ಯಾಕೆ ನಗುತ್ತೀರಿ ಮಕ್ಕಳೆ?

ದೇವರು ಕೊಟ್ಟ ಪೀಪಿ...ಹ್ಹಿ...ಹ್ಹಿ...ಹ್ಹಿ....

ಬಹುಶಃ 1960 ರ ಆಸುಪಾಸಿನ ಘಟನೆ. ನನ್ನ ದೂರದ ಸಂಬಂಧಿಕರೊಬ್ಬರು ಹೇಳಿದ್ದು.

ಆಗಿನ್ನೂ ಆಕೆ ಕಾನ್ವೆಂಟ್ ಶಾಲೆಯ ವಿದ್ಯಾರ್ಥಿನಿ. ಕಲಿಸಲು ಬರುತ್ತಿದ್ದವರೆಲ್ಲರೂ ಸಿಸ್ಟರ್ ಗಳು. ಒಮ್ಮೆ ಸಿಸ್ಟರ್ ಪಾಠ ಮಾಡುವಾಗ ಅವರ ಹೊಟ್ಟೆ ಅಪ್ಸೆಟ್ ಆಗಿ, ಭಾರೀ ಶಬ್ದ ಹೊರಟೇ ಬಿಟ್ಟಿತಂತೆ. ಕ್ಲಾಸಿನಲ್ಲಿದ್ದ ಮಕ್ಕಳೆಲ್ಲ ಹೋ ಅಂತ ನಕ್ಕರು. ಸಿಸ್ಟರ್ ಒಂಚೂರು ಕೋಪಗೊಳ್ಳಲಿಲ್ಲವಂತೆ. ಬದಲಾಗಿ ಆಕೆ ಹೇಳಿದ್ದು,,,,

“ಯಾಕೆ ನಗುತ್ತೀರಿ ಮಕ್ಕಳೆ? ಇದು ದೇವರು ಕೊಟ್ಟ ಪೀಪಿ”.

ಹತ್ತ್ ಹೆತ್ತವ್ಳಿಗೆ….

hospital

ಆಸ್ಪತ್ರೆಯಲ್ಲಿ ಪುಟ್ಟ ಹುಟ್ಟಿದ ಎರಡನೇ ದಿನ. ಮೊದಲ ದಿನ ಸ್ಪಲ್ಪ ಅತ್ತರೂ ನಾನು ಹಾಗೂ ಅವನಮ್ಮ ತೀರ ಕಂಗಾಲಾಗಿ ಆತನನ್ನು ಸಮಾಧಾನ ಪಡಿಸಲು ಸತತ ಪ್ರಯತ್ನ ಮಾಡುತ್ತಿದ್ದೆವು. ಕೆಲವೊಮ್ಮೆಯಂತೂ ಇಬ್ಬರಿಗೂ ಕೈಕಾಲು ಆಡದ ಸ್ಥಿತಿ. ಒಟ್ಟಿನಲ್ಲಿ ನಮ್ಮ ಉಸಿರೇ ನಿಂತಂತಹ ಅನುಭವ. ಇಬ್ಬರಿಗೂ ಯಾವುದೂ ಗೊತ್ತಿಲ್ಲ. ತೀರ ಹೊಸ ಅನುಭವ. ಪುಟ್ಟನೋ ಚಿತ್ರ ವಿಚಿತ್ರ ಧ್ವನಿಯಲ್ಲಿ ಅತ್ತು ಇಬ್ಬರನ್ನೂ ಹೆದರಿಸುತ್ತಿದ್ದ. ಆದರೆ ಎರಡನೇ ದಿನ ನನ್ನಮ್ಮ ಕೊಪ್ಪದಿಂದ ದೇವತೆಯಂತೆ ಬಂದಳು. ಆಮೇಲೇನು ಕೇಳುವುದು. ಎಲ್ಲ ಜವಾಬ್ದಾರಿಯನ್ನು ಅವಳೇ ವಹಿಸಿಕೊಂಡು ಬಿಟ್ಟಳು.hospital

ಈ ಮಧ್ಯೆ ಬೇರೆ ಬೇರೆ ಸಿಸ್ಟರ್ ಗಳು ಬಂದು ಹೋಗುವುದು ನಡೆದೇ ಇತ್ತು. (ಮೊಟ್ಟ ಮೊದಲ ಬಾರಿ ಬೆಂಗಳೂರಿನ ಆಸ್ಪತ್ರೆಯಲ್ಲಿ ಮಲೆಯಾಳಿಗಳಲ್ಲದ ಅಚ್ಚ ಕನ್ನಡಿಗ ಸಿಸ್ಟರ್ ಗಳನ್ನು ನೋಡಿದ್ದೆ. ಹಾಗೆಂದು ಮಲೆಯಾಳಿ ಸಿಸ್ಟರ್ ಗಳ ಮೇಲೆ ನನಗೆ ಗ್ರಜ್ ಇದೆ ಎಂದು ಭಾವಿಸಬೇಕಿಲ್ಲ) ಇನ್ನೂ 20 ರ ಆಸುಪಾಸಿನಲ್ಲಿರುವ ಸಿಸ್ಟರ್ ಗಳಿಗೆ ಪುಟನನ್ನು ನೋಡಿ ಖುಷಿಯೋ ಖುಷಿ. ಗಂಟೆಗಂಟೆಗೆಲ್ಲ ಬಂದು ಮಾತನಾಡಿಸಿ, ಆರೋಗ್ಯ ವಿಚಾರಿಸಿ ಹೋಗುತ್ತಿದ್ದರು. ಕಾಲ್ ಮಾಡಿದರೆ ತಕ್ಷಣ ಬಂದು ಅಟೆಂಡ್ ಮಾಡುತ್ತಿದ್ದರು. ಒಬ್ಬ ಸಿಸ್ಟರ್ ಮಾತ್ರ ಪುಟ್ಟನನ್ನು ನೋಡುವ ನೆಪದಲ್ಲಿ ನನ್ನವಳಿಗೆ, ನನಗೆ, ನನ್ನಮ್ಮನಿಗೆ ಮಗುವನ್ನು ನೋಡಿಕೊಳ್ಳುವ ಬಗ್ಗೆ ಸಲಹೆ ನೀಡಲಾರಂಭಿಸಿದ್ದಳು. ಸಲಹೆಗಳೆನೋ ಮಹತ್ವದ್ದೇ ಆಗಿದ್ದವು. ಆದರೆ ಆಕೆ ಹೇಳುತ್ತಿದ್ದ ರೀತಿ ಮಾತ್ರ ತೀರ ಅಟಿಟ್ಯೂಡ್ ಆಗಿತ್ತು. ಸಲಹೆಗಳನ್ನು ಆಜ್ಞೆಯಂತೆ ನೀಡುತ್ತಿದ್ದಳು. ಮೇಲಾಗಿ ಆಕೆ ಹೇಳುತ್ತಿದ್ದ ಸಂಗತಿಗಳು ನನ್ನಮ್ಮನಿಗೆ ಗೊತ್ತಿದ್ದವೇ ಆಗಿದ್ದವು. ಬರಬರುತ್ತ ಇದು ನಮಗೆ ಕಿರಿಕಿರಿಯಾಗತೊಡಗಿತು. ಎಷ್ಟೂಂತ ಸಹಿಸಿಕೊಳ್ಳುವುದು.   hospitalಒಂದೆರಡು ಬಾರಿ ನೋಡಿದ ನನ್ನಮ್ಮ ಕಡೆಗೊಮ್ಮೆ ಆಕೆ ವಾರ್ಡ್ ನಿಂದ ಹೊರಕ್ಕೆ ಹೋಗವಾಗ “ಏ ಸುಘೋಷ… ನೋಡಾ, ಹತ್ತ್ ಹೆತ್ತವ್ಳಿಗೆ ಒಂದ್ ಹೆತ್ತವ್ಳು ಹೇಳ್ಳಿಕ್ಕೆ ಬಂದ್ಲಂತೆ…”ಎಂದು ಕಮೆಂಟು ಹಾರಿಸಿದಳು. ಅದಾದ ಮೇಲೆ ಆ ಸಿಸ್ಟರ್ ಳ ಸಲಹೆಗಳು ನಿಂತುಹೋದವು.