ಇನ್ಮುಂದೆ ಆರ್ ಎನ್ ಎನ್ ಲೈವ್ ನಲ್ಲಿ ಕಾಷಿಯಸ್ ಮೈಂಡ್

ಮಂಗಳೂರು ಮೂಲದ ಆರ್ ಎನ್ ಎನ್ ಲೈವ್ (Real time News Network) ಇನ್ನುಮುಂದೆ ಬ್ಲಾಗಿನಲ್ಲಿ ಪ್ರಕಟವಾಗಿರುವ ನನ್ನ ಲೇಖನಗಳನ್ನು ತನ್ನ ವೆಬ್ ಸೈಟ್ ನಲ್ಲಿ ಪ್ರಕಟಿಸಲಿದೆ. ಆರ್ ಎನ್ ಎನ್ ಸಂಪಾದಕರು ಆಯ್ಕೆ ಮಾಡಿದ ಒಂದು ಲೇಖನ ಪ್ರತಿ ಶುಕ್ರವಾರ http://www.rnnlive.com ನಲ್ಲಿ ಪ್ರಕಟವಾಗಲಿದೆ. ಈ ಅವಕಾಶಕ್ಕಾಗಿ ಆರ್ ಎನ್ ಎನ್ ಬಳಗಕ್ಕೆ ಧನ್ಯವಾದಗಳು.
ಈಗಾಗಲೇ ಪ್ರಕಟಗೊಂಡಿರುವ ಲೇಖನಕ್ಕಾಗಿ ಇಲ್ಲಿ ಕ್ಲಿಕ್ಕಿಸಿ.

....
….

CAUTIOUSMIND ಗೆ 5 ರ ಸಂಭ್ರಮ

....
….

ನನ್ನ ಬ್ಲಾಗ್ ಇಂದಿಗೆ ಸರಿಯಾಗಿ 4 ವರ್ಷಗಳನ್ನು ಪೂರೈಸಿ, 5 ನೇ ವರ್ಷಕ್ಕೆ ಕಾಲಿಡುತ್ತಿದೆ. ನೂರಾರು ಲೇಖನಗಳು, ಫೋಟೋಗಳು, ಆಹ್ವಾನ ಪತ್ರಿಕೆಗಳು, ವಾದ-ಪ್ರತಿವಾದ, ಕಥೆ, ನಾಟಕ, ಕವನ, ವ್ಯಾಪಾರ, ಉತ್ತಮವಾದದ್ದನ್ನು ಪ್ರಕಟಿಸಿದಾಗ ಮೆಚ್ಚಿ ಕಮೆಂಟಿಸುವ, ಚೆನ್ನಾಗಿಲ್ಲದಿದ್ದರೆ ತಿದ್ದುವ ಕಮೆಂಟಿಗರು, ಕತ್ತಲಲ್ಲಿ ಕುಳಿತು ಸೆಗಣಿ ಎಸೆಯುವವರ ಅನಾಮಿಕ ಕಾಮೆಂಟುಗಳು – ಹೀಗೆ ಎಲ್ಲದಕ್ಕೂ ಈ ನಾಲ್ಕು ವರ್ಷ ಸಾಕ್ಷಿಯಾಗಿದೆ. ನಾಲ್ಕನೇ ವರ್ಷಕ್ಕೆ ಸರಿಯಾಗಿ 89201 ಹಿಟ್ ಗಳನ್ನು ಬ್ಲಾಗ್ ದಾಖಲಿಸಿದೆ. ಬ್ಲಾಗ್ ನಲ್ಲಿನ ಲೇಖನಗಳ ಸಂಗ್ರಹ ‘ನ್ಯೂಸ್ ಪಿಂಟ್’ ಪುಸ್ತಕ ಹಲವರ ಮೆಚ್ಚುಗೆಗೆ ಪಾತ್ರವಾಗಿದೆ. ಈ ನಾಲ್ಕು ವರ್ಷಗಳಲ್ಲಿ ಒಂದು ಬಾರಿ CAUTIOUSMIND, ವರ್ಡ್ ಪ್ರೆಸ್ ನ ಮೊದಲ ಸ್ಥಾನವನ್ನೂ ಅಲಂಕರಿಸಿದೆ. ಇಲ್ಲಿಯವರೆಗೆ ಬ್ಲಾಗ್ ಓದಿ, ತಿದ್ದಿ, ಗುದ್ದಿ ಕಮೆಂಟಿಸಿದ, ಹುರಿದುಂಬಿಸಿದ ಎಲ್ಲ ಸಹೃದಯರಿಗೆ ಧನ್ಯವಾದ. ನಿಮ್ಮ ಪ್ರೀತಿ, ವಿಶ್ವಾಸ ಮುಂದೆಯೂ ಇರಲಿ.

ವಿಶ್ವಾಸಿ.

ಸುಘೋಷ್ ಎಸ್. ನಿಗಳೆ

ಒಂದು ಉತ್ತಮ ಬ್ಲಾಗ್…

ಸುಧಾಕರ್ ಜೈನ್ ಇಂಡಿಯನ್ ಎಕ್ಸ್ ಪ್ರೆಸ್ ನಲ್ಲಿ ಫೋಟೋ ಜರ್ನಲಿಸ್ಟ್. ಕೆಪಿಎನ್ ನಲ್ಲಿ ಕೆಲಸ ಮಾಡಿದ ಬಳಿಕ ಇದೀಗ ಎಕ್ಸ್ ಪ್ರೆಸ್ ನಲ್ಲಿ ಫೋಟೋ ಕೃಷಿ ಮುಂದುವರೆಸಿದ್ದಾರೆ. ಅವರ ಬ್ಲಾಗ್ ಚಾಣಕ್ಯ ದಲ್ಲಿ ಅವರು ತೆಗೆದಿರುವ ವಾಹ್ ಎನ್ನುವಂತಹ ಫೋಟೋಗಳಿವೆ. ಕೆಲ ಫೋಟೋಗಳ ಸ್ಯಾಂಪಲ್ ಇಲ್ಲಿದೆ.

ಷೇಮ್ ಷೇಮ್ ಪಪ್ಪಿ ಷೇಮ್
ಯಾರದು ಪಪ್ಪಿ ಷೇಮ್ ಅಂದಿದ್ದು....ಬಂದೇ ನೋಡಿ ಈಗ
ನೋ ಕಮೆಂಟ್ಸ್
ಇಷ್ಟೇನಪ್ಪ ಸ್ಟ್ರೆಚ್ ಮಾಡ್ಲಿಕ್ಕೆ ಆಗೋದು...
ಪೂಜೆ ಮುಗೀತು. ಪ್ರಸಾದಕ್ಕೆ ಎಲ್ಲಾರೂ ಬನ್ನಿ...
ಹುಂ...
ನಮ್ಮ ಮುಂದಿನ ಸುತ್ತು ಒಲಂಪಿಕ್ಸ್ ನಲ್ಲಿ...
ದೊಡ್ಡೋರೆಲ್ಲ ಜಾಣರಲ್ಲ...

500 ಪೋಸ್ಟ್ ಗಳು

ಇದು ನನ್ನ 500 ನೇ ಪೋಸ್ಟ್. ಬ್ಲಾಗ್ ಓದುಗರೆಲ್ಲರಿಗೂ ಹೃತ್ಪೂರ್ವಕ ವಂದೇ. ತಮ್ಮ ಸಹಕಾರ, ಪ್ರೋತ್ಸಾಹ, ಕಮೆಂಟು ಹೀಗೆ ಮುಂದುವರೆಯಲಿ….

ಆಜ ಮೇ ಊಪರ್, ಆಸಮಾ ನೀಚೆ...

ಬ್ಲಾಗ್ ಅಪ್ಡೇಟ್ ಇರುವುದಿಲ್ಲ…

😦

ಕಾರಣಾಂತರಗಳಿಂದ 27-10-2010 ವರೆಗೆ ಬ್ಲಾಗ್ ಅಪ್ಡೇಟ್ ಇರುವುದಿಲ್ಲ. ಕ್ಷಮಿಸಿ.

ವಿಶ್ವಾಸಿ

ಸುಘೋಷ್ ಎಸ್. ನಿಗಳೆ

ಅಸಭ್ಯ, ಹೊಲಸು, ಹೊಟ್ಟೆಕಿಚ್ಚಿನ ಕಮೆಂಟ್ ಹಾಕುವವರಿಗೆ ಒಂದು ಸಂದೇಶ

“ನಿಂದಕರಿರಬೇಕು …………. ಹಂದಿಯಿದ್ದರೆ ಕೇರಿ ಹ್ಯಾಂಗೆ ಶುದ್ಧಿಯೋ ಹಾಂಗೆ”

ಹಂದಿಯೊಂದಿಗೆ ಕೆಸರಲ್ಲಿ ಗುದ್ದಾಡಿದರೆ ಹಂದಿಗೆ ಸಂತೋಷವೇ ಹೊರತು, ನಮಗಲ್ಲ.

ಅಗಸ್ಟ್ 21 ರ ವರೆಗೆ ಬ್ಲಾಗ್ ಅಪ್ಡೇಟ್ ಇರುವುದಿಲ್ಲ

ವೈಯುಕ್ತಿಕ ಕೆಲಸದ ನಿಮಿತ್ತ ಬೆಂಗಳೂರಿನಲ್ಲಿರುವುದಿಲ್ಲ. ಹೀಗಾಗಿ ಅಗಸ್ಟ್ 21 ರ ತನಕ ಬ್ಲಾಗ್ ಅಪ್ಡೇಟ್ ಇರುವುದಿಲ್ಲ.

ಸುಘೋಷ್ ಎಸ್. ನಿಗಳೆ

ಭಗವಂತ ಪಿನ್ ಕೊಟ್ಟ ಸೇಫ್ಟಿಗಂತ…

(ಅಕ್ಟೊಬರ್ 8, 2009 ರಂದು ಪ್ರಕಟವಾದ ಲೇಖನ).

ಯತ್ರ ನಾರ್ಯಸ್ತು ಪೂಜ್ಯಂತೆ ರಮಂತೆ ತತ್ರ ದೇವತಾಃ

ಮಹಿಳೆಯರು ಬಸ್ ಗಳಲ್ಲಿ ಒಂಟಿಯಾಗಿ ಪ್ರಯಾಣಿಸುವಾಗ ಅಂಗಚೇಷ್ಟೇ ಮಾಡಿ ಕಾಟ ಕೊಡುವಸಭ್ಯ ಪುರುಷರು ಎಲ್ಲಕಡೆಗೂ ಇರುವವರೇ. ರಾತ್ರಿ ಪ್ರಯಾಣಿಸುವಾಗಲಂತೂ ಇವರ ಕೈಯಲ್ಲಿ ಸಿಕ್ಕಿಹಾಕಿಕೊಂಡರೆ ಆ ಮಹಿಳೆಗಾಗುವ ದೈಹಿಕ, ಮಾನಸಿಕ ಕಿರುಕುಳವಂತೂ ಹೇಳತೀರದಷ್ಟು. ಸಾಮಾನ್ಯವಾಗಿ ಮಧ್ಯವಯಸ್ಸು ದಾಟುತ್ತಿರುವ ಪುರುಷರು ಇಂತಹ ದುಸ್ಸಾಹಸಕ್ಕೆ ಕೈಹಾಕುವುದು ಹೆಚ್ಚು. ಇಂತಹ ಪುರುಷನೊಬ್ಬನಿಂದ ಪಾರಾದ ನನ್ನ ಸಂಬಂಧಿಕಳೊಬ್ಬಳ ಅನುಭವ ಇಲ್ಲಿದೆ.

ಓವರ್ ಟು ನನ್ನ ಸಂಬಂಧಿಕಳು…..

ಮಂಗಳೂರಿನಿಂದ ಉಡುಪಿಗೆ ಹೊರಟಿದ್ದೆ. ಹೊರಡುವಾಗ ಖಾಲಿಯೇ ಇದ್ದ ಬಸ್, ಸ್ಟಾಪ್ ಗಳು ಕಳೆದಂತೆಲ್ಲ ಜನರಿಂದ ತುಂಬತೊಡಗಿತು. ಇಬ್ಬರು ಕೂರುವ ಸೀಟ್ ನಲ್ಲಿ ನಾನು ಕುಳಿತಿದ್ದೆ. ನನ್ನ ಪಕ್ಕದಲ್ಲಿ ಸುಮಾರು 45 ವಯಸ್ಸಿನ ವ್ಯಕ್ತಿಯೊಬ್ಬ ಬಂದು ಕುಳಿತ. ಸ್ಪಲ್ಪ ಸಮಯ ಕಳೆದಿರಬೇಕು. ಆತ ನಿದ್ದೆಗೆ ಜಾರಿದ. ನಾನು ಕಿಟಕಿಯಿಂದ ಆಚೆ ನೋಡುತ್ತ ಕುಳಿತಿದ್ದೆ. ನಿಧಾನವಾಗಿ ಆತನ ತಲೆ ನನ್ನ ಭುಜದ ಮೇಲೆ ವಾಲಲಾರಂಭಿಸಿತು. ನನಗಿಂತ ತುಂಬ ಹಿರಿಯನಾದ್ದರಿಂದ ಹಾಗೂ ತುಂಬ ಸಭ್ಯನಂತೆ ಕಾಣುತ್ತಿದ್ದುದರಿಂದ ನಾನೂ ಸುಮ್ಮನಿದ್ದೆ. ಆದರೆ ನಂತರ ಈ ವಾಲಿಕೆ ತುಸು ಅತೀ ಎನ್ನಿಸುವಷ್ಟು ಹೆಚ್ಚಾಯಿತು. ಕೈಯಿಂದ ಆತನ ತಲೆಯನ್ನು ಸರಿಸಿದೆ. ಸ್ಪಲ್ಪ ಸಮಯ ಸರಿಯಾಗಿದ್ದ ಆತನ ತಲೆ ಮತ್ತೆ ನನ್ನ ಭುಜದ ಮೇಲೆ ವಾಲಿತು. ಈ ಬಾರಿ ಆತನ ದೇಹ ಕೂಡ ಸ್ವಲ್ಪ ವಾಲತೊಡಗಿತ್ತು. ನನಗೆ ಕಿರಿಕಿರಿ ಆಗಲಾರಂಭಿಸಿತು. ಎತ್ತಲೋ ನೋಡುತ್ತಿದ್ದ ನಾನು ಆತನ ಕಡೆ ಛಕ್ಕನೆ ತಿರುಗಿದಾಗ ಆಸಾಮಿ ವಾರೆಗಣ್ಣಿನಿಂದ ನನ್ನನ್ನು ನೋಡುತ್ತಿರುವುದು ಗಮನಕ್ಕೆ ಬಂತು. ಓಹೋ ಇದು ಸಾಮಾನ್ಯವಾದ ನಿದ್ದೆಯಲ್ಲ ಎಂದು ಫಕ್ಕನೆ ಹೊಳೆಯಿತು. ಈ ಬಾರಿ ಸ್ಪಲ್ಪ ರಫ್ ಆಗಿಯೇ ಆತನ ತಲೆ ಸರಿಸಿದೆ. ನಿದ್ದೆಯಿಂದ ಎದ್ದವರಂತೆ ನಟಿಸುತ್ತ ನನಗೆ ಬಸ್ ನಲ್ಲಿ ಮಲಗಿ ಪ್ರಯಾಣಿಸುವುದೇ ಅಭ್ಯಾಸಎಂದು ಭಾರೀ ಸಾಭ್ಯಸ್ತನಂತೆ ಪೋಸು ಕೊಡುತ್ತ ಮತ್ತೆ ತಲೆ ವಾಲಿಸಲಾರಂಭಿಸಿದ.

ಆಸಾಮಿಗೆ ಚಿಕಿತ್ಸೆ ಅನಿವಾರ್ಯವಾಗಿತ್ತು. ಬಳೆಗಳಿಗೆ ಸಿಕ್ಕಿಸಿಕೊಂಡಿದ್ದ ಸೇಫ್ಟಿ ಪಿನ್ ತೆಗೆದೆ. ನಿಧಾನವಾಗಿ ನನ್ನ ಭುಜದ ಬಳಿ ಹಿಡಿದೆ. ಇದನ್ನು ಗಮನಿಸದ ಆತ ಟರ್ನಿಂಗ್ ಒಂದರಲ್ಲಿ ತುಸು ಜೋರಾಗಿಯೇ ತಲೆ ವಾಲಿಸಿದ. ಕಿವಿಯ ಪಕ್ಕ ಕಚಕ್ ಎಂದು ಚುಚ್ಚಿತು ನೋಡಿ…ಪಿನ್ನು, ಕೈಯಿಂದ ನೀವಿಕೊಳ್ಳುತ್ತ ಸಿಟ್ಟಿನಿಂದ “ಇದೇನಮ್ಮ ಮಾಡುತ್ತೀದ್ದೀಯಾ?” ಎಂದು ಕೇಳಿದ.

ನನಗೆ ಬಸ್ ನಲ್ಲಿ ಹೀಗೆ ಪಿನ್ ಹಿಡಿದುಕೊಂಡೇ ಪ್ರಯಾಣಿಸುವುದು ಅಭ್ಯಾಸ ಎಂದೆ. ಮುಂದೆ ಆತನ ತಲೆ ನನ್ನ ಭುಜದ ಮೇಲೆ ವಾಲುವುದಿರಲಿ, ಆತ ನಿದ್ದೆ ಮಾಡಿದ್ದರೆ ಕೇಳಿ.

ಕ್ಯಾಮೆರಾ ಕಂಡೊಡನೆ ಶೋಕ ನಾಪತ್ತೆ

(ಅಕ್ಟೋಬರ್ 22, 2009 ರಂದು ಪ್ರಕಟವಾದ ಲೇಖನ).

ಮಾತಾಡ್ ಮಾತಾಡ್ ಮಲ್ಲಿಗೆ

ಡಾ. ರಾಜ್ ನಿಧನರಾಗಿ ಒಂದು ವರ್ಷವಾಗಿತ್ತು. ಮೊದಲ ಪುಣ್ಯತಿಥಿಯ ಮುನ್ನಾದಿನ ಕರ್ಟನ್ ರೇಸರ್ ಸ್ಟೋರಿ ಮಾಡಲು ರಾಜ್ ಸಮಾಧಿಗೆ ತೆರಳಿದ್ದೆ. ಸಮಾಧಿಯ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ಯತಿರಾಜ್ ಎಂದಿನಂತೆ ರಾಜ್ಯದ ವಿವಿಧ ಕಡೆಗಳಿಂದ ಬರುತ್ತಿರುವ ಜನತೆ, ಅಂಕಿ-ಸಂಖ್ಯೆ, ಸಮಾಧಿಗೆ ಇನ್ನೂ ಅಗತ್ಯವಿರುವ ಮೂಲಭೂತ ಸೌಕರ್ಯಗಳು ಇತ್ಯಾದಿಗಳ ಬಗ್ಗೆ ಮಾಹಿತಿ ನೀಡುತ್ತಿದ್ದರು. ಹೀಗೆ ಮಾತನಾಡುತ್ತ ಯತಿರಾಜ್, “ಸುಘೋಷ್, ಕಳೆದ ಒಂದು ತಿಂಗಳ ಹಿಂದೆ ಕೋಲಾರದಿಂದ ಒಬ್ಬ ಮನುಷ್ಯ ಬಂದಿದ್ದಾನೆ. ಹಳದಿ-ಕೆಂಪು ಬಣ್ಣದ ಸೈಕಲ್ ತುಳಿಯುತ್ತ ಇಲ್ಲೇ ಸಮಾಧಿಯ ಬಳಿಯೇ ಸುತ್ತಾಡುತ್ತಿರುತ್ತಾನೆ. ಡಾ. ರಾಜ್ ಅಭಿಮಾನಿಯಂತೆ. ಅವರ ಎಲ್ಲ ಚಿತ್ರಗಳನ್ನೂ ನೋಡಿದ್ದಾನಂತೆ. ಆದರೆ ಅವರು ತೀರಿಕೊಂಡಾಗಿನಿಂದ ಮನಸ್ಸಿಗೆ ತೀರ ನೋವಾಗಿ ಅದರಿಂದ ಹೊರಬರಲಾರದೆ ಮೌನವೃತ ಕೈಗೊಂಡಿದ್ದಾನಂತೆ. ಹೀಗೆ ಮೌನವೃತ ಕೈಗೊಳ್ಳುವದರ ಬದಲು ಅಣ್ಣಾವ್ರ ನೆನಪಿನಲ್ಲಿ ಸಮಾಜಕ್ಕೆ ಉಪಯೋಗವಾಗುವಂತಹದ್ದೇನಾದರೂ ಮಾಡು ಎಂದರೆ ಕೇಳಲೊಲ್ಲ. ಅವನ ಮೇಲೆ ಸ್ಟೋರಿ ಮಾಡಬಹುದು” ಎಂದರು. ಎಲಾ..ಎಲಾ…ಡಾ. ರಾಜ್ ತೀರಿಕೊಂಡಿದ್ದಕ್ಕೆ ಈ ಪಾರ್ಟಿ ಮೌನವೃತ ಮಾಡುತ್ತಿದ್ದಾನಲ್ಲ. ‘ಒಳ್ಳೆ’ ಸ್ಟೋರಿ ಮಾಡಬೇಕು ಎಂದುಕೊಂಡು ಆತನನ್ನು ಕರೆಸಿದೆ. ಕ್ಯಾಮೆರಾಮನ್ ಗೆ ಸ್ಟೋರಿ ಬ್ರೀಫ್ ಮಾಡಿ ಆತ ಸಮಾಧಿಯ ಬಳಿ ಸೈಕಲ್ ನಡೆಸುವುದು, ನಡೆದುಕೊಂಡು ಬರುವುದು, ಸಮಾಧಿ ಬಳಿ ಅಣ್ಣಾವ್ರ ಭಾವಚಿತ್ರವನ್ನು ನೋಡುತ್ತ ಜೋಲು ಮುಖ ಹಾಕಿಕೊಂಡು ಕುಳಿತಿರುವುದು ಹೀಗೆ ಹಲವು ಶಾಟ್ ಗಳನ್ನು ತೆಗೆಸಿಕೊಂಡೆ. ಸರಿ ಬೈಟ್ ಗಾಗಿ ನಿಂತುಕೊಂಡಾಗಲೇ ಸಮಸ್ಯೆಯಾಗಿದ್ದು. ಪಾರ್ಟಿ ಮೌನವೃತಧಾರಿ. ಹಾಗಾದರೆ ಬೈಟ್ ಹೇಗೆ ತೆಗೆಯುವುದು. ಇದಕ್ಕೆ ಮತ್ತೆ ಯತಿರಾಜನೇ ಮಧ್ಯಸ್ಥಿಕೆ ವಹಿಸಿದ. ಆತನನ್ನೂ, ಯತಿರಾಜ್ ನನ್ನು ನಿಲ್ಲಿಸಿ ಡಬಲ್ ಫ್ರೇಮ್ ಇಡಲು ಹೇಳಿದೆ. ನಾನು ಪ್ರಶ್ನೆ ಕೇಳುವುದು, ಮೌನವೃತಧಾರಿ ಕೈಸನ್ನೆ, ಬಾಯಿ ಸನ್ನೆ ಮಾಡುವುದು, ಯತಿರಾಜ್ ಅದನ್ನು ಅರ್ಥಮಾಡಿಕೊಂಡು ಮಾತನಾಡುವುದು ಹೀಗೆ ಸಾಗಿತ್ತು ನಮ್ಮ ಬೈಟ್ ನ ವೈಖರಿ. ನಾನು ಕೇಳಿದ್ದಕ್ಕೆ ಆ ಪಾರ್ಟಿ ಏನೇನೋ ಕೈಸನ್ನೆ ಮಾಡುತ್ತಿದ್ದ. ಅದು ಯತಿರಾಜನಿಗೂ ಎಷ್ಟು ಅರ್ಥವಾಗುತ್ತಿತ್ತೋ ಗೊತ್ತಿಲ್ಲ. ಆತನಿಗೆ ಅರ್ಥವಾಗಿದ್ದನ್ನು ಆತ ಬಂದಷ್ಟು ಹೇಳುತ್ತಿದ್ದ. ಈ ತಮಾಷೆ ನೋಡುತ್ತಿದ್ದ ಜನ ಸುತ್ತಲೂ ಜಮಾಯಿಸಿದ್ದರು. ನಂತರ ಅದ್ಯಾಕೋ ಆಸಾಮಿಗೆ ಕ್ಯಾಮೆರ ಮುಂದೆ ಹೀಗೆಲ್ಲ ಮಾಡುವುದು ತೀರ ಬೇಜಾರು ಎನಿಸಿರಬೇಕು. ಒಂದು ಸಂದರ್ಭದಲ್ಲಿ ತಾನು ಮಾಡಿದ ಕೈಸನ್ನೆಯನ್ನು ಯತಿ, ಸರಿಯಾಗಿ ಇಂಟಪ್ರಿಟ್ ಮಾಡುತ್ತಿಲ್ಲ ಎಂದು ಬೇಸರಿಸಿ ಧಡಾರ್ ಎಂದು ಮಾತನಾಡಲು ಆರಂಭಿಸಿಬಿಟ್ಟ. ಹ್ಹೆ..ಹ್ಹೆ..ಹ್ಹೆ….ಎಂದು ಮೊದಲು ನನ್ನ ಕ್ಯಾಮರಾಮನ್ ನಗಲಾರಂಭಿಸುತ್ತಿದ್ದಂತೆ ಸುತ್ತಲಿದ್ದ ಜನ ಹೋಎಂದು ಕಿರುಚಿದರು. ನನಗೆ ಏನೂ ಮಾಡಲು ತೋಚದೆ, ರಾಜ್ ಅಭಿಮಾನಿ ಮೌನವೃತಧಾರಿಯಾದ ಸ್ಟೋರಿಗೆ ಎಳ್ಳು ನೀರು ಬಿಟ್ಟು ಕಾರ್ ಏರಿದೆ.ಅಣ್ಣಾವ್ರ ಹೆಸರಿನಲ್ಲಿ ಏನೆನೆಲ್ಲ ಮಾಡುತ್ತಾರೆ ಅಲ್ವಾ?

ಕಾಂಡೋಮ್ ಖರೀದಿ : ಯಾಕಿಷ್ಟು ಮಡಿವಂತಿಕೆ?

(ಈ ಲೇಖನ ಪ್ರಕಟವಾಗಿದ್ದು ಅಕ್ಟೋಬರ್, 29 2009 ರಂದು)

what's my fault?

ಈ ಲೇಖನ ಓದುವ ಮೊದಲು ನಿಮ್ಮಲ್ಲಿ ಒಂದು ರಿಕ್ವೆಸ್ಟ್. ಲೈಂಗಿಕತೆ, ಕಾಮ, ಕಾಂಡೋಮ್  ಇತ್ಯಾದಿಗಳ ಬಗ್ಗೆ ಮಾತನಾಡಲು, ಚರ್ಚಿಸಲು ನಿಮಗೆ ಮುಜುಗರ ಎನಿಸುತ್ತದೆಯಾದರೆ ದಯವಿಟ್ಟು ಲೇಖನ ಓದಬೇಡಿ. ಈ ಲೇಖನ ಕೇವಲ ‘ಪುರುಷರಿಗೆ’ ಮಾತ್ರ. ಅಂದ ಹಾಗೆ ಭಾರೀ ಸೀಕ್ರೆಟ್ ಏನನ್ನೂ ಬರೆಯಲು ಹೋಗುತ್ತಿಲ್ಲ ಮತ್ತೆ ಹಾಂ…

ಜನಸಂಖ್ಯಾ ನಿಯಂತ್ರಣಕ್ಕಾಗಿ, ಸೇಫ್ ಸೆಕ್ಸ್ ಗಾಗಿ, ಏಡ್ಸ್ ತಡೆಗಟ್ಟುವುದಕ್ಕಾಗಿ, ಮಕ್ಕಳ ನಡುವಿನ ಅಂತರಕ್ಕಾಗಿ, ಹೀಗೆ ಹಲವು ಕಾರಣಗಳಿಗೆ ಸರ್ಕಾರ ನೇರವಾಗಿ ಕಾಂಡೋಮ್ ಪ್ರಮೋಟ್ ಮಾಡುತ್ತದೆ.(‘ಮಾತಾಡೋನೇ ಮಹಾಶೂರಆಡ್ ನೆನಪಾಯಿತೆ?). ಅಷ್ಟೇ ಅಲ್ಲ ವೈದ್ಯರು, ಆಸ್ಪತ್ರೆಗಳು, ತಜ್ಞರು ಕೂಡ ಕಾಂಡೋಮ್ ಬಳಕೆಯನ್ನು ಪ್ರೋತ್ಸಾಹಿಸುತ್ತಾರೆ. ಅನೇಕ ಶೌಚಾಲಯಗಳಲ್ಲಿ ಕಾಂಡೋಮ್ ವೆಂಡಿಂಗ್ ಮಷಿನ್ ಗಳನ್ನು ಸರ್ಕಾರವೇ ಇರಿಸಿದೆ. ಅಷ್ಟೇ ಅಲ್ಲ ಹಲವು ಕಡೆಗಳಲ್ಲಿ ಕಾಂಡೋಮ್ ಅನ್ನು ಉಚಿತವಾಗಿ ಹಂಚಲಾಗುತ್ತದೆ. (ಉಚಿತವಾಗಿ ಹಂಚುವ ಕಾಂಡೋಮ್ ಗಳ ಗುಣಮಟ್ಟದ ಚರ್ಚೆ ಸಧ್ಯ ಬೇಡ) ನಾಕೋ, ಕೆಎಸ್ಎಪಿಎಸ್ ನಂತಹ ಸಂಸ್ಥೆಗಳಂತೂ ಎಚ್ಐವಿ ತಡೆಗಟ್ಟಲು ನಡೆಸುವ ಪ್ರಚಾರದಲ್ಲಿ ಕಾಂಡೋಮ್ ಬಳಕೆಗೆ ಅಗ್ರ ಸ್ಥಾನ ನೀಡುತ್ತವೆ.

ಸನ್ನಿವೇಶ ಹೀಗಿದ್ದರೂ ನಮ್ಮ ಮೆಡಿಕಲ್ ಶಾಪ್ ನಡೆಸುವವರು ಮಾತ್ರ ಇನ್ನೂ ಯಾವುದೋ ಓಬಿರಾಯನ ಕಾಲದಲ್ಲಿದ್ದಾರೆ ಎನಿಸುತ್ತದೆ. ಮೆಡಿಕಲ್ ಶಾಪ್ ನವರಷ್ಟೇ ಅಲ್ಲ, ಗ್ರಾಹಕರು ಕೂಡ.

ಕಾಂಡೋಮ್ ಖರೀದಿ ಎಂಬುದು ಬಹುತೇಕ ಪುರುಷರಿಗೆ ಒಂದು ದೊಡ್ಡ ಸಮಸ್ಯೆ. ಇತರ ಗ್ರಾಹಕರು ಅದರಲ್ಲೂ ವಿಶೇಷವಾಗಿ ಮಹಿಳಾ ಗ್ರಾಹಕರು ಇಲ್ಲದಿರುವ ಸಂದರ್ಭದಲ್ಲಿ, ಮೆಡಿಕಲ್ ಶಾಪ್ ನಲ್ಲಿ ಮಹಿಳಾ ಸಹಾಯಕಿಯರು ಇಲ್ಲವೆಂದು ಖಾತ್ರಿ ಪಡಿಸಿಕೊಂಡು ಹೋಗಬೇಕು. ಮಾಲ್ ಗಳಲ್ಲಿ ಕೊಳ್ಳುವುದಾದರೋ, ಅದು ಬೇರೊಂದು ಸಮಸ್ಯೆ. ಆ ಕಾಂಡೋಮ್ ಗಳನ್ನು ಒಳ್ಳೆ ಚಾಕಲೇಟ್ ಪೆಪ್ಪರಮಿಂಟ್ ಇಟ್ಟಹಾಗೆ ಧಗ್ ಅಂದ ಎಲ್ಲರೆದುರೇ ಪ್ರದರ್ಶನಕ್ಕಿಟ್ಟುಬಿಟ್ಟಿರುತ್ತಾರೆ. ಆ ಕಡೆ ಈ ಕಡೆ ನೋಡಿ ತನ್ನನ್ನು ಯಾರೂ ಗಮನಿಸುತ್ತಿಲ್ಲ ಎಂದು ಖಾತ್ರಿ ಪಡಿಸಿಕೊಂಡು ಸೆಕೆಂಡಿನ ಸಾವಿರದ ಒಂದನೇ ಭಾಗದ ಸ್ಪೀಡಿನಲ್ಲಿ ಧಡಕ್ಕನೇ ಕೈ ಹಾಕಿ ಕಾಂಡೋಮ್ ಪ್ಯಾಕೆಟ್ಟನ್ನು ಬುಟ್ಟಿಗೆ ಎಸೆಯಬೇಕು. ಈ ಎಲ್ಲ ಆಧ್ವಾನದಲ್ಲಿ ಆ ಕಾಂಡೋಮ್ ನ ಬ್ರಾಂಡ್ ಯಾವುದು, ಅದರ ಸೈಜ್ ಏನು (ಏನು ಕಾಂಡೋಮ್ ಗಳಲ್ಲಿಯೂ ಸೈಜ್ ಇರುತ್ತಾ?), ಕಲರ್ ಏನು, ಅದು ಆಯಿಲ್ ಲೂಬ್ರಿಕೇಟೆಡ್ಡಾ ಅಥವಾ ಡ್ರೈ ಕಾಂಡೋಮಾ, ಬೆಲೆ ಎಷ್ಟು, ಪ್ಯಾಕೆಟ್ಟಿನಲ್ಲಿ ಎಷ್ಟು ಕಾಂಡೋಮ್ ಗಳಿವೆ ಇತ್ಯಾದಿಯೆಲ್ಲ ನೋಡಲು ಸಮಯವೆಲ್ಲಿರುತ್ತದೆ. ಹೀಗೆ ಸಾಗುತ್ತದೆ ಪುರುಷರ ಸಮಸ್ಯೆಗಳು.

ಇನ್ನೂ ಮೆಡಿಕಲ್ ಶಾಪ್ ನಲ್ಲಿ ಖರೀದಿಸುವುದಂತೂ ಸಾಹಸವೇ ಸರಿ. ಯಾರೂ ಇಲ್ಲದಿದ್ದಾಗ ಹೋಗಿ ಕೇಳಿದರೂ, ಆ ಆಸಾಮಿ ನಾವು ಕಾಂಡೋಮ್ ಕೇಳುತ್ತಿದ್ದಂತೆಯೆ ದೆವ್ವ ಬಡಿದಂತಾಡುತ್ತಾನೆ. ಆ ಬ್ರಾಂಡ್ ಇದೆಯಾ, ಈ ಬ್ರಾಂಡ್ ಇದೆಯಾ ಎಂದು ನೀವು ಕೇಳಲು ಆರಂಭಿಸಿದಿರೋ, ಸಾರ್ ಒಳಗೆ ಬನ್ನಿ. ಇಲ್ಲಿ ಡ್ರಾವರ್ ನಲ್ಲಿ ಸಾಕಷ್ಟು ಇದೆ. ಬೇಕಾದ್ದು ನೋಡಿ ಎಂದು ನಿಮ್ಮನ್ನು ನೇರವಾಗಿ ಅಂಗಡಿಯೊಳಗೆ ಆಹ್ವಾನಿಸಿ ಬಿಡುತ್ತಾನೆ. ಕೆಲವು ಮೆಡಿಕಲ್ ಶಾಪ್ ನವರಂತೂ ನಾವು ಕಾಂಡೋಮ್ ಕೇಳಿ ಮಹಾಪರಾಧ ಮಾಡಿಬಿಟ್ಟಿದ್ದೇವೆ ಎಂಬಂತೆ ನಮ್ಮನ್ನು ನೋಡುತ್ತಾರೆ. ಅಲ್ರೀ ಮಹಾರಾಯರೇ, ನಿಮಗೆ ಅದನ್ನು ಮಾರಲು ಮುಜುಗರ ಎಂದರೆ, ಅಂಗಡಿಯಲ್ಲಿ ಯಾಕ್ರೀ ಇಟ್ಟುಕೊಳ್ತೀರಿ?

ಈ ಎಲ್ಲ ರೀತಿಯ ಕನ್ ಪ್ಯೂಶನ್ ಗಳಾಗುವುದಕ್ಕೆ ಬಹುಶಃ ಇನ್ನೂ ಕಾಂಡೋಮ್ ಬಗ್ಗೆ ಇರುವ ಟಾಬೂ ಹಾಗೂ ಸ್ಟಿಗ್ಮಾ ಕಾರಣವೆನಿಸುತ್ತದೆ. ಈಗ ಹೇಳಿ ಮಾತಾಡೋನೆ ಮಹಾಶೂರ ಅಲ್ವೆ?

ಜನತಾ ದರ್ಶನ

(ಅಗಸ್ಟ್ 20, 2009 ರಂದು ಪ್ರಕಟವಾದ ಲೇಖನ)

ನನ್ನ ಪ್ರೀತಿಯ ಅಭಿಮಾನಿ ದೇವರುಗಳೆ...

ರಸ್ತೆಯಲ್ಲಿ, ಅಂಗಡಿಗಳಲ್ಲಿ, ಹೋಟೆಲ್ ಮುಂತಾದ ಸಾರ್ವಜನಿಕ ಸ್ಥಳಗಳಲ್ಲಿ ನನ್ನನ್ನು ದುರುಗುಟ್ಟಿಕೊಂಡು ನೋಡಿ ಹೋಗುವುದು ಸಾಮಾನ್ಯ. ಪತ್ರಕರ್ತನಾಗಿ ಐದು ವರ್ಷದಲ್ಲಿ ಪಿಟಿಸಿಗಳನ್ನು ನೀಡಿ ಎಷ್ಟು ಜನರಿಗೆ ನನ್ನ ಮುಖ ಪರಿಚಯವಾಗಿದೆಯೋ ಗೊತ್ತಿಲ್ಲ. ಆದರೆ ಮುಕ್ತ ಮುಕ್ತ ದಲ್ಲಿ ಆಕ್ಟಿಂಗ್ ಶುರುವಾದ ಮೇಲಂತೂ ಈ ದುರುಗುಟ್ಟುವಿಕೆ ಸಾಮಾನ್ಯವಾಗಿದೆ. ಇಂತಹ ಜನರಲ್ಲಿ ಎರಡು ವಿಧ. ಒಬ್ಬರು ಕೇವಲ ದುರುಗುಟ್ಟಿಕೊಂಡು ನೋಡಿ ತಮ್ಮ ಪಾಡಿಗೆ ತಾವು ಹೋಗಿಬಿಡುವವರು. ಮತ್ತೊಂದು ಕೆಟೆಗರಿಯ ಜನ, ಫಕ್ಕನೆ ನನ್ನನ್ನು ನಿಲ್ಲಿಸಿ “ಸಾರ್ ನೀವು ಸೀರಿಯಲ್ ನಲ್ಲಿ ಮಾಡ್ತೀರಲ್ಲವಾ?” ಅಥವಾ “ನೀವು ಮುಕ್ತ ಮುಕ್ತದಲ್ಲಿ ಆಕ್ಟ್ ಮಾಡ್ತೀರಲ್ಲವಾ?” ಎಂದು ಆರಂಭಿಸಿ, ಮುಂದಿನ ಕಥೆ ಹೇಳಿ ಎಂದು ಪೀಡಿಸುವವರು. ಈ ಥರದ ಜನ, ಯಾವುದೋ ಪಾತ್ರಕ್ಕೆ ಅನ್ಯಾಯವಾಗುತ್ತಿದೆ ಹಾಗಾಗಬಾರದು, ನೋಡಿಕೊಳ್ಳಿ ಎಂದು ಹುಕುಂ ಜಾರಿ ಮಾಡುತ್ತಾರೆ. ತಮ್ಮ ಪ್ರಕಾರ ಶಾಂಭವಿಗೆ ಮದುವೆಯಾಗಬೇಕು, ಶಂಕರಮೂರ್ತಿಗೆ ಯಾರಾದರೂ ಬಾರಿಸಬೇಕು, ಆನಂದರಾಜ್ ನಂದೀಪುರ್ ಬೈ ಇಲೆಕ್ಷನ್ ನಲ್ಲಿ ಗೆಲ್ಲಬೇಕು, ಮಧುಗೆ ಕಲ್ಯಾಣಿಗಿಂತ ವೈಜಯಂತಿಯೇ ಹೆಚ್ಚು ಸೂಟೆಬಲ್ ಇತ್ಯಾದಿ ಇತ್ಯಾದಿ ಪುಕ್ಕಟೆ ಸಲಹೆ ನೀಡುತ್ತಾರೆ. ನಾನು ಹ್ಹೆ ಹ್ಹೆ ಹ್ಹೆ ಎಂದು ತಲೆಯಲ್ಲಾಡಿಸಿ ಆದಷ್ಟು ಬೇಗ ಅಲ್ಲಿಂದ ಎಸ್ಕೇಪ್ ಆಗುತ್ತೇನೆ. ಮೊದಮೊದಲು ಈ ಅನುಭವಗಳು ವಿಶೇಷ ಎನಿಸುತ್ತಿದ್ದವು. ಇದು ಹೆಚ್ಚಾದಂತೆಲ್ಲ ನನ್ನಲ್ಲಿ ಕೊಂಚ ಮಟ್ಟಿಗಿನ ಅಹಂಕಾರವೂ ಬೆಳೆಯಿತೆನ್ನಿ...ಆದರೆ ಇತ್ತೀಚೆಗೆ ಬೆರೆಯದೇ ಅನುಭವವಾಯಿತು.

ಯಾವುದೋ ಕಾರಣಕ್ಕೆ ಆಸ್ಪತ್ರೆಗೆ ಹೋಗಿದ್ದೆ. ಡಾಕ್ಟರ್ ದಾರಿ ಕಾಯುತ್ತ ಅಲ್ಲೇ ಇದ್ದ ಚೇರಿನಲ್ಲಿ ಕುಳಿತುಕೊಂಡೆ. ನನ್ನ ಪಕ್ಕದಲ್ಲಿದ್ದ ವ್ಯಕ್ತಿ ರಾಗ ಎಳೆಯಿತು. “ಸಾರ್, ನೀವು ಸೀರಿಯಲ್ ನಲ್ಲಿ ಆಕ್ಟ್ ಮಾಡ್ತೀರಲ್ಲವಾ…”

“ಹೌದು” ಎಂದೆ.

ವ್ಯಕ್ತಿ ಸುಮ್ಮನಾಯಿತು. 10 ನಿಮಿಷ ಕಳೆದಿರಬೇಕು “ಸಾರ್, ನಿಮ್ಮ ಊರು ಯಾವುದು” ಎಂದಿತು.

“ಕೊಪ್ಪ” ಎಂದೆ.

ವ್ಯಕ್ತಿ ಸುಮ್ಮನಾಯಿತು.

ನಾನು, “ನಿಮ್ಮ ಊರು ಯಾವುದು” ಎಂದು ಪ್ರಶ್ನಿಸಿದೆ.

“ಬೆಂಗಳೂರೇ” ಎಂದು ಉತ್ತರಿಸಿ ಮತ್ತೆ ಸುಮ್ಮನಾಯಿತು.

“ಏನು ಮಾಡಿಕೊಂಡಿದ್ದೀರಿ?” ಕೇಳಿದೆ.

“ಬಿಸಿನೆಸ್” ಉತ್ತರಿಸಿ ಮತ್ತೆ ಸುಮ್ಮನಾಯಿತು.

ಈ ಬೆಂಗಳೂರಿಗರಿಗೆ ಸ್ಪಲ್ಪ ಕೊಬ್ಬು. ತೀರ ಲೆವೆಲ್ ಮೆಂಟೇನ್ ಮಾಡುತ್ತಾರೆ. ಕಲಾವಿದನೊಬ್ಬ ಪಕ್ಕದಲ್ಲಿ ಬಂದು ಕುಳಿತುಕೊಂಡಿದ್ದರೂ ಸೀರಿಯಲ್ ಬಗ್ಗೆಯಾಗಲಿ, ನನ್ನ ಬಗ್ಗೆಯಾಗಲಿ ಕೇಳುತ್ತಲೇ ಇಲ್ಲವಲ್ಲ ಎಂದು ಅನಿಸಿತು. ಇದಲ್ಲದೆ ನಾನೇ ಮುಂದಾಗಿ ಮಾತನಾಡಿಸುತ್ತಿದ್ದರೂ ಚುಟುಕಾಗಿ ಮಾತನಾಡಿ, ಭಾರೀ ಸ್ಮಾರ್ಟ್ ಆಗಿ ವರ್ತಿಸುತ್ತಿದ್ದಾನೆ, ಸರಿಯಾಗಿ ಮಾತನಾಡಲು ಈ ಮನುಷ್ಯನಿಗೇನು ಧಾಡಿ ಎಂದುಕೊಂಡೆ. ಬೆಂಗಳೂರಿನಂತಹ ಊರಿನಲ್ಲಿ ಹಾದಿಗೊಬ್ಬರು ಬೀದಿಗಿಬ್ಬರು ಟಿವಿ ಕಲಾವಿದರು, ಫಿಲ್ಮ್ ಹಿರೋಗಳು ತಿರುಗಾಡುವುದರಿಂದ ಇಲ್ಲಿನ ಜನರಿಗೆ ಕ್ರೇಜ್ ಸ್ವಲ್ಪ ಕಡಿಮೆಯೇ. ಹಿತ್ತಲ ಗಿಡ ಮದ್ದಲ್ಲವಲ್ಲ. ಅದೂ ಅಲ್ಲದೆ ಬೆಂಗಳೂರಿಗರು ಸೋ ಕಾಲ್ಡ್ ಸೋಫಿಸ್ಟಿಕೇಟೆಡ್ ಜನ. ತಾವೇ ಮುಂದಾಗಿ ಮಾತನಾಡಿಸಿದರೆ ಮರ್ಯಾದೆಗೆ ಕಮ್ಮಿ ಎಂದು ಭಾವಿಸುವವರು. ಈ ವ್ಯಕ್ತಿ ಕೂಡ ಹಾಗೆಯೇ ಹೆಡ್ ವೇಟ್ ನ ವ್ಯಕ್ತಿಯಾಗಿರಬಹುದು ಎಂದೆಲ್ಲ ಯೋಚಿಸತೊಡಗಿದೆ.

ಇತ್ತೀಚೆಗೆ ಬಾಗಲಕೋಟೆಗೆಂದು ಸಂವಾದಕ್ಕೆ ಹೋದಾಗ, ಜನ ನಮ್ಮನ್ನು ಗುರುತಿಸಿದ್ದ ಪರಿ ನೋಡಿ ಬೆಂಗಳೂರಿಗರು ತೀರ ಸಪ್ಪೆ ಎಂದೆನಿಸಿತ್ತು.

ನಾನು ಸುಮ್ಮನಾಗೋಣ ಎಂದುಕೊಂಡರೂ, ನನ್ನಲ್ಲಿದ್ದ ಪತ್ರಕರ್ತ ಸುಮ್ಮನಿರಬೇಕಲ್ಲ. ಮತ್ತೆ ಪಟ್ಟು ಬಿಡದೆ, ವ್ಯಕ್ತಿಯ ಜೊತೆ ಮಾತಿಗಾರಂಭಿಸಿದೆ.

“ಮುಕ್ತ ಮುಕ್ತ ಹೇಗೆನ್ನಿಸುತ್ತಿದೆ?”.

“ಚೆನ್ನಾಗಿ ಬರ್ತಿದೆ ಸಾರ್..” ವ್ಯಕ್ತಿ ಸುಮ್ಮಗಾಯಿತು.

“ನಿಮಗೆ ಯಾವ ಪಾತ್ರ ಇಷ್ಟ?” ಮತ್ತೆ ಪ್ರಶ್ನಿಸಿದೆ.

“ಸಾರ್ ತಪ್ಪು ತಿಳಿಯಬೇಡಿ. ಈಗ ಅರ್ಧ ಗಂಟೆಯ ಮೊದಲಷ್ಟೇ ಹಲ್ಲು ತೆಗೆಸಿಕೊಂಡಿದ್ದೇನೆ. ಹೀಗಾಗಿ ಹೆಚ್ಚು ಮಾತನಾಡಲು ಆಗುತ್ತಿಲ್ಲ” ಎಂದು ಉತ್ತರಿಸಿ ವ್ಯಕ್ತಿ ಸುಮ್ಮನಾಯಿತು.

ತಾಮ್ರದ ಉದ್ಧರಣೆ, ತಟ್ಟೆ, ಲೋಟಕ್ಕೆ ಚಿಕನ್ ಪಾಕ್ಸ್

ದೇವರು

ದೇವರ ಮೂರ್ತಿಗಳನ್ನು ಹೊರತು ಪಡಿಸಿ ದೇವರ ಕೋಣೆಯಲ್ಲಿದ್ದ ಎಲ್ಲ ಸಾಮಾನುಗಳನ್ನು ಅಡಿಗೆ ಮನೆಯಲ್ಲಿನ ಸಿಂಕ್ ಹತ್ತಿರ ತಂದೆ. ಊದುಬತ್ತಿಯ ಸ್ಟಾಂಡ್ ಮೇಲೆ ಬೂದಿ ಉದುರಿ ಅದು ಮಾಸಿಹೋಗಿತ್ತು. ನಿಲಾಂಜನಕ್ಕೆ ಜಿಡ್ಡು ಹಿಡಿದಿತ್ತು. ಧೂಪವಿಡುವ ಬಿಲ್ಲೆಯನ್ನು ಡಿಸ್ಪೋಸ್ ಮಾಡಿದರೆನೇ ಚೆನ್ನ ಎನಿಸಿತು. ತಾಮ್ರದ ಉದ್ಧರಣೆ, ತಟ್ಟೆ, ಲೋಟಕ್ಕೆ ಚಿಕನ್ ಪಾಕ್ಸ್ ಆಗಿತ್ತು. ಅರಿಶಿನ-ಕುಂಕುಮ ಇಡುವ ಬೆಳ್ಳಿಯ ಬಟ್ಟಲುಗಳು ಬೆಳ್ಳಿಯವೇ ಎಂಬುದರ ಬಗ್ಗೆ ಸಂಶಯ ಬರುತ್ತಿತ್ತು. ಗಂಟೆ ಮಾತ್ರ ಫಳಫಳನೇ ಹೊಳೆಯುತ್ತ, ತನ್ನನ್ನು ಯಾರೂ ಬಳಸಿಯೇ ಇಲ್ಲ ಎಂದು ಸಾರಿ ಹೇಳುತ್ತಿತ್ತು.

ನಾಗಂದಿಗೆ ಮೇಲಿನ ಕೆಂಪು ಡಬ್ಬಿ ತೆಗೆದು, ಅದರಲ್ಲಿ ಉದ್ದ ಚಮಚ ಹಾಕಿ ಒಂದಷ್ಟು ಪೀತಾಂಬರಿಯನ್ನು ಸುರುವಿಕೊಂಡೆ. ನಾಳೆ ಏರ್ ಟೆಲ್ ಬಿಲ್ ತುಂಬಬೇಕು. ಮೊದಲು ಬೆಳ್ಳಿಯ ನಿಲಾಂಜನ ಕೈಗೆತ್ತಿಕೊಂಡೆ.ಅದರಲ್ಲಿದ್ದ ಬತ್ತಿಯ ಕಾಲು ಹಿಡಿದೆಳೆದು ಕಸದ ಬುಟ್ಟಿಗೆ ಬಿಸಾಕಿ, ನಿಲಾಂಜನವನ್ನು ನಳದ ಕೆಳಗೆ ಹಿಡಿದೆ. ಈ ಬಾರಿಯ ಹಾಯ್ ಬೆಂಗಳೂರಿನಲ್ಲಿಯಾದರೂ ನನ್ನ ಆರ್ಟಿಕಲ್ ಬರಲಿದೆಯೆ?. ಓ ಮನಸೇ ನೀರಸವಾಗುತ್ತಿದೆಯಲ್ಲ….  ಬಲಗೈ ಬೆರಳುಗಳಿಗೆ ಕೊಂಚವೇ ಪೀತಾಂಬರಿ ಮೆತ್ತಿಸಿ ನಿಲಾಂಜನಕ್ಕೆ ಬಳಿದೆ. ಎರಡೂ ಹೆಬ್ಬಟ್ಟುಗಳಿಂದ ಚೆನ್ನಾಗಿ ತಿಕ್ಕಿದೆ. ಪಕ್ಕಕ್ಕಿಟ್ಟೆ.

ತಾಮ್ರದ ಉದ್ಧರಣೆ, ತಟ್ಟೆ, ಲೋಟಕ್ಕೆ ಗಸಗಸಗಸನೆ ಪೀತಾಂಬರಿ ಉಜ್ಜಿದೆ. ಸುಮಾರು ಹೊತ್ತು ಉಜ್ಜುತ್ತಲೇ ಇದ್ದೆ. ಚಿಕನ್ ಪಾಕ್ಸ್ ಹೋಗಲಿಲ್ಲ. ಕಪಾಟಿನಲ್ಲಿದ್ದ ಹಳೆಯ ಟೂತ್ ಬ್ರಶ್ ತಂದೆ. ಪೀತಾಂಬರಿಯಲ್ಲಿ ಅದ್ದಿ ಉಜ್ಜಿದೆ. ರೋಗ ವಾಸಿಯಾಯಿತು. ಮೊನ್ನೆ ಮಟಮಟ ಮಧ್ಯಾಹ್ನ ಪ್ರಯಾಣಿಸುತ್ತಿರಬೇಕಾದರೆ ಸ್ಲೀಪರ್ ಬಸ್ಸಿನಲ್ಲಿ ಎಲ್ಲರೂ ನಿದ್ರಿಸುತ್ತಿದ್ದಾಗ ನಾನೂ ಅವಳು ಇಬ್ಬರೇ ಎಚ್ಚರವಾಗಿದ್ದೆವು. ವಿಪರೀತ ಎಸಿಯಿಂದಾಗಿ ಇಬ್ಬರಿಗೂ ನಿದ್ದೆ ಬರುತ್ತಿರಲಿಲ್ಲ. ಇಬ್ರೂ ಕ್ಯಾಬಿನ್ ಗೆ ಹೋಗಿ ಬೈಟು ಸಿಗರೇಟು ಸೇದಿದ್ದು ಎಷ್ಟು ಚೆನ್ನಾಗಿತ್ತಲ್ಲ. ತಾಮ್ರದ ವಹಿವಾಟೇ ಹಾಗೇ. ಎಷ್ಟು ತೋಳೆದರೂ ನಂತರ ಒರೆಸಿಯೇ ಇಡಬೇಕು. ಇಲ್ಲದಿದ್ದರೆ, ಮತ್ತೆ ಕಲೆ ಉಳಿದುಬಿಡುತ್ತದೆ. ಟರ್ಕಿಸ್ ಟಾವೇಲಿನಿಂದ ಚೆನ್ನಾಗಿ ಒರೆಸಿದೆ. ಫಳಫಳನೆ ಹೊಳೆಯುವಂತೆ ಮಾಡಿದೆ.

ಹಿತ್ತಾಳೆಯ ಊದುಬತ್ತಿ ಸ್ಟಾಂಡನ್ನು ಡಿಟ್ಯಾಚ್ ಮಾಡಿದೆ. ಸಾವಯವ ಕೃಷಿಗೆ ಉತ್ತೇಜನ ನೀಡಲು…….ಮತ್ತೆ ಬ್ರಷ್ಷನ್ನು ಪೀತಾಂಬರಿಯಲ್ಲಿ ಅದ್ದಿ ದಶದಿಕ್ಕುಗಳಿಂದಲೂ ತಿಕ್ಕಿದೆ. ಸ್ಟಾಂಡ್ ಮೇಲೆ ಮಾಡಿದ್ದ ಡಿಸೈನ್ ನಿಂದಾಗಿ ಸಂದಿಯಲ್ಲೆಲ್ಲ ಜಿಡ್ಡು ಮೆತ್ತಿಕೊಂಡಿತ್ತು. ಮತ್ತಷ್ಟು ಪೀತಾಂಬರಿ ಅಂಟಿಸಿದೆ. ಅವನು ಒಂದು ಕೋಟಿ ಮಾಡಿಕೊಂಡನಂತೆ. ನಾವು ಪ್ರೆಸ್ ಕಾನ್ಫರೆನ್ಸಿನಲ್ಲಿ ಪೆನ್ನು, ಪ್ಯಾಡು ತೆಗೆದುಕೊಂಡರೆ ಈ ಹಲ್ಕಟ್ ಮ್ಯಾನೇಜ್ ಮೆಂಟಿಗೆ ಎಕ್ಸಪ್ಲನೇಶನ್ ಕೊಡಬೇಕು. ಸರಿಹೋಯಿತು. ಜಿಡ್ಡು ಎಲ್ಲ ಹೋಗಿ ಸರಿಹೋಯಿತು. ಸ್ಟಾಂಡ್ ಕೂಡ ಮೊದಲಿನಂತಾಯಿತು.

ಅಷ್ಟರಲ್ಲಿ ಪೀತಾಂಬರಿ ಮುಗಿಯಿತು. ಮತ್ತಷ್ಟು ಪೀತಾಂಬರಿ ಸುರಿದುಕೊಂಡೆ. ಅರಿಶಿನ-ಕುಂಕುಮದ ಬೆಳ್ಳಿಯ ಬಟ್ಟಲುಗಳು ತೇಜ ಕಳೆದುಕೊಂಡಿದ್ದವು. ಮೊದಲು ಸೋಪಿನಿಂದ ತೊಳೆದೆ. ಅದಗ್ವಾಡಿ ಅದ ಸೂರು ದಿನವೆಲ್ಲ ಬೇಜಾರು ಹಾಡು ಚೆನ್ನಾಗಿದೆ. ಶಂಕರ್ ನಾಗ್ ವಾಯ್ಸ್ ಸೂಪರ್. ಅಟಲ್ ಬಿಹಾರಿ ವಾಜಪೇಯಿ ವಯಸ್ಸೇಷ್ಟು ಈಗ? ನಂತರ ಮತ್ತೆ ಗಸಗಸನೆ ಪೀತಾಂಬರಿ ತಿಕ್ಕಿ ಬಟ್ಟಲುಗಳು ಬೆಳ್ಳಿಯವೇ ಎಂಬ ಕುರಿತಾದ ಸಂಶಯವನ್ನು ದೂರ ಮಾಡಿದೆ.

ಧೂಪವಿಡುವ ಬಿಲ್ಲೆಯನ್ನು ಕಸದ ಬುಟ್ಟಿಗೆ ಎಸೆದೆ. ಗಂಟೆಯನ್ನು ಕೇವಲ ಒರೆಸಿದೆ.

ಪೂಜೆಯ ಎಲ್ಲ ತಯಾರಿ ಆಗಿತ್ತು. ಎಲ್ಲ ಸಾಮಾನುಗಳನ್ನು ತೆಗೆದುಕೊಂಡು ದೇವರ ಕೋಣೆ ಪ್ರವೇಶಿಸಿದೆ. ದೇವರ ಮೂರ್ತಿಗೆ ಅಲಂಕಾರ ಮಾಡಿದೆ. ದೀಪ ಬೆಳಗಿದೆ. ಊದುಬತ್ತಿ, ಧೂಪ ಹಚ್ಚಿದೆ. ಮಂತ್ರ ಹೇಳಿದೆ. ನೈವೇದ್ಯ ತೋರಿಸಿದೆ. ದೇವರಿಗೆ ಬಾಗಿ ನಮಸ್ಕರಿಸಿದೆ. ತಲೆಯೆತ್ತಿ ನೋಡಿದೆ. ದೇವರು ಕಾಣಿಸಲಿಲ್ಲ.

(ಅಗಸ್ಟ್ 29, 2009 ರಂದು ಪ್ರಕಟವಾಗಿದ್ದು)

ಹಲ್ಲಿಗೊಂದು ಸೆಂಡ್ ಆಫ್ ….

(ಜುಲೈ 30, 2009 ರಂದು ಪ್ರಕಟವಾಗಿದ್ದ ಲೇಖನ. ಇದು ವಿಜಯ ಕರ್ನಾಟಕದಲ್ಲಿಯೂ ಪ್ರಕಟವಾಗಿತ್ತು)

ಪ್ರೀತಿಯ ಹಲ್ಲೆ...

ಪ್ರೀತಿಯ ಹಲ್ಲೇ…,

ಹೌದು ನಿನಗೆ ಹಲ್ಲು ಅಂತಲೇ ಕರೆಯಬೇಕು. ಯಾವ ಹಲ್ಲು ಎಂದು ಕೇಳಿದರೆ ನನ್ನ ಬಳಿ ಉತ್ತರವಿಲ್ಲ. ಏಕೆಂದರೆ ನಾನು ನಿಮಗೆ ಇದುವರೆಗೆ ಹೆಸರೇ ಇಟ್ಟಿಲ್ಲ. ಹಾಗೇನಾದರು ಆದರೆ ನಾನು ನಿಮಗೆ ೩೨ ಹೆಸರು ಹುಡುಕಬೇಕು. ಹುಡುಕುವುದೇನು ದೊಡ್ಡ ಕೆಲಸವಲ್ಲ. ಆದರೆ ಯಾಕೋ ನಿಮಗೆ ಹೆಸರಿಡಲು ನನಗೆ ಹೊಳೆಯಲೇ ಇಲ್ಲ. ನನ್ನಲ್ಲಿ ಕಣ್ಣು, ಕಿವಿ, ಮೂಗು, ಕೈ, ಕಾಲು, ಹೊಟ್ಟೆ ಹೀಗೆ ಪ್ರತಿಯೊಂದು ಅಂಗಕ್ಕೆ ಅವರದೇ ಆದ identity ಇದೆ. ಆದರೆ ನಿಮಗೆ ನೀವೆಲ್ಲರೂ ಸೇರಿ ‘ ಹಲ್ಲುಗಳು’, ಅಷ್ಟೇ. ಕೆಲವರಿಗೆ ದವಡೆ, ಕೋರೆ ಎಂಬ ಹೆಸರಿದ್ದರೂ ನೀವು ಯಾವ ದವಡೆ ಯಾವ ಕೋರೆ ಎಂಬುದಕ್ಕೆ ಕೆರೆದುಕೊಳ್ಳಬೇಕಾಗುತ್ತದೆ. ತಲೆಯನ್ನು. ಹೀಗಿದ್ದೂ ನಿನಗೆ ಡಾ. ತ್ರಿವಿಕ್ರಂ ಹೆಸರಿಟ್ಟಿದ್ದು, ಸೆಕಂಡ್ ಫ್ರೊಂ ದಿ ರೈಟ್ ಟಾಪ್.

ಅಂತೂ ನನ್ನ ನಿನ್ನ ಇಷ್ಟು ವರ್ಷಗಳ ಸಂಬಂಧ ಮುಗಿದಿದೆ. ನೀನು ಹುಟ್ಟಿದಾಗ ಬಹುಶಃ ನನಗೆ ಮೂರೋ ನಾಲ್ಕೋ ವರ್ಷವಿರಬೇಕು. ಆದರೆ ನಿನ್ನಾಣೆಗೂ ನೀನು ಹುಟ್ಟಿದ್ದು ನನಗೆ ತಿಳಿಯಲಿಲ್ಲ. ಎದುರಿನ ಕೆಲವು ಹಲ್ಲುಗಳನ್ನು ಬಿಟ್ಟರೆ, ಒಳಗಿನ ಹಲ್ಲುಗಳಿಗೆ ನನಗೆ ಸಂಬಂಧವೇ ಇರಲಿಲ್ಲ. Actually, ಒಳಗಿನ ಹಲ್ಲುಗಳೇ ಎಲೆ ಮರೆಯ ಕಾಯಿಯ ಹಾಗೆ ಗಿರಣಿಯಂತೆ ಕರಕರ ದುಡಿಯುತ್ತಿದ್ದರೂ ಅವು ನನ್ನ ಬದುಕಿನಲ್ಲಿ ಯಾವುದೇ ಭಾವನಾತ್ಮಕ ಅಸ್ತಿತ್ವ ಹೊಂದಿರಲೇ ಇಲ್ಲ.

ಆದರೆ ಈಗ ನಿಮ್ಮಗಳ imporatance ಗೊತ್ತಾಗುತ್ತಿದೆ. ಡಾ. ತ್ರಿವಿಕ್ರಂ ತಮ್ಮ ಗೌಸ್ ಹಾಕಿದ ಕೈಗಳಲ್ಲಿ ಇಕ್ಕಳ ಹಿಡಿದು ನಿನ್ನನ್ನು ನನ್ನಿಂದ ಬೇರ್ಪಡಿಸಿ ರಕ್ತಸಿಕ್ತವಾಗಿದ್ದ ನಿನ್ನ ದೇಹವನ್ನು ‘ಕಣ್’ ಎಂದು ಟ್ರೇಯಲ್ಲಿ  ಹಾಕಿದಾಗ ನನ್ನ ಕಣ್ಣು ತುಂಬಿ ಬಂದಿತ್ತು. ನೋವಿನಿಂದ ಹೀಗಾಗಿದೆ ಎಂದು ಡಾ. ತ್ರಿವಿಕ್ರಂ ಅಂದುಕೊಂಡಿರಬೇಕು. ಆದರೆ ಅವರಿಗೇನು ಗೊತ್ತು, ನನ್ನ ನಿನ್ನ ಅಗಲಿಕೆಯ ದುಃಖ.
ನನ್ನ ನಿನ್ನ ಸಂಬಂಧ ಸುಮಾರು ೨೪-೨೫ ವರ್ಷಗಳದ್ದು ಅಲ್ಲವೇ? ಇಷ್ಟು ವರ್ಷ ನೀನು ನನ್ನೋಡನಿದ್ದೆ . ಆದರೆ ನಿನ್ನ ಇರುವಿಕೆ ಗೊತ್ತಗುತ್ತಿದ್ದುದು ಮಾತ್ರ ಕೆಲವೇ ಕೆಲವು ಸಂದರ್ಭಗಳಲ್ಲಿ. ಎಂಟು ಒಂಬತ್ತೆನೆಯ ಕ್ಲಾಸಿನಲ್ಲಿ ಪರೀಕ್ಷೆಯ ದಿನವೇ ನೀನು ಭಯಂಕರವಾಗಿ ತೊಂದರೆ ಕೊಡಲು ಆರಂಭಿಸುತ್ತಿದೆ. ನೀನು ಹಾಗೆಯೇ ಇದ್ದರೂ, ಒಸಡು ಹಾಗೂ ಗಲ್ಲಕ್ಕೆ ಬಾವು ಬರಲು ಕಾರಣವಾಗುತ್ತಿದ್ದೆ. ಸುಪುತ್ರನ ಬಾತಿದ ಮುಖವನ್ನು ನೋಡುತ್ತಿದ್ದ ಅಪ್ಪ-ಅಮ್ಮ “ಇರಲಿ ಬಿಡು. ಪರೀಕ್ಷೆ ಮುಂದಿನ ಬಾರಿ ಬರೆದರಾಯಿತು” ಎನ್ನುತ್ತಿದ್ದರು. ಒಂದೆರಡು ದಿನಗಳ ಕಾಲ ನನ್ನನ್ನು ನರಳಿಸಿ ಪರೀಕ್ಷೆ ಮುಗಿಯುತ್ತಿದ್ದ ಹಾಗೆ ಸರಿಯಾಗಿ ಬಿಡುತ್ತಿದ್ದೆ. ಮತ್ತೆ ನಿನ್ನ ಇರುವಿಕೆ ಗೊತ್ತಾಗುತ್ತಿದ್ದುದು ಮುಂದಿನ ಪರೀಕ್ಷೆಯ ವೇಳೆಗೆ!!

ಡಾ. ತ್ರಿವಿಕ್ರಂ ನಿನ್ನನ್ನು ಉಳಿಸಿಕೊಳ್ಳಲು ತುಂಬ ಪ್ರಯತ್ನ ಪಟ್ಟರು. ಮೂರು ಬಾರಿ ರೂಟ್ ಕೆನಾಲ್ ಮಾಡಿದರೂ, ಎಸಿ ಕ್ಲಿನಿಕ್ ನಲ್ಲಿ ಅವರ ಹಣೆಯ ಬೆವರು ಕಿತ್ತು ಬಂತೇ ಹೊರತು ಅವರಿಗೆ ನಿನ್ನ ರೂಟ್ ವರೆಗೆ ತಲುಪಲು ಆಗಲೇ ಇಲ್ಲ. “ಲಿಸನ್, ಐ ಥಿಂಕ್ ಇಟ್ ಇಸ್ ಕಂಪ್ಲೀಟ್ಲಿ ಬ್ಲಾಕ್ಡ್. ದೆರಿಸ್ ನೋ ಪಾಯಿಂಟ್ ಇನ್ ವೇಸ್ಟಿಂಗ್ ಟೈಮ್ ಅಂಡ್ ಮನಿ. ವಿ ವಿಲ್ extract ಇಟ್ಅಂತ ನಿನಗೆ ಮರಣ ದಂಡನೆ ವಿಧಿಸಿದ್ದರು.

ಹಲ್ಲೇ, ನಿನ್ನ ಸಂಬಂಧ ಕೊನೆಗೊಳ್ಳಲು ನಾನೇ ಕಾರಣ. ಬಹುಷಃ ನಿನ್ನ ಬಗ್ಗೆ ನಾನು ಇನ್ನೂ ಹೆಚ್ಚು ಪ್ರೀತಿಯಿಂದ ನಡೆದುಕೊಂಡಿದ್ದರೆ, ನಮ್ಮಿಬ್ಬರ ಅನುಬಂಧ ಇನ್ನೂ ಕೆಲ ವರ್ಷ ಮುಂದುವರೆಯಬಹುದಿತ್ತೇನೋ.

ನೀನು ನನ್ನಿದ ದೂರವಾಗುತ್ತಿರುವ ಈ ಸಂದರ್ಭದಲ್ಲಿ ನಿನ್ನ ಕೊಡುಗೆಯನ್ನು ಸ್ಮರಿಸುವುದು ನನ್ನ ಕರ್ತವ್ಯ. ಇಷ್ಟು ವರ್ಷಗಳ ಕಾಲ ಹಸಿವು ಹಾಗೂ ಬಾಯಿ ಚಪಲಕ್ಕಾಗಿ ಬಾಯಲ್ಲಿ ತುರುಕಿದ್ದ ಎಲ್ಲವನ್ನೂ ಮರು ಮಾತನಾಡದೇ ಅರೆದಿದ್ದಕ್ಕೆ ಮತ್ತು ಆ ಮೂಲಕ ಅಜೀರ್ಣ ಹಾಗೂ ಮೂಲವ್ಯಾಧಿ ಬರದಂತೆ ನೋಡಿಕೊಂಡದ್ದಕ್ಕೆ ನಿನಗಿದೋ ನಮಸ್ಕಾರ. ನಾನು ನಕ್ಕಾಗಲೆಲ್ಲ ಕೆನ್ನೆಯಲ್ಲಿ ಗುಳಿ ಬೀಳಲು ನಿನ್ನದೇ ಕೊಡುಗೆ ನೀಡಿದ್ದಕ್ಕೆ ನಿನಗಿದೋ ನಮಸ್ಕಾರ. ಕಾಲೇಜಿನ ಲ್ಯಾಬ್  ನಲ್ಲಿ ನನ್ನನ್ನು ಒಳಗೊಳಗೇ ಪ್ರೀತಿಸುತ್ತಿದ್ದ ಹುಡುಗಿ ರಪಕ್ಕನೆ ಎದುರಾಗಿ ಕೆನ್ನೆಗೆ ಬಿಗಿಯಾಗಿ ಮುತ್ತು ಕೊಟ್ಟಾಗ ಗಲ್ಲ ಒಳ ಹೋಗದಂತೆ ತಡೆದ್ದಿದ್ದಕ್ಕೆ ನಿನಗಿದೋ ನಮಸ್ಕಾರ. ಹಾಸ್ಟೆಲ್ ರೂಮ್ ನಲ್ಲಿ ಅಸಂಖ್ಯಾತ ಬಿಯರ್ ಬಾಟಲಿಗಳನ್ನು ಓಪನ್ ಮಾಡಲು ಓಪನರ್ ಬದಲು ನಿನ್ನನ್ನು ಬಳಸಿದ್ದಕ್ಕೆ ಕ್ಷಮೆಯಿರಲಿ!

ಈಗ ನಿನ್ನ ಸ್ಥಳದಲ್ಲಿ ಬ್ರಿಜ್ ಕೂರಿಸುತ್ತಾರಂತೆ. ಈಗ ನಿನ್ನ ಬದಲಿಗೆ ಮೂರು ಹಲ್ಲು ಹಾಕಿಸಿಕೊಳ್ಳಬೇಕು ನಾನು. ಆದರೂ ಇಷ್ಟು ವರ್ಷ ನನ್ನೊಡನಿದ್ದು, ಹೀಗೆ ಬೇರೆಯಾಗಿ ಹೋದೆಯಲ್ಲ, ಐ ಆಮ್ ಸಾರಿ ಹಲ್ಲೇ….


ನನ್ನ ಬ್ಲಾಗ್ ನ ಮೊದಲ ಪೋಸ್ಟ್

(ಕಳೆದ ವರ್ಷ ಜುಲೈ 24 ರಂದು ನನ್ನ ಬ್ಲಾಗ್ ಆರಂಭವಾದಾಗ ಬರೆದಿದ್ದ ಮೊದಲ ಲೇಖನ)

ಕೋಡುಗಲ್ಲ ಮಾದೇವನಿಗೆ....

ಆದರಣೀಯ ದೇವರಿಗೆ,

24-07-09

ಬನಶಂಕರಿ, ಬೆಂಗಳೂರು.

ಸುಘೋಷನು ಮಾಡುವ ನಮಸ್ಕಾರಗಳು. ಉ.ಕು. ತರುವಾಯ. ನಾನು ಚೆನ್ನಾಗಿದ್ದೇನೆ. ನೀನೂ ಸಹ ಚೆನ್ನಾಗಿರುವಿಯೆಂದು ಭಾವಿಸಿದ್ದೇನೆ. ಅಂದ ಹಾಗೆ ನನ್ನ ಹೊಸ ಪ್ರಯತ್ನವನ್ನು ತಿಳಿಸಲೊಸುಗ ಈ ಪತ್ರವು.

ಹಲವು ವರ್ಷಗಳು ಕಳೆಯಿತು. ಇನ್ನಾದರೂ ಮುನಿಸು ಬಿಟ್ಟು ಪತ್ರ ಬರೆಯೋಣ ಎಂದುಕೊಂಡೆ. ನಿನ್ನ ಅಸ್ತಿತ್ವದ ಬಗ್ಗೆ ಪರ-ವಿರೋಧ ವಾಗ್ವಾದ ಮಾಡುವವರು ಇನ್ನೂ ಭೂಮಂಡಲದಲ್ಲಿ ಇದ್ದಾರೆ. ನಾನೂ ಎರಡೂ ಗುಂಪಿಗೆ ಸೇರಿಲ್ಲ. ಹೀಗಾಗಿ ನಿನಗೆ ಪತ್ರ ಬರೆದು ನನ್ನ ಸ್ಥಿತಿ-ಗತಿಯನ್ನು ತಿಳಿಸಿದರೆ, ನನ್ನ ಅಪ್ಪನ ಗಂಟೆನೂ ಹೋಗುವುದಿಲ್ಲವಲ್ಲ ಎಂಬ ಕಾರಣದಿಂದ ಪತ್ರ ಟೈಪಿಸುತ್ತಿರುವೆ.

ಓ ದೇವನೆ, ಈ ಪಾಪಿ ದುನಿಯಾಕ್ಕೆ ನಾನು ಎಂಟ್ರಿ ಪಡೆದು ಎರಡೂವರೆ ದಶಕಗಳಿಗೂ ಮೆಲಾಗಿದೆ. ಕಾಲಕಾಲಕ್ಕೆ ಅನ್ನ, ನೀರು, ವಾಯು, ಅಂಗವಸ್ತ್ರ, ಇತ್ಯಾದಿ ಧರ್ಮ, ಅರ್ಥ, ಕಾಮಾಕಾಂಕ್ಷೆಗಳನೆಲ್ಲ ಮನಃಪೂರ್ವಕವಾಗಿ ಅನುಭವಿಸುತ್ತಿರುವೆ. ಇರಲಿ. ಆ ಕುರಿತು ಮತ್ತೆ ಹೇಳುತ್ತೇನೆ.

ಈ ಪತ್ರ ಬರೆಯಲು ಮುಖ್ಯ ಕಾರಣವೆಂದರೆ, ರಾಜ್ಯದಲ್ಲಿ ಅಷ್ಟೇ ಏಕೆ ಇಡೀ ದೇಶದಲ್ಲೇ ಮೀಡಿಯಾದ ಪರಿಸ್ಥಿತಿ ಕುಲಗೆಟ್ಟುಹೋಗಿದೆ. ಕೆಲ ಪತ್ರಕರ್ತರು ಆರೋಗ್ಯಕರ ಪತ್ರಿಕೋದ್ಯಮದ ತಲೆಯನ್ನು ಚೊಕ್ಕವಾಗಿ ಬೋಳಿಸಿ, ಉಂಡೆ ನಾಮ ತಿಕ್ಕಿದ್ದಾರೆ. ಜನರಲ್ಲಿ ಮೀಡಿಯಾ ಕುರಿತಂತೆ ಗೌರವ ಭರದಿಂದ ಕಡಿಮೆಯಾಗುತ್ತಿದೆ. ರಾಜಕಾರಣಿಗಳು ಪತ್ರಕರ್ತರನ್ನು “ಏನ್ ಬ್ರದರ್” ಅಂತಲೂ, ಪತ್ರಕರ್ತರು ರಾಜಕಾರಣಿಗಳನ್ನು “ಅಣ್ಣಾ…” ಎಂತಲೂ ಸಂಬೋಧಿಸಿ ಪರಸ್ಪರರ ನಡುವಿನ ಅನ್ಯೋನ್ಯತೆಯನ್ನು ಹೆಚ್ಚಿಸಿಕೊಂಡಿದ್ದಾರೆ. ರಾಜಕಾರಣಿಗಳು ಮಾಡಲು ಬೇರೆನೂ ಕೆಲಸವಿಲ್ಲವಾಗಿ, ತಮಗಿಷ್ಟಬಂದಂತೆ ಟಿವಿ ಚಾನೆಲ್ ಗಳನ್ನು ತೆಗೆಯುತ್ತಿದ್ದಾರೆ. ದೆಹಲಿಯಂತಹ ಪ್ರದೇಶದಲ್ಲಿ ಯಾವುದೇ ಸಾಮಾನ್ಯ ಪತ್ರಿಕಾಗೋಷ್ಟಿಗೆ ಕನಿಷ್ಟ 45 ಕ್ಯಾಮೆರಗಳು ಸಾಲಾಗಿ ನಿಲ್ಲುತ್ತಿವೆ. ದೇಶದ ಪ್ರತಿಷ್ಠಿತ ಪತ್ರಿಕೋದ್ಯಮ ಕಾಲೇಜುಗಳಿಂದ ಬುಳುಬುಳು ಹೊರಬೀಳುತ್ತಿರುವ ಕನ್ಯೆಯರು, ರಾಷ್ಟ್ರೀಯ ವಾಹಿನಿಗಳ ಆರಂಕಿ ಸಂಬಳವನ್ನು ತಮ್ಮ ಕಿರುಬೆರಳಿನ ಚೂಪಾದ ಉಗುರಿನಿಂದ ಧಿಕ್ಕರಿಸಿ, ಕಾರ್ಪೋರೇಟ್ ವಲಯದಲ್ಲಿ ಪಿಆರ್ ಓ ಗಳಾಗಿ ಮೆರೆಯುತ್ತಿದ್ದಾರೆ. ಸ್ಟಿಂಗ್ ಆಪರೇಷನ್ ಎಂಬ ಹೊಸ ಶಾಖೆಯೊಂದು ಪ್ರಾರಂಭಗೊಂಡಿದ್ದು, ಪತ್ರಕರ್ತರು ಹಾಗೂ ಭ್ರಷ್ಟರು ಒಟ್ಟೊಟ್ಟಿಗೆ ಸಮಾಜವನ್ನು ತಿನ್ನಲು ಇಂಬು ಸಿಕ್ಕಿದೆ. ಮುದ್ರಣ ಮಾಧ್ಯಮದಲ್ಲಿ ಸರಿಯಾಗಿ ಅರ್ಕಾವತ್ತು ಕೊಡಲು ಬಾರದ ಪೋರರು ಸಬ್ ಎಡಿಟರುಗಳಾಗಿ ಭರ್ತಿಗೊಂಡು, ಪ್ರೋ. ಜಿ. ವೆಂಕಟಸುಬ್ಬಯ್ಯನಂತಹವರಿಗೆ ಹೊಸ ಹೊಸ ಪದಪ್ರಯೋಗಗಳ ಹಾಗೂ ಶಬ್ದಗಳ ಪರಿಚಯ ಮಾಡಿಸುತ್ತಿದ್ದಾರೆ. ಇರಲಿ. ಈ ಬಗ್ಗೆ ಇನ್ನೂ ಹೆಚ್ಚು ಬರೆಯುವುದು ನನ್ನ ಆರೋಗ್ಯಕ್ಕೂ ನಿನ್ನ ಆರೋಗ್ಯಕ್ಕೂ ಒಳ್ಳೆಯದಲ್ಲವೆಂದು ನಾ ಬಲ್ಲೆ ಅದರಿಂದ ಇಲ್ಲೇ ನಿಲ್ಲಿಸುತ್ತೇನೆ.

ದೇವರೇ, ನಿನಗೆ ತಿಳಿದ ಹಾಗೆ ನಾನು ಟೈಮ್ ವೇಸ್ಟ್ ಇಂಡಿಯಾ ಅಲ್ಲಲ್ಲ ಸಾರಿ, ಟೈಮ್ಸ್ ಆಫ್ ಇಂಡಿಯಾ-ಎನ್ಐಇ, ವಿಜಯ್ ಟೈಮ್ಸ್, ಈ ಟಿವಿ, ಎ ಎನ್ ಐ ಹೀಗೆ ಹಲವು ಮಾಧ್ಯಮ ಪ್ರಾಕಾರಗಳಲ್ಲಿ ದುಡಿದು ಒಳ್ಳೆ ಅನುಭವ ಗಳಿಸಿಕೊಂಡಿದ್ದೇನೆ. ಆದರೆ ಪತ್ರಿಕೋದ್ಯಮದ ಏಕತಾನತೆಯಿಂದ ಬೇಸತ್ತು ಇದೀಗ ಕೊಂಚ ಬ್ರೇಕ್ ತೆಗೆದುಕೊಂಡಿರುವುದು ನಿನಗೆ ತಿಳಿದೇ ಇದೆ. ಏನಕೇನ ಪ್ರಕಾರೇಣ, ಕನ್ನಡ ಕಿರುತೆರೆಯಲ್ಲಿ ಚರ್ಚೆ ಹುಟ್ಟುಹಾಕಿರುವ ಮುಕ್ತ ಮುಕ್ತ ಧಾರಾವಾಹಿಯಲ್ಲಿ ಮುಖ್ಯಮಂತ್ರಿಗಳ ಚೊಚ್ಚಲ ಪುತ್ರನಾಗಿ ನಟಿಸಲು ಮೊದಲುಮಾಡಿದ್ದೇನೆ. ಆದರೆ ಹಾಗೇಂದು ಹೇಳಿ ಮೀಡಿಯಾವನ್ನು ಮರೆತಿಲ್ಲ. ನನ್ನ ಬೇರುಗಳೂ ಇನ್ನೂ ಮೀಡಿಯಾದಲ್ಲೇ ಇವೆ. ಟೊಂಗೆಗಳು ಮಾತ್ರ ಬೇರೆಬೇರೆ ಕಡೆಗೆ ಪಸರಿಸುತ್ತಿವೆ.

ಈ ಮಧ್ಯೆ ಕಾಷಿಯಸ್ ಮೈಂಡ್. ವರ್ಡ್ ಪ್ರೆಸ್. ಕಾಮ್ ಬ್ಲಾಗ್ ಆರಂಭಿಸಿ ಕಿತಾಪತಿಯನ್ನು ಮುಂದುವರೆಸಿದ್ದೇನೆ. ಈ ಕಿತಾಪತಿಗೆ ನಿರ್ವಿಘ್ನಂ ಕುರುಮೇ ದೇವ….

ನನ್ನಿಂದ ಒಳ್ಳೆಯ ಲೇಖನ ಬರೆಸು ದೇವ…

ಓದುಗರಿಂದ ಒಳ್ಳೆಯ ಕಾಮೆಂಟ್ ತರಿಸು ದೇವ…

ಮತ್ತೇನೂ ವಿಶೇಷವಿಲ್ಲ. ಅಲ್ಲಿನ ಎಲ್ಲ ಹಿರಿ-ಕಿರಿಯ ದೇವರುಗಳಿಗೆ ನನ್ನ ನಮಸ್ಕಾರಗಳನ್ನು ತಿಳಿಸು.

ಇಂತಿ ನಿನ್ನ

ಸುಘೋಷ್.

ಇದನ್ನೂ ಓದು – ನೀನು ಯಾವಾಗ ಬರುವಿಯೆಂದು ಮುಂಚಿತವಾಗಿ ತಿಳಿಸಿದರೆ ರಿಸೀವ್ ಮಾಡಿಕೊಳ್ಳಲು ನಾನೇ ಬರುವೆ.

ಹ್ಯಾಪಿ ಬರ್ತಡೇ ಟು CAUTIOUSMIND

CAUTIOUSMIND

ನನ್ನ “CAUTIOUSMIND – ನನ್ನ ಕಿತಾಪತಿಗಳ ಜಗತ್ತು” ಆರಂಭವಾಗಿ ಇಂದಿಗೆ 1 ವರ್ಷ.

ಬ್ಲಾಗ್ ಓದುಗರಿಗೆ, ಓದಿ ಪ್ರೋತ್ಸಾಹಿಸಿದವರಿಗೆ, ಪ್ರೋತ್ಸಾಹಿಸಿ ಕಮೆಂಟಿಸಿದವರಿಗೆ, ಕಮೆಂಟಿಸಿ ಕಾಲೆಳೆದವರಿಗೆ – ಹೀಗೆ ಎಲ್ಲರಿಗೂ ಎಲ್ಲರಿಗೂ ತುಂಬು ಹೃದಯದ ಧನ್ಯವಾದ.

ತಮ್ಮ ಹಾರೈಕೆ ಹೀಗೇ ಇರುತ್ತದೆಂದು ಆಶಿಸುವ

ವಿಶ್ವಾಸಿ

ಸುಘೋಷ್ ಎಸ್ ನಿಗಳೆ.

ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ

ಇನ್ನು ನಾಲ್ಕೇ ನಾಲ್ಕು ದಿನ ಬಾಕಿ,,,,ನನ್ನ ಬ್ಲಾಗಿನ ಹುಟ್ಟುಹಬ್ಬಕ್ಕೆ

ಯಶಸ್ವೀ ಭವ

ಹೌದು. ಇನ್ನು ಕೇವಲ ನಾಲ್ಕು ದಿನ ಬಾಕಿ ಇದೆ ನನ್ನ ಬ್ಲಾಗಿನ ಹ್ಯಾಪಿ ಬರ್ತ್ ಡೇ ಗೆ. ಅಂದು ಗಂಟೆಗೊಂದರಂತೆ 12 ಬೆಸ್ಟ್ ಲೇಖನಗಳನ್ನು ಪ್ರಕಟಿಸಬೇಕೆಂದುಕೊಂಡಿದ್ದೆ. ಆದರೆ ಯೋಜನೆ ಕೊಂಚ ಬದಲಾಗಿದೆ. ಗಂಟೆಗೊಂದರಂತೆ ಲೇಖನಗಳು ಪ್ರಕಟವಾದರೆ ಸ್ವಲ್ಪ ಹೆವಿಯಾಗಬಹುದು ಅನ್ನಿಸಿದ್ದರಿಂದ, ಕೆಲ ಬೆಸ್ಟ್ ಲೇಖನಗಳನ್ನು ದಿನಕ್ಕೊಂದರಂತೆ ಮರುಪ್ರಕಟಿಸಲು ನಿರ್ಧರಿಸಿದ್ದೇನೆ. ಇದರ ಜೊತೆಗೆ ಸಿಹಿ ಸುದ್ದಿಯೊಂದರ ಬ್ರೇಕಿಂಗ್ ನ್ಯೂಸ್ ಅಂತೂ ಇದ್ದೇ ಇದೆ. ಹಿರಿಯರ ಆಶೀರ್ವಾದ, ಕಿರಿಯರ ಪ್ರೀತಿ, ಒಂದೇವಾರ್ಗಿಯವರ ಸಹಕಾರ ನನ್ನ ಮೇಲೆ ಸದಾ ಇರಲೆಂದು .

ವಿಶ್ವಾಸಿ

ಸುಘೋಷ್ ಎಸ್. ನಿಗಳೆ.

ಜುಲೈ 17 ರ ವರೆಗೆ ಬ್ಲಾಗ್ ಅಪ್ಡೇಟ್ ಇರುವುದಿಲ್ಲ….

sorry sorry.....yes papa....

ಅನಿವಾರ್ಯ ಕಾರಣಗಳಿಂದಾಗಿ ಜುಲೈ 17 ರ ವರೆಗೆ ಬ್ಲಾಗ್ ಅಪ್ಡೇಟ್ ಇರುವುದಿಲ್ಲ. ಕ್ಷಮೆಯಿರಲಿ.

ವಿಶ್ವಾಸಿ

ಸುಘೋಷ್ ಎಸ್. ನಿಗಳೆ

ಸೌಪರ್ಣಿಕಾ ಹೊಳ್ಳರ ನೀಲಾಂಜಲ

neelanjala

ನಾನು…

ಶಿರಸಿಯವಳು, ಹಾಗೆಂದು ಒಪ್ಪಿಕೊಂಡಿದ್ದೇನೆ.
(ತಂದೆಯವರು ಮೂಲತಃ  ಸಾಗರದವರಾಗಿದ್ದರು ಸಹಿತ).
ಸಧ್ಯ ಇರುವುದು ಮುಂಬಯಿನಲ್ಲಿ

ಕೊಟ್ಟಿದ್ದು ಅಲ್ಲ ಕೊಡಿಸಿ ಕೊಂಡಿದ್ದು ಮಂಗಳೂರು
(ಈ ಜಿಲ್ಲೆ ಕಂಡರೆ ಮೊದಲಿನಿಂದಲು ಅಷ್ಟಕಷ್ಟೆ. N Kಯನ್ನು D K ನುಂಗಿ ಹಾಕಿದೆ ಅಂತ.
ಎಲ್ಲರಿಗೂ South Canara ಗೊತ್ತು, North Canara ಗೊತ್ತಿಲ್ಲ.
ಬೇಕಾದ್ರೆ ಕೇಳಿ ನೋಡಿ. NK ಅಂದರೆ North Karnataka ಇಲ್ಲ
UK ಅಂದರೆ United Kingdom ಮಾಡಿಯಾರು).

ಓದಿದ್ದು ಪತ್ರಿಕೋದ್ಯಮ ಮತ್ತು ಅನಿಮೇಶನ್.

ಸದ್ಯ ಇರೊ ಕೆಲಸ ಬಿಟ್ಟು blog ಇಸೋ ಗೀಳು ಅಂಟಿಸಿಕೊಂಡಿದ್ದೇನೆ

-ಸೌಪರ್ಣಿಕಾ ಹೊಳ್ಳ

http://neelanjala.wordpress.com/

ದಿಲೀಪ್ ಹೆಗಡೆಯವರ ಹನಿಹನಿ

ಹನಿಹನಿ...

ದಿಲೀಪ್ ಹೆಗಡೆ

ಇಂಗ್ಲೀಶ್ ನಲ್ಲಿ “Jack of all master of None” ಅಂತಾರಲ್ಲಾ… ನನ್ನ ಪರಿಸ್ಥಿತಿಯೂ ಸ್ವಲ್ಪ ಅದೇ ರೀತಿ..!! ಕವನ ಬರೆಯಬಲ್ಲೆ.. ಕಾರ್ಟೂನ್ ಬಿಡಿಸಬಲ್ಲೆ… ಲೇಖನ ಕೂಡ ಬರೆಯಬಲ್ಲೆ… ಆದರೆ ಯಾವುದರಲ್ಲೂ ನಾನೊಬ್ಬ Master ಆಗಲು ಸಾಧ್ಯವೇ ಆಗಲಿಲ್ಲ… ಪ್ರಯತ್ನ ಮುಂದುವರೆದಿದೆ… ಆ ಪ್ರಯತ್ನವನ್ನೇ ಈ ಬ್ಲಾಗ್ ನಲ್ಲೂ ಕಾಣಬಹುದು… ಇಷ್ಟವಾದರೂ…., ಓದಿ ಕಷ್ಟವಾದರೂ ಪ್ರತಿಕ್ರಿಯಿಸಲು ಮರೆಯದಿರಿ… ಅದು ನನ್ನನ್ನು ನಾನು ತಿದ್ದಿಕೊಳ್ಳಲು ಅತೀ ಅವಶ್ಯಕ..

http://www.hanihani.co.cc/

ನವೀನಮೌನಮಾತಾದಾಗ….

ನವೀನಮೌನಮಾತಾದಾಗ...

ನನ್ನ ಬಗ್ಗೆ

ನವೀನ್

ನನ್ನ ಬಗ್ಗೆ ಬರೆಯೋದಕ್ಕೆ ವಿಶೇಷ ಏನೂ ಇಲ್ಲ ಈಗ ಬ್ಲಾಗ್ ಬರೀತಾ ಇರೋದು ದಿನವಿಡೀ ಮೌನವಾಗಿ ಮಂಥನ ನೆಡೆಸುತ್ತಿರುವ ನನ್ನ ಮನಸ್ಸನ್ನು ನಿಮ್ಮೆದುರು ಸ್ವಲ್ಪವಾದರೂ ತೆರೆದುಕೊಳ್ಳೋನಾಂತ………….

http://maatumouna.blogspot.com/

ವಿಕಾಸವಾದ ಹೀಗಿದೆ….

ವಿಕಾಸವಾದ.
ವಿಕಾಸವಾದ..
ವಿಕಾಸವಾದ...

ನನಗೆ ಮೊದಲಿಂದ ಬರೆಯುವ, ಬರೆಯುತ್ತಿರುವ ಆಸೆ. ಚಿಕ್ಕ ವಯಸ್ಸಿನಿಂದಲೂ ಪತ್ರಿಕೆಗಳು, ಪುಸ್ತಕಗಳ ಮೇಲೆ ಏನೋ ಪ್ರೀತಿ. ನನಗೆ ಇದುವರೆಗೂ ಅಕ್ಷರಗಳೇ ಒಳ್ಳೆಯ ಮಿತ್ರರು. ಪತ್ರಿಕೆಗಳ ಮೇಲಿನ ಆಕರ್ಷಣೆಯಿಂದ ಮೊದಲು ಪತ್ರಕರ್ತನಾಗಬೇಕೆಂಬ ಆಸೆ ಇಟ್ಟುಕೊಂಡಿದ್ದೆ. ಆದರೆ ಕಾಲಕ್ರಮೇಣ ಅದು ಮಸುಕಾಯಿತು. ಕಾರಣಗಳು ಹಲವಾರು. ಆದರೆ ಬರೆಯುವ ಆಸೆ ಮಾತ್ರ ಮಸುಕಾಗಿಲ್ಲ. ಈ ಬರೆಯೋ ಚಟ ಇದ್ದರೆ ಹಾಗೆಯೆ. ಏನನ್ನು ಕಂಡರೂ ಅದರ ಬಗ್ಗೆ ಬರೆಯಬೇಕು ಅನಿಸುತ್ತದೆ. ಆದರೆ ನನಗೆ ಬರೆಯುವ ವಿಷಯಕ್ಕೆ ಬಂದಾಗ ಏನನ್ನು ಬರೆಯುವುದು ಅನ್ನುವುದೇ ತೋಚುವುದಿಲ್ಲ. ಬೇರೆಯವರು ಬರೆದಿದ್ದಕ್ಕೆ ಉತ್ತರಗಳನ್ನು, ವಿಮರ್ಶೆಗಳನ್ನು ಚೆನ್ನಾಗಿ ಬರೆಯಬಲ್ಲೆ. ಚರ್ಚೆಗಳನ್ನು ಚೆನ್ನಾಗಿ ಮಾಡಬಲ್ಲೆ. ಆದರೆ ನನ್ನದೇ ಒಂದು ಹೊಸ ವಿಷಯದ ಬಗ್ಗೆ ಬರೆಯಬೇಕೆಂದು ಹೊರಟರೆ ಏನನ್ನು ಹೇಗೆ ಬರೆಯುವುದು ಎಂದು ನಿರ್ಧರಿಸುವುದೇ ಕಷ್ಟವಾಗುತ್ತದೆ. ಹಲವಾರು ವಿಷಯಗಳು ತಲೆಯಲ್ಲಿದ್ದರೂ ಯಾವುದನ್ನೂ ಪೂರ್ತಿಯಾಗಿ ಬರಹರೂಪಕ್ಕೆ ಇಳಿಸಲು ಆಗುತ್ತಿಲ್ಲ. ಬರೆಯಲು ಶುರುಮಾಡಿ ಸ್ವಲ್ಪ ಹೊತ್ತಿಗೇ ಬೇಜಾರು ಬಂದು ಬಿಡುತ್ತದೆ. ಮೊದಲಾದರೆ ಬರದುದ್ದನ್ನೆಲ್ಲಾ ಸುಮ್ಮನೆ ಇಟ್ಟುಕೊಳ್ಳಬೇಕಿತ್ತು ಇಲ್ಲವೇ ಪತ್ರಿಕೆಗಳಿಗೆ ಕಳುಹಿಸಿ ನೀರೀಕ್ಷಿಸಬೇಕಿತ್ತು. ಆದರೆ ಈಗ ಹಾಗಿಲ್ಲ. ಅಂತರ್ಜಾಲವೆಂಬ ಲೋಕದ ಬ್ಲಾಗು ತಾಣಗಳು ಸುಮ್ಮನೆ ಬರೆಯುವವರಿಗೆ ಒಳ್ಳೆಯ ಅವಕಾಶವನ್ನು ಕಲ್ಪಿಸಿವೆ.ಬರೆದುದ್ದಲ್ಲಾ ಇಂಟರ್ನೆಟ್ಟಿನಲ್ಲಿ ಪುಕ್ಕಟೆ ಪ್ರಕಟಣೆ. ಎಲ್ಲಿಂದ ಬೇಕಾದರೂ ಯಾರು ಬೇಕಾದರೂ ಓದುವಂತೆ. ಓದಿ ಸಲಹೆ ನೀಡಲು, ಉತ್ತೇಜಿಸಲು, ಬೈಯಲು, ಜಗಳ ಆಡಲು, ಪ್ರೀತಿ ಮಾಡಲು ಸ್ನೇಹಿತರಿದ್ದಾರೆ, ಹಿತೈಷಿಗಳಿದ್ದಾರೆ ಎಂಬ ಧೈರ್ಯದೊಂದಿಗೆ ಬಿಟ್ಟು ಹೋಗಿದ್ದ ಬರೆಯುವ ಅಭ್ಯಾಸವನ್ನು ಪುನರಾರಂಭಿಸುವ ಪುಟ್ಟ ಪ್ರಯತ್ನ ಮಾಡುತ್ತಿದ್ದೇನೆ. ಆದ್ದರಿಂದ ಇನ್ನು ಮುಂದೆ ಏನನ್ನಾದರೂ ಮನಸಿಗೆ ತೋಚುವ ವಿಷಯಗಳನ್ನು ಬರೆಯುತ್ತಾ ಹೋಗುವುದು ಮತ್ತು ಬೇರೆ ಕೆಲವು ಇಷ್ಟವಾದ ವಿಷಯಗಳನ್ನು ಹಾಕುವುದು ಅಂದುಕೊಂಡಿದ್ದೇನೆ.ಎಷ್ಟು ಕಾರ್ಯಗತವಾಗುವುದೋ ಕಾಣೆ.

(ತಮ್ಮ ಬ್ಲಾಗ್ ಶುರು ಮಾಡಿದಾಗ ವಿಕಾಸ್ ಹೆಗಡೆ ಅವರು ಬರೆದ ಲೇಖನ)

http://www.vikasavada.blogspot.com/

ಮನಸಿನ ಮರ್ಮರ

ಮನಸಿನ ಮರ್ಮರ

ನನ್ನ ಕುರಿತು ನಾ ಏನೆಂದು ಹೇಳಲಿ?

ಹೆಸರು ವಿಜಯ್ ರಾಜ್ ಕನ್ನಂತ. ನನ್ನ ಬಗ್ಗೆ ಹೇಳಲಿ ಏನಂತ?

ಸಾಹಿತ್ಯ ಸಂಗೀತದ ಕುರಿತು ಆಸಕ್ತಿ ಇದೆ…ಪುರುಸೊತ್ತು ಇದ್ರೆ ತೋಚಿದ್ದು ಗೀಚೋ ಪ್ರವೃತ್ತಿನೂ ಇದೆ.

ನಾ ಹುಟ್ಟಿದ್ದು ಹಳ್ಳಿಹೊಳೆಯಲ್ಲಿ….ಬೆಂಗಳೂರು ಸೇರಿದ್ಡು ಕೆಲಸದ ಹೆಳೆಯಲ್ಲಿ.. ಕೆಲಸ ಮಾಡ್ತಾ ಇರೋದು ಬಸವನಗುಡಿ ಬಳಿಯಲ್ಲಿ…

ಸಧ್ಯಕ್ಕೆ ಇಷ್ಟು ಸಾಕಲ್ವೇ…?

http://vijaykannantha.wordpress.com/

ಓ ನನ್ನ ಚೇತನಾ…

ಓ ನನ್ನ ಚೇತನಾ....

ಅಲೆಮಾರಿಯ ಹಾಡು

ಹೆಸರು, ಗಾಯತ್ರಿ, ಗಾನಾ, ಚೇತನಾ… ಏನಾದ್ರೂ ಕರ್ಕೊಳ್ಳಿ. ಆದ್ರೆ ನಂಗೆ, ಚೇತನಾ ತೀರ್ಥಹಳ್ಳಿ ಅಂತ ಕರೆಸ್ಕೊಳೋಕೆ ಇಷ್ಟ.
ಈ ನನ್ನ ಬ್ಲಾಗು, ಗೊತ್ತು ಗುರಿಯಿಲ್ಲದ ಬರಹಗಳ ಸಂತೆ. ಥೇಟು ಸಂತೆಯ ಹಾಗೇ ಇಲ್ಲಿ ಚೌಕಶಿ ಇದೆ, ಜಗಳಗಳಿವೆ, ಸ್ವಾರಸ್ಯಗಳೂ ಇವೆ.
ಬರೆಯೋದು, ಓದೋದು ನನ್ನ ದುಶ್ಚಟ.  ಮಾತು ಕಮ್ಮಿ, ವಿಪರೀತ ಜಾಸ್ತಿ! ಹೀಗಂತ ಪರಸ್ಪರ ವಿರುದ್ಧ ಅಭಿಪ್ರಾಯಗಳಿವೆ ಪರಿಚಿತರ ನಡುವೆ.

ಮತ್ತೇನೂ ಹೇಳಲಿಕ್ಕಿಲ್ಲ.

ಪ್ರೀತಿಯಿಂದ,
ಚೇತನಾ

http://chetanachaitanya.wordpress.com/

ಮೂಕ ಮನದ ಮಾತು….

ಮೂಕ ಮನದ ಮಾತು....

ದಿನಕರ ಮೊಗೇರ..

ನಮಸ್ಕಾರ, ನಾನು ದಿನಕರ, ಊರು ಭಟ್ಕಳದ ತೆಂಗಿನಗುಂಡಿ, ಈಗ ಮಂಗಳೂರಲ್ಲಿ job ಮಾಡ್ತಾ ಇದ್ದೇನೆ. ನಂಗೆ ನನ್ನ ಅಪ್ಪನೇ ಆದರ್ಶ. ಅಮ್ಮ ಅಂದ್ರೆ ತುಂಬಾ ಇಷ್ಟ , ಸ್ವಲ್ಪ ಜಗಳ…….ತುಂಬಾ ಪ್ರೀತಿ …. ಮೂವರು ಅಣ್ಣಂದಿರು, ಇಬ್ಬರು ಅಕ್ಕಂದಿರು, ತುಂಬಾ ಬೇಜಾರಂದ್ರೆ ಒಬ್ಬಳೇ ಹೆಂಡತಿ…….! ರವಿ ಬೆಳಗರೆ ಬರಹಗಳೆಂದರೆ ಪ್ರಾಣ , ಅವರ ಎಲ್ಲಾ ಪುಸ್ತಕಗಳನ್ನು ಓದಿದ್ದೇನೆ. ಅದರಲ್ಲೂ ‘ ಹೇಳಿ ಹೋಗು ಕಾರಣ’, ‘ಮಾಂಡೋವಿ’ ತುಂಬಾ ಇಷ್ಟ. …. ಜಯಂತ ಕಾಯ್ಕಣಿಯ ಕವನಗಳು mood fresh ಮಾಡ್ತವೆ. ವಿನಯ್ ಭಟ್, ವೆಂಕಟೇಶ್ ನನ್ನ ಆತ್ಮೀಯ ಗೆಳೆಯರು. ಅದರಲ್ಲೂ ವಿನಯ್ ನನ್ನನ್ನು ತಿದ್ದಿ ತಿಡುತ್ತಾ ಬಂದಿದ್ದಾನೆ. ಈಗ ನನ್ನನ್ನ blog ಎಂಬ ಹೊಸ ದುನಿಯಾಕ್ಕೆ ಪರಿಚಯಿಸುತ್ತಾ ಇದ್ದಾನೆ ……. ನೋಡೋಣ ನನ್ನ ಹೊಸ ಪಯಣ ಹೇಗಿರುತ್ತೋ ಅಂತ ….! ವಿಶ್ ಮಿ ಗುಡ್ ಲಕ್ ……. ನನ್ನನ್ನ ಸಹಿಸಿಕೊಳ್ಳಿ ……..

http://dinakarmoger.blogspot.com/

ಸಾಗರದಾಚೆಯ ಇಂಚರ

ಇಂಚರ....ಇಂಚರ...ಸಾಗದರಾಚೆಯ ಇಂಚರ...

Dr.Gurumurthy Hegde, Sweden

ನಾನೊಬ್ಬ ಸ್ನೇಹಜೀವಿ, ಸಂಶೋಧನೆಯ ಹೊರತಾಗಿ ಕವನ, ಕಥೆ, ಹೀಗೆ ಹತ್ತು ಹಲವು ಕ್ಷೇತ್ರಗಳಲ್ಲಿ ನನ್ನನ್ನು ತೊಡಗಿಸಿಕೊಳ್ಳುವಾಸೆ, ಮಲೆನಾಡಿನ ಪರಿಸರದಿಂದ ಬಂದ ನಾನು ಬದುಕಿನಿಂದ ಬಹಳಷ್ಟು ಕಲಿತಿದ್ದೇನೆ. ಹಕ್ಕಿಯೊಂದು ತನ್ನ ಗೂಡು ಬಿಟ್ಟು ದೂರದ ಸಾಗರ ಹಾರಿ ಬಂದಾಗ ಅದರ ಮನಸ್ಸಿನ ಸುಪ್ತ ಭಾವನೆಗಳನ್ನು ಹಂಚಿಕೊಳ್ಳುವ ಮಹದಾಸೆ ನನ್ನದು. ಇದನ್ನೆಲ್ಲಾ ಕಷ್ಟ ಪಟ್ಟು ಬರೆದದ್ದಲ್ಲ, ಇಷ್ಟಪಟ್ಟು ಬರೆದಿದ್ದು, ಹಾಗಾಗಿ ಇಷ್ಟವಾದರೆ ಓದಿ, ಕಷ್ಟವಾದರೆ ಬಿಟ್ಟುಬಿಡಿ. ತಮ್ಮವನೇ ಆದ ಗುರು ಬಬ್ಬಿಗದ್ದೆ.

http://gurumurthyhegde.blogspot.com/

ರೈತಾಪಿ – ಕೃಷಿ ಜಗತ್ತಿನ ಸುತ್ತಮುತ್ತ

ಅನ್ನಪೂರ್ಣೆ ಸದಾಪೂರ್ಣೆ ಶಂಕರ ಪ್ರಾಣವಲ್ಲಭೆ...

ಇದೊಂದು ಕೃಷಿ ಬಗ್ಗೆ ಆಸಕ್ತಿಯಿದ್ದು, ಹವ್ಯಾಸಿಯಾಗಿ ಕೃಷಿ ಲೇಖನಗಳನ್ನು ಬರೆಯುವವರ ಲೇಖನಗಳನ್ನು ಅಂತರ್ಜಾಲದಲ್ಲಿ ಪ್ರಕಟಿಸುವ ಸಲುವಾಗಿ ಹುಟ್ಟಿಕೊಂಡ ಬ್ಲಾಗ್. ಇದರಲ್ಲಿ ರೈತಾಪಿಯನ್ನು ಮಾಡುತ್ತಾ, ಬರವಣಿಗೆಯಲ್ಲಿ ತಮ್ಮನ್ನು ತೊಡಗಿಸಿಕೊಂಡ ಮಾವೆಂಸ ಪ್ರಸಾದ, ಗ್ರಾಮೀಣ ಪ್ರವಾಸೋದ್ಯಮ ಅಧ್ಯಯನ, ಕಟ್ಟೆ ಎಂಬ ವಾರ ಪತ್ರಿಕೆಯ ನಡೆಸಿಕೊಂಡು ಬರುತ್ತಿರುವ, ಕೃಷಿಕ, ಕತೆಗಾರ, ಹವ್ಯಾಸಿ ಬರಹಗಾರ ಕಡವಿನಮನೆ ಆರ್. ಶರ್ಮಾ ತಲವಾಟ ಈ ಬ್ಲಾಗ್ಗೆ ಸಲಹೆಗಾರರು ಮತ್ತು ಬರಹಗಾರರರು. ನಾಗರಾಜ ಮತ್ತಿಗಾರ ಈ ಬ್ಲಾಗ್ನ್ನು ಮ್ಯಾನೇಜ್ ಮಾಡುವ ಜವಾಬ್ದಾರರು, ಜೊತೆಗೆ ಕೃಷಿ ಲೇಖನವನ್ನು ಬರೆಯುವವರು. ಮೊದಲೆ ಹೇಳಿದಂತೆ ಇದು ಕೆಲವೇ ಜನರಿಗೆ ಮೀಸಲಲ್ಲಾ. ನಮ್ಮ ಮಿತ್ರರ ಕೃಷಿ ಬರಹಗಾರರ ಲೇಖನವನ್ನು ಪ್ರಕಟಿಸಿತ್ತೇವೆ. ಇದು ಕೃಷಿಕರ ಜಗತ್ತಿನ ಸುತ್ತಲಿನ ಪ್ರಪಂಚದ ಬಗ್ಗೆ ಮಾತ್ರಕ್ಕೆ ಸಿಮೀತ.

http://www.raitapy.blogspot.com/

ಶೆಟ್ಟರ ಒಂದಿಷ್ಟು ಕನಸು….

ondishtu kanasu

ನನ್ನ ಬಗ್ಗೆ ಒಂದಿಷ್ಟು..

ಶೆಟ್ಟರು – Down to earth, caring, simple, cool, always smiling…

…ಅಂತೆಲ್ಲಾ ಏನಿಲ್ರಿ, ಏನ ಅನಸ್ತೈತಿ ಅದನ್ನ ನೇರವಾಗಿ ಹೇಳ್ತಿನಿ. ಕೆರಿಂಗ್-ಪಾರಿಂಗ್ ಅಂತ ಎನ ಇಲ್ರಿ ನಿಮಗೇನರ ಹೆಲ್ಪ ಬೇಕಂದ್ರ, ಸಿದಾ ಕೇಳ್ರಿ ಅಕ್ಕಿತ್ತಂದ್ರ ಮತ್ತ ನನಗ ‘ಹೌದ’ ಅನಿಸಿದ್ರ ಮಾಡ್ತಿನಿ. ಸಿಂಪಲ್ ಅಂತ ಎನಿಲ್ರಿ ಪಗಾರ ಆದಾಗ ಭಾರಿ ಗ್ರ್ಯಾಂಡ್ ಇರ್ತಿನ್ರಿ, ಖಾಲಿ ಆಗಿಂದ ಮಂದಿ ನನಗ “ಎಷ್ಟ ಸಿಂಪಲ್ ಅದಿಯೋ” ಅಂತಾರ್ರಿ. ಕೂಲ್!!! ಎನಿಲ್ರಿ ಕೊಟ್ರ ದಿನಕ್ಕ ಒಂದಿಪ್ಪತ್ತ ಸಲೆ “ಚಾ” ಕುಡಿತಿನ್ರಿ, ಹಿಂಗಾಗಿ ಪಿತ್ತ ನೆತ್ತಿ ಹತ್ತಿ ಯಾವಾಗ್ಲೂ ಉರ್ಕೊಂಡು ಕುಂತಿರ್ತಿನ್ರಿ. ಇನ್ನ ಆಲ್ವೇಜ ಸ್ಮೈಲಿಂಗ್… ಹುಚ್ಚಿಲ್ರಿಪಾ ನನಗ, ಮುಂಜಾನೆ ಸುರ್ಯಾ ಎಳುದುಕ್ಕು ಮುಂಚೆ ಎದ್ದು ಆಫೀಸಿಗೆ ಹೋದ್ರ, ಅಂವ ಮುಳುಗಿದ ಎಷ್ಟೋ ಹೊತ್ತಿನ ಮ್ಯಾಲೆ ಮನಿ ಮುಟ್ಟತಿನಿ. ದಿನದ ಅರ್ಧ ವ್ಯಾಳೆ ಕಂಪನಿ ಬಸ್ಸನ್ಯಾಗ, ಟ್ರಾಫ್ಹಿಕ್ ಧೂಳಿನ್ಯಾಗ ಕಳಿಯೋವಾಗ always smiling ಅಂದ್ರ ಧೂಳು ಬಾಯಾಗ ಹೊಕೈತ್ರಿ.

ಹಂಗಂದ್ರ ಆಸಾಮಿ ತಲಿ ತಿರಕ ಅದಾನ ಅನ್ಕೋಂಡ್ರಿ ಹೌದಿಲ್ಲೊ? ಹಂಗೆನಿಲ್ರಿ, ಬಾಗಲಕೋಟ್ಯಾಂವ್ ನೋಡ್ರಿ ಸ್ವಲ್ಪ ಹುಂಬತನ ಜಾಸ್ತಿ, ‘ಮಾತು ಒರಟು, ಆದ್ರ ಹುಡುಗ ಒಳ್ಳ್ಯಾಂವ್’ ಅಂತ ನಮ್ಮ ಅಮ್ಮ ಅಂತಾಳ್ರಿ. ಓದುದಂದ್ರ ಭಾರಿ ಇಷ್ಟ, ಬರೆಯೂದು ಅಷ್ಟಕ್ಕಷ್ಟ. ನನ್ನ ಮಾತು ಕೇಳಾಕ ಎಲ್ಲಾರಿಗೂ ಭಾರಿ ಖುಷಿರಿ, ಆದ್ರ ನಾನು ಖುಷಿಯೋಳಗಿದ್ದಾಗಷ್ಟ ನಾನು ಮಾತಾಡೋದು. ಹುಡುಗಿಯರು ಅಂದ್ರ ಬಾಳ ಹೆದ್ರಿಕಿ, ಗೆಳೆಯರಂದ್ರ ಬಾಳ ಖುಷಿರಿ. ಬದುಕಂದ್ರ ಬಾಳ ಪ್ರೀತಿ, ಕನಸುಗಳಂದ್ರ ನನ್ನ ಜೀವ. ಮೌನ ಇಷ್ಟ, ಮಾತು ಬೇಕೇ ಬೇಕು. ನಾಟಕ-ಕಲೆ ಅಂದ್ರೆ ಸ್ವಲ್ಪ ಹುಚ್ಚು ಜಾಸ್ತಿ..

ಒಟ್ಟಿನಲ್ಲಿ ಒಂದಿಷ್ಟು ಹುಂಬತನ, ಸ್ವಲ್ಪೆ ಸ್ವಲ್ಪ ತಿಕ್ಕಲುತನ, ಬದುಕಿನೆಡೆಗೆ ಅಸಾಧ್ಯ ಪ್ರೀತಿ, ಕನಸುಗಳ ಬಗ್ಗೆ ಅಪಾರ ನಂಬಿಕೆ, ಪ್ರೀತಿ-ಸ್ನೇಹಗಳ ಬಗ್ಗೆ ಸೇಳೆತ, ಬದುಕಿನಲ್ಲಿ ಎನನ್ನೊ ಹುಡುಕುವ ತುಡಿತ..ಎಲ್ಲೆಲ್ಲೊ ಕಳೆದುಹೋಗುತ್ತಿರುವ ನಾನು ಮತ್ತು ನನ್ನತನವನ್ನು ಹಿಡಿದಿಟ್ಟುಕೊಳ್ಳುವ ಒಂದು ಪ್ರಯತ್ನವೇ ಈ ಬ್ಲಾಗ್.

ನಿಮಗೆ ಮೆಚ್ಚಿಕೆಯಾದರೆ ನಿಮ್ಮ ಹೆಜ್ಜೆ ಗುರುತುಗಳನ್ನು ದಾಖಲಿಸಿ, ಮೆಚ್ಚಿಗೆಯಾಗದಿದ್ದರೇ ನೀವು ‘ದಯವಿಟ್ಟು’ ದಾಖಲಿಸಿ.

ಶರಣು ಶರಣಾರ್ತಿ.

ಪ್ರಮೋದರ Cipher’s Space

ಪ್ರಮೋದರ Cipher's Space

ನಾನೆಂಬ ನಾನು

http://pramodc.wordpress.com/

ನಾಳೆಗಳೆ೦ಬ ಖಚಿತ ಗೊ೦ದಲಗಳಿಗೆ ಈಗಎನ್ನುವುದಷ್ಟೇ ಉತ್ತರ.
ಶಾಲೆಗಳಲ್ಲಿ ಸ್ಲೇಟ್ ನಲ್ಲಿ ಬರೆದು, ಕಾಲೇಜಿನಲ್ಲಿ ನೋಟ್ಸ್ ಬರೆದು, ಎಕ್ಸಾಮ್ಸ್ ಗೆ ಓದಿ, ಬರೆದೂ ಬರೆದು ಸಾಕಾಗದೆ ಇನ್ನು ಬರೆವಾಸೆ..ಓದುವಾಸೆ..

ವೃತ್ತಿಯಲ್ಲಿ ಯೆಟ್ ಯೆನೆದರ್ ಸಾಫ್ಟ್ ವೇರ್ ಇ೦ಜಿನಿಯರ್.

….ಸದ್ಯಕ್ಕೆ ಇಷ್ಟೇ ಸಾಕು