ನಿಮಗೆ ನಿಮ್ಮ ಮಗನ ಬಗ್ಗೆ ಹೆಮ್ಮೆ ಅನ್ನಿಸತ್ತಾ?

....
….

ಮೊನ್ನೆ ಶ್ರೀನಗರದಲ್ಲಿ ನಡೆದ ಪಾಕಿಸ್ತಾನದ ರಾಕ್ಷಸರ ಆತ್ಮಾಹುತಿ ದಾಳಿಗೆ ಕರ್ನಾಟಕದ ವೀರಯೋಧ ಸತೀಶ್ ಹುತಾತ್ಮರಾದರು. ಮೃತ ಶರೀರ ಕರ್ನಾಟಕಕ್ಕೆ ಬಂತು. ಆ ಸಂದರ್ಭದಲ್ಲಿ ಸತೀಶ್ ತಾಯಿಗೆ ವರದಿಗಾರನೊಬ್ಬ ಕೇಳಿದ ಪ್ರಶ್ನೆ, “ನಿಮ್ಮ ಮಗನ ಬಗ್ಗೆ ನಿಮಗೆ ಹೆಮ್ಮೆ ಅನ್ನಿಸತ್ತಾ?”

ಮೊದಲಿಗೆ ನಾನು ಇಲೆಕ್ಟ್ರಾನಿಕ್ ಮೀಡಿಯಾದ ಪತ್ರಕರ್ತನಾಗಿ, ಮೃತಪಟ್ಟವರ ಮನೆಗಳವರ ಬೈಟ್ ತೆಗೆದುಕೊಳ್ಳುವುದನ್ನು ವಿರೋಧಿಸುತ್ತೇನೆ. ನನಗೆ ಸ್ಟೋರಿ ರನ್ ಮಾಡುವ ಅಧಿಕಾರವಿದ್ದರೆ, ಈ ರೀತಿಯ ಬೈಟ್ ಳಿಲ್ಲದೆ ಸ್ಟೋರಿ ರನ್ ಮಾಡುತ್ತೇನೆ. ಮೃತಪಟ್ಟವರ ತಾಯಿ, ತಂದೆ, ಗಂಡ, ಹೆಂಡತಿಗೆ “ನಿಮಗೆ ಈಗ ಹೇಗೆ ಅನ್ನಿಸತ್ತೆ” ಎಂದು ಕೇಳುವುದು ಕ್ರೌರ್ಯವಲ್ಲವೆ?

 

ಅ ನ ರಮೇಶ್ ನುಡಿ, ದೃಶ್ಯ. ಗೀತನಮನ

....
….

ಸವಿತಾ ಹಾಲಪ್ಪನವರ್ ಸಾವು ಒಂದು ರೀತಿಯಲ್ಲಿ ಕೊಲೆಯಲ್ಲವೆ?

ಧರ್ಮ ಮುಖ್ಯವೋ ಅಥವಾ ಜೀವವೋ? ಸವಿತಾ ಸಾವಿನ ಬಳಿಕ ಈ ಪ್ರಶ್ನೆ ಮತ್ತೆ ಎದ್ದು ನಿಂತಿದೆ. ಜೀವ ವಿರೋಧಿ ನೀತಿಯ ಇಂತಹುಗಳನ್ನು ನಿಜಕ್ಕೂ ಧರ್ಮ ಎನ್ನಬೇಕೆ ಎಂಬ ಜಿಜ್ಞಾಸೆ ಮೂಡುತ್ತದೆ. ಅಹಿಂಸಾ ಪರಮೋ ಧರ್ಮ ಎಂಬ ನಿಲುವು ಒಂದೆಡೆಯಾದರೆ, ಧರ್ಮಕ್ಕಾಗಿ ಜೀವವನ್ನು ಕೊಲ್ಲುವ ಈ ರೀತಿಯ ಕಾನೂನು ಯಾವ ಪುರುಷಾರ್ಥಕ್ಕಾಗಿ? ಐರಿಶ್ ಕಾನೂನಿನಲ್ಲಿ ಬದಲಾವಣೆಯಾಗಬೇಕು ಎಂಬ ಆಗ್ರಹ ಕಳೆದ ಹಲವಾರು ವರ್ಷಗಳಿಂದ ಕೇಳಿಬರುತ್ತಿದೆ. ಸವಿತಾ ಸಾವಿನ ಬಳಿಕವಾದರೂ ಐರಿಶ್ ಸರ್ಕಾರ ಹಾಗೂ ಧರ್ಮಗುರುಗಳು ಕಣ್ಣುತೆರೆಯುತ್ತಾರೆಯೆ? ಅಷ್ಟಕ್ಕೂ ಸವಿತಾ ಸಾವು, ಸಾವಲ್ಲ. ಅದು ಪರೋಕ್ಷ ಕೊಲೆ ಎನಿಸುತ್ತದೆ.

ಸನ್ಮಾನ್ಯ ಶಾಸಕರೇ, ಬರಗಾಲವಿದ್ದರೆ ಜನ ಊಟ ಬಿಡೋದಿಲ್ಲ, ಆತ್ಮಹತ್ಯೆ ಮಾಡಿಕೊಳ್ತಾರೆ

…ಕೃಪೆ – ಕನ್ನಡ ಪ್ರಭ – 03/10/12

ಮೂಲವ್ಯಾಧಿಗೂ ನಾಯಿಗೂ ಏನು ಸಂಬಂಧ?

….

ಈ ಘಟನೆ ಅಷ್ಟೇನೂ ಜನರ ಗಮನ ಸೆಳೆಯಲಿಲ್ಲ. ನನ್ನ ಗಮನಕ್ಕೂ ತಡವಾಗಿಯೇ ಬಂತು. ಪೇಪರ್ ಗಳಲ್ಲಿ ಕೂಡ ಓದಿದ ಹಾಗಿಲ್ಲ. ಆಗಿದ್ದಿಷ್ಟು. 

ಕತ್ತಲಾದ ನಂತರ ಬೆಂಗಳೂರಿನ ನಿರ್ಜನ ಪ್ರದೇಶವೊಂದರಲ್ಲಿ ಆಟೋದಲ್ಲಿ ಮೂವರು ಬಂದಿದ್ದಾರೆ. ಬಂದವರೇ ಅಲ್ಲೇ ಮಲಗಿಕೊಂಡಿದ್ದ ನಾಯಿಗೆ ಮಾಂಸದ ತುಂಡು ಎಸೆದಿದ್ದಾರೆ. ಮಾಂಸದ ಆಸೆಗೆ ನಾಯಿ ಅವರ ಹಿಂದೆ ಮುಂದೆ ಸುತ್ತಾಡಿದೆ. ಹಾಗೆಯೇ ನಾಯಿಯನ್ನು ಸ್ವಲ್ಪ ದೂರ ಕರೆದುಕೊಂಡು ಹೋದವರೇ ಅದರ ಕುತ್ತಿಗೆಯನ್ನು ಕಚಕ್ ಅನ್ನಿಸಿದ್ದಾರೆ. ಆದರೆ ಇದನ್ನೆಲ್ಲ ಹತ್ತಿರದಲ್ಲೇ ಇದ್ದ ಕೆಲ ಹುಡುಗರು ನೋಡಿದ್ದಾರೆ. ನಾಯಿ ತಲೆ ಕಡಿದದ್ದನ್ನು ನೋಡಿದ ಹುಡುಗರು ಇವರನ್ನು ಪ್ರಶ್ನಿಸಿದ್ದಾರೆ. ದಿಢೀರ್ ಅಂತ ರಾಡ್ ಎಳೆದ ಅಪರಿಚತರು ಹುಡುಗರ ಮೇಲೆ ಮುರಕೊಂಡು ಬಿದ್ದಿದ್ದಾರೆ. ಆದರೆ ಹುಡುಗರೂ ಜಗ್ಗಿಲ್ಲ. ಫೈಟ್ ಗೆ ನಿಂತಿದ್ದಾರೆ. ಅಷ್ಟರಲ್ಲಿ ಆಟೋ ಚಾಲಕ ಆಟೋ ಸಮೇತ ಪರಾರಿಯಾಗಿದ್ದಾನೆ. ಹುಡುಗರು ಇಬ್ಬರನ್ನು ಹಿಡಿದು ಸರಿಯಾಗಿ ತದಕಿದ್ದಾರೆ. ಕೊನೆಯಲ್ಲಿ ಫಿಲ್ಮಿ ಸ್ಟೈಲ್ ನಲ್ಲಿ ಪೋಲಿಸರ ಆಗಮನ, ಆರೋಪಿಗಳ ಬಂಧನ. “ಯಾಕ್ರಪ್ಪಾ ನಾಯಿ ತಲೆ ಕಡದ್ರೀ?” ಅಂತ ಕೇಳಿದರೆ, ಅವರು ಹೇಳಿದ್ದು, “ಪೈಲ್ಸ್ ಇತ್ತು ಸಾರ್, ಬೀದಿ ಬದಿಯ ಡಾಕ್ಟರ್ ನೊಬ್ಬ ನಾಯಿ ನಾಲಿಗೆ ತಿಂದ್ರೆ ಪೈಲ್ಸ್ ವಾಸಿಯಾಗತ್ತೆ ಅಂದ. ಅದಕ್ಕೆ ನಾಯಿ ತಲೆ ಕಡದು ನಾಲಿಗೆ ತೆಗೆಯಲಿಕ್ಕೆ ಹೊರಟಿದ್ವಿ” ಅಂದ.

ಪೈಲ್ಸ್ ಗಾಗಿ ಜನ ಏನೇನು ಮಾಡುತ್ತಾರೆ ಅಂತ….

ಅಂದಹಾಗೆ ನನಗೆ ಕೂಡ ಪೈಲ್ಸ್ ಇದೆ. ಕಳೆದ ಸುಮಾರು 15 ವರ್ಷಗಳಿಂದ ಪೈಲ್ಸ್ ಇದೆ. ಅದರಿಂದ ನಾನು ಪಟ್ಟ ಯಮಯಾತನೆ ಅಷ್ಟಿಷ್ಟಲ್ಲ. ಆದರೆ ಇದೀಗ ಪೈಲ್ಸ್ ಸಂಪೂರ್ಣ ವಾಸಿಯಾಗದಿದ್ದರೂ, ಕಂಟ್ರೋಲ್ ನಲ್ಲಿದೆ. ಪೌಷ್ಟಿಕ ಆಹಾರ, ಹೆಚ್ಚು ನೀರು ಕುಡಿಯುವುದು, ನಾರಿನ ಪದಾರ್ಥ ಸೇವನೆ, ಮಸಾಲೆ ಪದಾರ್ಥ ತಿನ್ನದಿರುವುದು – ಹೀಗೆ ಕೆಲವೇ ಕೆಲವು ಸಿಂಪಲ್ ಪಥ್ಯ ಹಾಗೂ ಕೆಲ ಔಷಧಿಗಳನ್ನು ಬಳಸಿದರೆ ಪೈಲ್ಸ್ ನಿಯಂತ್ರಣದಲ್ಲಿರುತ್ತದೆ. ನಾಯಿ ತಲೆ ಕಡಿಯುವ ಅಗತ್ಯ ಬೀಳುವುದಿಲ್ಲ.

ಬನ್ನೇರುಘಟ್ಟದಲ್ಲಿ ಕರಡಿಗಳ ಸರಣಿ ಸಾವು, ಹೇಳೋರಿಲ್ಲ ಕೇಳೋರಿಲ್ಲ

ಬನ್ನೇರುಘಟ್ಟದಲ್ಲಿ ಈಗ ಸೂತಕದ ಛಾಯೆ ಆವರಿಸಿದೆ. ಹುಲಿಗಳ ಸಾವಿನ ನಂತರ ಕರಡಿಗಳ ಸರದಿ ಆರಂಭವಾಗಿದೆ. ಕಳೆದ ಒಂದು ತಿಂಗಳಿನಿಂದ ಇಲ್ಲಿಯವರೆಗೆ ಆರು ಕರಡಿಗಳು ಸಾವನ್ನಪ್ಪಿವೆ. ಕ್ಷಯರೋಗದಿಂದ ಎಲ್ಲಾ ಕರಡಿಗಳು ಸಾವನ್ನಪ್ಪಿವೆ ಎಂಬುದು ವೈದ್ಯರ ಹೇಳಿಕೆ. ಇನ್ನೂ ಹತ್ತು ಕರಡಿಗಳು ಸಾವಿನಂಚಿನಲ್ಲಿವೆಯಂತೆ. ಪ್ರಮುಖ ಕಾರಣ ವಿಟಮಿನ್ ಕೊರತೆ. ಈ ಎಲ್ಲ ಕರಡಿಗಳನ್ನೂ ಕಲಂದರ್ ಗಳ ಕಡೆಯಿಂದ ವಶಪಡಿಸಿಕೊಳ್ಳಲಾಗಿದೆ. ಆಶ್ಚರ್ಯ ಅಂದ್ರೆ, ಕಲಂದರ್ ಗಳ ಬಳಿ ಆರೋಗ್ಯಕರವಾಗಿರುವ ಕರಡಿಗಳು ರಾಷ್ಟ್ರೀಯ ಉದ್ಯಾನವನದಲ್ಲಿ ಸಾವನ್ನಪ್ಪುತ್ತಿರುವುದು. ಕರಡಿಗಳಿಗೆ ಇಂಜೆಕ್ಷನ್ ಇಲ್ಲ, ಮಾತ್ರೆ ನೀಡಬೇಕು. ಆದ್ರೆ ಮಾತ್ರೆಯನ್ನು ಕರಡಿಗಳು ಸೇವಿಸುತ್ತಿಲ್ಲ ಎಂಬುದು ವೈದ್ಯರ ಒನ್ ಪಾಯಿಂಟ್ ಆನ್ಸರ್. ಲಕ್ಷಾಂತರ ರೂಪಾಯಿ ಬಂದರೂ ಆ ಎಲ್ಲ ಹಣ ಢೋಂಗೀ ಪ್ರಾಣಿಪ್ರಿಯರು ಹಾಗೂ ಬೇಜವಾಬ್ದಾರಿ ವೈದ್ಯರ ನಡುವೆ ಹಂಚಿಹೋಗುತ್ತಿದೆ ಎಂಬುದು ಸ್ಥಳೀಯ ಆರೋಪ.