ಗುಬಾಲ್, ಗೂಬಡ್, ಗುಲ್ಡು, ಗೂಬೆ ಇತ್ಯಾದಿ

ಈ ಪದಗಳನ್ನು ನಾವು ದೈನಂದಿನ ಬದುಕಿನಲ್ಲಿ ಹೇರಳವಾಗಿ ಬಳಸುತ್ತೇವೆ. ಗುಬಾಲ್, ಗೂಬಡ್, ಗುಲ್ಡು, ಗೂಬೆ ಇವುಗಳನ್ನು ಪೆದ್ದ, ಮೂರ್ಖ, ದಡ್ಡ ಎಂಬುದಕ್ಕೆ ಸಂವಾದಿಯಾಗಿ ಉಪಯೋಗಿಸುತ್ತೇವೆ. ಈ ಪದಗಳು ಬಳಕೆಗೆ ಬಂದದ್ದು ಹೇಗೆ? ಅಷ್ಟಕ್ಕೂ ಗೂಬೆ ಅಂತ ಬಯ್ಯಲು ಗೂಬೆ ಏನು ಪಾಪ ಮಾಡಿತ್ತು? ಗೊತ್ತಿದ್ದವರು ದಯವಿಟ್ಟು ತಿಳಿಸಬೇಕಾಗಿ ಕೋರಿಕೆ.

ಗೂಬೆ ನನ್ಮಗನೆ....

ಕೋಳಿ ಮೊಟ್ಟೆಯೊಳಗೆ….?

ಕೋಳಿ ಮೊದಲೊ, ಮೊಟ್ಟೆ ಮೊದಲೊ ಎಂಬುದು ಉತ್ತರ ಸಿಗಲಾರದ ಪ್ರಶ್ನೆ. ಇದು ಆಧ್ಯಾತ್ಮಿಕ ಪ್ರಶ್ನೆಯೆ, ಜೀವಶಾಸ್ತ್ರಕ್ಕೆ ಸಂಬಂಧಿಸಿದ ಪ್ರಶ್ನೆಯೆ ಎಂಬುದು ಕೂಡ ಒಂದು ಪ್ರಶ್ನೆಯೇ. ನಾನು ಇದಕ್ಕೆ ಉತ್ತರ ಕಂಡುಕೊಳ್ಳುವ ಗೋಜಿಗೆ ಹೋಗಿಲ್ಲ. ಆದರೆ ನನ್ನ ಪ್ರಶ್ನೆ ಎಂದರೆ ಕೋಳಿ ಮೊಟ್ಟೆಯೊಳಗೆ ಆತ್ಮದ ಪ್ರವೇಶವಾಗಿರುತ್ತದೆಯೆ? ಅದು ನಾಟಿ ಮೊಟ್ಟೆಯಾದರೂ ಆಗಿರಬಹುದು ಅಥವಾ ಫಾರ್ಮ್ ಮೊಟ್ಟೆಯಾದರೂ ಆಗಿರಬಹುದು. ಉತ್ತರ ಗೊತ್ತಿದ್ದವರು ದಯವಿಟ್ಟು ತಿಳಿಸಿ.

©  SUGHOSH S NIGALE
ಅಂಡೆ ಕಾ ಫಂಡಾ…

ಜಪ್ಪಯ್ಯ ಗೆ ಮತ್ತೊಂದು ಉತ್ತರ

ಜಪ್ಪಯ್ಯ ಪ್ರಶ್ನೆಗೆ ನಾಗೇಶ್ ಮೈಸೂರು ಅವರು ಕಳಿಸಿದ ಉತ್ತರ ಇಲ್ಲಿದೆ. ಧನ್ಯವಾದ ನಾಗೇಶ್ ಅವರೆ.

©SUGHOSH S NIGALE

ಜಪ್ಪಯ್ಯ ಅನ್ನುಗೆ ಎರಡು ಅರ್ಥ :

 

  1. ಅಗ್ರಹ ಪೂರ್ವಕವಾಗಿ ಕೇಳು, ಒತ್ತಾಯ ಮಾಡು

 

ಇಲ್ಲಿ ಜಪ್ಪಯ್ಯ = ಜಪ್ಪು  (ಹೊಡೆದು ಬಡಿದರು) + ಅಯ್ಯಾ (ಅಯ್ಯಾ ಅಂತ ಬೇಡಿಕೊಂಡರು) = ಹೊಡೆದು ಬಡಿದರು ಸರಿ, ಬೇಡಿಕೊಂಡರೂ ಸರಿ, ಜಗ್ಗುವುದಿಲ್ಲ ಅನ್ನೊ ಭಾವ ಕಾಣಬಹುದು.

 

  1. ಜಪ್ಪಯ್ಯ ಅನ್ನು = ಸ್ವಲ್ಪ ಮಟ್ಟಿಗಾದರು ಸೋಲು , ತಗ್ಗು, ನಿರ್ಧಾರದಿಂದ ಕದಲು

 

ಇಲ್ಲಿ ಜಪ್ಪಯ್ಯ = ಜಪ (ಪದೆ ಪದೆ ಕೇಳಿಕೊ, ಜಪದ ತರ) + ಅಯ್ಯಾ (ದೈನ್ಯದಿಂದ ಬೇಡಿಕೊ) = ದೈನ್ಯದಿಂದ ಪದೆ ಪದೆ ಕರುಣೆಗಾಗಿ ಬೇಡಿಕೊಂಡರೂ ಸರಿ ಒಪ್ಪುವುದಿಲ್ಲ ಅನ್ನೊ ಭಾವ

 

P.S: ಇದೇ ತರದಲ್ಲೊ ದಮ್ಮಯ್ಯ ಕೂಡ : 🙂

 

ದಮ್ಮು + ಅಯ್ಯಾ = ಉಸಿರು ಕಟ್ಟಿ (ದಮ್ಮು ಕಟ್ಟಿ) ಬೇಡಿಕೊಂಡರು , ಉಸಿರೆ ನಿಂತು ಹೋಗುವ ಹಾಗೆ ಬೇಡಿಕೊಂಡರು (ನಿರಂತರವಾಗಿ, ಎಡಬಿಡದೆ, ಒಂದೆ ಉಸಿರಲ್ಲಿ ಬೇಡಿದ ಹಾಗೆ)

ನಾಗೇಶ್ ಅವರ ಬ್ಲಾಗ್ ಇಲ್ಲಿದೆ

 

ಜಪ್ಪಯ್ಯ ಕಥೆ ಇಲ್ಲಿದೆ

ಜಪ್ಪಯ್ಯ ಶಬ್ದ ಹೇಗೆ ಬಂತು ಎಂದು ಪ್ರಶ್ನೆ ಕೇಳಿದ್ದೆ. ಇದಕ್ಕೆ ಮನುಶ್ರೀ ಜೋಯಿಸ್ ಅವರು ಈ ಉತ್ತರ ಕಳಿಸಿದ್ದಾರೆ. ಮನುಶ್ರೀಯವರಿಗೆ ಧನ್ಯವಾದ.

©SUGHOSH S NIGALE

ಸುಮಾರು ಮುನ್ನೂರು ವರುಷಗಳ ಹಿಂದೆ ಭರತ ಖಂಡದ ಪೂರ್ವಭಾಗದ ಕಾಡುಗಳಲ್ಲಿ ಒಂದು ಸಂಕದ ಪುರ ಎನ್ನುವ ಕುಗ್ರಾಮವಿತ್ತು. ಅಲ್ಲಿನ ಗ್ರಾಮ ದೇವತೆ ಸಂಕದಮ್ಮ ಒಮ್ಮೆ ಗುಡಿಯ ಅರ್ಚಕರ ಕನಸಲಿ ಬಂದು ಒಂದು ವಿಗ್ರಹವನ್ನು ಭೀಕರ ಕಾಡಿನ ಮಧ್ಯೆ ಹುದುಗಿ ಹೋಗಿರುವುದನ್ನು ತೋರಿಸುತ್ತಾಳೆ. ಬೆಳಗಾಗುತ್ತಲೇ ಅರ್ಚಕ ಊರಿನ ಪಟೇಲರ ಕಾಲು ಹಿಡಿದ ಕನಸಿನ ವಿಚಾರ ಹೇಳಿ ಅದನ್ನು ಹುಡುಕಿಸ ಬೇಕೆಂದು ವಿನಂತಿಸಿತ್ತಾನೆ.

ಪಟೇಲ ಊರಿನಲ್ಲಿ ಒಂದು ಗುಂಪು ಧೈರ್ಯ ಉಳ್ಳ ಯುವಕರನ್ನು ಆರಿಸಿ ವಿಗ್ರಹ ಹುಡುಕಲು ಕಳಿಸುತ್ತಾನೆ. ಸುಮಾರು ತಿಂಗಳುಗಟ್ಟಲೆ ಅಲೆದಾಟದ ನಂತರ ವಿಗ್ರಗವೇನೋ ಸಿಗುತ್ತದೆ. ಆದರೆ ಅದನ್ನು ಎತ್ತಲು ಆಗುವುದಿಲ್ಲ. ಆಗ ಎಲ್ಲರೂ ಶಕ್ತಿಮೀರಿ ಪ್ರಯತ್ನಿಸಿತ್ತಾರೆ. ಅಲ್ಲೇ ಹಾದು ಹೋಗುತ್ತಿದ್ದ ಭೈರಾಗಿಯೊಬ್ಬ ಇದನ್ನು ನೋಡಿ ನಮ್ಮ ಗುರುಗಳು ‘ಜಪ್ಪಯ್ಯ’ ನ ಹೆಸರು ಹೇಳಿ ಎತ್ತಿ ಇದು ಅವರು ಪೂಜಿಸಿದ ತಾಯಿ ಎಂದು ಹೇಳುತ್ತಾನೆ. ಆಗ ಜಪ್ಪಯ್ಯ ಎಂದು ಎತ್ತಿದಾಗ ಕಲ್ಲು ಸರಾಗವಾಗಿ ಬಂದು ಬಿಡುತ್ತದೆ . ಅಂದಿನಿಂದ ಏನೇ ಕಷ್ಟಕರವಾದ ಕೆಲಸ ಮಾಡುವಾಗ ಜಪ್ಪಯ್ಯ ಅನ್ನುವ ವಾಡಿಕೆಯಿದೆ. ಅದೂ ಆಗದೆ ಇದ್ದರೆ ಜಪ್ಪಯ್ಯ ಎಂದರೂ ಆಗಲಿಲ್ಲ ಅನ್ನುತ್ತಾರೆ. ಕೊನೆ ಕೊನೆಗೆ ಅಂದರೆ ಇತ್ತೀಚಿಗೆ ಸೋಮಾರಿಗಳು ಹೆಚ್ಚಿ ಕೆಲಸ ಮಾಡುವಾಗ ಜಪ್ಪಯ್ಯ ಅನ್ನುವುದು ನಿಂತೇ ಹೋಗಿದೆ. ಬರೀ ಜಪ್ಪಯ್ಯ ಎಂದರೂ ಆಗಲಿಲ್ಲ ಎಂಬುದಷ್ಟೇ ಉಳಿದುಕೊಂಡಿದೆ.

ಮನುಶ್ರೀ ಅವರ ಬ್ಲಾಗ್  ಇಲ್ಲಿದೆ

ಯಾವುದು ಸರಿ?

BUSINESS

BUSINESS ಕನ್ನಡದಲ್ಲಿ ಹೇಗೆ ಬರೆಯಬಹುದು?

  1. ಬಿಝಿನೆಸ್
  2. ಬ್ಯುಸಿನೆಸ್
  3. ಬ್ಯುಝಿನೆಸ್
  4. ಬಿಝ್ನೆಸ್
  5. ಬಿಝ್ನಸ್

ಜಪ್ಪಯ್ಯ ಅಂದ್ರೂ….

ಹಲವಾರು ಬಾರಿ ಈ ಪದವನ್ನು ಬಳಸುತ್ತೇವೆ. ಜಪ್ಪಯ್ಯ ಅಂದ್ರೂ ಆತ ಆ ಪಾರ್ಟಿ ಸೇರಲ್ಲ, ಜಪ್ಪಯ್ಯ ಅಂದ್ರೂ ಅವನು ಕುಂತ ಸ್ಥಳದಿಂದ ಏಳಲಿಲ್ಲ, ಜಪ್ಪಯ್ಯ ಅಂದ್ರೂ ಆಕೆ ತನ್ನ ಗಂಡನಿಗೆ ಹೊಡೆಯುವುದನ್ನು ಬಿಡುವುದಿಲ್ಲ ಹೀಗೆ. ಈ ಜಪ್ಪಯ್ಯ ಪದ ಬಂದಿದ್ದು ಹೇಗೆ? ಅದು ನಾಮಪದವೆ? ಜಪ್ಪಯ್ಯ ಕ್ಕೂ ಜಪ್ಪುವುದಕ್ಕೂ ಏನಾದರೂ ಸಂಬಂಧವಿದೆಯೆ? ಬಲ್ಲವರು ತಿಳಿಸುವಂತಾಗಬೇಕು.

©SUGHOSH S NIGALE

ಹಕ್ಕಿಗೂಡು

ಅಂತೂ ಇಂತೂ ಚುಕ್ಕೆ ಮುನಿಯ ನಮ್ಮ ಮನೆಯ ಯುಟಿಲಿಟಿ ಪ್ರದೇಶದಲ್ಲಿ ಗೂಡು ಕಟ್ಟಿದ್ದೂ ಆಯಿತು, ಮರಿ ಮಾಡಿದ್ದೂ ಆಯಿತು, ಫುರ್ ಎಂದು ಸಹ ಕುಟುಂಬ ಸಹ ಪರಿವಾಹ ಹಾರಿ ಹೋದದ್ದೂ ಆಯಿತು. ಅದರ ಗೂಡಿನ ಚಿತ್ರ ಇಲ್ಲಿದೆ.

©SUGHOSH S NIGALE