Invite

*ವೇದಿಕೆ ಫೌಂಡೇಷನ್*
ಅರ್ಪಿಸುವ –
*ಬಹದ್ದೂರ್ ಗಂಡ*

(ನಾಟಕ ಬೆಂಗಳೂರು ’18 ಉತ್ಸವದಲ್ಲಿ)

# ಶ್ರೀ *ಪರ್ವತವಾಣಿ* ಅವರು ಈ ನಾಟಕವನ್ನು ರಚಿಸಿದ್ದು 1940ರ ದಶಕದಲ್ಲಿ. ಶೇಕ್ಸ್ ಪಿಯರನ *’ಟೇಮಿಂಗ್ ಆಫ್ ದಿ ಶ್ರೂ’* ನಾಟಕದಿಂದ ಪ್ರೇರೇಪಣೆ ಪಡೆದ ಈ ಕೃತಿ ಕನ್ನಡ ಸೊಗಡಿನಿಂದ ಕೂಡಿ ನಮ್ಮ ನೆಲದಿಂದಲೇ ಅರಳಿದೆಯೇನೋ ಎಂಬಂತೆ ಬೇರುಬಿಟ್ಟಿದೆ. 40 -50 ರ ದಶಕದಲ್ಲಿ ದಾಖಲೆ ಪ್ರದರ್ಶನ ಕಂಡು ಇತಿಹಾಸ ನಿರ್ಮಿಸಿದೆ.

# ಮಿಡಲ್ ಕ್ಲಾಸ್ ಮನೆಯೊಂದರ ತರುಣಿಯ ಚಂಡಿ ಸ್ವಭಾವದ ಸುತ್ತ ಹೆಣೆಯಲಾದ ಸುಂದರ – ಸಾಂಸಾರಿಕ ಹಾಸ್ಯ ಕಥಾನಕ ನಾಟಕದಲ್ಲಿದೆ. ಸರೋಜ ತನ್ನ ಒರಟು ಸ್ವಭಾವದಿಂದ ಊರಿನ ಎಲ್ಲಾ ವರರನ್ನೂ ಹೆದರಿಸಿ ಓಡಿಸಿಬಿಟ್ಟಿರುತ್ತಾಳೆ.

# ಆಗ ಭೀಮಸೇನನ ಆಗಮನ! ಅವನ ಹಾಸ್ಯ- ಮಾಂತ್ರಿಕ ಮಾತುಗಾರಿಕೆಯಿಂದ ಅವಳನ್ನ ಮೆತ್ತಗಾಗಿಸುತ್ತಾನೆ. ಅವಳ ಕೊಂಕು-ಒರಟು ನಡೆಯನ್ನ ತಿದ್ದಿ ಪ್ರೇಮ-ಪ್ರೀತಿ ತುಂಬಿದ ದಾಂಪತ್ಯ ಸಾಧಿಸುತ್ತಾನೆ.

# ಈ ಸರಳ ಕಥಾಹಂದರವನ್ನ ಹಾಸ್ಯ ರಸಾಯನದಂತೆ ಪರ್ವತವಾಣಿ ಅವರು ರಚಿಸಿಕೊಟ್ಟಿದ್ದಾರೆ.

# ಹಾಸ್ಯ- ಮನರಂಜನೆ, ಸರಸ – ವಿನೋದ ತುಂಬಿದ ಈ ನಾಟಕವನ್ನು ವೇದಿಕೆ ಹೆಮ್ಮೆಯಿಂದ ಅರ್ಪಿಸುತ್ತಿದೆ.

*ಪಾತ್ರವರ್ಗ:*

ರೋಹಿತ್ ಶ್ರೀನಾಥ್, ವಂದನಾ, ಪವನ್, ಶೃತಿ ಶಶಿ, ದಿಲೀಪ್, ಹರ್ಷಿತಾ, ವಿಕ್ರಂ, ನಿರಂಜನ, ಮಧು, ಸಾಗರ್, ಆಕಾಶ್, ಲಕ್ಷ್ಮೀನಾರಾಯಣ, ಪ್ರಶಾಂತ್, ಚಂದ್ರು, ಗುರು ಮತ್ತು ಋತ್ವಿಕ್ ಸಿಂಹ

*ನೇಪಥ್ಯ:*

* ಧ್ವನಿ- ಪವಿತ್ರ
* ಬೆಳಕು- ಪುಟ್ಟಯ್ಯ/ ದರ್ಶನ್
* ರಂಗವಿನ್ಯಾಸ/ಪ್ರಸಾದನ- ಮಾಲತೇಶ್ ಬಡಿಗೇರ
* ಉಡುಪು – ನೇತ್ರಾವತಿ/ದರ್ಶನಾ
* ನಿರ್ವಹಣಾ ಸಹಾಯ – ಜೀತ್, ಚರಣ್, ನವೀನ್, ನಾಗೇಂದ್ರ

*ವಿನ್ಯಾಸ/ನಿರ್ದೇಶನ:*

*ಜಸ್ಲೀನ್ ಋತ್ವಿಕ್ ಸಿಂಹ*

*11 ಡಿಸೆಂಬರ್ (ಮಂಗಳವಾರ)*
*ಸಂಜೆ 7ಗಂಟೆಗೆ*
*ರವೀಂದ್ರ ಕಲಾಕ್ಷೇತ್ರ*
*ಟಿಕೆಟ್ಸ್ 70/- ರೂ*