ಹೀಗೊಂದು ಮನೆ ಹೆಸರು

ಗಂಗಾಧರ್ ಅಲಿಯಾಸ್ ಗಂಗಣ್ಣ ನನ್ನ ಆತ್ಮೀಯ ಸ್ನೇಹಿತರಲ್ಲಿ ಒಬ್ಬರು. ಹಲವಾರು ವರ್ಷಗಳಿಂದ ವಿಡಿಯೋ ಎಡಿಟಿಂಗ್ ನಲ್ಲಿ ಎತ್ತಿದ ಕೈ. ಮೊನ್ನೆ ತಾನೆ ಅವರ ಮನೆಯ ಗೃಹಪ್ರವೇಶವಾಯಿತು. ಚೀಫ್ ವಿಡಿಯೋ ಎಡಿಟರ್ ಆಗಿರುವ ಗಂಗಣ್ಣ ಮನೆಗೆ ಇಟ್ಟಿರುವ ಹೆಸರು ಇಲ್ಲಿದೆ ನೋಡಿ.

sughosh s nigale

ಅಂಬೇಡ್ಕರ್ ಲೇಖನ

ಉತ್ಥಾನ ಅಂಬೇಡ್ಕರ್ ವಿಶೇಷಾಂಕದಲ್ಲಿ ನನ್ನ ಲೇಖನ ‘ಅಂಬೇಡ್ಕರ್ ಬದುಕಿನ ಲೈಟ್ಸ್, ಕ್ಯಾಮರಾ ಹಾಗೂ ಆಕ್ಷನ್’ ಪ್ರಕಟವಾಗಿದೆ. ದಯವಿಟ್ಟು ಓದಬೇಕಾಗಿ ಕೋರಿಕೆ. ‘ಉತ್ಥಾನ’ ಮಾರುಕಟ್ಟೆಯಲ್ಲಿ ಲಭ್ಯವಿದೆ.

This slideshow requires JavaScript.

 

ನಂಬಿಕೆ, ಮೂಢನಂಬಿಕೆ, ದೃಷ್ಟಿಕೋನ ಇತ್ಯಾದಿ.

sughosh s nigale (2)
sughosh s nigale
  • ಹುಣಿಸೆ ಮರದ ಮೇಲೆ ಭೂತವಿರುವುದಿಲ್ಲ. ಅಲ್ಲಿ ಕೇವಲ ಅಳಿಲು ಮತ್ತು ಪಕ್ಷಿಗಳಿರುತ್ತವೆ. ಸುಮ್ಮನೇ ಏನೇನೋ ಕಲ್ಪನೆ ಮಾಡಿಕೊಳ್ಳಬೇಡಿ.
  • ಬದುಕಲ್ಲಿ ‘ಚಮತ್ಕಾರ’ ಎಂದೂ ಘಟಿಸುವುದಿಲ್ಲ. ಹಾಗೆ ಘಟಿಸಬೇಕು ಅಂದರೆ 200 ರೂಪಾಯಿ ಟಿಕೆಟ್ ತೆಗೆದುಕೊಂಡು ಟೌನ್ ಹಾಲಿನಲ್ಲಿ ಪಿ ಸಿ ಸರ್ಕಾರ್ ಅವರ ಜಾದೂ ಪ್ರದರ್ಶನ ನೋಡಬೇಕು. ಅಲ್ಲಿ ಮಾತ್ರ ಚಮತ್ಕಾರಗಳು ಘಟಿಸುತ್ತವೆ.
  • ಕಾರ್ಯಸಾಧನೆಗೆ ಢೋಂಗಿ ಬಾಬಾಗಳು, ಢೋಂಗಿ ಜ್ಯೋತಿಷಿಗಳ ಹಿಂದೆ ಬೀಳಬೇಡಿ. ಮೈಮುರಿದು ದುಡಿಯಾಲಗದ ಆ ಸೋಮಾರಿಗಳು ನೀವು ಮೈಮುರಿದು ದುಡಿದ ಹಣದಿಂದ ಸೇಬುಹಣ್ಣು ತಿನ್ನುತ್ತಿದ್ದಾರೆ.
  • ಬೈಕನ್ನು ಪಾರ್ಕಿಂಗ್ ಲಾಟಿನಲ್ಲಿ ಎಂದಿಗೂ ಸೈಡ್ ಸ್ಟಾಂಡಿನಲ್ಲಿ ನಿಲ್ಲಿಸಬೇಡಿ. ಡಬಲ್ ಸ್ಟಾಂಡ್ ಹಾಕುವುದಕ್ಕೆ ನೀವು ಖರ್ಚು ಮಾಡುವುದು ನಿಮ್ಮ ಕ್ಯಾಲರಿಯನ್ನು, ಸ್ಯಾಲರಿಯನ್ನಲ್ಲ.
  • ಬೆಕ್ಕು ಇರುವುದು ಸಾಕಲು. ನಿಮ್ಮ ದಾರಿಗೆ ಅಡ್ಡಬಂದು ನಿಮ್ಮ ಕೆಲಸ ಹಾಳು ಮಾಡುವ ಯೋಚನೆಗಿಂತ, ಇಲಿ ಎಲ್ಲಿ ಸಿಗುತ್ತದೆ ಎಂಬುದು ಅದಕ್ಕೆ ಮುಖ್ಯವಾಗಿರುತ್ತದೆ.
  • ಆಫೀಸಿನಲ್ಲಿ ಜೋರಾಗಿ ಮಾತಾಡಿ, ನಕ್ಕು, ಕೇಕೆ ಹಾಕಿ ನಿಮ್ಮ ಅಸ್ತಿತ್ವ ತೋರಿಸಲು ಹೋಗಬೇಡಿ. ಅಪ್ರೇಸಲ್ ಸಿಸ್ಟಮ್ ನಲ್ಲಿ ಇದನ್ನೆಲ್ಲ ಪರಿಗಣಿಸಲಾಗುವುದಿಲ್ಲ.
  • ಅಂದಹಾಗೆ, ಮೇಲೆ ತೋರಿಸಿರುವ ಚಿತ್ರ ಯಾವುದೇ ರೀತಿಯ ಯಂತ್ರ-ತಂತ್ರಕ್ಕೆ ಸಂಬಂಧಪಟ್ಟಿಲ್ಲ. ಸುಮ್ಮನೆ ತಲೆ ಕೆಡಿಸಿಕೊಳ್ಳುವುದು ಬೇಡ. 🙂

ಪುತ್ರನೊಡನೆ ಪ್ರಶ್ನೋತ್ತರ

q and a (2)

ಪುಟ್ಟ: ಅಮ್ಮನಿಗೆ ಹೆಚ್ಚು ಶಕ್ತಿ ಇದೆಯಾ ಅಥವಾ ನಿನಗಾ?

ಅಪ್ಪ: ನನಗೇ ಹೆಚ್ಚು ಶಕ್ತಿ ಇದೆ ಪುಟ್ಟಾ. ಆದರೆ ನಿಮ್ಮಮ್ಮನಿಗೆ ನನಗಿಂತ ಚೈತನ್ಯ ಜಾಸ್ತಿ.

ಪುಟ್ಟ : ಅಮ್ಮನಿಗೆ ಹೆಚ್ಚು ಧೈರ್ಯ ಇದೆಯಾ ಅಥವಾ ನಿನಗಾ?

ಅಪ್ಪ : ನನಗೇ ಜಾಸ್ತಿ ಧೈರ್ಯ ಇದೆ ಪುಟ್ಟ. ಆದರೆ ಅಮ್ಮನಿಗೆ ಛಲ ಜಾಸ್ತಿ.

ಪುಟ್ಟ : ಅಮ್ಮನಿಗೆ ಹೆಚ್ಚು ಬುದ್ಧಿ ಇದೆಯಾ ಅಥವಾ ನಿನಗಾ?

ಅಪ್ಪ : ನನಗೇ ಜಾಸ್ತಿ ಬುದ್ಧಿ ಇದೆ ಪುಟ್ಟ, ಆದರೆ ಅಮ್ಮನಿಗೆ ವಿವೇಕ ಜಾಸ್ತಿ.

ಪುಟ್ಟ: ಅಮ್ಮನ ಪ್ರೀತಿ ದೊಡ್ಡದಾ ಅಥವಾ ನಿನ್ನದಾ?

ಅಪ್ಪ : ಅದನ್ನು ಮಾತ್ರ ಹೋಲಿಸಬೇಡ ಕಂದ, ಅಮ್ಮನ ಪೀತ್ರಿ ಮುಂದೆ ಯಾವುದೇ ಪ್ರೀತಿ ಇಲ್ಲ….

Dedicated to All Mothers… 🙂