Invite – ಶುದ್ಧಗೆ

ವಿಜಯನಗರ ಬಿಂಬ (ರಿ) ರಂಗ ಶಿಕ್ಷಣ ಕೇಂದ್ರ 20 ವರ್ಷದ ಸಂಭ್ರಮಕ್ಕೆ ವರ್ಷ ಪೂರ್ತಿ ಅರ್ಥಪೂರ್ಣ ಕಾರ್ಯಕ್ರಮಗಳನ್ನು ಆಯೋಜಿಸುತ್ತಿ ಬಂದಿದೆ . 8 ನೇ ತಿಂಗಳ ಕಾಯ೯ಕ್ರಮದ ವಿವರ ಹೀಗಿದೆ
ಕನ್ನಡ ರಾಜ್ಯೋತ್ಸವದ ಅಂಗವಾಗಿ
ವಿಜಯನಗರ ಬಿಂಬ (ರಿ) ರಂಗ ಶಿಕ್ಷಣ ಕೇಂದ್ರ, ಮಕ್ಕಳ ವಿಭಾಗ ಅಪಿ೯ಸುವ
2010 ಸಾಲಿನಲ್ಲಿ ಸಾಹಿತ್ಯ ಅಕಾಡೆಮಿಯಿಂದ ಪುಸ್ತಕ ಬಹುಮಾನ ಪಡೆದ ನಾಟಕ ಕೃತಿ –
ಕನ್ನಡ ಭಾಷಾ ಚರಿತ್ರೆಯ ಬಗೆಗಿನ ಮಕ್ಕಳ ನಾಟಕ – ಶುದ್ಧಗೆ
ನವಂಬರ್, 29,2015, ಭಾನುವಾರ
ಸಂಜೆ 7ಕ್ಕೆ
ಕಲಾಗ್ರಾಮ , ಮಲ್ಲತ್ತಹಳ್ಳಿ

ದಯಮಾಡಿ ಪ್ರಕಟಿಸಿ ಪ್ರೋತ್ಸಾಹಿಸಿ

ಶುದ್ಧಗೆ ನಾಟಕ ಕುರಿತು

ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ಸಿಕ್ಕಿದೆ- ಸರ್ಕಾರದ ಕಡತಗಳಲ್ಲಿ… ಕನ್ನಡಿಗನ ಮನಸ್ಸಿನಲ್ಲಿ ಸಿಕ್ಕುವುದೆಂದು?

ಇಂದಿಗೂ ಮಾತನಾಡಲು ಬಾಯಿ  ತೆರೆದರೆ ಕನ್ನಡಿಗರೆಲ್ಲರೂ ಉದುರಿಸುವ ಇಂಗ್ಲಿಷ್ ನುಡಿಮುತ್ತುಗಳ ಬದಲಾಗಿ ಕಸ್ತೂರಿ ಕನ್ನಡ ರಾರಾಜಿಸುವುದೆಂದು?

ಕನ್ನಡ ಭಾಷೆ ಅನ್ನದ ಪ್ರಶ್ನೆಯಾಗಿ ಪರಿವರ್ತನೆಯಾಗುವುದೆಂದು?

ಪರಿಸ್ಥಿತಿ ಹೀಗಿರುವಾಗ ಮಕ್ಕಳ ಮುಗ್ಧ ಮನಗಳಿಗೆ ಕನ್ನಡ ಭಾಷಾ ಚರಿತ್ರೆಯನ್ನ ಕಥೆಯ ರೂಪದಲ್ಲಿ, ನಾಟಕ ರೂಪದಲ್ಲಿ ಪರಿಚುಸುವ ಪುಟ್ಟ ಪ್ರಯತ್ನ – ಶುದ್ಧಗೆ.

ಉಪಧ್ಮಾನೀಯ, ಜಿಹ್ವಾಮೂಲಿಯ ಎಂಬ ಅಕ್ಷರಗಳು ಹಳೆಗನ್ನಡದ ಕಾಲಕ್ಕೇ ಕಣ್ಮರೆಯಾಗಿದ್ದವು. ರಳ ಮತ್ತು ಶಕಟರೇಫಗಳು ಆನಂತರ ತಪ್ಪಿತು. ಅದಕ್ಕೆ ಕಾರಣಗಳು ಹಲವು. ಆ ನಾಲ್ಕು ಅಕ್ಷರಗಳಿಗೆ ಕಾಡಿದ ಕಣ್ಮರೆಯಾಗುವ ಪ್ರಕ್ರಿಯೆ ಇಂದು ಎಲ್ಲಾ ಕನ್ನಡದ ಅಕ್ಷರಗಳಿಗೂ ಇದೆ. ಅದನ್ನು ತಪ್ಪಿಸುವುದು ಪ್ರತಿಯೊಬ್ಬ ಕನ್ನಡಿಗನ ಆದ್ಯ ಕರ್ತವ್ಯ. ಈ ನಿಟ್ಟಿನಲ್ಲಿ ವಿಜಯನಗರ ಬಿಂಬದ ಪ್ರಯತ್ನ – ಶುದ್ಧಗೆ.

ಇಹವೊ ಪರವೊ ತಿಳಿಯದ ಕಾಲ್ಪನಿಕ ಲೋಕ, ಈ ನಮ್ಮ “ಶುದ್ಧಗೆ” ಇಲ್ಲಿನ ಯಕ್ಷಯಕ್ಷಿಯರೆಲ್ಲರೂ ಅಕ್ಷರಗಳೆ… ಈ ನಮ್ಮ ಶುದ್ಧಗೆಯಲ್ಲಿ ಕನ್ನಡದ ಅಕ್ಷರಗಳು ಓಡಾಡುತ್ತವೆ, ಮಾತಾಡುತ್ತವೆ, ಅನ್ಯೋನ್ಯವಾಗಿರುತ್ತವೆ.

ಆದರೆ…

ಅನ್ಯೋನ್ಯತೆಗೆ ಬಿಕ್ಕಟ್ಟು ಎದುರಾದಾಗ…?

ಹೊರಗಿನ ಶಕ್ತಿಗಳು ನಮ್ಮ ಆಂತರ್ಯಕ್ಕೆ ದಮನಕಾರಿಯಾಗಿ ಪ್ರಭಾವ ಬೀರಿದಾಗ…?

ಔದಾರ್ಯ ಅತಿಯಾಗಿ, ಉದಾರಿಯ ಕುತ್ತಿಗೆಗೆ ಕುತ್ತು ತಂದಾಗ…?

“ಮುಂದೇನು??” ಎಂಬ ಪ್ರಶ್ನೆ ಕಾಡದಿರದು…

ಭೂತ-ವರ್ತಮಾನ-ಭವಿಷ್ಯತ್ತುಗಳಲ್ಲಿ, ಇಂಥ ಪ್ರಶ್ನೆಗಳಿಗೆ ಉತ್ತರ ಹುಡುಕುವ ಹೊಣೆ ಯಾರದು? ಈ ನಿಟ್ಟಿನಲ್ಲಿ ವರ್ತಮಾನದಲ್ಲಿ ನಾವು ಇಡಬಹುದಾದ ಒಂದು ಪುಟ್ಟ ಹೆಜ್ಜೆ- ಈ ನಾಟಕ- “ಶುದ್ಧಗೆ”.

ಪುಟ್ಟ ಪುಟ್ಟ ಹೆಜ್ಜೆಗಳು ರಂಗದ ಮೇಲೆಲ್ಲ ಓಡಾಡಿ, ೨೫೦೦ ವರ್ಷಗಳ ಕನ್ನಡ ಭಾಷಾ ಚರಿತ್ರೆಯನ್ನು ಸೂಕ್ಷ್ಮವಾಗಿ ಪರಿಚುಸುತ್ತದೆ.

ಡಾ. ಎಸ್ .ವಿ. ಕಶ್ಯಪ್ ರಚಿಸಿರುವ ಕನ್ನಡ ಅಕ್ಷರಗಳ ನೋವು ನಲಿವನ್ನು ಪ್ರತಿಬಿಂಬಿಸಲು ನಾಟಕಕ್ಕೆ ೨೦೧೦ ಸಾಲಿನ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ. ಈ ನಾಟಕ  ಮಕ್ಕಳಲ್ಲಿ ಕನ್ನಡಾಭಿಮಾನ ಹೆಚ್ಚಿಸುವಲ್ಲಿ ಸಫಲವಾಗಿದೆ ಎನ್ನುವುದಕ್ಕೆ ಇದ್ರಲ್ಲಿ ಈಗಾಗಲೇ ಭಾಗವಹಿಸಿರುವ ಮಕ್ಕಳು ಕಪ್ಪೆ ಅರವಟ್ಟ  ಶಾಸನ ದ ಸಾಲುಗಳನ್ನ್ನು ಲೀಲಾಜಾಲವಾಗಿ ಹೇಳುತ್ತಾರೆ ಎಂಬುದೇ ಸಾಕ್ಷಿಯಾಗಿದೆ.

ರಂಗದ ಹಿಂದೆ

ರಚನೆ – ಡಾ. ಎಸ್ ವಿ. ಕಶ್ಯಪ್
ಸಂಗೀತ – ಪ್ರವೀಣ್ . ಡಿ. ರಾವ್
ನಿವ೯ಹಣೆ – ಎಸ್.ಆರ್.ವೆಂಕಟೇಶ್, ಡಾ.ಬೃಂದಾ
ಬೆಳಕು – ಮಹದೇವಸ್ವಾಮಿ
ರಂಗಸಜ್ಜಿಕೆ  – ವಿಶ್ವನಾಥ ಮಂಡಿ
ಪ್ರಸಾಧನ – ಮಾಲತೇಶ ಬಡಿಗೇರ್
ವಸ್ತ್ರ ವಿನ್ಯಾಸ – ಶೋಭಾ ವೆಂಕಟೇಶ್
ವಿನ್ಯಾಸ , ನಿರ್ದೇಶನ – ಎಸ್ .ವಿ. ಸುಷ್ಮಾ

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s