ಕೇರಳ ಗಡಿ ಗ್ರಾಮಗಳ ಕನ್ನಡ ಹೆಸರುಗಳನ್ನು ಮಲಯಾಳಂಗೆ ಬದಲಾವಣೆ ಮಾಡುವ ಕೇರಳ ಸರ್ಕಾರದ ಕ್ರಮವನ್ನು ಕುರಿತಂತೆ ಸಚಿವ ಅರವಿಂದ ಲಿಂಬಾವಳಿ, ಮುಖ್ಯಮಂತ್ರಿಗಳಿಗೆ ಬರೆದ ಪತ್ರ

ಸನ್ಮಾನ್ಯ ಮುಖ್ಯಮಂತ್ರಿಗಳಿಗೆ ವಂದನೆಗಳು,

ಈ ಮೂಲಕ ತಮ್ಮ ಆದ್ಯ ಗಮನಕ್ಕೆ ತರಲು ಬಯಸುವುದೇನೆಂದರೆ ಕರ್ನಾಟಕದ ಗಡಿ ಪ್ರದೇಶಗಳಾದ ಕಾಸರಗೋಡು ಮತ್ತು ಮಂಜೇಶ್ವರ ಸೇರಿದಂತೆ ಕೆಲವು ತಾಲ್ಲೂಕುಗಳ ಕನ್ನಡ ಗ್ರಾಮಗಳ ಹೆಸರುಗಳನ್ನು ಮಲೆಯಾಳಿ ಭಾಷೆಗೆ ಬದಲಾವಣೆ ಮಾಡಲು ಕೇರಳ ಸರ್ಕಾರ ನಿರ್ಣಯ ಕೈಗೊಂಡು ಆ ಪ್ರಕ್ರಿಯೆಗೆ ಚಾಲನೆ ನೀಡಿದೆ.

ಈ ಪ್ರದೇಶಗಳಲ್ಲಿ ಕನ್ನಡ ಭಾಷಿಕರು ಅಧಿಕ ಸಂಖ್ಯೆಯಲ್ಲಿದ್ದಾರೆ. ಶತಶತಮಾನಗಳಿಂದಲೂ ಕನ್ನಡ ಭಾಷೆ ಮತ್ತು ಸಂಸ್ಕೃತಿಯನ್ನು ಇಲ್ಲಿನ ಜನ ರೂಢಿಸಿಕೊಂಡಿದ್ದಾರೆ. ಕನ್ನಡ ಪರಂಪರೆಯನ್ನು ಪಾಲಿಸಿಕೊಂಡು ಬಂದಿರುವ ಇಲ್ಲಿನ ಜನರ ಭಾವನೆಗಳಿಗೆ ಇದರಿಂದ ಧಕ್ಕೆಯಾಗಿದೆ. ಪ್ರತಿಯೊಂದು ಗ್ರಾಮದ ಹೆಸರೂ ಅಲ್ಲಿನ ಜನರೊಂದಿಗೆ ಭಾವನಾತ್ಮಕ ಸಂಬಂಧ ಹೊಂದಿರುತ್ತದೆ. ಮತ್ತು ಅಲ್ಲಿನ ಸ್ಥಳೀಯ ಸಾಂಸ್ಕೃತಿಕ ಪರಂಪರೆಯನ್ನು ಪ್ರತಿಬಿಂಬಿಸುವಂತಿರುತ್ತದೆ. ಆ ಹೆಸರಿನಲ್ಲಿ ಒಂದು ಜನ ಸಂಸ್ಕೃತಿ ಬೆಳೆದಿರುತ್ತದೆ. ಇದನ್ನು ಬದಲಾವಣೆ ಮಾಡುವುದರಿಂದ ಆ ಜನ ಸಂಸ್ಕೃತಿಗೆ ಪೆಟ್ಟು ಬೀಳುತ್ತದೆ. ಈ ಗ್ರಾಮಗಳ ಹೆಸರುಗಳನ್ನು ಬದಲಾವಣೆ ಮಾಡುವ ಬಗ್ಗೆ ಅಲ್ಲಿನ ಸರ್ಕಾರ ಆ ಗ್ರಾಮಗಳ ಜನರೊಂದಿಗೆ ಚರ್ಚಿಸಿ ಕನಿಷ್ಠ ಅವರ ಅಭಿಪ್ರಾಯ ಸಂಗ್ರಹಿಸುವ ಕೆಲಸವನ್ನೂ ಮಾಡದೆ ಏಕ ಪಕ್ಷೀಯವಾಗಿ ನಿರ್ಧಾರ ಕೈಗೊಂಡಿದೆ.

ಹಾಗಾಗಿ ಕನ್ನಡದ ಅಸ್ಮಿತೆಯನ್ನು ಕಾಪಾಡುವ ನಿಟ್ಟಿನಲ್ಲಿ ನಾವು ಕೇರಳ ಸರ್ಕಾರದ ಈ ಕ್ರಮವನ್ನು ಬಲವಾಗಿ ವಿರೋಧಿಸಬೇಕಾಗಿದೆ. ಇದೊಂದು ಭಾವನಾತ್ಮಕ, ಸೂಕ್ಷ್ಮ ವಿಚಾರವಾಗಿರುವುದರಿಂದ ತಾವು ಕೇರಳ ರಾಜ್ಯದ ಸನ್ಮಾನ್ಯ ಮುಖ್ಯಮಂತ್ರಿಗಳಿಗೆ ಪತ್ರ ಬರೆದು, ಕನ್ನಡ ಗ್ರಾಮಗಳ ಕನ್ನಡದ ಹೆಸರುಗಳನ್ನು ಮಲೆಯಾಳಿ ಭಾಷೆಗೆ ಬದಲಾವಣೆ ಮಾಡುವ ಪ್ರಕ್ರಿಯೆ ಕೈಬಿಡಬೇಕೆಂದು ಒತ್ತಾಯಿಸಲು ಈ ಮೂಲಕ ತಮ್ಮನ್ನು ಕೋರುತ್ತೇನೆ.

ಗೌರವಗಳೊಂದಿಗೆ,
ತಮ್ಮ ವಿಶ್ವಾಸಿ,

                                                                                          (ಅರವಿಂದ ಲಿಂಬಾವಳಿ)

ಶ್ರೀ ಬಿ.ಎಸ್.ಯಡಿಯೂರಪ್ಪ ನವರು
ಸನ್ಮಾನ್ಯ ಮುಖ್ಯಮಂತ್ರಿಗಳು,
ಕರ್ನಾಟಕ ಸರ್ಕಾರ,
ವಿಧಾನಸೌಧ, ಬೆಂಗಳೂರು.

Kerala state government is implementing its decision to change the Kannada names of villages in Kasargod and Manjeshwar taluks, which border Karnataka, into Malayalam.
Kannada speaking people are in high number in these taluks. They have been speaking Kannada and also following Kannada culture for several centuries. The Kannada name of every village reflects the culture of the local residents. The people too are emotionally attached to these names.
The move of the Kerala government severely affects the life of such citizens. The government should have at least discussed the matter with the local residents and taken their opinion before making the move. The present decision, therefore, is totally unilateral.
We must strongly oppose the move of the Kerala government as a move to protect Kannada culture. Since the issue is about emotions of the people and also a sensitive one, Hence Arvind Limbavali has requested Shri. B.S.Yediyurappa to write to the honourable chief minister of Kerala, and urge him to withdraw the decision to rename the villages into Malayalam.

ಮಕ್ಕಳಿಗೆ ಹಾಡುಗಳ ಬೇಸಿಗೆ ಶಿಬಿರ

ಅಮೆರಿಕಾದ Bliss ಸಹಯೋಗದೊಂದಿಗೆ ವಿ .ಆಶಾ ಜಗದೀಶ್ ರವರು ಮಕ್ಕಳ ಹಾಡುಗಳ ಬೇಸಿಗೆ ಶಿಬಿರವನ್ನು 3 ವಾರಗಳ ಕಾಲ ನಡೆಸಿಕೊಡಲಿದ್ದಾರೆ.ಆಸಕ್ತಿಯುಳ್ಳವರು ಅಮೆರಿಕಾದಲ್ಲಿರುವ ನಿಮ್ಮ ಬಂಧು ಮಿತ್ರರಿಗೆ ಶೇರ್ ಮಾಡಿ ಮಕ್ಕಳ ಕನ್ನಡದ ಹಾಡು ಕಲಿಯಲು ಸದುಪಯೋಗ ಪಡೆಯಲಿ .,💐

ಆತ್ಮವಿಶ್ವಾಸ ಕುಗ್ಗಿದೆಯೇ? ನನ್ನ ಕಥೆ ಸ್ವಲ್ಪ ಕೇಳಿ…

ಜಿ. ವಿಕ್ರಮ ಪದಕಿ

ಪಿಯುಸಿಗೆ ಬಂದ ನಂತರವೂ ರಾತ್ರಿ ನಿದ್ದೆಯ ವೇಳೆ ಹಾಸಿಗೆಯಲ್ಲಿ ಮೂತ್ರ ಮಾಡುವವರನ್ನು ಕಂಡಿದ್ದೀರಾ, ಕೇಳಿದ್ದೀರಾ? ನಾನಿದ್ದೇನೆ – ವಿಕ್ರಮ ಪದಕಿ.

ನನ್ನ ಚಿಕ್ಕವಯಸ್ಸಿನಲ್ಲಿ ಆತ್ಮವಿಶ್ವಾಸ ಕುಗ್ಗಿ ಪಾತಾಳಕ್ಕೆ ಹೋಗಿದ್ದಕ್ಕೆ ಇದೇ ಮೊಟ್ಟಮೊದಲ ಕಾರಣವಾಗಿತ್ತು. ಹೌದು ಇದು ಸತ್ಯ. ಹುಟ್ಟಿದ ಕೂಸೋ ಅಥವಾ ಎರಡು ವರ್ಷದೊಳಗಿನ ಮಗುವೋ ಹಾಸಿಗೆ ಒದ್ದೆ ಮಾಡಿಕೊಳ್ಳುವುದನ್ನು ಕೇಳಿರುತ್ತಾರೆ. ಆದರೆ ನನಗೆ ಆ ತೊಂದರೆ ಬಿಟ್ಟೂಬಿಡದೆ ಬರೋಬ್ಬರಿ ೧೭ನೇ ವಯಸ್ಸಿನವರೆಗೂ ಕಾಡಿತು. ಈ ವಿಷಯ ತಿಳಿದ ಎಷ್ಟೋಮಂದಿ ನನ್ನನ್ನು ಲೇವಡಿ ಮಾಡುತ್ತಿದ್ದರು – ‘ಉಚ್ಚೆಬುರುಕ’ ಎಂದು. ಅಬ್ಬಾ ‘ಉಚ್ಚೆಬುರುಕ’ – ಈ ಪದ ನನ್ನ ಬಹುದೊಡ್ಡ ಶತ್ರುವಾಗಿತ್ತು. ಇದನ್ನು ಕೇಳಿದರೆ ಸುತ್ತಿಗೆಯಿಂದ ನೇರ ನನ್ನ ತಲೆಗೇ ಯಾರೋ ಹೊಡೆದಂತೆ ಭಾಸವಾಗುತ್ತಿತ್ತು. ಈಗ ನನಗೆ ೩೫ ವರ್ಷ. ಸುಮಾರು ೧೮ ವರ್ಷಗಳ ನಂತರ ಈ ಪದ ಮರಳಿ ನೆನಪಿಗೆ ಬಂದು ಮೈ ಝುಮ್ ಎಂದಿತು.

ಚಿಕ್ಕಂದಿನಲ್ಲಿ ಎಷ್ಟರಮಟ್ಟಿಗೆ ಕೀಳರಿಮೆಯೆಂದರೆ, ಯಾರಾದರೂ ಹೊಸಬರಿಗೆ ಈ ವಿಷಯ ತಿಳಿದರೆ ನನ್ನ ಉಸಿರು ಅಡಗಿ ಹೋಗುತ್ತಿತ್ತು‌, ತಲೆ ತಗ್ಗಿಸಬೇಕಾಗುತ್ತಿತ್ತು, ಗಂಟಲು ಒಣಗಿ ಮಾತೇ ಹೊರಡದಂತಾಗುತ್ತಿತ್ತು. ಮುಜುಗರದ ಮುದ್ದೆಯಾಗಿ ಮನಸ್ಸು ಬಾಡಿ ಹೋಗುತ್ತಿತ್ತು. ಬೇಸರದಿಂದ ಉಕ್ಕುತ್ತಿದ್ದ ಕಣ್ಣೀರನ್ನು ತಡೆಹಿಡಿಯಲು ಸಾಹಸ ಪಡುತ್ತಿದ್ದೆ. ಏನು ಮಾಡಿದರೂ ಇದು ನಿಲ್ಲುತ್ತಿಲ್ಲವಲ್ಲಾ ಎಂಬ ಹತಾಶೆ, ಸಿಟ್ಟು, ಆಕ್ರೋಶ, ಉದ್ವೇಗ, ಅವಮಾನಗಳು ಇಡೀದಿನ ಕಾಡುತ್ತಿತ್ತು.

ಸ್ವಲ್ಪ ಊಹಿಸಿಕೊಳ್ಳಿ – ಮನೆಯ ಹಾಲಿನಲ್ಲಿ ಸುಮಾರು ಹದಿನೈದು ಜನ ನೆಂಟರು ಸೇರಿ ಹರಟುತ್ತಿದ್ದಾರೆ. ಅಲ್ಲಿ ನಾನು ಆರನೇ ತರಗತಿ ವಿದ್ಯಾರ್ಥಿ ಇದ್ದೇನೆ. ಏನೋ ಲೋಕಾಭಿರಾಮ ಮಾತುಗಳ ನಡುವೆ ಥಟ್ಟನೆ ಎಲ್ಲರ ಮುಂದೆ ‘ವಿಕ್ರಮ ಇನ್ನೂ ರಾತ್ರಿ ಹಾಸಿಗೆಯಲ್ಲಿ ಉಚ್ಚೆ ಮಾಡೋದೇ ನಿಲ್ಲಿಸಿಲ್ಲವಂತೆ , ಹೌದೇ ?’ ಎಂಬ ಮಾತು ಬಂದರೆ ನನ್ನ ಪರಿಸ್ಥಿತಿ ಹೇಗಿರಬೇಡ?

ಹಿಂದಿಯ ‘ ತಾರೆ ಜಮೀನ್ ಪರ್’ ಸಿನೆಮಾದ ಹುಡುಗ ಇಶಾನ್, ‘ಹಿಚ್ಕಿ’ ಸಿನೆಮಾದ ಬಿಕ್ಕಳಿಸುವ ಹುಡುಗಿ ಬಚ್ಚಲುಮನೆಯಲ್ಲಿ ಅವಿತುಕೊಂಡು ಬಿಕ್ಕಳಿಸಿ ಬಿಕ್ಕಳಿಸಿ ಅಳುವುದನ್ನು ನೋಡಿದ್ದೀರಾ ಅಲ್ಲವೇ? ನಾನು ಸಹ ಥೇಟ್ ಹಾಗೆಯೇ ಇದ್ದೆ. ‘ಯೂಂ ತೋ ಮೇ ಬತ್ಲಾತಾ ನಹಿ, ಪರ್ ಅಂಧೇರೆ ಸೆ ಡರ್ತಾ ಹೂಂ ಮೇ ಮಾ. ತುಝೆ ಸಬ್ ಹೆ ಪತಾ ಹೆ ನಾ ಮಾ?’ ಇದು ಅಕ್ಷರಶಃ ನನ್ನ ಹಾಡು.

ಈ ಸಮಸ್ಯೆಯನ್ನು ನಿಲ್ಲಿಸಲು ಮನೆಯವರು ಮಾಡದ ಪ್ರಯತ್ನಗಳಿಲ್ಲ, ಕಾಣದ ವೈದ್ಯರಿಲ್ಲ, ಹರಸಿಕೊಳ್ಳದ ದೇವರಿಲ್ಲ, ನಾನು ತೆಗೆದುಕೊಳ್ಳದ ಮದ್ದುಗಳಿಲ್ಲ. ನನ್ನ ಕುಟುಂಬದವರು ಮಾನಸಿಕವಾಗಿ ಧೈರ್ಯ ತುಂಬಿ ನನ್ನ ಜೊತೆ ನಿಂತಿರದಿದ್ದರೆ, ಬಹುಶಃ ನಾನು ಡಿಪ್ರೆಶನ್ ಗೆ ಹೋಗಿ ಒಂದೋ ಹುಚ್ಚನಾಗುತ್ತಿದ್ದೆ ಅಥವಾ ಆತ್ಮಹತ್ಯೆಗೆ ಶರಣಾಗುತ್ತಿದ್ದೆ(ಈ ಯೋಚನೆಯೂ ಕೆಲವು ಸಲ ಮಿಂಚಿನಂತೆ ಆ ಸಮಯದಲ್ಲಿ ಬಂದಿದ್ದು ಸತ್ಯ).

ನನಗಾಗಿ ಒಂದು ಜೊತೆ ಹಾಸಿಗೆ, ಚಾದರ, ಹೊದಿಕೆ ಹಾಗೂ ರಬ್ಬರ್ ಶೀಟ್ ಗಳಿದ್ದವು – ಸದಾ ಮುಗ್ಗಲು ನಾಥ. ನನಗೆ ಬೇಸರವಾಗದಿರಲಿ ಎಂದು ಅಜ್ಜಿ ಹಾಗೂ ತಾತನ ಹಾಸಿಗೆಯ ಮಧ್ಯದಲ್ಲಿ ನೆಲದ ಮೇಲೆ ಇವುಗಳನ್ನು ಪ್ರತಿದಿನ ಹಾಸುತ್ತಿದ್ದರು ನನ್ನ ತಾತ. ದಿನವಿಡೀ ಕಚೇರಿ ಹಾಗೂ ಮನೆಯ ಕೆಲಸಗಳಿಂದ ದಣಿದಿದ್ದರೂ, ತಾತ ನನಗಾಗಿ ರಾತ್ರಿ ಪಾಳಿಯ ಹಠ ಹಿಡಿದಿದ್ದರು. ಎರಡು ಗಂಟೆಗಳಿಗೊಮ್ಮೆ ನನ್ನನ್ನು ನಿದ್ದೆಯಿಂದ ಎಚ್ಚರಿಸಿ ಬಚ್ಚಲುಮನೆಗೆ ಎಸ್ಕಾರ್ಟಿಂಗ್ ಮಾಡುತ್ತಿದ್ದರು. ಊಹೂಂ – ಇದ್ಯಾವುದಕ್ಕೂ ಬಗ್ಗಲೇ ಇಲ್ಲ ನನ್ನ ಭಂಡ ಸಮಸ್ಯೆ. ಬೆಳಗಿನ ಜಾವ ನಾಲ್ಕಕ್ಕೆ ಬಚ್ಚಲು ಮನೆಗೆ ಹೋಗಿದ್ದರೂ, ಅದ್ಯಾವುದೋ ಮಾಯೆಯಲ್ಲಿ ಐದು ಗಂಟೆಗೆ ಹಾಸಿಗೆ ಒದ್ದೆ ಮಾಡಿರುತ್ತಿದ್ದೆ. ಬೆಳಿಗ್ಗೆ ಎಚ್ಚರವಾದ ಮೇಲೆ ಮತ್ತೆ ನಿರಾಶೆ. ನನ್ನ ಅಮ್ಮನಿಗೆ ಪ್ರತಿದಿನ ಬೆಳಿಗ್ಗೆ ನನ್ನ ಉಡುಗೊರೆ – ರಟ್ಟೆ ಮುರಿದು ಒಗೆಯಲು ಈ ಗಡವ ಕೂಸಿನ ‘ಉಚ್ಚೆ ಬಟ್ಟೆ’. ಮನೆಯಲ್ಲಿ ವಾಷಿಂಗ್ ಮಷೀನ್ ಇಲ್ಲ ಮತ್ತೊಂದಿಲ್ಲ. ಎಂದಿಗಾದರೂ ಸರಿಹೋಗಬಹುದು ಎನ್ನುವ ಆಶಾವಾದ ಹೊತ್ತುಕೊಂಡೇ ೧೭ ವರ್ಷ ಈ ಚಾಕರಿ ಮಾಡಿದ್ದಾರೆ ನನ್ನ ಅಮ್ಮ. ಈ ಬಟ್ಟೆಗಳ ದುರ್ನಾಥ ನನಗೇ ಸಹಿಸಿಕೊಳ್ಳಲು ಆಗುತ್ತಿರಲಿಲ್ಲ, ಆದರೆ ಪುಣ್ಯಾತ್ಮರು ನನ್ನ ಕುಟುಂಬದವರು ಅದು ಹೇಗೆ ಸಹಿಸಿಕೊಂಡರೋ.
ಇಷ್ಟರ ಮಧ್ಯೆಯೂ ನಾನು ಅತಿಯಾದ ಮುಜುಗರದಿಂದ ಬಾಡಿ ಹೋಗದಂತೆ ನೋಡಿಕೊಂಡಿದ್ದರು ಮನೆಯಲ್ಲಿದ್ದ ಅಜ್ಜಿ-ತಾತ, ಅಪ್ಪ-ಅಮ್ಮ, ಚಿಕ್ಕಪ್ಪಂದಿರು, ಸೋದರತ್ತೆಯರು ಹಾಗೂ ನನ್ನ ತಮ್ಮ ಇವರೆಲ್ಲರೂ.

ಇಷ್ಟು ಸಾಲದೆಂಬಂತೆ ಚಿಕ್ಕಂದಿನಲ್ಲಿ ಹೆಬ್ಬೆರಳು ಚೀಪುತ್ತಾ ಮುಂದಿನ ಹಲ್ಲುಗಳು ಉಬ್ಬಿದ್ದವು. ‘ಹಲ್ಲುಬ್ಬ’, ‘ಹಲ್ಗೇಶ’, ‘ತುರಿಯೋ ಮಣೆ’ ಎನ್ನುವ ಬಿರುದುಗಳು ದೊರಕಿದ್ದವು. ಮೂಳೆಗಳಿಗೆ ಚರ್ಮ ಅಂಟಿಕೊಂಡಿದ್ದ ನನ್ನ ದೇಹದಿಂದ ‘ಸಣಕಲ’, ‘ಕಡ್ಡಿ ಪಿತ್ತಾ’, ‘ಸ್ಕೆಲಿಟನ್’ ಎನ್ನುವ ನಾಮಾವಳಿಗಳು ಬೇರೆ.
ವಿಕ್ರಮನ ಮದುವೆಗೆ ಎಲ್ಲರೂ ರಬ್ಬರ್ ಶೀಟ್ ಉಡುಗೊರೆ ಕೊಡೋಣ, ಮದುವೆಗೆ ಮುಂಚೆ ಹಲ್ಲಿಗೆ ಕ್ಲಿಪ್ ಹಾಕಿಸೋಣ ಎಂದು ಕೆಲವರು ಲೇವಡಿ ಮಾಡುತ್ತಿದ್ದರು.

ಶಾಲೆಯಿಂದ ೨-೩ ದಿನಗಳ ಪ್ರವಾಸ ಹಮ್ಮಿಕೊಂಡರೆ, ಏನೋ ಕುಂಟು ನೆಪ ಹೇಳಿ ತಪ್ಪಿಸಿಕೊಳ್ಳುತ್ತಿದ್ದೆ. ಈ ಪರಿಸ್ಥಿತಿಯಲ್ಲಿ ಯಾವ ಮುಖ ಹೊತ್ತು ಗೆಳೆಯರ ಜೊತೆ ಪ್ರವಾಸಕ್ಕೆ ಹೋಗುತ್ತಿದ್ದೆ ಹೇಳಿ? ಮದುವೆ, ಮುಂಜಿ ಇತ್ಯಾದಿಗಳಿಗೆ ಒಂದೆರಡು ದಿನ ಮುಂಚಿತವಾಗಿ ನೆಂಟರ ಮನೆಗಳಿಗೆ, ಛತ್ರಗಳಿಗೆ ಹೋಗುವ ಆಸೆ ಅತಿಯಾಗಿದ್ದರೂ, ಧೈರ್ಯವಿರುತ್ತಿರಲಿಲ್ಲ. ಅಮ್ಮ ಅಥವಾ ಅಜ್ಜಿ ಜೊತೆಯಲ್ಲಿ ಇದ್ದರೆ ಮಾತ್ರ ಹೋಗುತ್ತಿದ್ದೆ. ಬಟ್ಟೆಯ ಚೀಲದಲ್ಲಿ ನನ್ನ ರಬ್ಬರ್ ಶೀಟ್, ಚಾದರ, ಹೊದಿಕೆಗಳು ಇರುತ್ತಿತ್ತು. ಬೇಸಿಗೆ ರಜೆಗಳಲ್ಲಿ ಯಾರ ಮನೆಯಲ್ಲಿ ನನಗೆ ಮುಜುಗರವಿಲ್ಲದಷ್ಟು ಸಲಿಗೆಯಿತ್ತೋ ಅಲ್ಲಿಗೆ ಮಾತ್ರ ಹೋಗುತ್ತಿದ್ದೆ.

ವಿದ್ಯಾರ್ಥಿ ಜೀವನದಲ್ಲಿ ಇವೆಲ್ಲವೂ ಖಂಡಿತ ನನ್ನ ವಿದ್ಯಾಭ್ಯಾಸ, ಮಾನಸಿಕ/ ಬೌದ್ಧಿಕ/ ದೈಹಿಕ ಬೆಳವಣಿಗೆಗಳ ಮೇಲೆ ಪರಿಣಾಮ ಬೀರಿತ್ತು.

ಪಿಯುಸಿ ಹೊತ್ತಿಗೆ ಸಮಸ್ಯೆ ದೂರವಾಗಿತ್ತು. ಮಾಡಿದ ನೂರಾರು ಪ್ರಯತ್ನಗಳಲ್ಲಿ ಯಾವುದು ನಿಜವಾಗಿಯೂ ಫಲಕೊಟ್ಟಿತೋ ಹೇಳುವುದು ಕಷ್ಟ. ಅಲ್ಲಿಯವರೆಗೆ ಧೃತಿಗೆಡದೆ, ಯಾವುದೇ ತಪ್ಪು ನಿರ್ಧಾರಗಳನ್ನು ಮಾಡದಿರುವ ಶಕ್ತಿಯನ್ನು ದೇವರು ನನಗೆ ನೀಡಿದ್ದ. ಇದರ ಜೊತೆಗೆ, ಬಹಳ ಮುಖ್ಯವಾಗಿ, ನನ್ನ ಈ ನ್ಯೂನತೆಯ ವಿಚಾರ ತಿಳಿದಿದ್ದವರಲ್ಲಿ, ಲೇವಡಿ ಮಾಡುವ ಜನರಿಗಿಂತ ಧೈರ್ಯ ತುಂಬುವ ಜನರೇ ನನ್ನ ಸುತ್ತಲೂ ಹೆಚ್ಚಿದ್ದರು.

ಅಂತೂ ಬದುಕಿನ ಆ ಕರಾಳ ಹಂತವನ್ನು ದಾಟಿ ಹೊಸ ಬದುಕನ್ನು ಕಟ್ಟಿಕೊಂಡೆ. ಕಾಲೇಜಿನಲ್ಲಿ ಹೊಸ ಹುರುಪು ಬಂತು. ಓದಿನ ಜೊತೆ ಸಾಂಸ್ಕೃತಿಕ ಚಟುವಟಿಕೆಗಳು ಆತ್ಮವಿಶ್ವಾಸ ತುಂಬಿದವು. ಸಾಹಿತ್ಯ, ನಾಟಕಗಳ ನಂಟು ಹೊಸ ತಿರುವು ಕೊಟ್ಟವು. ಕಾಲೇಜಿನಲ್ಲಿದ್ದಾಗ ವಾರಗಟ್ಟಲೆ ಸ್ನೇಹಿತರೊಂದಿಗೆ ಎಷ್ಟೋ ಪ್ರವಾಸಗಳಿಗೆ ಮನಃಸ್ಪೂರ್ತಿಯಾಗಿ ಹೋಗುತ್ತಿದ್ದೆ (ಇದು ನನ್ನ ಪಾಲಿಗೆ ಆಕ್ಷಣದ ದೊಡ್ಡ ವರವಾಗಿ ಕಂಡಿತ್ತು).

ಕಾಲೇಜಿನಲ್ಲಿ, ನೌಕರಿಯ ಕಚೇರಿಗಳಲ್ಲಿ ನಂತರ ಸ್ವಂತ ಉದ್ಯೋಗದ ಜೀವನದಲ್ಲಿ ಸಿಕ್ಕ ನೂರಾರು ಒಳ್ಳೆಯ ಸ್ನೇಹಿತರು, ಸಹೋದ್ಯೋಗಿಗಳು, ಮಡದಿ, ಮಗಳು ಎಲ್ಲರೂ ಈಗ ನನ್ನ ಬದುಕಿನ ಬಂಡಿಯ ಇಂಧನವಾಗಿದ್ದಾರೆ.

ತಾಳ್ಮೆ, ಆಶಾವಾದ, ಗುರುಹಿರಿಯರ ಆಶೀರ್ವಾದ, ಕೆಲಸ ಮಾಡಿತು. ಕಷ್ಟವಾಗಲೀ, ಸುಖವಾಗಲೀ ಶಾಶ್ವತವಲ್ಲ. ಈಗ ಹಳೆಯ (ಮುಜುಗರದಿಂದ ಅಳುತ್ತಿದ್ದ) ದಿನಗಳನ್ನು ನೆನೆದರೆ ಹುಸಿನಗೆ ಬರುವುದು. ಇಂದು ನನ್ನ ನ್ಯೂನತೆ ಬಗ್ಗೆ ಯಾರಾದರೂ ಲೇವಡಿ ಮಾಡಿದರೆ ಅದನ್ನು ನಗುತ್ತಾ ಸ್ವಾಗತಿಸುವೆ.

ನೀವೂ ಸಹ ಇಂತಹ ಯಾವುದಾದರೂ ಆತ್ಮವಿಶ್ವಾಸ ಕುಗ್ಗಿಸುವ ಸುಳಿಯಲ್ಲಿ ಸಿಕ್ಕಿದ್ದರೆ ಧೈರ್ಯಗೆಡಬೇಡಿ. ಇದರಿಂದ ಹೊರಬರುವ ಸತತ ಪ್ರಯತ್ನದಲ್ಲಿರಿ. ನಿಮ್ಮ ಸುತ್ತಮುತ್ತ ಇಂತಹ ಸುಳಿಯಲ್ಲಿ ಸಿಲುಕಿರುವವರನ್ನು ಲೇವಡಿ ಮಾಡದೇ, ಅವರಿಗೆ ಧೈರ್ಯ, ಆತ್ಮವಿಶ್ವಾಸವನ್ನು ತುಂಬುವ ಕೆಲಸ ಮಾಡಿ.

ಬನ್ನಿ, ಜಗವನ್ನು ಎಲ್ಲರೂ ಖುಷಿಯಾಗಿ ಬದುಕುವಷ್ಟು ಯೋಗ್ಯವಾಗಿಸೋಣ.

ಎಲ್ಲೋ ಇರುವ ಗ್ರಹಗಳು ಮನುಷ್ಯನ ಭವಿಷ್ಯ ನಿರ್ಧರಿಸುತ್ತವೆಯೆ? ಈ ಜ್ಯೋತಿಷ್ಯ ನಿಜವೆ?

ನಿನಗೆ ಗುರುಬಲ ಇಲ್ಲ, ನಿನಗೆ ಸಾಡೇ ಸಾತಿ ಇದೆ, ಆಕೆ ಮಾಂಗಲಿಕ್ ಇದ್ದಾಳೆ – ಹೀಗೆ ಗ್ರಹಗಳನ್ನು ಆಧರಿಸಿ ಜ್ಯೋತಿಷಿಗಳು ಮಾತನಾಡುತ್ತಾರೆ. ಆದರೆ ಭೂಮಿಯಿಂದ ಸಾವಿರಾರು ಜ್ಯೋತಿವರ್ಷಗಳಷ್ಟು ದೂರ ಇರುವ ಈ ಗ್ರಹಗಳು ನಿಜವಾಗಿಯೂ ಮನುಷ್ಯನ ಬದುಕಿನ ಮೇಲೆ, ಭವಿಷ್ಯದ ಮೇಲೆ ಪರಿಣಾಮ ಬೀರುತ್ತವೆಯೆ? ಗ್ರಹಗಳು ಭವಿಷ್ಯ ನಿರ್ಧರಿಸುತ್ತವೆ ಎಂದಾದರೆ ಮನುಷ್ಯ ಪ್ರಯತ್ನಕ್ಕೆ ಇರುವ ಬೆಲೆ ಏನು? ಈ ಕುರಿತು ಮಾತನಾಡಿದ್ದಾರೆ ಭಾರತ ತತ್ವಜ್ಞಾನಿ ಡಾ. ಮನೀಷ್ ಮೋಕ್ಷಗುಂಡಂ.

ಪುಣೆಯ ಭೋರ್ ರಾಜವಾಡೆ ನೋಡಿದ್ದೀರಾ?

ಇದು ಪುಣೆ ಸಮೀಪದ ಭೋರ್ ನಲ್ಲಿರುವ ರಾಜವಾಡೆ. ಇಂದಿಗೂ ಇತಿಹಾಸವನ್ನು ಸಾರುತ್ತಿದೆ.

Does Urdu Belongs to only Muslims?

Urdu has been an integral part of Indian diaspora. It was boron in India, nurtured in India and flourished in India. Many think that it is a language of Muslims. Is there a truth in it? Janab Maher Mansoor speaks about all the aspects related to Urdu in this vide.

ಕೇಳು ಜನಮೇಜಯ – 2003 ರಲ್ಲಿ ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರದರ್ಶನಗೊಂಡ ನಾಟಕ

ಶ್ರೀರಂಗ (ಆದ್ಯರಂಗಾಚಾರ್ಯ) ಅವರ ನಾಟಕ ಕೇಳು ಜನಮೇಜಯ. ಕನ್ನಡ ಸಾರಸ್ವತ ಲೋಕ ಕಂಡ ಅನೇಕ ನಾಟಕಕಾರು ಹಾಗೂ ಸಾಹಿತಿಗಳಲ್ಲಿ ಪ್ರಮುಖಕರು. ಕೇಳು ಜನಮೇಜಯ ಅವರ ಪ್ರಸಿದ್ಧ ನಾಟಕ. ಇಂದಿಗೂ ಪ್ರದರ್ಶನ ಕಾಣುತ್ತಲೇ ಇದೆ. 2003 ರಲ್ಲಿ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಶ್ರೀರಂಗ ನಾಟಕೋತ್ಸವವನ್ನು ಆಯೋಜಿಸಲಾಗಿತ್ತು. ಆ ಸಂದರ್ಭದಲ್ಲಿ ಸ್ನೇಹ ಸಮೂಹ ತಂಡ ಪ್ರದರ್ಶಶಿಸಿದ ನಾಟಕವೇ ಕೇಳು ಜನಮೇಜಯ. ರಚನೆ – ಶ್ರೀರಂಗ. ನಿರ್ದೇಶನ – ಇಕ್ಬಾಲ್ ಅಹಮದ್