ಸ್ವಾಮಿ ನಿತ್ಯಾನಂದ ಸಂದರ್ಶನ

ಸ್ವಾಮಿ ನಿತ್ಯಾನಂದರನ್ನು ಮಧುರೈನ ಆಧೀನಂ ಪೀಠದಲ್ಲಿ ಸಂದರ್ಶಿಸಿದ್ದೇನೆ. ಸಂದರ್ಶನ ಇಂದು ರಾತ್ರಿ ಸಮಯ ವಾಹಿನಿಯಲ್ಲಿ 8.05 ಕ್ಕೆ ಪ್ರಸಾರವಾಗಲಿದೆ. ದಯವಿಟ್ಟು ವೀಕ್ಷಿಸಿ.

…….

 

ವೀಣಾ ಮಲಿಕ್ ಜೊತೆ ಒಂದು ಮಾತುಕತೆ.

ಪಾಕಿಸ್ತಾನದ ನಟಿ ವೀಣಾ ಮಲಿಕ್ ರನ್ನು ಸಂದರ್ಶಿಸಿದ್ದೇನೆ. ಇದು ಇಂದು ರಾತ್ರಿ  (25/06/2012) 8.05 ಕ್ಕೆ ಸಮಯ ವಾಹಿನಿಯಲ್ಲಿ ಸಂದರ್ಶನ  ಪ್ರಸಾರವಾಗಲಿದೆ. ದಯವಿಟ್ಟು ವೀಕ್ಷಿಸಿ. ಸಮಯ ವಾಹಿನಿ ಅಲಭ್ಯವಿದ್ದರೆ, http://www.samayatv.in ವೆಬ್ ಸೈಟ್ ಗೆ ಹೋಗಿ ಅಲ್ಲಿ live news ಗೆ ಹೋಗಿ 8.05 ಕ್ಕೆ ವೀಕ್ಷಿಸಬಹುದು.

ಜಯದೇವರ ‘ಕಾಸು-ಕುಡಿಕೆ’

ನಾನು ಇವರನ್ನು ಇದುವರೆಗೂ ಮುಖತಃ ಭೇಟಿಯಾಗಿಲ್ಲ. ಆದರೆ ಕಳೆದ ಸುಮಾರು 1 ವರ್ಷದಿಂದ ನಮ್ಮ ಮಾತುಕತೆ ಫೋನ್ ನಲ್ಲೇ ಸಾಗಿದೆ. ನಾಲ್ಕು ತಿಂಗಳ ಕಾಲ ನಾನು ಹೋಸ್ಟ್ ಮಾಡುತ್ತಿದ್ದ ‘ಸಮಯ ವಾಹಿನಿ’ಯ ‘ಮಾರ್ನಿಂಗ್ ಕಾಫಿ’ಯಲ್ಲಿ ಇವರು ಆರ್ಥಿಕ ಜಗತ್ತಿನ ಆಗುಹೋಗುಗಳನ್ನು ಸೂಕ್ಷ್ಮವಾಗಿ ವಿಶ್ಲೇಷಿಸಿದ್ದಾರೆ. ಉದಯವಾಣಿಯ ಇವರ ಕಾಸು-ಕುಡಿಕೆ ಕಾಲಂ ಈಗಾಗಲೇ ಪ್ರಸಿದ್ಧ. ನಾನು ದಿನಕ್ಕೆ ನಾಲ್ಕಾರು ಬಾರಿ ಫೋನ್ ಮಾಡಿ ಗೋಳು ಹೊಯ್ದುಕೊಂಡರೂ ನಗುತ್ತಲೇ ಮಾಹಿತಿ ನೀಡುವ, ಕೊನೆ ಗಳಿಗೆಯಲ್ಲಿ ಫೋನ್ ಮಾಡಿದರೂ, ಬುಲೆಟಿನ್ ಗೆ ಲೈವ್ ಫೋನೋ ಬರುವ ಇವರೇ ಶ್ರೀ. ಜಯದೇವಪ್ರಸಾದ ಮೊಳೆಯಾರ. ಇದೀಗ ಜಯದೇವರು ತಮ್ಮದೇ ಆದ ಕಾಸು-ಕುಡಿಕೆ ಬ್ಲಾಗ್ ಆರಂಭಿಸಿದ್ದಾರೆ. ನನಗೆ ಜಯದೇವರ ಪರಿಚಯವಾಗಿದ್ದು ‘ಅವಧಿ’ ಹಾಗೂ ಶ್ರೀ. ಜಿ. ಎನ್. ಮೋಹನ್ ರ ಮೂಲಕ.

ಅವರ ಬ್ಲಾಗ್ ಗೆ ಭೇಟಿ ಕೊಡಲು ಇಲ್ಲಿ ಕ್ಲಿಕ್ ಮಾಡಿ.

ವಾಣಿಜ್ಯ, ಬ್ಯಾಂಕಿಂಗ್ ಹಾಗೂ ಷೇರುಮಾರುಕಟ್ಟೆಯ ಸ್ಥಿತಿಗತಿಗಳನ್ನು ಕನ್ನಡದಲ್ಲಿ ಸರಳವಾಗಿ ವಿವರಿಸುವುದು ಸುಲುಭವಲ್ಲ. ಆದರೆ ಜಯದೇವರಿಗೆ ಎರಡೂ ಕಲೆ ಒಲಿದಿದೆ. ಬರವಣಿಗೆ (ಪ್ರಿಂಟ್ ಮೀಡಿಯಾಗಾಗಿ) ಹಾಗೂ ಮೌಖಿಕ ವಿವರಣೆ (ಇಲೆಕ್ಟ್ರಾನಿಕ್ ಮೀಡಿಯಾಗಾಗಿ).  ಆರ್ಥಿಕತೆ ಬಗ್ಗೆ ಕನ್ನಡದಲ್ಲಿ ಲಭ್ಯವಿರುವ ಅತ್ಯುತ್ತಮ ಸಾಹಿತ್ಯ ಇದು ಎಂದರೆ ಅತಿಶಯೋಕ್ತಿಯಾಗಲಾರದು. ಅಂದಹಾಗೆ, ಬ್ಲಾಗ್ ನ ಇಂಗ್ಲೀಷ್ ಅವತರಣಿಕೆ ಕೂಡ ಇದೆ.

 

ಇದೆಂಥ ಕನ್ನಡ ಸ್ವಾಮಿ?

ಕೇಂದ್ರ ಸರ್ಕಾರದ ಅಧೀನಕ್ಕೆ ಒಳಪಟ್ಟ ಇಲಾಖೆಗಳು ಆಗಿಂದಾಗ್ಗೆ ಕನ್ನಡದಲ್ಲಿ ಜಾಹೀರಾತು ಪ್ರಕಟಿಸಿ ಅವಾಂತರ ಸೃಷ್ಟಿಸುತ್ತವೆ. ಅದಕ್ಕೆ ಮತ್ತೊಂದು ನಿದರ್ಶನ ಇಂದಿನ ಕನ್ನಡಪ್ರಭದಲ್ಲಿ ಪ್ರಕಟವಾಗಿರುವ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಮಂತ್ರಾಲಯದ ಜಾಹೀರಾತು. ಅದು ಹೀಗಿದೆ.

………….