ಮೂಡಿಗೆರೆಯ ನೇಚರ್ ಕ್ಲಬ್ ಮಳೆ ನಡಿಗೆ ( Rain Walk) ಆಯೋಜಿಸುತ್ತಿದೆ.
23/07/2017 ಭಾನುವಾರ ಬೆಳಿಗ್ಗೆ ಏಳು ಗಂಟೆಗೆ ಸರಿಯಾಗಿ ಮೂಡಿಗೆರೆಯಿಂದ ಹದಿನೇಳು ಕಿ.ಮೀ. ದೂರದಲ್ಲಿ ಧರ್ಮಸ್ಥಳ ರಸ್ತೆಯಲ್ಲಿರುವ ಕೊಟ್ಟಿಗೆಹಾರದ ಫಾರೆಸ್ಟ್ ಚೆಕ್ ಪೋಸ್ಟ್ ಮುಂಬಾಗದಿಂದ ಪಯಣ ಪ್ರಾರಂಭ.
ಬೆಳಗಿನ ಕಾಫಿ-ತಿಂಡಿಯ ನಂತರ ಚಾರ್ಮಾಡಿ ಘಾಟಿಯಲ್ಲಿ ಮಳೆ ನಡಿಗೆ.
ಸುಮಾರು ಹತ್ತು ಕಿಲೋಮೀಟರ್ ನಡಿಗೆಯಿರುತ್ತದೆ.
ಹಾಗೆಯೇ ಜುಳುಜುಳು ತೊರೆಯ ಜಾಡಿನ ಗುಂಟ ಮೂಲ ಹುಡುಕುವ ಸಾಹಸವೂ ಇರುತ್ತದೆ.
ಏಳು ವರ್ಷದಿಂದ ಎಪ್ಪತ್ತು ವಯೋಮಾನದ ಎಲ್ಲರೂ ಭಾಗವಹಿಸುವ ಅನನ್ಯ ಅವಕಾಶವಿದು.
ಅಪರೂಪವಾಗಿರುವ ಮಲೆನಾಡಿನ ಜಡಿಮಳೆಯಲ್ಲಿ ಕೈ-ಕಾಲು ಬೀಸಿಕೊಂಡು, ಮುಖವನ್ನು ಮಳೆಹನಿಗೆ ಒಡ್ಡಿಕೊಂಡು, ಹರಿಯವ ನೀರನ್ನು ನಮ್ಮ ಬಾಲ್ಯದಲ್ಲಿ ಒದ್ದಂತೆ ಒದೆಯುತ್ತಾ ನಡೆಯುವ ಆನಂದವೇ ಬೇರೆ.
ನೀರಿನಲ್ಲಿ ಉಪಯೋಗಿಸ ಬಹುದಾದ ಬೂಟು, ಮಳೆ ಕೋಟು, ಛತ್ರಿ ಇಲ್ಲದಿದ್ದರೇ ಒಳ್ಳೆಯದು ( ಸರಾಗವಾಗಿ ನಡೆದಾಡಲು ಅಡಚಣೆಯಾಗಬಹುದು).
ಮಲೆನಾಡಿನ ಮಳೆಗಾಲವಾದ್ದರಿಂದ ಜಿಗಣೆಗಳು ಇರುತ್ತವೆ!!!
ಮಲೆನಾಡನ್ನು ಮಳೆ ಸುರಿಯುತ್ತಿರುವಾಗ ಅನುಭವಿಸುವ ಸಂಭ್ರಮವೇ ಬೇರೆ.
21/07/2017 ನಿಮ್ಮ ಹೆಸರನ್ನು ನೋಂದಾಯಿಸಲು ಕೊನೆಯ ದಿನ.
ವಿವರಗಳಿಗೆ ಸಂಪರ್ಕಿಸಿ, ಶ್ರೀ ಮಲ್ಲೇಶ್ @ 94 48 381955
………….ಧನಂಜಯ ಜೀವಾಳ ಬಿ.ಕೆ. ಪ್ರಧಾನ ಕಾರ್ಯದರ್ಶಿ, ನೇಚರ್ ಕ್ಲಬ್, ಮೂಡಿಗೆರೆ.