ಎ ಮಿಡ್ ಸಮ್ಮರ್ ನೈಟ್ಸ್ ಡ್ರೀಮ್

ವಿಜಯನಗರ ಬಿಂಬದ ಹೊಚ್ಚ ಹೊಸ ರಂಗ ಪ್ರಯೋಗ “ ಎ ಮಿಡ್ ಸಮ್ಮರ್ ನೈಟ್ಸ್ ಡ್ರೀಮ್”

ನಾಟಕದ ಬಗ್ಗೆ  – ಹಿಂಸೆ, ದ್ವೇಷ, ಅಸೂಯೆಗಳು  ಗಲಭೆಯೆಬ್ಬಿಸಿ  ಬೆಂಕಿಯ ಕೆನ್ನಾಲಿಗೆ ಸುಟ್ಟು ಭಸ್ಮ ಮಾಡುವಾಗ,ಹಸುಳೆ ಅಬಲೆಯರ ಅತ್ಯಾಚಾರಗಳ ಬೆನ್ನಲ್ಲೇ  ಕ್ರೌಯ೯ ತಾಂಡವವಾಡುವಾಗ , ಪ್ರಕ್ಷುಬ್ಧತೆಯ ವಾತಾವರಣ ಎಲ್ಲರ ಮನಸ್ಸನ್ನು ಹದಗೆಡಿಸಿರುವಾಗ ಖಿನ್ನವಾಗುವುದು ಮನ.

ಸಣ್ಣ ನಗುವೊಂದಕೆ ಮನ ಹಪಹಪಿಸುವುದು.

ವಾಸ್ತವದಿಂದ ಕಳಚಿಕೊಂಡು ಕನಸೊoದ ಕಾಣುವ , ಎಲ್ಲ ಮರೆತು ನಕ್ಕು ನಗಿಸುವ ವಿಜಯನಗರ ಬಿಂಬದ ಹೊಚ್ಚ ಹೊಸ ರಂಗ ಪ್ರಯೋಗ “ ಎ ಮಿಡ್ ಸಮ್ಮರ್ ನೈಟ್ಸ್ ಡ್ರೀಮ್”

ಇದು  ಷೇಕ್ಸ್ ಪಿಯರ್ ಮಹಾಕವಿಯ  ಕನಸು , ಕಣ್ಣಾಗಿಸುವ ಕನಸು, ಮನಕೂಡಿಸುವ  ಕನಸು, ಕೆಡುಕನ್ನು ಒಳಿತಾಗಿಸುವ ಕನಸು, ಪ್ರಸ್ತುತ ಜಂಜಾಟಗಳೆಲ್ಲದರಿಂದ ದೂರಾಗಿಸಿ ಕನಸಂಥಾ ಲೋಕವನ್ನು ನನಸು ಮಾಡಿಕೊಳ್ಳುವಂಥಾ ಮನಸ್ಸು  ನೀಡುವ ಕನಸಿದು…. ಇದೆಲ್ಲಕ್ಕೂ ಮಿಗಿಲಾಗಿ ರಂಗಭೂಮಿಯೆಂಬ ಸ್ವರ್ಗಕ್ಕಿಳಿಯಲು ಹಾತೊರೆದು, ಶ್ರದ್ಧೆಯಿಂದ ಅರಿತು, ಕಲಿತು,  ಮೊದಲ ಬಾರಿಗೆ ರಂಗವನ್ನೇರಲಿರುವ ಅನೇಕರ ಕನಸು…… ಇವರೆಲ್ಲರೊಡನೆ ನಿರ್ದೇಶಕರಾದ ಕಶ್ಯಪ ಹಾಗು  ಇಡೀ ತಾಂತ್ರಿಕ ವರ್ಗದವರ ಕನಸು ನನಸಾಗುವುದು ಅಂದು… ‘ಕನಸಿ’ಗೆ ಸಾಕ್ಷಿಯಾಗುವ  ಅಪರೂಪದ ಅವಕಾಶ  ನಿಮ್ಮ ಮುಂದಿದೆ. .. ಬನ್ನಿ, ಇದರಲ್ಲಿ ನಿಮ್ಮ ಕನಸೂ ಅಡಗಿರಬಹುದು!

ಷೇಕ್ಸ್ ಪಿಯರ್ ಮಹಾಕವಿಯ ಈ ನಾಟಕವನ್ನು ಕನ್ನಡಕ್ಕೆ ತಂದಿರುವವರು ಪ್ರೊ. ಕೆ.ಎಸ್.ನಿಸಾರ್ ಅಹಮದ್ . ಖ್ಯಾತ ಸಂಗೀತ ನಿರ್ದೇಶಕ ವಿ. ಮನೋಹರ್ ಮ ಈ ನಾಟಕಕ್ಕೆ ಸಂಗೀತ ಸಂಯೋಜಿಸಿದ್ದಾರೆ.  ಅಭಿನಯಿಸಲಿರುವವರು ಈ ಸಾಲಿನ ವಿದ್ಯಾಥಿ೯ಗಳು. ಸಹಕಾರ : ಕನ್ನಡ ಮತ್ತು ಸಂಸ್ಕೃತಿ ಇಲಾಖೆ.

ವಿನ್ಯಾಸ ಮತ್ತು ನಿರ್ದೇಶನ ಡಾ.ಎಸ್.ವಿ. ಕಶ್ಯಪ್.

ದಿನಾಂಕ : 29 ಸೆಪ್ಟೆಂಬರ್, 2016, Thursday

ಸ್ಥಳ :  ಮಲ್ಲತ್ತಹಳ್ಳಿಯ ಕಲಾಗ್ರಾಮ

ಸಮಯ : ಸಂಜೆ 7 ಕ್ಕೆ.

ವಿ.ಸೂ. 2016 -17 ಸಾಲಿನ ರಂಗಭೂಮಿ ಡಿಪ್ಲೊಮಾ ಕೋರ್ಸ್ ಗೆ ಅರ್ಜಿ ಆಹ್ವಾನಿಸಲಾಗಿದೆ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

This site uses Akismet to reduce spam. Learn how your comment data is processed.