ಹನಿ ನೀರಾವರಿ ಪದ್ಧತಿ ಹೀಗೆ ಮಾಡಬಹುದು

ಕುಸಿಯುತ್ತಿರುವ ಅಂತರ್ಜಲ, ಕಡಿಮೆಯಾಗುತ್ತಿರುವ ಮಳೆ ಹೀಗೆ ಅನೇಕ ಕಾರಣಗಳಿಂದ ರೈತರು ಇಂದು ಹೊಸ ಹೊಸ ನೀರಿನ ಸದ್ಬಳಕೆಯ ಪದ್ಧತಿಗಳತ್ತ ಹೊರಳುತ್ತಿದ್ದಾರೆ. ಹನಿ ನೀರಾವರಿ ಈ ಕ್ಷೇತ್ರದಲ್ಲಿ ರೈತರಿಗೆ ವರದಾನವಾಗಿ ಪರಿಣಮಿಸಿದೆ. ಹನಿ ನೀರಾವರಿಯ ಕುರಿತಾದ ವರದಿ ಇಲ್ಲಿದೆ. #cautiousmind

ಹಾಡಿನ ರೂಪದಲ್ಲಿ ಕರ್ನಾಟಕದ ಜಿಲ್ಲೆಗಳು

ಜಿಲ್ಲೆಗಳ ಹೆಸರುಗಳನ್ನು ಕಂಠಪಾಠಮಾಡುವುದು ಹಲವು ಮಕ್ಕಳಿಗೆ ಸವಾಲು. ಆದರೆ ಹೀಗೆ ಹಾಡಿನ ರೂಪದಲ್ಲಿ ಮೋಜಿನಿಂದ ಮಾಡಿದರೆ ಎಲ್ಲ ಜಿಲ್ಲೆಗಳ ಹೆಸರುಗಳೂ ನಾಲಿಗೆಯ ತುದಿಯಲ್ಲಿರುತ್ತವೆ. (ಗಮನಿಸಿ, ಇದರಲ್ಲಿ ವಿಜಯನಗರ ಜಿಲ್ಲೆಯ ಹೆಸರು ಸೇರಿಲ್ಲ) #cautiousmind

101 Names of Kauravas – ಕೌರವರ 101 ಹೆಸರುಗಳು

ಕೌರವರು ವಾಸ್ತವವಾಗಿ 101. 100 ಗಂಡುಮಕ್ಕಳು ಹಾಗೂ ಒಂದು ಹೆಣ್ಣು. ಆ 101 ಹೆಸರುಗಳು ಇಲ್ಲಿವೆ. Kauravas are actually 101 including their one sister Dushyala. All the 101 names are available in this video in English, Devanagari and Kannada scripts. #cautiousmind

ಓದಲೇಬೇಕಾದ ಕೆಲವು ಕನ್ನಡ ಪುಸ್ತಕಗಳು

ಇವು ಓದಲೇಬೇಕಾದ ಕನ್ನಡ ಪುಸ್ತಕಗಳು. ಈ ಪಟ್ಟಿ ಅಂತಿಮವಲ್ಲ. ಸಾಹಿತ್ಯ ಬೆಳೆದ ಹಾಗೆ, ಹೊಳೆದ ಹಾಗೆ, ಪಟ್ಟಿಯನ್ನು ವಿಸ್ತರಿಸುತ್ತ ಹೋಗಬಹುದು. ನೀವೂ ನಿಮ್ಮ ಅತ್ಯುತ್ತಮ ಪುಸ್ತಕವನ್ನು ಕಮೆಂಟಿಸಿ ನಮಗೆ ತಿಳಿಸಿ. #cautiousmind

ಸಂಸ್ಕಾರ ಭಾರತಿ ಧ್ಯೇಯ ಗೀತೆಯ ಅರ್ಥ

ಕಲಾಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಸಂಸ್ಥೆಗಳಲ್ಲಿ ಸಂಸ್ಕಾರ ಭಾರತಿ ಸಂಘಟನೆಗೆ ವಿಶೇಷ ಸ್ಥಾನವಿದೆ. ‘ಕಲೆ ವಿಲಾಸಕ್ಕಾಗಿ ಅಲ್ಲ ಆತ್ಮವಿಕಾಸಕ್ಕಾಗಿ’ ಎಂಬ ಧ್ಯೇಯವನ್ನಿಟ್ಟುಕೊಂಡು ದೇಶಾದ್ಯಂತ ಕಲಾ ಕ್ಷೇತ್ರದಲ್ಲಿ ಚಟುವಟಿಕೆಯನ್ನು ನಡೆಸುತ್ತಿರುವ ಸಂಸ್ಕಾರ ಭಾರತಿ, ಭಾರತೀಯ ಕಲಾ ಪ್ರಕಾರಗಳನ್ನು ಸಂರಕ್ಷಿಸಿ, ಪೋಷಿಸಿಕೊಂಡು ಬರುತ್ತಿದೆ. ಈ ಸಂಘಟನೆಯ ಧ್ಯೇಯ ಗೀತೆ ಸಾಧಯತಿ ಸಂಸ್ಕಾರ ಭಾರತಿ ಭಾರತೇ ನವ ಜೀವನಮ್ ನ ಅರ್ಥ ಈ ವೀಡಿಯೋದಲ್ಲಿದೆ.

ಉಳಿದ ಹಂಪಿ ಮತ್ತು ಗುರು ಬಿಷ್ಟಪ್ಪಯ್ಯನವರು

ಶ್ರೀಮತಿ. ವಸುಂಧರಾ ದೇಸಾಯಿಯವರು ಬರೆದ ಸಂಶೋಧನಾತ್ಮಕ ಪುಸ್ತಕ “ಉಳಿದ ಹಂಪಿ ಮತ್ತು ಗುರುಬಿಷ್ಟಪ್ಪಯ್ಯನವರು”. ಹಂಪಿಯ ಮಹಾಗೋಪುರವನ್ನು ಕಟ್ಟಿದ್ದು ಗುರು ಬಿಷ್ಟಪ್ಪಯ್ಯನರು ಎಂದು ವಸುಂಧರಾ ದೇಸಾಯಿಯವರು ಈ ಪುಸ್ತಕದಲ್ಲಿ ದಾಖಲೆ ಸಮೇತ ದೃಢಪಡಿಸಿದ್ದಾರೆ. ಜಾತಿ ರಾಜಕೀಯ, ಸಂಶೋಧಕರ ನಡುವಿನ ಅಹಂ, ಸ್ವಾರ್ಥ ಮುಂತಾದ ಕಾರಣಗಳಿಂದ ಈ ಸತ್ಯವನ್ನು ಒಪ್ಪಿಕೊಳ್ಳಲು ಇನ್ನೂ ಕೆಲವರು ತಯಾರಿಲ್ಲ. ಆದರೆ ಯಾವುದೇ ಪೂರ್ವಾಗ್ರಹಗಳಿಲ್ಲದೆ ಈ ಪುಸ್ತಕವನ್ನು ಓದಿದರೆ, ಹಂಪಿಯ ಮಹಾಗೋಪುರವನ್ನು ಕಟ್ಟಿದ್ದು ಯಾರು ಎಂಬುದು ವೇದ್ಯವಾಗುತ್ತದೆ.

“ಡೇಟಾ ದೇವರು ಬಂದಾಯ್ತು”, “ಬೆಲ್ಲಂಪುಲ್ಲಕ್ಕ” ಹಾಗೂ “ನಡುಬಾಗದ ಪತ್ರಕರ್ತನ ನಡುರಾತ್ರಿಯ ಸ್ವಗತ” ಬಿಡುಗಡೆ