ಕನಿಷ್ಠ ಶಿಷ್ಟಾಚಾರವೂ ಇಲ್ಲದ ರಾಜಕಾರಣಿಗಳು

 

ರಾಜಕಾರಣಿಗಳಿಗೆನೂ ಕಡಿಮೆ ಕೊಬ್ಬು ಇರುವುದಿಲ್ಲ. ಅಫ್ ಕೋರ್ಸ್ ಹಲವರಿಗೆ ಮೈ ತುಂಬ ತುಂಬಿಕೊಂಡಿರುವುದು ಬರೀ ಕೊಬ್ಬೇ. ಸುದ್ದಿ ವಾಹಿನಿಯೊಂದರಲ್ಲಿ ಸಾಮಾನ್ಯವಾಗಿ ಮಹತ್ವದ ಬೆಳವಣಿಗೆಗಳು ನಡೆದಾಗ ಸಂಬಂಧಪಟ್ಟವರ ಫೋನ್ ಇನ್ ತೆಗೆದುಕೊಳ್ಳುವುದು ಸಾಮಾನ್ಯ. ಅಂತಹ ಸಂದರ್ಭದಲ್ಲಿ ಕೆಡಿಎಸ್ ಎಂಬ ರಾಜಕಾರಣಿಯ ಫೋನೋ ತೆಗೆದುಕೊಳ್ಳಬೇಕಾಗಿತ್ತು. ಕೆಡಿಎಸ್ ಮುಖ್ಯಮಂತ್ರಿ ಹುದ್ದೆಯ ಮೇಲೆ ಕಣ್ಣಿಟ್ಟಿರುವ ಕೈ ರಾಜಕಾರಣಿ. ರಿಯಲ್ ಎಸ್ಟೇಟ್, ಕಲ್ಲು ಗಣಿಗಾರಿಕೆ, ಭೂಮಿ ಡಿನೋಟಿಫಿಕೇಷನ್ ಎಲ್ಲದರಲ್ಲಿಯೂ ಎತ್ತಿದ ಕೈ. ಹಿಟ್ ಫಿಲ್ಮ್ ಗಳ ಹಿರೋಯಿನ್ ಗಳು ಈತನ ಹಾಸಿಗೆಗೆ ಬರಲೇಬೇಕು. ಈಗ ಪ್ರಸಿದ್ಧ ನಟಿಯಾಗಿರುವ ಒಬ್ಬಾಕೆ ಈತನ ಬೇಡಿಕೆಗೆ ಒಪ್ಪದಿದ್ದಾಗ, ಆಕೆಯ ಮೇಲೆ ದೈಹಿಕ ಹಲ್ಲೆ ನಡೆಸಿದ ಕಿರಾತಕ ಈ ಕೆಡಿಎಸ್.

ಮೊನ್ನೆ ಯಾವುದೋ ಸುದ್ದಿ ವಾಹಿನಿಯೊಂದರಲ್ಲಿ ನೋಡಿದ್ದು. ಈತ ಆನ್ ಏರ್ ಗೆ ಬಂದ ಕೂಡಲೇ, ಸುದ್ದಿ ವಾಚಕಿ, “ಕೆಡಿಎಸ್ ಅವರೇ ನಮಸ್ಕಾರ” ಎಂದಿದ್ದಾರೆ. ಆದರೆ ಕೆಡಿಎಸ್ ಗೆ ಕೊಬ್ಬು ಎಷ್ಟೆಂದರೆ, ಪ್ರತಿ ನಮಸ್ಕಾರ ಹೇಳದೆ, “ಹಂ….” ಅಂತ ಅಷ್ಟೇ ಹೇಳಿದ್ದಾನೆ. ಆದರೂ ಸುದ್ದಿ ವಾಚಕಿ ಕನಿಷ್ಠ ಶಿಷ್ಟಾಚಾರವನ್ನೂ ಬಯಸದೇ ಮುಂದಿನ ಪ್ರಶ್ನೆಯನ್ನು ಕೇಳಿದ್ದಾರೆ. ಆಗ ನೆನಪಾಗಿದ್ದು, “When you were only asked to bend, many of you chose to crawl”

 

ಆರ್ ಎಸ್ ಎಸ್, ಮಾಧ್ಯಮ ಹಾಗೂ ಪ್ರವೀಣ್ ಪಟವರ್ಧನ್ ಅವರ ಪ್ರಕಟಗೊಳ್ಳದ ಪ್ರತಿಕ್ರಿಯೆ

ಪ್ರವೀಣ್ ಪಟವರ್ಧನ್ ಬರೆಯುತ್ತಾರೆ…..
ವ್ಯಕ್ತಿತ್ವ ವಿಕಸನದ  ಶಿಬಿರಗಳಲ್ಲಿ communication ಬಗ್ಗೆ ಒಂದು ಪ್ರಕ್ರಿಯೆ ಇಂತಿದೆ. ಶಿಕ್ಷಕನು ಸಭಿಕನೋರ್ವನಿಗೆ ಕಿವಿಯಲ್ಲ್ಲಿ ಒಂದು ಕತೆ ಹೇಳುತ್ತಾನೆ. ನಿಯಮಾನುಸಾರ ಆ ಕತೆಯನ್ನು ಒಮ್ಮೆಯಷ್ಟೇ ಹೇಳುತ್ತಾನೆ. ಈ ಸಭಿಕ ಅದೇ ರೀತಿಯಲ್ಲಿ ತನ್ನ ಪಕ್ಕದಲ್ಲಿ ಇರುವ ತನ್ನ ಸ್ನೇಹಿತನಿಗೆ ಅದೇ ಕತೆಯನ್ನು ಕಿವಿಯಲ್ಲ್ಲಿ ಹೇಳಬೇಕು. ಈ ರೀತಿಯಾಗಿ (ಸಾಲಿನ) ಮುಂದಿನವನು ತನ್ನ ಹಿಂದಿನವನಿಗೆ ತಾನು ತನ್ನ ಹಿಂದಿನವನಿಂದ ತಿಳಿದುಕೊಂಡ ಆ ಸಂಗತಿಯನ್ನು ಹೇಳುವುದೇ ಆಟ. ಕಡೆಯಲ್ಲಿ ಉಳಿಯುವವ ಆ ಸಂಗತಿಯನ್ನು ಇಡಿಯ ಸಭೆಯಲ್ಲಿ ಜೋರಾಗಿ ಹೇಳಿದಾಗ ಆ ಶಿಕ್ಷಕನು ಬೆರಗಾಗಿಬಿಡುತ್ತಾನೆ. ಕಾರಣ ಪ್ರತಿಯೊಬ್ಬನೂ ತನ್ನ Version ಹೇಳುತ್ತಾ ಹೋದಹಾಗೆ ಕತೆ ಬದಲಾಗುತ್ತಾ, ತಮ್ಮದೇ ಉಪಕಥೆಗಳು ಸೇರಿಕೊಂಡು ಮೂಲ ಕಥೆಗಿಂತ ವಿಭಿನ್ನವಾಗಿರುತ್ತದೆ. ಇಂದಿನ ಮಧ್ಯಮದವರು ಮಾಡಿದ್ದೂ ಅದೆ. ಮೋಹನ್ ಭಾಗವತ್ ರವರ ಭಾಷಣವನ್ನು ಕೇಳಿದವನು ಮಸಾಲೆ ಅರಿದು ಜಗತ್ತಿಗೆ ಅವರೊಬ್ಬ ದುಷ್ಟ ಎಂದು ಹೇಳುತ್ತಾ ಕಿರುಚಾಡಿದರು. ಉಳಿದವರು ಅವರದ್ದೇ ಕತೆ ಹೆಣೆದರು. ಕತೆ ಕಟ್ಟಲು ಸಮಯವಿಲ್ಲದವರು ಪ್ರಮುಖ ಸುದ್ದಿಯಲ್ಲಿ ಬಂದ ವಿವರವನ್ನೇ ತರ್ಜುಮೆ ಮಾಡಿದರು. ಅಸಲಿಗೆ ಯಾರೂ ಏನಾಗಿರಬಹುದೆಂದು ಓದಲಿಲ್ಲ. ಕೇಳಲಿಲ್ಲ. ಅಂತಿಮದಲ್ಲಿ ಮೋಹನ್ ಭಾಗವತರಿಗೆ, ಆರ್ ಎಸ್ ಎಸ್  ಗೆ ಕೆಟ್ಟ ಹೆಸರು ಬರುವಂತೆ ಮಾಡಿದರು. ಜನವರಿ 8ರ “ಬಿಗ್ ಡಿಬೇಟ್” ನಲ್ಲಿ ಹಲವರ ಹೇಳಿಕೆಗಳನ್ನು ಹಮೀದ್ ಪಾಳ್ಯ ತೋರಿಸಿದರಾದರೂ ಎಲ್ಲರೂ ಮಾತನಾಡಿದ್ದು ಆರ್ ಎಸ್ ಎಸ್ ಬಗ್ಗೆ. ಮೊಹನ್ ಭಾಗವತರ ಬಗ್ಗೆ. ಆರ್ ಎಸ್ ಎಸ್ಸ್ ಒಳ್ಳೆಯ ಕೆಲಸ ಮಾಡಿದಾಗ ಹೊಗಳದೆ ತಟಸ್ತರಾಗಿ ಇರುವ ಈ ಮಿತ್ರ ವೃಂದ ತಮ್ಮ Hidden Agendaಗೋಸ್ಕರ ಸೂರು ಕಳಚಿ ಬೀಳುವಂತೆ ಹರಿಹಾಯ್ದರು.
ಲೇಖನವನ್ನು ಓದುವುದಕ್ಕಿಂತಲೂ ಮುಂಚೆ Youtube ನಲ್ಲಿ ಮೋಹನ್ ಭಾಗವತರ ಭಾಷಣ, ಸುವರ್ಣ ನ್ಯೂಸ್ ವಾಹಿನಿಯ ಜನವರಿ ೮ ರ “ಬಿಗ್ ಡಿಬೇಟ್” ಕಾರ್ಯಕ್ರಮವನ್ನೂ ನೋಡಿರಿ. ನಿಮಗೆ ಪ್ರಸ್ತುತವೆನಿಸಬಹುದು
ಮೋಹನ್ ಭಾಗವತರು ಮಾತನಾಡಿದ ಪೂರ್ಣ ವಿವರಕ್ಕೆ ಇಲ್ಲಿ ನೋಡಿ. www.samvada.org ಇದನ್ನು ನೋಡದೇ ವಿವರ ತಿಳಿಯದೇ ಮಾತನಾಡಿದ 3ಖರನ್ನು (ವಿಮಲಾ, ಅಗ್ನಿ ಶ್ರೀಧರ್, ಸಿ. ಎಸ್. ದ್ವಾರಕಾನಾಥ್) ಹೀಯಾಳಿಸದೇ ಇರಲು ಆಗುವುದೇ? ಮೊಹನ್ ಭಾಗವತರ ಎರಡೂ ಭಾಷಣಗಳನ್ನು ಕೇಳಿಸಿಕೊಳ್ಳಿ. ಈ ಎರಡು ಭಾಷಣಗಳು ಒಟ್ಟು ನಿಮ್ಮ ೫೦ ನಿಮಿಷಗಳನ್ನು ತೆಗೆದುಕೊಳ್ಳುತ್ತವೆ. ಮೊದಲಿಗೆ ಮಾಧ್ಯಮಗಳಲ್ಲಿ ಬಂದ ವಿಷಯಗಳ ಪೂರ್ವಗ್ರಹದಿಂದ ಹೊರಬಂದು ಈ ಭಾಷಣಗಳನ್ನ ಕೇಳಿಸಿಕೊಳ್ಳಿ. ಅಲ್ಲೆಲ್ಲೂ ಇವರುಗಳು ಅರಚುವಂತೆ ಪ್ರಚೋದನಾಕಾರಿ ಮಾತುಗಳನ್ನು ಆಡಿರುವುದಾಗಿ ನಿಮಗೂ ಅನ್ನಿಸುವುದಿಲ್ಲ. ಇದರ ಬಗ್ಗೆ ನಂಬಿಕೆ ನನಗಿದೆ. ಮೋಹನ್ ಭಾಗವತರು ತಮ್ಮ ಭಾಷಣದ ಆದಿಯಲ್ಲಿ “ಸರ್ವೇ ಭವಂತು ಸುಖಿನಃ, ಸರ್ವೇ ಸಂತು ನಿರಾಮಯಾಃ” ದಿಂದ ಪ್ರಾರಂಭಗೊಳಿಸಿ, ಭಾರತೀಯರು ಎಲ್ಲರ ಒಳಿತನ್ನು ಅಪೇಕ್ಷಿಸುತ್ತಾರೆ. ನಮಗೆ ತಿಳಿಯದ ಯಾರೋ ಒಬ್ಬ ದುಃಖ ಪಡುತ್ತಿದ್ದಾನೆಂದರೂ ನಮ್ಮ ಮನಸ್ಸು ಮಿಡಿಯುತ್ತದೆ. ಇದು ಭಾರತೀಯತೆ ಎಂಡು ಹೇಳುತ್ತಾ, ನಮ್ಮಲ್ಲಿ ಇರುವ ಸಂಬಂಧಗಳ ಬೆಲೆ, ಅದಕ್ಕೆ ತೋರುವ ಮರ್ಯಾದೆಯನ್ನು  ಪಾಶ್ಚಾತ್ಯರೊಂದಿಗೆ ಹೋಲಿಸಿ ಅವರದ್ದು(ಪಾಶ್ಚಾತ್ಯರ) “Theory of Social Contract” ಎಂದು ಹೇಳಿದ್ದಾರೆ. ಮುಂದುವರೆಸುತ್ತಾ, ನಮ್ಮ ದೇಶದಲ್ಲಿ ಈ ಸಂಬಂಧಗಳ ದೃಷ್ಟಿ ಬದಲಾಗುತ್ತಾ, ನಮ್ಮ ವೃತ್ತಿ ಬದಲಾಗುತ್ತಿದೆ, ಆದ್ದರಿಂದ ಸಂಸ್ಕಾರ ಬದಲಾಗುತ್ತಿದೆ. ಬದಲಾದ ನಮ್ಮ ಸಂಸ್ಕಾರ ಎಲ್ಲರಲ್ಲೂ ದುಃಖ ತರಿಸುವಂತಹ ಯೋಜನೆಯಾಗಿ ಮಾರ್ಪಡುತ್ತಿವೆ ಎಂದು. ಇನ್ನು, ಮತ್ತೊಂದು ಭಾಷಣದಲ್ಲಿ ಪ್ರೇಕ್ಷಕರ ಪ್ರಶ್ನೆಗೆ ಉತ್ತರಿಸುತ್ತಾ, ಅತ್ಯಾಚಾರಗಳನ್ನು ಖಂಡಿಸುತ್ತಾ “ಹೆಣ್ಣಿನ ಮೇಲಿನ ದೌರ್ಜನ್ಯ ನಡೆಯುತ್ತಿರುವುದು ಸಂಸ್ಕಾರಗಳ ಕೊರತೆಯಿಂದಾಗಿ, ಶಿಕ್ಷಣದ ಕೊರತೆಯಿಂದಾಗಿ. ನಮ್ಮ ಮೂಲಗಳನ್ನು ಮರೆಯುತ್ತಾ ಪಾಶ್ಚಾತೀಕರಣದಿಂದಾಗುತ್ತಿರುವುದರ ಪರಿಣಾಮ. ಆದಕಾರಣದಿಂದ ಗ್ರಾಮೀಣ ಭಾರತದಲ್ಲಿ ಕಡಿಮೆ ಅತ್ಯಾಚಾರಗಳು ಕಾಣುತ್ತಿವೆ.
ಅಗ್ನಿ ಶ್ರೀಧರರೇ, ಆ ಕಾರ್ಯಕ್ರಮದಲ್ಲಿ ಮೋಹನ್ ಭಾಗವತರನ್ನು ಏಕವಚನದಲ್ಲಿ ಸಂಭೋದಿಸಿ ಅದನ್ನು ಸಮರ್ಥಿಸಿಕೊಂಡಿರಲ್ಲ ನೆನಪಿದೆಯಾ? “ನಾನು ಅವಿವೇಕದ ಮಾತನಾಡಿದರೆ ನನ್ನನ್ನು ಏಕವಚನದಲ್ಲಿ ಸಂಬೋಧಿಸಲಿ”ಎಂದು, ಆ ದೃಷ್ಟಿಯಿಂದ ನಿಮ್ಮನ್ನು ನಾನು ಅದೇ ಧಾಟಿಯಲ್ಲಿ ಬಯ್ಯಬಹುದು. ಆದರೆ ನನ್ನ ಸಂಸ್ಕಾರ ಎಲ್ಲರಿಗೂ ಮರ್ಯಾದೆ ಕೊಡುವಂತೆ ಸೂಚಿಸುತ್ತದೆ, ಯಾರಾದರೂ ತಪ್ಪು ಮಾಡಿದರೆ ಎತ್ತಿ ಹಿಡಿ ಅಂತಲೂ ಹೇಳಿಕೊಟ್ಟಿದೆ. ನಿಮಗೆ ಗೊತ್ತಿಲ್ಲದ ವಿಷಯಗಳು ಬಹಳಷ್ಟು ಇದ್ದರೂ ಮಾತಿಗೋಸ್ಕರ ಒಂದು ಗಂಟೆ ಹರಟೆ ಮಾಡಿದಿರಲ್ಲ “ಬಿಗ್ ಡಿಬೇಟ್” ಅನ್ನೊ ಕಾರ್ಯಕ್ರಮದಲ್ಲಿ ನಿಮ್ಮನ್ನು ನೋಡಿದರೆ ನಗು ಬರುತ್ತೆ. ಸ್ಕಾಂಡಿನೇವಿಯಾ ದೇಶಗಳಲ್ಲಿ, ಯೂರೋಪ್ ನಲ್ಲಿ, ಮುಂದುವರೆದ ರಾಷ್ಟ್ರಗಳಲ್ಲಿ ಅತ್ಯಾಚಾರ ನಡೆಯುವುದೇ ಇಲ್ಲ ಅಂದಿರಿ. ಒಮ್ಮೆ ಅಂಕಿ ಅಂಶಗಳನ್ನು ನೋಡಿ ನಂತರ ನಿಮ್ಮ ಸಿದ್ಧಾಂತಕ್ಕೆ ಜೋತು ಬೀಳಿರಿ.
ಅಮೇರಿಕಾ ದೇಶ ಮುಂದುವರೆದ ದೇಶ ಎಂದು ನಾನು ಹಾಗು ನನ್ನಂತೆ ಹಲವರು ನಂಬಿದ್ದೇವೆ. ಅಲ್ಲಿ ಆಗುವ ಅತ್ಯಾಚಾರಗಲ ಸಂಖ್ಯೆ ನಿಮಗೆ ತಿಳಿದಿದೆಯೆ? ಫ್ಯಾಷನ್ ರಾಜಧಾನಿ ಎಂದು ಕರೆದುಕೊಳ್ಳುವ ಪ್ಯಾರಿಸ್ ನಲ್ಲಿ ಎಷ್ಟು ಅತ್ಯಾಚಾರಗಳು ನಡೆಯುತ್ತವೆ ತಿಳಿದಿದೆಯೇ? ಇಗೋ ಒಂದಷ್ಟು ಕೊಂಡಿಗಳು. ಓದಿಕೊಳ್ಳಿ. Wikipediaದಲ್ಲಿ Rape statistics by countryಎಂದು ಹುಡುಕಿ ನಿಮಗೆ ಗೊತ್ತಿಲ್ಲದ ಸಂಗತಿಗಳು ಹಲವಷ್ಟಿವೆ.
 ಅತ್ಯಾಚಾರಗಳು ಕಂದಾಚಾರದ ಪದ್ಧತಿಯಲ್ಲಿರುವ ದೇಶಗಳಾದ ಪಾಕಿಸ್ತಾನ್, ಬಾರಥ (ನೀವು ಮಾತನಾಡಿದ್ದು ಹಾಗೆಯೇ) ಎಂದರಲ್ಲ. ಮುಂದುವರೆಸಿ, ಇಂಡಿಯಾ ಹೆಸರಿಗೆ ಹೆಚ್ಚಿನ ಸಾಂಸ್ಕೃತಿಕ ಬೆಲೆಯಿದೆ ಅಂತಲೂ ಅಂದಿರಲ್ಲಾ….. ಭಾರತದಲ್ಲಿ ಹರಿಯುತ್ತಿದ್ದ ಸಿಂಧು ನದಿಯಿಂದ ನಮ್ಮನ್ನು ಹಿಂದು ಎಂದು ಕರೆದರು. ಅದನ್ನು ಹಾಗೆ ಕರೆಯಲಾಗದೆ ಪಾರ್ಸಿಯರು ಇಂದಸ್ ಎಂದು ಕರೆದು ಬಾಯಿಂದ ಬಾಯಿಗೆ  ಹೋಗುತ್ತಾ ಅದು ಇಂಡಿಯಾ ಆಗಿದೆ. ಇಂಡಿಯ ಎಂಬ ಪದ ಹುಟ್ಟಲು ನಮ್ಮ ದೇಶದ ಸಿಂಧು ನದಿಯ ಹೆಸರೇ ಸ್ಪೂರ್ತಿ. ಇನ್ನು ಭಾರತ ಎಂಬ ಹೆಸರು ಹೇಗೆ ಬಂತೆಂದು ಕುಲಕರ್ಣಿಯವರು ಹೇಳಿದ್ದಾರೆ. ಅದು ನಿಮಗೆ ಅರ್ಥವಾಗಿದೆ ಎಂದು ಕೊಂಡಿದ್ದೇನೆ. ಅದಿರಲಿ, ವಿಮಲಾ ಮತ್ತು ಶ್ರೀಧರ್, ಎಂದಾದರೂ ನಮ್ಮ ದೇಶದ ನೋಟನ್ನು ನೋಡಿದ್ದೀರಾ?Reserve Bank of India ಎಂಬ ಇಂಗ್ಲಿಷ್ ಬರಹದ ಮೇಲ್ಗಡೆ ಹಿಂದಿಯಲ್ಲಿ “ಭಾರತೀಯ ರಿಸರ್ವ್ ಬ್ಯಾಂಕ್” ಎಂದು ಬರೆದಿದೆಯೋ ಅಥವಾ ಬೇರೇನಾದರೂ ಇದೆಯಾ? ಭಾರತ, ಇಂಡಿಯಾ ಎಂದು ದೇಶವನ್ನು ವಿಭಜಿಸುತ್ತಿದ್ದಾರೆ ಎಂದು ರಚ್ಚೆ ಹಿಡಿದಿದ್ದಿರಲ್ಲಾ, ನಮ್ಮ ದೇಶದ ಹೆಸರು, ಸರ್ಕಾರಿ ಫಲಕಗಳನ್ನು ನೋಡಿದ್ದೀರಾ? ನಿಮ್ಮ ಕುತರ್ಕ, ಪೊಳ್ಳುವಾದ ಅಂತ ಅನ್ನಿಸುವುದೇ ಇಲ್ಲವೇ?
ದ್ವಾರಕಾನಾಥ್ ಅಗ್ನಿ ಶ್ರೀಧರ ರ ಮಾತನ್ನು ಒಪ್ಪಿದರು. ಅಂದು ದೆಹಲಿಯಲ್ಲಿ ಆದ ಅತ್ಯಾಚಾರ ಒಂದು ಹೆಣ್ಣು ಮಗಳ ಮೇಲೆ. ಇಂದು ಇಂಥ ಹೇಳಿಕೆಗಳು ನೀಡುತ್ತಿರುವ ಮೋಹನ್ ಭಾಗವತ್ ಸಾಮೂಹಿಕವಾಗಿ ಅತ್ಯಾಚಾರವೆಸಗಿದ್ದಾರೆ ಎಂದು ನೀಚರ ತರಹ ಮಾತನಾಡಿದಿರಲ್ಲಾ, ಅತ್ಯಾಚಾರಿಗಳಿಗೂ, ಭಾಗವತರಿಗೂ ವ್ಯತ್ಯಾಸವೇ ಇಲ್ಲ ಎಂದರಲ್ಲ, ಹಾಗಾದರೆ ಅಗ್ನಿ ಶ್ರೀಧರರು ತಮ್ಮ ಪೂರ್ವಾಶ್ರಮ(!!)ದಲ್ಲಿ ರೌಡಿ, ಡಾನ್. ಅಗ್ನಿ ಶ್ರೀಧರರನ್ನು ಅವರ ಹೇಳಿಕೆಯನ್ನು ಒಪ್ಪುವ ನೀವು, ನೀವೂ ರೌಡಿ, ಡಾನ್ ಮನಸ್ಥಿತಿಯವರು ಎಂದು ಪಾಮರರು ನಾವು ನಿರ್ಧರಿಸಬಹುದೇ? ಸಾಮಾನ್ಯವಾಗಿ ಯಾವುದೇ ಅರ್ ಎಸ್ ಎಸ್ ಭಾಷಣದಂತೆ ಮೋಹನ್ ಭಾಗವತ್ ರವರು ತಮ್ಮ ಭಾಷಣದಲ್ಲಿ, “ಮಾತಾ ಭಗಿನೀ” ಎಂದು ಸಂಬೋಧಿಸಿದ್ದು ನಿಮ್ಮ ಕೆಪ್ಪು ಕಿವಿಗಳಿಗೆ ಬೀಳಲಿ. ಆರ್ ಎಸ್ ಎಸ್, ಹೆಣ್ಣಿಗೆ ಎಷ್ಟು ಒಳ್ಳೆಯ ಸ್ಥಾನ ನೀಡಿದೆ, ಹೇಗೆ ತನ್ನ ಶಿಕ್ಷಣದಲ್ಲಿ ಹೆಣ್ಣಿನ ಬಗ್ಗೆ ಪೂಜ್ಯ ಭಾವನೆ ಮೂಡಿಸುತ್ತದೆ ಎಂಬುದನ್ನು ಮನನ ಮಾಡಿಕೊಳ್ಳಿರಿ. ಅದನ್ನೆಲ್ಲಾ ಬಿಟ್ಟು ಅಂಡೆ ಪಿರ್ಕಿಯ ತರಹ ಮಾತನಾಡುವುದು, ನಿಮಗೆ ಶೋಭಿಸಿದರೂ ಅದು ಸುಸಂಸ್ಕಾರವಲ್ಲ.
ಶ್ರೀಧರ್ ರವರೇ, ಆರ್ ಎಸ್ ಎಸ್ ಬಗ್ಗೆ ಮತ್ತೊಂದು ಗುರುತರ ಆರೋಪ ಮಾಡಿದ್ದರ ಬಗ್ಗೆ ನನ್ನ ಆಕ್ಷೇಪವಿದೆ. ಆರ್ ಎಸ್ ಎಸ್ Moral rapists ಗಳ ತರಹ ವರ್ತಿಸುತ್ತಿದ್ದಾರೆ ಹಾಗೂ ಅವರೂ ಇಂತಹ ಅಹಿತಕರ ಘಟನೆಯಲ್ಲಿ ಭಾಗಿ ಆಗಿರಲೂಬಹುದು ಎಂದು… ಸ್ವಲ್ಪ ಯೋಚಿಸಿ ವರ್ಷಗಳಿಂದಲೂ ಈ ಸಂಘ ಅಸ್ತಿತ್ವದಲ್ಲಿ ಇದ್ದು, ಇಂದಿಗೂ ಲಕ್ಷಗಟ್ಟಲೆ ಸ್ವಯಂಸೇವಕರು, ಹಿತೈಷಿ ಬಂಧುಗಳು ಇರಲು ಸಾಧ್ಯವಿತ್ತೇ? ನೀವು ಹೇಳಿದ ಹಾಗೆ ಆರ್ ಎಸ್ ಎಸ್ ಇದ್ದಿದ್ದರೆ ಇಷ್ಟು ಹೊತ್ತಿಗಾಗಲೇ ಸಂಘ ಕುಸಿದು ಹೋಗಿರುತ್ತಿತ್ತು. ಸಂಘದ ideologies, values ತಿಳಿಯದ ನಿಮ್ಮಂತಹ ಹಲವು immoral s unethical s ನಿಂದಾಗಿ ಅದಕ್ಕೆ ಕೆಟ್ಟ ಹೆಸರೇ ಹೊರತು ಸಂಘದವರು ಮಾಡುವ ಸಮಾಜಮುಖಿ ಕೆಲಸಗಳಿಂದಲ್ಲ!!
ಶ್ರೀಧರ, ನಿಮ್ಮನ್ನು ನೀವು ಚಿಂತಕರು, ಲೇಖಕರು, ಸಮಾಜಮುಖಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡವರು ಎಂದು ಹೇಳುತ್ತೀರ. ಪತ್ರಕರ್ತರು ಎಂದು “ಕೊಚ್ಚಿ”ಕೊಳ್ಳುತ್ತೀರ ಪತ್ರಿಕೋದ್ಯಮದ ಜವಾಬುದಾರಿ ಅರಿಯದೆ, ಸಂಕುಚಿತ ಮನಸ್ಸಿನ ನಿಮ್ಮ ವರ್ತನೆಗೆ ನನ್ನ ಧಿಕ್ಕಾರ. ಅದಿರಲಿ, ನಿಮ್ಮ “ಎದೆಗಾರಿಗೆ” ಕಾದಂಬರಿಯಲ್ಲಿ ಬರೆಯುತ್ತೀರಲ್ಲ ಸಾವನ್ನು ಎದುರಿಸುವ ಬಗ್ಗೆ, ಭಾಗವತರ ಭಾಷಣವನ್ನು ಪೂರ್ಣ ಕೇಳಿಸಿಕೊಳ್ಳಿ ಮೃತ್ಯುವನ್ನು ಎದುರಿಸುವುದರ ಬಗ್ಗೆ ಅವರು ಇನ್ನೂ ಚೆನ್ನಾಗಿ ಮಾತನಾಡಿದ್ದಾರೆ.

ಇಲೆಕ್ಟ್ರಾನಿಕ್ ಮೀಡಿಯಾದ ಸಂವೇದನೆಗಳು ಬದಲಾಗತೊಡಗಿವೆ

….

ಕೆಲ ವರ್ಷಗಳ ಹಿಂದೆ ನಡೆದ ಘಟನೆ. ಓರಿಸ್ಸಾದ ಪೋಲಿಸ್ ಮಹಾನಿರ್ದೇಶಕನೊಬ್ಬ ನ್ಯಾಯ ಒದಗಿಸುವ ನಾಟವನ್ನಾಡಿ ಆದಿವಾಸಿ ಹುಡುಗಿಯೊಬ್ಬಳನ್ನು ತನ್ನ ತೆವಲಿಗೆ ಬಳಸಿಕೊಂಡಿದ್ದ. ಆಕೆಯನ್ನು ಮತ್ತೆ ಮತ್ತೆ ಬಳಸಿಕೊಂಡೂ, ಆಕೆಗೆ ಯಾವುದೇ ರೀತಿಯ ಸಹಾಯವನ್ನು ಮಾಡಲಿಲ್ಲ. ಕೊನೆಗೆ ರೋಸಿ ಹೋದ ಹುಡುಗಿ, ಸ್ಥಳೀಯ ಇಲೆಕ್ಟ್ರಾನಿಕ್ ಮಾಧ್ಯಮದ ಪತ್ರಕರ್ತನೊಬ್ಬನನ್ನು ಸಂಪರ್ಕಿಸಿದಳು. ಆ ಪತ್ರಕರ್ತ ಹುಡುಗಿಯೊಂದಿಗೆ ಉಪಾಯವಾಗಿ ಹಿಡನ್ ಕ್ಯಾಮೆರಾ ಕಳಿಸಿ ಡಿಜಿಯ ಕಾಮಕೇಳಿಯ ದೃಶ್ಯಗಳನ್ನು ಸೆರೆಹಿಡಿದ. ಆ ದೃಶ್ಯಗಳು ತೀರ ಹಸಿಹಸಿಯಾಗಿದ್ದವು. ಆ ವಿಶುವಲ್ಸ್ ಗಳನ್ನು ಹೆಡ್ ಆಫೀಸ್ ಗೆ ಕಳಿಸಲಾ ಎಂದು ಕೇಳಿದ್ದಕ್ಕೆ, ವಿಶುವಲ್ಸ್ ನ ತೀವ್ರತೆ ಅರಿಯದ ಹೆಡ್ ಆಫೀಸ್ ನವರು, ಕಳಿಸು, ಅಂದಿದ್ದಾರೆ. ಆದರೆ ಯಾವಾಗ ವಿಶುವಲ್ಸ್ ಗಳು ಎಲ್ಲರೂ ಆಕ್ಸೆಸ್ ಮಾಡಬಹುದಾದ ಫೋಲ್ಡರ್ ಗೆ ಬಂದು ಬಿತ್ತೊ, ಇಡೀ ಆಫೀಸಿನವರು ಆ ವಿಶುವಲ್ಸ್ ಗಳನ್ನು ಕದ್ದು ಮುಚ್ಚಿ ನೋಡತೊಡಗಿದ್ದಾರೆ. ತಕ್ಷಣ ಜಾಗೃತಗೊಂಡ ಐಟಿ ತಂಡ, ಆ ವಿಶುವಲ್ಸ್ ಗಳನ್ನು ಸೀಕ್ರೇಟ್ ಫೋಲ್ಡರ್ ಗೆ ಹಾಕಿ ನಿಟ್ಟುಸಿರು ಬಿಟ್ಟಿದೆ. ಆಫೀಸಿನಲ್ಲಿದ್ದ ಮಹಿಳಾ ಉದ್ಯೋಗಿಗಳಿಗೆ ಈ ಘಟನೆ ತೀರ ಮುಜುಗರ ತಂದಿದೆ.

ಕೆಲ ವರ್ಷಗಳ ಬಳಿಕ, ಅಂದರೆ ಇತ್ತಿತ್ತಲಾಗಿ, ಇದೇ ತರಹದ ಘಟನೆಯೊಂದು ಬಾಗಲಕೋಟೆಯಿಂದ ವರದಿಯಾಗಿದೆ. ಎಂದಿನಂತೆ ವಿಶುವಲ್ಸ್ ಗಳು ಹೆಡ್ ಆಫೀಸಿಗೆ ಬಂದಿವೆ. ವಿಶುವಲ್ಸ್ ಗಳು ಬಹಿರಂಗವಾಗಿ ನೋಡಲಾಗದ ಮಟ್ಟಿಗಿವೆ. ಆದರೆ ಆಫೀಸಿನಲ್ಲಿ ಎಲ್ಲರೂ ರಾಜಾರೋಷವಾಗಿ ಅವನ್ನು ನೋಡಿದ್ದಾರೆ.

ಈ ಎರಡೂ ಘಟನೆಗಳನ್ನು ಇಟ್ಟು ನೋಡಿದಾಗ, ಇವುಗಳ ವಿಶ್ಲೇಷಣೆ ಹೇಗೆ ಎಂಬ ಪ್ರಶ್ನೆ ಮೂಡುತ್ತದೆ. ಮಾಧ್ಯಮದ ಸಿಬ್ಬಂದಿ ಪ್ರಾಕ್ಟಿಕಲ್ ಆಗುತ್ತಿದ್ದಾರೆಯೆ ಅಥವಾ ಸಂವೇದನೆಯನ್ನು ಕಳೆದುಕೊಳ್ಳುತ್ತಿದ್ದಾರೆಯೆ? ನೀವೇನನ್ನುತ್ತೀರಿ?