21 ಕ್ಕೆ ಮದುವೆ, 18 ಕ್ಕೇ ವೋಟು.

ವಿಚಿತ್ರ, ಆದರೂ ಸತ್ಯ.

ಕಳಿಸಿಕೊಟ್ಟದ್ದು – ಜಗಳೂರು ಸೀತಾರಾಮ್.

ಮದುವೆಯಾಗಲು ಹುಡುಗನ ಕನಿಷ್ಠ ವಯಸ್ಸು 21.

ವೋಟ್ ಮಾಡಲು ಕನಿಷ್ಠ ವಯಸ್ಸು 18.

ಇದು ಏನನ್ನು ತೋರಿಸುತ್ತದೆ?

ದೇಶವನ್ನು ಕಂಟ್ರೋಲ್ ಮಾಡಲು ಬೇಕಾದ ಅನುಭವಕ್ಕಿಂತ ಹೆಂಡತಿಯನ್ನು ಕಂಟ್ರೋಲ್ ಮಾಡಲು ಹೆಚ್ಚು ಅನುಭವ ಬೇಕು.

ದುಃಖ ಯಾವಾಗಲೂ ಜೊತೆಯಿರುತ್ತದೆ…

Photo - Sun group

ಕಳಿಸಿಕೊಟ್ಟದ್ದು – ಹನ್ನಾ ವಿಜಯ್

ಕಿಟ್ಟಿಗೆ ಹಿಂದಿಯಿಂದ ಕನ್ನಡಕ್ಕೆ ಇದನ್ನು ಭಾಷಾಂತರ ಮಾಡಲು ಹೇಳಲಾಯಿತು.

“ದುಃಖ್ ಹಮೇಶಾ ಸಾತ್ ರೆಹತಾ ಹೈ. ಲೇಕಿನ್ ಖುಷಿ ಆತೀ ಜಾತೀ ರೆಹತೀ ಹೈ”

ಅವನು ಅದನ್ನು ಹೀಗೆ ಭಾಷಾಂತರಿಸಿದ.

ಹೆಂಡತಿ ಯಾವತ್ತಿಗೂ ಜೊತೆಯಿರುತ್ತಾಳೆ. ಆಕೆಯ ತಂಗಿ ಮಾತ್ರ ಬಂದು ಹೋಗಿ ಮಾಡುತ್ತಿರುತ್ತಾಳೆ. 🙂

ಬಾಂಬ್ ಹೇಗೆ ಸಿಡಿಯಿತು?

ಪತ್ರಕರ್ತ – (ಬಾಂಬ್ ಸ್ಫೋಟದಲ್ಲಿ ಗಾಯಗೊಂಡವನಿಗೆ) – ಬಾಂಬ್ ಜೋರಾಗಿ ಸಿಡಿಯಿತಾ?

ಗಾಯಾಳು – (ಸಿಟ್ಟಿನಿಂದ) – ಇಲ್ಲ ಕಣ್ರೀ….ಬಾಂಬ್ ನಿಧಾನವಾಗಿ ತೆವಳುತ್ತ ನನ್ನ ಬಳಿಗೆ ಬಂತಾ…ಆಮೇಲೆ…ನಾಚಿಕೆಯಿಂದ ಹೇಳ್ತು – ಧಡಮ್ !!

ಢಂ..ಢಂ..ಢಂ..

ವೈನ್ ಶಾಪ್ ಉದ್ಘಾಟನೆ

ಬ್ರಹ್ಮನಿಂಗೆ ಜೋಡಸ್ತೀನಿ....

ಮೊನ್ನೆ ಬೆಂಗಳೂರಿನ ಫಲಾನಾ ನಗರದಲ್ಲಿ ವೈನ್ ಶಾಪ್ ಉದ್ಘಾಟನೆಗೊಂಡಿತು. ಪುರೋಹಿತರು ಬಂದು ಶಾಸ್ತ್ರೋಕ್ತವಾಗಿ ಪೂಜೆ ನೆರವೇರಿಸಿದರು. ಯಾವುದೋ ಹೋಮ ಕೂಡ ಮಾಡಲಾಯಿತು. ಪೂಜೆಯ ಬಳಿಕ ಯಾವ ‘ತೀರ್ಥ’ ನೀಡಿರಬಹುದು?

Why just one sperm win?

Fight....

Q : Even if a million sperms fight, why just one sperm win to reach the egg?

A : It’s again the male ego. Nobody asks for direction!!