ಕೋಳಿ ಮೊಟ್ಟೆಯೊಳಗೆ….?

ಕೋಳಿ ಮೊದಲೊ, ಮೊಟ್ಟೆ ಮೊದಲೊ ಎಂಬುದು ಉತ್ತರ ಸಿಗಲಾರದ ಪ್ರಶ್ನೆ. ಇದು ಆಧ್ಯಾತ್ಮಿಕ ಪ್ರಶ್ನೆಯೆ, ಜೀವಶಾಸ್ತ್ರಕ್ಕೆ ಸಂಬಂಧಿಸಿದ ಪ್ರಶ್ನೆಯೆ ಎಂಬುದು ಕೂಡ ಒಂದು ಪ್ರಶ್ನೆಯೇ. ನಾನು ಇದಕ್ಕೆ ಉತ್ತರ ಕಂಡುಕೊಳ್ಳುವ ಗೋಜಿಗೆ ಹೋಗಿಲ್ಲ. ಆದರೆ ನನ್ನ ಪ್ರಶ್ನೆ ಎಂದರೆ ಕೋಳಿ ಮೊಟ್ಟೆಯೊಳಗೆ ಆತ್ಮದ ಪ್ರವೇಶವಾಗಿರುತ್ತದೆಯೆ? ಅದು ನಾಟಿ ಮೊಟ್ಟೆಯಾದರೂ ಆಗಿರಬಹುದು ಅಥವಾ ಫಾರ್ಮ್ ಮೊಟ್ಟೆಯಾದರೂ ಆಗಿರಬಹುದು. ಉತ್ತರ ಗೊತ್ತಿದ್ದವರು ದಯವಿಟ್ಟು ತಿಳಿಸಿ.

© SUGHOSH S NIGALE
ಅಂಡೆ ಕಾ ಫಂಡಾ…

6 thoughts on “ಕೋಳಿ ಮೊಟ್ಟೆಯೊಳಗೆ….?

 1. ಸುಘೋಷರೆ, ನಿಮ್ಮ ಪ್ರಶ್ನೆಗೆ ನಿಖರ ಉತ್ತರ ಗೊತ್ತಿರದಿದ್ದರು ಅದು ಬಾಲ್ಯದ ಹಳೆ ನೆನಪುಗಳನ್ನು ಉದ್ದೇಪಿಸಿ ಒಂದು ಸಣ್ಣ ಕಥೆಯಾಗಿಸಿಬಿಟ್ಟಿತು – ‘ಇಪ್ಪತ್ತೊಂದನೆಯ ಮೊಟ್ಟೆ’ ಅನ್ನುವ ಹೆಸರಲ್ಲಿ. ಕಥೆಯ ಅಂತ್ಯದಲ್ಲಿ ನಿಮ್ಮ ಪ್ರಶ್ನೆಗೆ ಭಾಗಾಂಶ ಉತ್ತರ ದೊರಕುತ್ತದೆ ಎಂದು ನನ್ನ ಅನಿಸಿಕೆ.. ದಯವಿಟ್ಟು ಓದಿ ನೋಡಿ – ಲಿಂಕು ಇಲ್ಲಿ ಕೆಳಗಿದೆ..

  ನೆನಪಾಗಿಸುವ ಪ್ರೇರಣೆಯಾಗಿದ್ದಕ್ಕೆ ಧನ್ಯವಾದಗಳು 😊

  https://nageshamysore.wordpress.com/2016/02/16/00537-%e0%b2%b8%e0%b2%a3%e0%b3%8d%e0%b2%a3-%e0%b2%95%e0%b2%a5%e0%b3%86-%e0%b2%87%e0%b2%aa%e0%b3%8d%e0%b2%aa%e0%b2%a4%e0%b3%8d%e0%b2%a4%e0%b3%8a%e0%b2%82%e0%b2%a6%e0%b2%a8%e0%b3%86-%e0%b2%95%e0%b3%8b/

  Thanks and best regards,
  Nagesha MN

 2. ಮಾಹಿತಿ ತಂತ್ರಜ್ಞಾನದ ಈ ಯುಗದಲ್ಲಿ ಗೊಂದಲವೇಕೆ?

  ⦁ ಹುಂಜದ ಸಂಪರ್ಕವಿಲ್ಲದೇ ಸಾಕುವ ಕೋಳಿಗಳು ಇಡುವ ಮೊಟ್ಟೆಗಳು ಮರಿಯಾಗುವುದಿಲ್ಲ – ಮನುಷ್ಯರಲ್ಲಿ ಋತುಮತಿಯಾದ ಹೆಣ್ಣಿನ ಗರ್ಭಾಶಯವು ನಿಗದಿತ
  ಋತುಚಕ್ರಕ್ಕನುಗುಣವಾಗಿ ಉತ್ಪತ್ತಿ ಮಾಡುವ ಅಂಡಕೋಶಕ್ಕೆ ಸಮಾನ ಈ ಮೊಟ್ಟೆಗಳು. ಕೋಳಿ ಫಾರಮ್ ಎಂದರೆ ಮೊಟ್ಟೆಗಳಿಗಾಗಿಯೇ ಕೋಳಿಗಳನ್ನು ಸಾಕುವ ಕೃಷಿ.
  ⦁ ಇನ್ನು ಮರಿಮಾಡುವುದಕ್ಕೆಂದೇ ಸಾಕುವ ಫಾರಮ್ ಗಳೆಂದರೆ ಬ್ರೀಡರ್ ಫಾರಮ್ ಗಳು. ಇಲ್ಲಿ ಕೋಳಿಗಳು ಹುಂಜದ ಸಂಪರ್ಕದಲ್ಲೇ ಬೆಳೆಯುತ್ತವೆ. ಹೀಗಾಗಿ, ಇವುಗಳು ಇಡುವ ಮೊಟ್ಟೆಗಳು ನಿಜವಾದ ಅರ್ಥದಲ್ಲಿ ಭ್ರೂಣಗಳು – ಮನುಷ್ಯರಲ್ಲಿ ಅಂಡಾಣು-ವೀರ್ಯಾಣುಗಳ ಸಂಯೋಗದಿಂದ ಫಲಿತವಾದ ಭ್ರೂಣಕ್ಕೆ ಸಮ. ಇಂತಹ ಮೊಟ್ಟೆಗಳಲ್ಲಿ ನಮ್ಮ ನಿಮ್ಮ ಪರಿಕಲ್ಪನೆಯ ’ಆತ್ಮ’ ಸೃಜಿತವಾಗಿರುತ್ತದೆ.
  ⦁ ಅಂತೆಯೇ, ಮನುಷ್ಯರಲ್ಲಿ ಹೇಗೆ ಗಂಡು-ಹೆಣ್ಣುಗಳ ನಿಯತ ಸಂಯೋಗವಿದ್ದರೂ ಸಹ ಹೆಣ್ಣಿನ ಪ್ರತಿಯೊಂದು ಅಂಡವೂ ಭ್ರೂಣವಾಗುವುದಿಲ್ಲವೋ ಹಾಗೆಯೇ ಬ್ರೀಡರ್ ಫಾರಮ್ ಕೋಳಿಗಳು ಇಡುವ ಮೊಟ್ಟೆಗಳೆಲ್ಲವೂ ಫಲಿತವಾದ (ಫರ್ಟೈಲ್) ಮೊಟ್ಟೆಗಳಾಗಿರುವುದಿಲ್ಲ.

  ಸಸ್ಯಾಹಾರಿಯಾದ ಕಾರಣ ಇದುವರೆಗೂ ಮೊಟ್ಟೆಯನ್ನು ಕೈಯಲ್ಲೂ ಸಹ ಮುಟ್ಟಿಲ್ಲ. ಹಾಗಾಗಿ ಈ ಮೇಲೆ ಬರೆದಿರುವ ಮಾಹಿತಿ ಬರಿಯ ಓದಿಕೊಂಡ ತಿಳುವಳಿಕೆಯಷ್ಟೆ. ಮೊಟ್ಟೆ ತಿನ್ನುವವರು ಮೇಲೆ ಹೇಳಿದ್ದನ್ನು ಪರಾಮರ್ಶಿಸಬೇಕು!
  -ಕೇಶವ ಮೈಸೂರು

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

This site uses Akismet to reduce spam. Learn how your comment data is processed.