆಗೆ ಅವರ ಸಜ್ಜನಿಕೆ, ಮೃದು ಸ್ವಭಾವ ಹಾಗೂ ಕರ್ತೃತ್ವ ಶಕ್ತಿ ನನ್ನನ್ನು ಅಚ್ಚರಿಗೊಳಿಸಿದೆ. ಐ ವಿಲ್ ಮಿಸ್ ಮಹಾಲೆ ಸರ್…..

GM (2)

ಹಾಗೆಯೇ ಶ್ರೀ. ಸೂರ್ಯನಾಥ ಕಾಮತ್ ಅವರು ನಮ್ಮನ್ನಗಲಿದ್ದಾರೆ. ಬೆಳಗಾವಿಯ ಆರ್ ಪಿ ಡಿ ಕಾಲೇಜಿನಲ್ಲಿ ನನಗೆ ಇತಿಹಾಸದ ಅಧ್ಯಾಪಕಿಯಾಗಿದ್ದವರು ಶ್ರೀಮತಿ. ಸೀತಾಲಕ್ಷ್ಮೀ ಸುರೇಬಾನಕರ್. ಅವರ ಗುರುಗಳು ಶ್ರೀ. ಸೂರ್ಯನಾಥ ಕಾಮತ್ ಅವರು. ಹೀಗಾಗಿ ಕಾಮತ್ತರು ನನಗೆ ಗುರುವಿನ ಗುರು. 2011 ರಲ್ಲಿ ಬೆಳಗಾವಿಯ ವಿಶ್ವ ಕನ್ನಡ ಸಮ್ಮೇಳನಕ್ಕಾಗಿ ಅವರ ಸಂದರ್ಶನ ಮಾಡಿದ್ದೆ. ಅವರ ಇತಿಹಾಸದ ಜ್ಞಾನ ಹಾಗೂ ಸರಳ ವ್ಯಕ್ತಿತ್ವಕ್ಕೆ ಸಾಟಿಯಿಲ್ಲ. ಅವರ ಆತ್ಮಕ್ಕೆ ಶಾಂತಿ ಸಿಗಲಿ.

SK

ಸುದ್ದಿ ಕೃಪೆ – ವಿಜಯ ಕರ್ನಾಟಕ

ಕೋಲು ಬ್ಯಾಲೆನ್ಸಿಂಗ್

ಕಾಲೇಜಿನಲ್ಲಿದ್ದಾಗ ಸುಮಾರು 5 ನಿಮಿಷಗಳವರೆಗೆ ಈ ರೀತಿ ಬ್ಯಾಲೆನ್ಸ್ ಮಾಡುತ್ತಿದ್ದೆ. ಮೊನ್ನೆ ಮತ್ತೊಮ್ಮೆ ಪ್ರಯತ್ನಿಸಿದೆ. It was not that bad effort 🙂ಕೇರಳದ ಕೆಲ ಚಿತ್ರಗಳು

ಕೇರಳದ ಅಲಪ್ಪುಳ ಹಾಗೂ ಸುತ್ತಮುತ್ತಲ ಪ್ರದೇಶಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ತೆಗೆದ ಫೋಟೋಗಳು.

ಪ್ರಶಸ್ತಿ, ಹಣ ವಾಪಸ್ ನೀಡಿದ್ದೀರಿ, ಆದರೆ….

kalburgi

ಕಲಬುರ್ಗಿ ಹತ್ಯೆ ಖಂಡಿಸಿ ಮತ್ತು ಹತ್ಯೆ ನಡೆದು ಇಷ್ಟು ದಿನಗಳಾದರೂ ಅಪರಾಧಿಗಳನ್ನು ಸೆರೆ ಹಿಡಿಯುವಲ್ಲಿ ಆಡಳಿತ ವಿಫಲವಾಗಿರುವುದನ್ನು ವಿರೋಧಿಸಿ ಹಲವಾರು ಸಾಹಿತಿಗಳು ತಮಗೆ ಸಂದ ವಿವಿಧ ಪ್ರಶಸ್ತಿಗಳನ್ನು ವಾಪಸ್ ನೀಡಿದ್ದಾರೆ. ಆ ಸಂದರ್ಭದಲ್ಲಿ ಹಲವರು, “ಪ್ರಶಸ್ತಿ ಮಾತ್ರ ವಾಪಸ್ ನೀಡಿದ್ದಾರಾ, ಅಥವಾ ಅದರ ಜೊತೆ ಬಂದ ಹಣವನ್ನೂ ವಾಪಸ್ ಮಾಡಿದ್ದಾರಾ?” ಎಂದು ಕೇಳಿದ್ದರು. ನನ್ನ ಅರಿವಿಗೆ ಬಂದ ಹಾಗೆ ಎಲ್ಲ ಸಾಹಿತಿಗಳೂ ತಮಗೆ ಸಂದ ಪ್ರಶಸ್ತಿಯ ಜೊತೆಗೆ ಹಣವನ್ನೂ ವಾಪಸ್ ಮಾಡಿದ್ದಾರೆ. ಬಹುಶಃ, ಇದಕ್ಕೆ ಮುನ್ನುಡಿ ಬರೆದವರು ಚಂಪಾ ಅವರು. ತಮ್ಮ ಪ್ರಶಸ್ತಿಯ ಜೊತೆಗೆ 1 ಲಕ್ಷದ ಚೆಕ್ಕನ್ನೂ ವಾಪಸ್ ಮಾಡಿದ್ದರು.

ಸಾಹಿತಿಗಳು ಪ್ರಶಸ್ತಿ ಮರಳಿಸುತ್ತಿರುವುದರ ಬಗ್ಗೆ ಕಮ್ಮಟವೊಂದರಲ್ಲಿ ಚರ್ಚೆ ಮಾಡುತ್ತಿರುವಾಗ, ಭಾಗವಹಿಸಿದ ಒಬ್ಬರು, ಈ ಪ್ರಶ್ನೆಯನ್ನು ಮುಂದಿಟ್ಟರು. “ನೋಡಿ ಸ್ವಾಮಿ, ಪ್ರಶಸ್ತಿ ಮತ್ತು ಹಣ ವಾಪಸ್ ನೀಡುವುದು ಸ್ವಾಗತಾರ್ಹವೇ. ನಾನೂ ಅದನ್ನು ಸ್ವಾಗತಿಸುತ್ತೇನೆ. ಆದರೆ ಮರಳಿಸುವುದೆಂದರೆ ಸಂಪೂರ್ಣವಾಗಿ ಮರಳಿಸಬೇಕು. ಪ್ರಶಸ್ತಿಯನ್ನು ಮರಳಿಸಿದ ಸಾಹಿತಿಗಳು, ಕಲಬುರ್ಗಿಯವರ ಅಪರಾಧಿಗಳು ಸಿಕ್ಕಿಹಾಕಿಕೊಂಡ ಬಳಿಕವೂ ಪ್ರಶಸ್ತಿ ಮತ್ತು ಹಣವನ್ನು ಪುನಃ ಸ್ವೀಕರಿಸಬಾರದು. ಜೊತೆಗೆ, ಇಲ್ಲಿ ಮತ್ತೊಂದು ವಿಷಯವಿದೆ. ಈ ಪ್ರಶಸ್ತಿಗಳ ಮೊತ್ತವೆಲ್ಲವೂ ಸಾವಿರ ಮತ್ತು ಲಕ್ಷದ ಲೆಕ್ಕದಲ್ಲಿದೆ. ಈ ಪ್ರಶಸ್ತಿಗಳು ಈ ಸಾಹಿತಿಗಳಿಗೆ ಸಂದು ಹಲವು ವರ್ಷಗಳು ಕಳೆದಿವೆ. ಇಷ್ಟು ಹಣಕ್ಕೆ ಇಷ್ಟು ವರ್ಷ ಬಡ್ಡಿ ಎಷ್ಟಾಯಿತು? ಉಳಿತಾಯ ಖಾತೆಯಲ್ಲಿಟ್ಟರೆ ಕನಿಷ್ಠ 4 ಪರ್ಸೆಂಟ್ ಬಡ್ಡಿ ಬರುತ್ತದೆ. ಫಿಕ್ಸ್ಡ್ ಡಿಪಾಸಿಟ್ ನಲ್ಲಿ ಇನ್ನೂ ಹೆಚ್ಚು. ಆ ಬಡ್ಡಿಯ ಹಣವನ್ನೂ ಸಾಹಿತಿಗಳು ವಾಪಸ್ ಮಾಡಬೇಕು” ಅಂತ.

ನನ್ನ ಬಳಿ ಇದಕ್ಕೆ ಉತ್ತರವಿಲ್ಲ. ಓದುಗರು ಉತ್ತರ ನೀಡಬಹುದು.

VIDEO – ಭೋರ್ ರಾಜವಾಡೆ

ಕೆಲ ತಿಂಗಳ ಹಿಂದೆ ಪುಣೆಗೆ ಹೋದಾಗ, ಪುಣೆ ಸಮೀಪದ ಭೋರ್ ರಾಜವಾಡೆಗೆ ಭೇಟಿನೀಡಿದ್ದೆ. ಆ ಕುರಿತಾದ ಲೇಖನ ಸುಧಾ ವಾರಪತ್ರಿಕೆಯಲ್ಲಿ ಪ್ರಕಟವಾಗಿತ್ತು. ಆ ಲೇಖನ ಮತ್ತು ವಾಡೆಯ ಹೆಚ್ಚಿನ ಫೋಟೋಗಳು ಇಲ್ಲಿವೆ.

Bhor Rajavade Articl 02042015

ಆಫರ್ – ಆಫರ್

ಫೆಸ್ಟಿವ್ ಸೇಲ್, ಬಿಗ್ ಬಿಲಿಯನ್ ಡೇ, 10 ಗಂಟೆಗಳಲ್ಲಿ 10 ಲಕ್ಷ ಪ್ರಾಡಕ್ಟ್ ಗಳು ಮಾರಾಟ ಎಂಬ ಭರಾಟೆ ಶುರುವಾಗಿದೆ. ಟೈಮ್ಸ್ ಆಫ್ ಇಂಡಿಯಾದ ಮುಖಪುಟವಂತೂ ನಾಲ್ಕನೇ ಪುಟದಿಂದ ಆರಂಭವಾಗುತ್ತಿದೆ. ಕೆಟ್ಟು ಕುಲಗೆಟ್ಟು ಹೋದ ಕನ್ನಡದಲ್ಲಿ ಕನ್ನಡ ಪತ್ರಿಕೆಗಳಲ್ಲಿ ಕೂಡ ರಿಯಲ್ ಎಸ್ಟೇಟ್ ಏಜೆನ್ಸಿಗಳ ಜಾಹೀರಾತು ಕಾಣಿಸಿಕೊಳ್ಳುತ್ತಿದೆ. ನಿಜವಾಗಿ ಹೇಳಿ ಎಷ್ಟು ಜನ ಈ ಸೀಸನ್ ನಲ್ಲಿ ಮೊಬೈಲು, ಟಿವಿ, ವಾಷಿಂಗ್ ಮಷಿನ್ನು, ಸೈಟು, ಮನೆ ಅಂತ ಖರೀದಿ ಮಾಡಿದ್ದೀರಿ? 🙂