ಜಪ್ಪಯ್ಯ ಅಂದ್ರೂ….

ಹಲವಾರು ಬಾರಿ ಈ ಪದವನ್ನು ಬಳಸುತ್ತೇವೆ. ಜಪ್ಪಯ್ಯ ಅಂದ್ರೂ ಆತ ಆ ಪಾರ್ಟಿ ಸೇರಲ್ಲ, ಜಪ್ಪಯ್ಯ ಅಂದ್ರೂ ಅವನು ಕುಂತ ಸ್ಥಳದಿಂದ ಏಳಲಿಲ್ಲ, ಜಪ್ಪಯ್ಯ ಅಂದ್ರೂ ಆಕೆ ತನ್ನ ಗಂಡನಿಗೆ ಹೊಡೆಯುವುದನ್ನು ಬಿಡುವುದಿಲ್ಲ ಹೀಗೆ. ಈ ಜಪ್ಪಯ್ಯ ಪದ ಬಂದಿದ್ದು ಹೇಗೆ? ಅದು ನಾಮಪದವೆ? ಜಪ್ಪಯ್ಯ ಕ್ಕೂ ಜಪ್ಪುವುದಕ್ಕೂ ಏನಾದರೂ ಸಂಬಂಧವಿದೆಯೆ? ಬಲ್ಲವರು ತಿಳಿಸುವಂತಾಗಬೇಕು.

©SUGHOSH S NIGALE

7 thoughts on “ಜಪ್ಪಯ್ಯ ಅಂದ್ರೂ….

 1. ಸುಮಾರು ಮುನ್ನೂರು ವರುಷಗಳ ಹಿಂದೆ ಭರತ ಖಂಡದ ಪೂರ್ವಭಾಗದ ಕಾಡುಗಳಲ್ಲಿ ಒಂದು ಸಂಕದ ಪುರ ಎನ್ನುವ ಕುಗ್ರಾಮವಿತ್ತು. ಅಲ್ಲಿನ ಗ್ರಾಮ ದೇವತೆ ಸಂಕದಮ್ಮ ಒಮ್ಮೆ ಗುಡಿಯ ಅರ್ಚಕರ ಕನಸಲಿ ಬಂದು ಒಂದು ವಿಗ್ರಹವನ್ನು ಭೀಕರ ಕಾಡಿನ ಮಧ್ಯೆ ಹುದುಗಿ ಹೋಗಿರುವುದನ್ನು ತೋರಿಸುತ್ತಾಳೆ. ಬೆಳಗಾಗುತ್ತಲೇ ಅರ್ಚಕ ಊರಿನ ಪಟೇಲರ ಕಾಲು ಹಿಡಿದ ಕನಸಿನ ವಿಚಾರ ಹೇಳಿ ಅದನ್ನು ಹುಡುಕಿಸ ಬೇಕೆಂದು ವಿನಂತಿಸಿತ್ತಾನೆ.

  ಪಟೇಲ ಊರಿನಲ್ಲಿ ಒಂದು ಗುಂಪು ಧೈರ್ಯ ಉಳ್ಳ ಯುವಕರನ್ನು ಆರಿಸಿ ವಿಗ್ರಹ ಹುಡುಕಲು ಕಳಿಸುತ್ತಾನೆ. ಸುಮಾರು ತಿಂಗಳುಗಟ್ಟಲೆ ಅಲೆದಾಟದ ನಂತರ ವಿಗ್ರಗವೇನೋ ಸಿಗುತ್ತದೆ. ಆದರೆ ಅದನ್ನು ಎತ್ತಲು ಆಗುವುದಿಲ್ಲ. ಆಗ ಎಲ್ಲರೂ ಶಕ್ತಿಮೀರಿ ಪ್ರಯತ್ನಿಸಿತ್ತಾರೆ. ಅಲ್ಲೇ ಹಾದು ಹೋಗುತ್ತಿದ್ದ ಭೈರಾಗಿಯೊಬ್ಬ ಇದನ್ನು ನೋಡಿ ನಮ್ಮ ಗುರುಗಳು ‘ಜಪ್ಪಯ್ಯ’ ನ ಹೆಸರು ಹೇಳಿ ಎತ್ತಿ ಇದು ಅವರು ಪೂಜಿಸಿದ ತಾಯಿ ಎಂದು ಹೇಳುತ್ತಾನೆ. ಆಗ ಜಪ್ಪಯ್ಯ ಎಂದು ಎತ್ತಿದಾಗ ಕಲ್ಲು ಸರಾಗವಾಗಿ ಬಂದು ಬಿಡುತ್ತದೆ . ಅಂದಿನಿಂದ ಏನೇ ಕಷ್ಟಕರವಾದ ಕೆಲಸ ಮಾಡುವಾಗ ಜಪ್ಪಯ್ಯ ಅನ್ನುವ ವಾಡಿಕೆಯಿದೆ. ಅದೂ ಆಗದೆ ಇದ್ದರೆ ಜಪ್ಪಯ್ಯ ಎಂದರೂ ಆಗಲಿಲ್ಲ ಅನ್ನುತ್ತಾರೆ. ಕೊನೆ ಕೊನೆಗೆ ಅಂದರೆ ಇತ್ತೀಚಿಗೆ ಸೋಮಾರಿಗಳು ಹೆಚ್ಚಿ ಕೆಲಸ ಮಾಡುವಾಗ ಜಪ್ಪಯ್ಯ ಅನ್ನುವುದು ನಿಂತೇ ಹೋಗಿದೆ. ಬರೀ ಜಪ್ಪಯ್ಯ ಎಂದರೂ ಆಗಲಿಲ್ಲ ಎಂಬುದಷ್ಟೇ ಉಳಿದುಕೊಂಡಿದೆ.

 2. ನನ್ನ ಅನಿಸಿಕೆ: -)

  ಜಪ್ಪಯ್ಯ ಅನ್ನುಗೆ ಎರಡು ಅರ್ಥ :

  1. ಅಗ್ರಹ ಪೂರ್ವಕವಾಗಿ ಕೇಳು, ಒತ್ತಾಯ ಮಾಡು

  ಇಲ್ಲಿ ಜಪ್ಪಯ್ಯ = ಜಪ್ಪು (ಹೊಡೆದು ಬಡಿದರು) + ಅಯ್ಯಾ (ಅಯ್ಯಾ ಅಂತ ಬೇಡಿಕೊಂಡರು) = ಹೊಡೆದು ಬಡಿದರು ಸರಿ, ಬೇಡಿಕೊಂಡರೂ ಸರಿ, ಜಗ್ಗುವುದಿಲ್ಲ ಅನ್ನೊ ಭಾವ ಕಾಣಬಹುದು.

  2. ಜಪ್ಪಯ್ಯ ಅನ್ನು = ಸ್ವಲ್ಪ ಮಟ್ಟಿಗಾದರು ಸೋಲು , ತಗ್ಗು, ನಿರ್ಧಾರದಿಂದ ಕದಲು

  ಇಲ್ಲಿ ಜಪ್ಪಯ್ಯ = ಜಪ (ಪದೆ ಪದೆ ಕೇಳಿಕೊ, ಜಪದ ತರ) + ಅಯ್ಯಾ (ದೈನ್ಯದಿಂದ ಬೇಡಿಕೊ) = ದೈನ್ಯದಿಂದ ಪದೆ ಪದೆ ಕರುಣೆಗಾಗಿ ಬೇಡಿಕೊಂಡರೂ ಸರಿ ಒಪ್ಪುವುದಿಲ್ಲ ಅನ್ನೊ ಭಾವ

  P.S: ಇದೇ ತರದಲ್ಲೊ ದಮ್ಮಯ್ಯ ಕೂಡ : 🙂

  ದಮ್ಮು + ಅಯ್ಯಾ = ಉಸಿರು ಕಟ್ಟಿ (ದಮ್ಮು ಕಟ್ಟಿ) ಬೇಡಿಕೊಂಡರು , ಉಸಿರೆ ನಿಂತು ಹೋಗುವ ಹಾಗೆ ಬೇಡಿಕೊಂಡರು (ನಿರಂತರವಾಗಿ, ಎಡಬಿಡದೆ, ಒಂದೆ ಉಸಿರಲ್ಲಿ ಬೇಡಿದ ಹಾಗೆ)

  – ನಾಗೇಶ ಮೈಸೂರು
  (nageshamysore.wordpress.com)

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s