ನಾನು ರೈಟಿಸ್ಟೂ ಅಲ್ಲ, ಲೆಫ್ಟಿಸ್ಟೂ ಅಲ್ಲ…

ನಾನು ರೈಟಿಸ್ಟೂ ಅಲ್ಲ, ಲೆಫ್ಟಿಸ್ಟೂ ಅಲ್ಲ. ನಾನು ಕೇವಲ ಜರ್ನಲಿಸ್ಟು!!

.......

ಇಂದಿನ ಒಂದು ಸುದ್ದಿ

ಚಿಕ್ಕಬಳ್ಳಾಪುರದ 52 ವೈದ್ಯರ ವಿರುದ್ಧ ಲೋಕಾಯುಕ್ತರು ದಾಖಲಿಸಿರುವ ಮೊಕದ್ದಮೆ ಕುರಿತಂತೆ ಬಂದ ಸುದ್ದಿಯೊಂದು ಇಲ್ಲಿದೆ.

ವೈದ್ಯರಾಜ ನಮಸ್ತುಭ್ಯಂ ಯಮರಾಜಃ ಸಹೋದರಃ

ಆಂಕರ್ – ಹಳ್ಳಿಗಾಡಿನ ಜನರಿಗೆ ಉಪಯೋಗದವಾಗಲೆಂದೇ ಸರ್ಕಾರ ಕೋಟಿ ಕೋಟಿ ರೂಪಾಯಿ ಅನುದಾನ ಬಿಡುಗಡೆಮಾಡಿ ಗ್ರಾಮೀಣ ಪ್ರದೇಶದಲ್ಲಿ ವೈದ್ಯರನ್ನ ನೇಮಕ ಮಾಡಿದೆ. ಆದರೆ, ಚಿಕ್ಕಬಳ್ಳಾಪುರದಲ್ಲಿ ವೈದ್ಯರು ಕೆಲಸ ಮಾಡದೇ, ಲಕ್ಷಾಂತರ ರೂಪಾಯಿ ಅನುದಾನವನ್ನು ನುಂಗಿ ನೀರು ಕುಡಿದು ಸರ್ಕಾರದ ಬೊಕ್ಕಸಕ್ಕೆ ಉಂಡೆ ನಾಮ ತಿಕ್ಕಿದ್ದಾರೆ. ಈ ಕುರಿತು ಲೋಕಾಯುಕ್ತರು 52 ವೈದ್ಯರ ವಿರುದ್ಧ ಭ್ರಷ್ಟಾಚಾರ ತಡೆ ಮತ್ತು ಐಪಿಸಿ 420 ರ ಕಲಂ ಅಡಿ ದೂರು ದಾಖಲಿಸಿದ್ದಾರೆ. ಆದರೆ ಇದರಿಂದ ತಪ್ಪಿಸಿಕೊಳ್ಳೋಕೆ ಈಗ ಜಿಲ್ಲೆಯ ವೈದ್ಯರು ಸಾಮೂಹಿಕವಾಗಿ ರಾಜೀನಾಮೆ ನೀಡೋಕೆ ಮುಂದಾಗಿದ್ದಾರೆ. ವೈದ್ಯರ ರಾಜೀನಾಮೆ ನಿರ್ಧಾರಕ್ಕೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

(ಚಿಕ್ಕಬಳ್ಳಾಪುರದ ಜನರ ಪ್ರತಿಕ್ರಿಯೆ – “ಈ ಡಾಕ್ಟರ್ ಗಳಿಗೆ ಮಾನ, ಮರ್ಯಾದೆ, ನಾಚಿಕೆ ಏನೂ ಇಲ್ವಾ?”)

ಹೆಚ್ಚಿನ ಮಾಹಿತಿಗೆ ವೀಕ್ಷೀಸಿ – ಸಮಯ ನ್ಯೂಸ್,

ಸಮಯ ಸದಾ ನಿಮ್ಮೊಂದಿಗೆ.

ಹೀಗೊಂದು ಪ್ರಶ್ನೆ….

ಸುದ್ದಿಮನೆಯ ಒತ್ತಡದಿಂದಾಗಿ, ಬರವಣಿಗೆ ಸತ್ತುಹೋಗುತ್ತಿದೆ. ಬ್ಲಾಗಲ್ಲಿ ಬರಯಲು ಆಗುತ್ತಿಲ್ಲ. ಬರೆಯಲು ಕುಳಿತರೆ, ಏನೂ ಹೊಳೆಯುವುದಿಲ್ಲ. ಏನು ಮಾಡಲಿ?

ಬರೆಯುವೆನೆಂದರೆ ಬರೆಯಲಿ ಹ್ಯಾಂಗ?