ಕಾಸಿಲ್ವಾ ಸಾರ್?

 

ಇಂತಹ ದೃಶ್ಯವನ್ನು ನೀವೂ ನೋಡಿರುತ್ತೀರಿ. ಅವರು ಕನಿಷ್ಠ 15 ಲಕ್ಷ ರೂಪಾಯಿಗಿಂತ ಹೆಚ್ಚಿನ ಎಸ್ ಯು ವಿ ಅಥವಾ ಕಾರ್ ಗಳಲ್ಲಿ ಬರುತ್ತಾರೆ. ಟೋಲ್ ನಲ್ಲಿ ಬಂದ ತಕ್ಷಣ, ತಮಗೆ ಟೋಲ್ ಅನ್ವಯವಾಗುವುದಿಲ್ಲ ಎಂದು ಕ್ಯಾತೆ ತೆಗೆಯುತ್ತಾರೆ. 20, 30 ರೂಪಾಯಿ ಕೊಡಲು ನಿರಾಕರಿಸುತ್ತಾರೆ. ಅಮ್ಮನ್, ಅಕ್ಕನ್, ತಿಕ ಕೊಬ್ಬಾ ಎಂಬೆಲ್ಲ ಪದಗಳ ಬಳಕೆಯಾಗುತ್ತದೆ. ಟೋಲ್ ಅನ್ವಯವಾಗುವುದಿಲ್ಲ ಯಾಕೆಂದರೆ ಅವರು ‘ಸಂಘಟನೆ’ಯ ಕಾರ್ಯಕರ್ತರಾಗಿತ್ತಾರೆ ಅಂತ. ಸೋ ಸ್ಯಾಡ್….ಇಷ್ಟು ಹಣ ಮಾಡಿದವರಿಗೆ ಟೋಲ್ ಹಣ ಕೊಡುವುದು ಕಷ್ಟವೆ? ನಾವೆಲ್ಲರೂ ಟೋಲ್ ಕೊಡುತ್ತೇವಲ್ಲ….ಮತ್ತೆ ಕೆಲವರಿಗಷ್ಟೇ ಏಕೆ ಈ ರಿಯಾಯತಿ?