
ಹರುಷಕೊಂದು ಹೊಸತು ನೆಲೆಯು
ಅಖಿಲ ಜೀವಜಾತಕೆ
ಒಂದೇ ಒಂದು ಜನ್ಮದಲ್ಲಿ
ಒಂದೆ ಬಾಲ್ಯ ಒಂದೆ ಹರೆಯ
ನಮಗದಷ್ಟೇ ಏತಕೆ?
ಸುಖ ಹೆಚ್ಚಲಿ ದುಃಖ ಬೆಚ್ಚಲಿ
ಟೆರರಿಸ್ಟುಗಳು ಸಾಯಲಿ
ಸೈನಿಕರ ಆತ್ಮವಿಶ್ವಾಸ ವರ್ಧಿಸಲಿ
ಭ್ರಷ್ಟ ರಾಜಕಾರಣಿಗಳು ಠೇವಣಿ ಕಳೆದುಕೊಳ್ಳಲಿ
ಆರ್ ಟಿ ಐ ನೆರವು ಜನ ಹೆಚ್ಚು ಹೆಚ್ಚು ಪಡೆದುಕೊಳ್ಳಲಿ
ಕ್ರಿಕೆಟ್ ಆಟಕ್ಕಿಂತ ಕಾಶ್ಮೀರಿನ ವಿಷಯದಲ್ಲಿ ಜನ ಹೆಚ್ಚು ಜಾಗೃತಗೊಳ್ಳಲಿ
ಹೊಸ ವಧುವರರಿಗೆ ಬರೇ ಹೆಣ್ಣು ಮಕ್ಕಳೇ ಹುಟ್ಟಲಿ
ಟ್ರಾಫಿಕ್ ಪೋಲಿಸ್ ಲಂಚ ಕೇಳುವುದು ಕಡಿಮೆಯಾಗಲಿ
ವಕೀಲರ ಗೂಂಡಾಗಿರಿ ನಿಲ್ಲಲಿ
1 ಲಕ್ಷ ಕೋಟಿ ಬಜೆಟ್ ಜಾರಿಯಾಗಲಿ
ಕೋಕ್ ಗಿಂತ ಎಳನೀರು ಹೆಚ್ಚು ಮಾರಾಟವಾಗಲಿ
ಬೆಂಗಳೂರಿನಲ್ಲಿನ ರೌಡಿಗಳು ಪರಸ್ಪರ ಮತ್ತಷ್ಟು ಹೊಡೆದಾಡಿಕೊಳ್ಳಲಿ
ಎಡಪಂಥಿಯರು, ಬಲಪಂಥಿಯರು ತಮ್ಮ ಮಾರ್ಗ ಬಿಡದಿರಲಿ
ಕನ್ನಡ ವಾಹಿನಿಗಳ ಪತ್ರಕರ್ತರ ಹಾಗೂ ಆಂಕರ್ ಗ ಕನ್ನಡ ಇನ್ನಾದರೂ ಸುಧಾರಿಸಲಿ
ಭಾರತದಲ್ಲಿ ಟಾಯ್ಲೆಟ್ ಗಳ ಸಂಖ್ಯೆ ಹೆಚ್ಚಲಿ
ಗೃಹಸಾಲದ ಮೇಲಿನ ಬಡ್ಡಿದರ ಮತ್ತಷ್ಟು ಏರದಿರಲಿ
ಮಚ್ಚು, ಲಾಂಗ್, ಪ್ರೇಮಕತೆಗಳ ಹುಚ್ಚಿನಿಂದ ಕನ್ನಡ ಚಿತ್ರರಂಗ ವಿಮುಖವಾಗಲಿ
ಕನ್ನಡ ಚಲನಚಿತ್ರ ಅಕಾಡೆಮಿ ‘ತಾರಾ’ ಮೆರಗು ಪಡೆಯಲಿ
ಪತ್ರಕರ್ತರು ಭ್ರಷ್ಟರಾಗುವುದು ಕಡಿಮೆಯಾಗಲಿ
ಪೋಲಿಸ್ ಪ್ಯಾದೆಗಳ ಕೆಲಸದ ಒತ್ತಡ ಕಡಿಮೆಯಾಗಲಿ
ನಕ್ಸಲ್ ಸಮಸ್ಯೆ, ಬೆಳಗಾವಿ ಗಡಿವಿವಾದ, ಬಗೆಹರಿಯಲಿ
ಲಾಸ್ಟ್ ಬಟ್ ನಾಟ್ ದಿ ಲೀಸ್ಟ್…
ಈ ವಿಶ್ ಲಿಸ್ಟ್ ನ ಎಲ್ಲ ವಿಶ್ ಗಳೂ ಇದೇ ವರ್ಷ ಪೂರ್ಣಗೊಳ್ಳಲಿ….