ರೈತರಿಗೆ ಗೌರವ ಕೊಡುವ ಬಗ್ಗೆ…

– ವಾಣಿ ಶ್ರೀಹರ್ಷ

©sughosh s nigale

ಸಭೆ ಸಮಾರಂಭಗಳಿಗೆ ಹೋದಾಗ ಊಟದ ಎಲೆಯ ಮೇಲಿನ ಆಹಾರವನ್ನು ಒಂದು ಅಗುಳನ್ನೂ ಉಳಿಸದೇ ಸಂಪೂರ್ಣವಾಗಿ ಊಟ ಮಾಡುವುದು ರೈತರಿಗೆ ನಾವು ಕೊಡುವ ಮೊದಲ ಗೌರವ.. ಊಟದ ನಂತರ ಎಲೆಗಳಲ್ಲಿ ಜನರು ಬಿಟ್ಟು ಹೋಗುವ ಆಹಾರವನ್ನು ನನ್ನಿಂದ ನೋಡಲಾಗುವುದಿಲ್ಲ. ಅದಕ್ಕೆ ನಾನು ಅನಿವಾರ್ಯವಾಗದ ಹೊರತು ಸಮಾರಂಭಗಳಿಗೆ ಹೋಗುವುದೇ ಇಲ್ಲ.
ಮೊದಲನೆಯದಾಗಿ ಸಮಾರಂಭಗಳಲ್ಲಿ ತಮ್ಮ ಪ್ರತಿಷ್ಟೆ ತೋರಿಸಲು ತುಂಬಾ ಬಗೆಬಗೆಯ ಭಕ್ಷ್ಯಗಳನ್ನು ಮಾಡಿಸುವವರ ಬಗ್ಗೆ ನನಗೆ ಅಸಮಾಧಾನವಿದೆ.
ಎರಡನೆಯದಾಗಿ ಅತಿಯಾಸೆಯಿಂದ ಎಲ್ಲವನ್ನೂ ಹಾಕಿಸಿಕೊಂಡು ಅರ್ಧಂಬರ್ಧ ತಿಂದು ಬಿಡುವವರ ಬಗ್ಗೆ ತಿರಸ್ಕಾರವಿದೆ.
ರೈತರು ಕಷ್ಟಪಟ್ಟು ಬೆಳೆದ ಈ ಆಹಾರ ವಸ್ತುಗಳನ್ನು ವ್ಯರ್ಥ ಮಾಡಲು ಇವರಿಗೇನು ಅಧಿಕಾರವಿದೆ? ಬೆಲೆ ಕೊಟ್ಟು ತಂದುಬಿಟ್ಟರೆ ಆಗಿಬಿಟ್ಟಿತೇ? ಕೃಷಿಕರಾಗಿ ನಾವೇ ಈ ಥರ ಮಾಡಿದರೆ ಕೃಷಿಗೆ ಇದಕ್ಕಿಂತ ದೊಡ್ಡ ಅವಮಾನವಿಲ್ಲ. ನಾವೆಲ್ಲರೂ ನಮ್ಮನ್ನು ನೋಡಿಕೊಳ್ಳೋಣ ಈಗ. ಪ್ರಪಂಚದ ನಾನಾ ಕಡೆ ಜನರಿಗೆ , ಮಕ್ಕಳಿಗೆ ಒಂದು ಹೊತ್ತಿನ ಆಹಾರಕ್ಕೂ ಕಷ್ಟ ಇರೋವಾಗ ನಾವು ಇಲ್ಲಿ ಈ ಥರ ಮಾಡುವುದು ಸರಿಯೇ ಎಂದು ಯೋಚಿಸೋಣ. ಎಷ್ಟು ಬೇಕೋ ಅಷ್ಟೇ ಹಾಕಿಸಿಕೊಂಡು , ಹೆಚ್ಚಿನದನ್ನು ಬೇಡವೆಂದು ನಿರಾಕರಿಸಿ ಕೃಷಿಕರಿಗೆ ಗೌರವ ಕೊಡೋಣ. ನಾವು ಈ ಅಭ್ಯಾಸ ಬೆಳೆಸಿಕೊಳ್ಳೋದರ ಜೊತೆ ನಮ್ಮ ಮಕ್ಕಳಿಗೂ ಕಲಿಸಿದರೆ ಅವರ ಬದುಕಿಗೊಂದು ಉತ್ತಮ ಆದರ್ಶ ನೀಡಿದಂತಾಗುತ್ತದೆ. ನಾವು ಈ ಅಭ್ಯಾಸ ಬೆಳೆಸಿಕೊಂಡು ಮಕ್ಕಳಿಗೂ ಕಲಿಸಿದ್ದೇವೆ. ನೀವು……….

2 thoughts on “ರೈತರಿಗೆ ಗೌರವ ಕೊಡುವ ಬಗ್ಗೆ…

  1. first of all ಮುಕ್ಕಾಲು ಭಾಗ ಜನರು ಆಹಾರ ಬೆಳೆಯುವ ಕಷ್ಟ, ರೈತರ ಪರಿಶ್ರಮ ನೋಡಿರಲ್ಲ , ಅನುಭವಿಸಿರಲ್ಲ. ಹಾಗಾಗಿ ಈ ಉಡಾಫೆ. ನಗರದ ಮಕ್ಕಳಿಗಂತೂ ನಮ್ಮ ಆಹಾರ ಹೇಗೆ ಬೆಳೆಯುತ್ತದೆ/ ಬರುತ್ತದೆ ಅಂತಲೂ ಅರಿವಿರಲ್ಲ. ಹೋಗಲಿ, ಇದೆಲ್ಲಾ ತಿಳಿದುಕೊಳ್ಳುವ ಅವಕಾಶ ಎಲ್ಲರಿಗೂ ಸಿಗಲ್ಲ ನಿಜ. ಕೊನೇಪಕ್ಷ ಅದನ್ನು ವ್ಯರ್ಥ ಮಾಡಬಾರದು ಎಂಬ ಗುಣವನ್ನಾದ್ರೂ ಬೆಳೆಸಿದರೆ ಒಳ್ಳೆಯದು.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

This site uses Akismet to reduce spam. Learn how your comment data is processed.