ಮಧ್ಯಸ್ಥಿಕೆ ವಹಿಸದಂತೆ ಪ್ರಧಾನಿ ‘ಕೈ’ ಕಟ್ಟಿದವರಾರು?

* ತೇಜಸ್ವಿ ಸೂರ್ಯ
25bg_tejasvi_surya_1808084g

ಕಾವೇರಿ ಸಮಸ್ಯೆಯನ್ನು ಬಗೆಹರಿಸಲು ಪ್ರಧಾನಿ ನರೇಂದ್ರ ಮೋದಿ ಮಧ್ಯಪ್ರವೇಶಿಸಬೇಕು, ಕೇಂದ್ರ ಸರಕಾರ ಈ ವಿಚಾರದಲ್ಲಿ ಸುಮ್ಮನಿರುವುದೇಕೆ ಎಂದು ಪ್ರಶ್ನಿಸುತ್ತಿರುವವರು ಒಂದಷ್ಟು ವಾಸ್ತವಿಕ ಸತ್ಯಾಂಶಗಳನ್ನು ಅರ್ಥೈಸಿಕೊಳ್ಳುವುದು ಒಳಿತು. ಕಾವೇರಿ ನೀರು ಹಂಚಿಕೆಯ ಕಗ್ಗಂಟನ್ನು ಬಿಡಿಸಲು 1989ರಲ್ಲಿ ಕಾವೇರಿ ನೀರು ಹಂಚಿಕೆ ನ್ಯಾಯಾಧಿಕರಣ ರಚನೆಯಾಯಿತು(Cauvery Water Dispute Tribunal) ಮೂವರು ನ್ಯಾಯಮೂರ್ತಿಗಳ ನೇತೃತ್ವದ ನ್ಯಾಯಾಧಿಕರಣವು 1990ರಲ್ಲಿ ತನ್ನ ಮಧ್ಯಂತರ ಆದೇಶವನ್ನು ಪ್ರಕಟಿಸಿತು. ಆದರೆ ಇದೇ ಆದೇಶ 1990-97ರವರೆಗೂ ಸರಿಯಾಗಿ ಪಾಲನೆಯಾಗದಿರುವು ದರಿಂದ ತಮಿಳುನಾಡು ಸುಪ್ರೀಂ ಕೋರ್ಟ್ ಮೆಟ್ಟಿಲೇರಿತು.

ನ್ಯಾಯಾಧಿಕರಣದ ಮಧ್ಯಂತರದ ಆದೇಶವನ್ನು ಜಾರಿಗೊಳಿಸಲು 1997ರಲ್ಲಿ ಸುಪ್ರೀಂ ಕೋರ್ಟ್ನ ಸೂಚನೆಯ ಮೇರೆಗೆ ಕೇಂದ್ರ ಸರಕಾರವು ಪ್ರಧಾನಮಂತ್ರಿಗಳ ಅಧ್ಯಕ್ಷತೆಯಲ್ಲಿ ಹಾಗೂ ಕರ್ನಾಟಕ, ತಮಿಳುನಾಡು, ಕೇರಳ ಮತ್ತು ಪುದುಚರಿ ರಾಜ್ಯಗಳ ಮುಖ್ಯಮಂತ್ರಿಗಳನ್ನು ಒಳಗೊಂಡ ಕಾವೇರಿ ನದಿ ಪ್ರಾಧಿಕಾರ(Cauvery  River Authority)ವನ್ನು ಸ್ಥಾಪಿಸಿತು. ಕಾವೇರಿ ನ್ಯಾಯಾಧಿಕರಣದ ಮಧ್ಯಂತರ ಆದೇಶವು ಸಂಕಷ್ಟ ವರ್ಷ(Distress Year) ದಲ್ಲಿ ನೀರು ಹಂಚಿಕೆ ಹೇಗಾಗಬೇಕೆಂದು ತನ್ನ ಮಧ್ಯಂತರ ಆದೇಶದಲ್ಲಿ ಸೂಚಿಸದೇ ಇದ್ದಿದ್ದರಿಂದ ಅದನ್ನೂ ಬಗೆಹರಿಸುವ ಮಹತ್ತರ ಜವಾಬ್ದಾರಿಯೂ ಈ ಪ್ರಾಧಿಕಾರ(ಸಿಆರ್ಎ) ಮೇಲಿತ್ತು.

2002ರ ಕಾವೇರಿ ಗಲಾಟೆ ಸಂದರ್ಭದಲ್ಲಿ ಇದೇ ಕಾವೇರಿ ನದಿ ನೀರು ಪ್ರಾಧಿಕಾರ ಕರ್ನಾಟಕದ ಸಹಾಯಕ್ಕೆ ಬಂದಿತ್ತು. ಕರ್ನಾಟಕವು 1.25 ಟಿಎಂಸಿ ನೀರನ್ನು ಬಿಡುಗಡೆ ಮಾಡಬೇಕೆಂದು ಸುಪ್ರೀಂ ಕೋರ್ಟ್ ಸೂಚಿಸಿತ್ತು. ಇಷ್ಟು ನೀರನ್ನು ಬಿಡಲಾಗುವುದಿಲ್ಲವೆಂದು ಕರ್ನಾಟಕವು ಸುಪ್ರೀಂ ಕೋರ್ಟ್ ಮೊರೆ ಹೋದಾಗ ಈ ವಿಚಾರವನ್ನು ಪ್ರಧಾನಿ ನೇತೃತ್ವದ ಪ್ರಾಧಿಕಾರದೆದುರು ಬಗೆಹರಿಸಿಕೊಳ್ಳಿ ಎಂದು ಕೋರ್ಟ್ ಸೂಚಿಸಿತ್ತು. ಇದರಂತೆ ರಾಜ್ಯವು ಪ್ರಾಧಿಕಾರದ ಎದುರು ಹೋದಾಗ ಸರ್ವೋಚ್ಚ ನ್ಯಾಯಾಲಯದ ಆದೇಶವನ್ನು ಮಾರ್ಪಾಡು ಮಾಡಿ 1.25 ಟಿಎಂಸಿ ಬದಲು 0.86 ಟಿಎಂಸಿ ನೀರನ್ನು ಬಿಡುವಂತೆ ಸೂಚಿಸಿದ್ದು ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ನೇತೃತ್ವದ ಕಾವೇರಿ ನದಿ ಪ್ರಾಧಿಕಾರವೇ! ಇನ್ನು 2003ರಲ್ಲಿ ಕಾವೇರಿ ಸಮಸ್ಯೆ ಉಲ್ಬಣಗೊಂಡಾಗಲೂ ಅಂದಿನ ಮುಖ್ಯಮಂತ್ರಿ ಎಸ್.ಎಂ ಕೃಷ್ಣ ಅವರ ಸಹಾಯಕ್ಕೆ ಧಾವಿಸಿದ್ದು ಇದೇ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಕಾವೇರಿ ನದಿ ಪ್ರಾಧಿಕಾರವೇ.  ನಂತರ 2007ರಲ್ಲಿ ಕಾವೇರಿ ನದಿ ನ್ಯಾಯಾಧಿಕರಣ (CWDT) ತನ್ನ ಅಂತಿಮ ಆದೇಶವನ್ನು ಪ್ರಕಟಿಸಿತು.

ಈ ಆದೇಶದ ಪ್ರಕಾರ ಕರ್ನಾಟಕದ ಅಣೆಕಟ್ಟುಗಳ ನಿರ್ವಹಣೆಯ ಜವಾಬ್ದಾರಿ ರಾಜ್ಯದ ಲೋಕೋಪಯೋಗಿ ಇಲಾಖೆಯಿಂದ ಕಾವೇರಿ ನಿರ್ವಹಣಾ ಮಂಡಳಿಗೆ ಹೋಗಬೇಕೆಂಬ ಗುರುತರ ಸೂಚನೆಯೂ ಇದೆ. ಈ ಆದೇಶವನ್ನು ಪ್ರಶ್ನಿಸಿ ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳು ಸುಪ್ರೀಂ ಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದ್ದು, ಈ ಅರ್ಜಿಗಳ ವಿಚಾರಣೆ ಇನ್ನೂ ಬಾಕಿ ಇದೆ. ನ್ಯಾಯಾಧಿಕರಣದ 2007ರ ಅಂತಿಮ ಆದೇಶದ ಫಲವಾಗಿ ಒಂದರ್ಥದಲ್ಲಿ ಕಾವೇರಿಯ ಮೇಲಿನ ಹಿಡಿತವನ್ನು ಕರ್ನಾಟಕ ಸಂಪೂರ್ಣವಾಗಿ ಕಳೆದುಕೊಂಡಂತಾಗುತ್ತದೆ.

ತಮಿಳುನಾಡಿಗೆ ಬೇಕಾಗಿರುವುದೂ ಇದೇ. ಪ್ರತಿಬಾರಿಯೂ ಪ್ರಧಾನಿ ನೇತೃತ್ವದ ಕಾವೇರಿ ನದಿ ಪ್ರಾಧಿಕಾರದ ಎದುರು ಬಂದು ನಿಲ್ಲುವುದು, ಪ್ರಾಧಿಕಾರದಲ್ಲಿ ಇನ್ನಿತರೆ ರಾಜ್ಯಗಳ ಮುಖ್ಯಮಂತ್ರಿಗಳ ಒಪ್ಪಿಗೆಯನ್ನು ಪಡೆದು ಕೊಡುವ ಆದೇಶದ ವಿರುದ್ಧ ಮತ್ತೆ ಸುಪ್ರೀಂ ಕೋರ್ಟ್ಗೆ ಹೋಗುವ ಪರಿಸ್ಥಿತಿ ಕಾವೇರಿ ನಿರ್ವಹಣಾ ಮಂಡಳಿಯಯ ಸ್ಥಾಪನೆಯಿಂದ ದೂರವಾಗುವುದೆಂದು ಅರಿತು, 2007ರ ಅಂತಿಮ ಆದೇಶವನ್ನು ಗೆಜೆಟ್ನಲ್ಲಿ ಪ್ರಕಟಿಸುವಂತೆ ಕೇಂದ್ರ ಸರಕಾರದ ಮೇಲೆ ಒತ್ತಡ ತಂದು ತಮಿಳುನಾಡು ಪಟ್ಟು ಹಿಡಿಯಿತು.

ತಮಿಳುನಾಡಿನ ಒತ್ತಡಕ್ಕೆ ಮಣಿದು, 2013 ರ ಫ.20ರಂದು ಕಾವೇರಿ ನ್ಯಾಯಾಧಿಕರಣ ಅಂತಿಮ ತೀರ್ಪನ್ನು ಗೆಜೆಟ್ನಲ್ಲಿ ಪ್ರಕಟಿಸಿದ್ದು, ಸಿದ್ದರಾಮಯ್ಯನವರ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರವೇ. ಈ ಪ್ರಕಟಣೆಯ ಪರಿಣಾಮವಾಗಿ ಪ್ರಧಾನಿ ನೇತೃತ್ವದ ಕಾವೇರಿ ನದಿ ಪ್ರಾಧಿಕಾರವು ತನ್ನ ಅಸ್ತಿತ್ವವನ್ನು ಕಳೆದು ಕೊಂಡಂತಾಯಿತು. ಅಂದರೆ, ಕಾವೇರಿ ಸಮಸ್ಯೆಯನ್ನು ಬಗೆಹರಿಸುವುದರಲ್ಲಿ ಅಥವಾ ಮಧ್ಯಸ್ಥಿಕೆ ವಹಿಸುವುದರಲ್ಲಿ ಪ್ರಧಾನಿಗಳಿಗಿದ್ದ ಕಾನೂನಾತ್ಮಕ ಅಧಿಕಾರವು ಇಲ್ಲದಂತಾಯಿತು.

2013ರ ಕಾಂಗ್ರೆಸ್ ನೇತೃತ್ವದ ಸರಕಾರದ ಕ್ರಮವನ್ನು ಗಟ್ಟಿಯಾಗಿ ವಿರೋಧಿಸಿದ್ದು ಅಂದಿನ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್. ಇಂದು ಮೋದಿಯವರು ಮಧ್ಯಸ್ಥಿಕೆ ವಹಿಸಬೇಕೆಂದು 5 ಬಾರಿ ಪತ್ರ ಬರೆದಿರುವೆ ಎಂದು ಹೇಳುವ ಸಿದ್ದರಾಮಯ್ಯನವರು ಅಂದು ಗೆಜೆಟ್ ನೋಟಿಫಿಕೇಷನ್ನ ವಿರುದ್ಧವಾಗಿ ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ಅವರಿಗಾಗಲೀ, ಅಥವಾ ಸೋನಿಯಾ ಗಾಂಧಿಯವರಿಗಾಗಲೀ ಎಷ್ಟು ಪತ್ರ ಬರೆದಿದ್ದಾರೆಂದು ಹೇಳಲಿ.

ಇರಲಿ, ಈಗ ಸದ್ಯದಲ್ಲಿ ಕಾವೇರಿ ನೀರಿನ ವಿಚಾರವನ್ನು ಗಮನಿಸುತ್ತಿರುವುದು ಸುಪ್ರೀಂ ಕೋರ್ಟ್ ಸ್ಥಾಪಿಸಿರುವ ಕಾವೇರಿ ಮೇಲುಸ್ತುವಾರಿ ಸಮಿತಿ(Cauvery  Supervisory  Committee). ಇದರಲ್ಲಿ ಕೇಂದ್ರ ಸರಕಾರದ್ದು ಸೀಮಿತ ಅಧಿಕಾರ ಮಾತ್ರ. ವಾಸ್ತವಿಕ ಸ್ಥಿತಿ ಹೀಗಿರುವಾಗ ಪ್ರಧಾನಿ ಮಧ್ಯಪ್ರವೇಶ ಮಾಡಬೇಕೆಂಬ ವಾದವು ಕಾಂಗ್ರೆಸ್ನ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರದ ವೈಫಲ್ಯವನ್ನು ಮುಚ್ಚಿ ಕೊಳ್ಳುವ ರಾಜಕೀಯ ನಾಟಕವಲ್ಲದೇ ಮತ್ತೇನು? ಇಷ್ಟಾಗಿಯೂ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರವು ತನಗೆ ಸಿಕ್ಕ ಅವಕಾಶಗಳಲ್ಲಿ ಕರ್ನಾಟಕಕ್ಕೆ ನ್ಯಾಯ ದೊರಕಿಸುವ ಪ್ರಯತ್ನ ಮಾಡಿದೆ. ಇತ್ತೀಚಿಗೆ ಸುಪ್ರೀಂ ಕೋರ್ಟ್ ನ ವಿಚಾರಣೆಯ ಸಂದರ್ಭದಲ್ಲಿ ಕಾವೇರಿ ಜಲಾನಯನ ಪ್ರದೇಶಗಳಲ್ಲಿ ಈ ಬಾರಿಯ ಮಳೆಯ ಕೊರತೆಯ ಬಗ್ಗೆ ಸುಪ್ರೀಂ ಕೋರ್ಟ್ಗೆ ಅಂಕಿಫಅಂಶಗಳ ಸಹಿತ ವಿವರಣೆ ನೀಡಿ ರಾಜ್ಯ ಸರಕಾರಕ್ಕೆ ಸಹಾಯ ಮಾಡಲು ಯತ್ನಿಸಿದ್ದು ಕೇಂದ್ರ ಸರಕಾರದ ಹೆಚ್ಚುವರಿ ಸಾಲಿಸಿಟರ್ ಜನರಲ್ ಪಿಂಕಿ ಆನಂದ್ ಅವರೇ! ಸತ್ಯ ಹೀಗಿರಬೇಕಾದರೆ ಸುಪ್ರೀಂ ಕೋರ್ಟ್ನಲ್ಲಿ ಸಮರ್ಥವಾಗಿ ವಾದ ಮಂಡಿಸಲು ವಿಫಲವಾದ ನಂತರ ಪ್ರಧಾನಿಗಳಿಗೆ ಕಾಟಾಚಾರಕ್ಕೆ ಪತ್ರವನ್ನು ಬರೆದು ತಮ್ಮ ಎಲ್ಲ ವೈಫಲ್ಯಕ್ಕೆ ಪ್ರಧಾನಿ ಮೋದಿಯನ್ನೂ, ಬಿಜೆಪಿಯನ್ನೂ ಹೊಣೆ ಮಾಡುವ ರಾಜಕೀಯ ನಾಟಕವಾಡುತ್ತಿದ್ದಾರಲ್ಲ, ಈ ನಾಟಕವನ್ನು ಅರಿಯದಷ್ಟು ದಡ್ಡರಲ್ಲ ನಮ್ಮ ರಾಜ್ಯದ ಜನತೆ! ಕೆಲವು ಅಂಶಗಳನ್ನು ಗಮನಿಸಿ, ವಕೀಲರಿಗೆ ಸರಿಯಾದ ಮಾಹಿತಿ ಒದಗಿಸುವಲ್ಲಿ ವಿಫಲರಾಗಿದ್ದು ಸಿದ್ದರಾಮಯ್ಯ ನವರು, ನೀರಿನ ಸಮಸ್ಯೆಯಲ್ಲಿ ಪ್ರಧಾನಿಯ ಮಧ್ಯಸ್ಥಿಕೆ ಯನ್ನು ತಡೆದಿದ್ದು ಯುಪಿಎ, ನೀರು ಬಿಡಲು ಹೇಳಿದ್ದು ಸುಪ್ರೀಂ ಕೋರ್ಟ್, ಸರಕಾರ ಬಿದ್ದರೂ ಚಿಂತೆಯಿಲ್ಲ, ಸೆಪ್ಟೆಂಬರ್ 20ರ ನಂತರ ಕಾವೇರಿ ನೀರು ಬಿಡುವುದಿಲ್ಲ ಎಂದು ಈಗ 6,000 ಕ್ಯೂಸೆಕ್ಸ್ ಬಿಡುತ್ತಿರುವುದೂ ಸಿಎಂ ಸಿದ್ದರಾಮಯ್ಯನವರೇ, ಈಗ ಪತ್ರ ಬರೆದಿದ್ದಕ್ಕೆ ನರೇಂದ್ರ ಮೋದಿ, ಕಾನೂನು ಮೀರಿ ಬರಬೇಕಂತೆ! ಕನ್ನಡಿಗರು ಇದನ್ನೆಲ್ಲ ಅರಿಯದಷ್ಟು ಮುಗ್ಧರೂ ಅಲ್ಲ, ದಡ್ಡರೂ ಅಲ್ಲ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

This site uses Akismet to reduce spam. Learn how your comment data is processed.