ಬಕ್ರಿದ್ ಹಬ್ಬದ ಹಿನ್ನೆಲೆ ಹಾಗೂ ಮಹತ್ವ ಏನು?

ಬಕ್ರೀದ್ ಅಥವಾ ಈದ್ ಅಲ್ ಅದಾ ಎಂಬುದು ಮುಸ್ಲಿಮರ ಪ್ರಮುಖ ಹಬ್ಬಗಳಲ್ಲಿ ಒಂದು. ಇದನ್ನು ವಿಶ್ವಾದ್ಯಂತ ಮುಸ್ಲಿಮರು ಶ್ರದ್ಧಾ ಭಕ್ತಿಗಳಿಂದ ಆಚರಿಸುತ್ತಾರೆ. ವಿಶ್ವದ ಮೂಲೆಮೂಲೆಗಳಿಂದ ಹಜ್ ಯಾತ್ರೆ ಕೈಗೊಳ್ಳುವ ಮುಸ್ಲಿಮರು ಬಕ್ರೀದ್ ಹಬ್ಬದಂದು ತಮ್ಮ ಯಾತ್ರೆಯನ್ನು ಪೂರೈಸುತ್ತಾರೆ. ಈ ಹಬ್ಬದ ಇತಿಹಾಸ ಹಾಗೂ ಮಹತ್ವವನ್ನು ಪ್ರೊ. ಮಲಿಕ್ ಇಂಗಳಗಿ ಅವರು ಈ ವೀಡಿಯೋದಲ್ಲಿ ತಿಳಿಸಿದ್ದಾರೆ. Bakrid or Eid al-Adha is one of the most important festivals of Muslims. It is celebrated by Muslims all over the world with devotion. Muslims who undertake Hajj from all corners of the world complete their pilgrimage on the festival of Bakrid. History and significance of this festival has been explained by Prof. Malik Ingalagi in this video.

“ಹರ ಹರ ಹರ ಭೂತನಾಥ” ಗಾಯನ – ಶ್ರೀ. ಸದಾಶಿವ ಭಟ್ II Har Har Har Bhootnaath – Vocal by Shri. Sadashiv Bhat

ತಿಂಮಸೇನೆ – ತಿಂಗಳಿಗೊಂದು ಮನೆಯಲ್ಲಿ ಸೇರಲೊಂದು ನೆಪ. ಕೆಲ ಸಾಹಿತಿಗಳು, ಕಲಾವಿದರುಗಳು ಸೇರಿ ಕಟ್ಟಿದ ಕಲಾಕೂಟ “ತಿಂಮಸೇನೆ”. ಈ ಕೂಟದ ಸದಸ್ಯರುಗಳು ಪ್ರತಿ ತಿಂಗಳು ಒಂದೆಡೆ ಸೇರಿ ಯಾವುದಾದರೊಂದು ಕಲಾ ಪ್ರಕಾರದ ಕಾರ್ಯಕ್ರಮ ಆಯೋಜಿಸುತ್ತಾರೆ. ಈ ಬಾರಿಯ ತಿಂಮಸೇನೆಯ ಕಾರ್ಯಕ್ರಮ ಆಯೋಜಿಸಿದ್ದು ಖ್ಯಾತ ರಂಗಕರ್ಮಿ ಶ್ರೀ. ಶ್ರೀಪತಿ ಮಂಜನಬೈಲು ಅವರು. ಈ ಸಂದರ್ಭದಲ್ಲಿ ಖ್ಯಾತ ಹಿಂದೂಸ್ತಾನಿ ಯುವ ಕಲಾವಿದ ಶ್ರೀ. ಸದಾಶಿವ ಭಟ್ ಹರ ಹರ ಹರ ಭೂತನಾಥ ಪ್ರಸ್ತುತಪಡಿಸಿದರು. ಅವರಿಗೆ ತಬಲಾ ಸಾಥ್ ನೀಡಿದ್ದು ಶ್ರೀ. ವಿಕಾಸ್ ನರೇಗಲ್ ಹಾಗೂ ಹಾರ್ಮೋನಿಯಂನಲ್ಲಿ ಶ್ರೀ. ವಿಘ್ನೇಶ್ ಭಾಗವತ್ ಸಾಥ್ ನೀಡಿದರು. TiMMaSeNe – (Tingaligondu Maneyalli Seralondu Nepa) – A reason to meet every month at a (member’s) home – With this theme, the members of Timmasene meet every month at different homes, and organize cultural programs. Famous theatre person Shri. Shripathi Manjanabailu organized June month’s program. Famous Hindustani singer Shri. Sadashiv Bhat sang Har Har Har Bhootnaath in the program. He was accompanied on Tabala by Shri. Vikas Naregal and on Harmonium by Shri. Vighnesh Bhagavat.  @sadashivbhat-official2209 

ವೇದಗಳ ಸಂದೇಶ. ಬರೆದವರು – ಪ್ರಸಿದ್ಧ ಚಿಂತಕರಾಗಿದ್ದ ಕೀರ್ತಿಶೇಷರಾದ ಬನ್ನಂಜೆ ಗೋವಿಂದಾಚಾರ್ಯ II Vedagala Sandesh

ಇಡೀ ವಿಶ್ವಕ್ಕೆ ಭಾರತದ ಬಹುಮುಖ್ಯ ಕೊಡುಗೆ ವೇದಗಳು. ಅಪೌರುಷೇಯವಾದ ವೇದಗಳು ಭಾರತೀಯ ಜನಮಾನಸ, ಸಾಹಿತ್ಯ, ವಿಚಾರಧಾರೆ, ಬದುಕು ಹಾಗೂ ಬದುಕಿನ ಪ್ರತಿಯೊಂದು ಆಯಾಮವನ್ನೂ ಪ್ರಭಾವಿಸಿವೆ. ವೇದಗಳ ಸಂದೇಶದ ಕುರಿತು ಬರೆದವರು ಪ್ರಸಿದ್ಧ ಚಿಂತಕರಾಗಿದ್ದ ಕೀರ್ತಿಶೇಷರಾದ ಬನ್ನಂಜೆ ಗೋವಿಂದಾಚಾರ್ಯ ಅವರು. ಪುಸ್ತಕವನ್ನು ಪರಿಚಯಿಸಿದ್ದು ಆಚಾರ್ಯ ವಿಜಯಸಿಂಹ ಅವರು.Vedas are India’s most important contribution to the world. The Vedas have influenced the Indian psyche, literature, ideology, life and every aspect of life. The famous thinker Bannanje Govindacharya has written about the message of the Vedas. This book is introduced by Acharya Vijayasimha.

“ರಾಮ ಬಂದನೇನೆ ಶ್ರೀ ರಘುರಾಮ ಬಂದನೇನೆ”ಗಾಯನ-ವಿಜಯೇಂದ್ರ ಅಥಣೀಕರ II “Raam Bandanene ” By Vijayendra Athanikar

ರಾಮ ಬಂದನೇನೆ ಶ್ರೀ ರಘುರಾಮ ಬಂದನೇನೆ” ರಚನೆ- ಮಹಿಪತಿ ದಾಸರು. ಗಾಯನ – ವಿಜಯೇಂದ್ರ ಅಥಣೀಕರ. ಸದ್ಗುರು ಶ್ರೀ ಶ್ರೀಧರ ಸ್ವಾಮಿಗಳ 50 ನೇ ವರ್ಷದ ಆರಾಧನೆ ನಿಮಿತ್ತ ನಡೆದ ಕಾರ್ಯಕ್ರಮದಲ್ಲಿ ಗಾಯಕರಾದ ವಿಜಯೇಂದ್ರ ಅಥಣೀಕರ ಈ ರಚನೆಯನ್ನು ಪ್ರಸ್ತುತಪಡಿಸಿದರು. ಅವರಿಗೆ ಹಾರ್ಮೋನಿಯಂ ಸಾಥ್ ನೀಡಿದ್ದು ಮೇಘನಾ ಅಥಣೀಕರ ಹಾಗೂ ತಬಲಾ ಸಾಥಿ ಸಂತೋಷ ಹೆಗಡೆ. “Raam Bandanene Shri Raghu Raam Bandanene” Written By Mahipati Daasaru and sung by Vijayendra Athanikar on the occasion of Bhagawan Sadguru Shri Shridhar Swami’s 50th Aaradhane Mahotsava at Varadhalli, Sagara, Karnataka. He was accompanied on Harmonium by Meghana Athanikar and on Tabala by Santosh Hegade.

ಇಂದು ವಿಶ್ವ ಸಂಗೀತ ದಿನ ಕೂಡ!! ಆ ನಿಮಿತ್ತ ಈ ಜಾನಪದ ವಾದ್ಯಗಳ ನೋಡ

ಜಾಗತೀಕರಣ, ಯಾಂತ್ರೀಕರಣ ಹಾಗೂ ಕೃತಕ ಬುದ್ಧಿಮತ್ತೆಯ ಯುಗದಲ್ಲಿ ನಮ್ಮ ಜಾನಪದ ಕಲೆ, ಸಂಸ್ಕೃತಿ, ವಾದ್ಯಗಳು ಮರೆಗೆ ಸರಿಯುತ್ತಿವೆ. ವಿಶ್ವ ಸಂಗೀತ ದಿನದ ನಿಮಿತ್ತ ಜಾನಪದ ಕಲಾವಿದರು, ವಾದಕರು ಹಾಗೂ ವಾದ್ಯಗಳ ತಯಾರಕರಾದ ತಂಬೂರಿ ರಾಮಯ್ಯನವರು ಕೆಲವು ಜಾನಪದ ವಾದ್ಯಗಳನ್ನು ಇಲ್ಲಿ ಪರಿಚಯಿಸಿದ್ದಾರೆ.

ಸ್ವಯಂಪ್ರೇರಿತ ರಕ್ತದಾನ ಶಿಬಿರ

Uttishta Bharatha In Association With Sankalp India Foundation & Gayathri Hospital-Vijayanagar Is Conducting Voluntary Blood Donation Drive
On The Occasion Of “Balidan Diwas” Punyatithi Of Dr. Syama Prasad Mookerjee

⚡ Date: 25-June-2023 (Sunday)
⚡ Time: 10:30 AM to 3:30 PM
⚡ Venue: 3rd Floor- Gayathri Hospital, No 91, Chord Rd, Vijayanagara, Bengaluru- 560040
⚡ If You Are Willing To Donate Blood Kindly Register Here- https://tinyurl.com/BloodDonationDriveUB
⚡ Location: https://goo.gl/maps/yogdovDzzHcTDHSf8

You Can Make A Difference, Help Save A Life Of Kid Suffering From Thalassemia
For Any Details Or Clarifications Contact Neeraj- 9964142207

DonateBlood #SaveLife #UttishtaBharatha

ಉತ್ತಿಷ್ಠ ಭಾರತ, ಸಂಕಲ್ಪ ಇಂಡಿಯಾ ಫೌಂಡೇಶನ್ ಮತ್ತು ಗಾಯತ್ರಿ ಆಸ್ಪತ್ರೆ-ವಿಜಯನಗರ ಇವರ ಸಹಯೋಗದೊಂದಿಗೆ
ಡಾ. ಶ್ಯಾಮ್ ಪ್ರಸಾದ್ ಮುಖರ್ಜಿ ಅವರ ಪುಣ್ಯತಿಥಿ “ಬಲಿದಾನ ದಿವಸ” ಅಂಗವಾಗಿ ಸ್ವಯಂಪ್ರೇರಿತ ರಕ್ತದಾನ ಶಿಬಿರ ಆಯೋಜಿಸುತ್ತಿದೆ.

⚡ ದಿನಾಂಕ: 25-ಜೂನ್-2023 (ಭಾನುವಾರ)
⚡ ಸಮಯ: ಬೆಳಿಗ್ಗೆ 10:30 ರಿಂದ ಮಧ್ಯಾಹ್ನ 3.30
⚡ ಸ್ಥಳ: 3 ನೇ ಮಹಡಿ- ಗಾಯತ್ರಿ ಆಸ್ಪತ್ರೆ, ಸಂಖ್ಯೆ 91, ಕಾರ್ಡ್ ರಸ್ತೆ, ವಿಜಯನಗರ, ಬೆಂಗಳೂರು- 560040
⚡ ರಕ್ತದಾನ ಮಾಡಬಯಸುವವರು ಕೆಳಗಿನ ಲಿಂಕಿನ ಮೂಲಕ ನೊಂದಾಯಿಸಿಕೊಳ್ಳಿ- https://tinyurl.com/BloodDonationDriveUB
⚡ ಲೊಕೇಶನ್- https://goo.gl/maps/yogdovDzzHcTDHSf8

ರಕ್ತದಾನ ಮಾಡುವುದರ ಮೂಲಕ ನೀವು ತಲಸೀಮಿಯಾ ರೋಗದಿಂದ ಬಳಲುತ್ತಿರುವ ಮಕ್ಕಳ ಜೀವವನ್ನು ಉಳಿಸಬಹುದು.
ಹೆಚ್ಚಿನ ಮಾಹಿತಿಗಾಗಿ ಅಥವಾ ಸಂದೇಹಗಳಿಗೆ ಸಂಪರ್ಕಿಸಿ ನೀರಜ್- 9964142207

ರಕ್ತದಾನಮಾಡಿ #ಜೀವಉಳಿಸಿ #ಉತ್ತಿಷ್ಠ_ಭಾರತ

ಹತ್ತು ನಿಮಿಷದಲ್ಲಿ ಸಂಧ್ಯಾವಂದನೆ ಮಾಡುವುದು ಹೇಗೆ? ಮುಂದುವರೆದ ಭಾಗII How to do Sandhyavandane in 10 minutes?

ಮಂತ್ರಗಳ ವಿವರಣೆ ಇರುವುದರಿಂದ ವಿಡಿಯೋ ಅವಧಿ ಜಾಸ್ತಿ ಇದೆ,ಆದರೆ ಈ ಸಂಧ್ಯಾಂದನೆಯನ್ನು ಹತ್ತು ನಿಮಿಷದಲ್ಲಿ ಮಾಡಬಹುದು. ಸಂಪ್ರದಾಯದ ಪ್ರಕಾರ ಗೋಪಿ ಚಂದನ ಹಾಗೂ ಮುದ್ರಾ ಧಾರಣೆಯ ನಂತರ ಸಂಧ್ಯಾವಂದೆನೆ ಮಾಡುವುದು ಹೇಗೆ ಎನ್ನುವದನ್ನು ಈ ವೀಡಿಯೋದಲ್ಲಿ ಆಚಾರ್ಯ ವಿಕ್ರಮ ಸಿಂಹ ಅವರು ವಿವರಿಸಿದ್ದಾರೆ. After application of Gopichandana and Mudraas, Acharya Vikrama Simha has explained the procedure of Sandhyavande in this video. @vikramasimhacharya

ಹತ್ತು ನಿಮಿಷದಲ್ಲಿ ಸಂಧ್ಯಾವಂದನೆ ಮಾಡುವುದು ಹೇಗೆ? How to do Sandhyavandane in 10 minutes?

ಸಂಪ್ರದಾಯದ ಪ್ರಕಾರ ಗೋಪಿ ಚಂದನ ಹಾಗೂ ಮುದ್ರಾ ಧಾರಣೆಯ ನಂತರ ಸಂಧ್ಯಾವಂದೆನೆ ಮಾಡುವುದು ಹೇಗೆ ಎನ್ನುವದನ್ನು ಈ ವೀಡಿಯೋದಲ್ಲಿ ಆಚಾರ್ಯ ವಿಕ್ರಮ ಸಿಂಹ ಅವರು ವಿವರಿಸಿದ್ದಾರೆ. After application of Gopichandana and Mudraas, Acharya Vikrama Simha has explained the procedure of Sandhyavande in this video. @vikramasimhacharya

ರಾಗ ಚಾರುಕೇಶಿ ಗಾಯನ – ಶ್ರೀ. ಸದಾಶಿವ ಭಟ್ II Raag Chaaru keshi Vocal by Shri. Sadashiv Bhat

ತಿಂಮಸೇನೆ – ತಿಂಗಳಿಗೊಂದು ಮನೆಯಲ್ಲಿ ಸೇರಲೊಂದು ನೆಪ. ಕೆಲ ಸಾಹಿತಿಗಳು, ಕಲಾವಿದರುಗಳು ಸೇರಿ ಕಟ್ಟಿದ ಕಲಾಕೂಟ “ತಿಂಮಸೇನೆ”. ಈ ಕೂಟದ ಸದಸ್ಯರುಗಳು ಪ್ರತಿ ತಿಂಗಳು ಒಂದೆಡೆ ಸೇರಿ ಯಾವುದಾದರೊಂದು ಕಲಾ ಪ್ರಕಾರದ ಕಾರ್ಯಕ್ರಮ ಆಯೋಜಿಸುತ್ತಾರೆ. ಈ ಬಾರಿಯ ತಿಂಮಸೇನೆಯ ಕಾರ್ಯಕ್ರಮ ಆಯೋಜಿಸಿದ್ದು ಖ್ಯಾತ ರಂಗಕರ್ಮಿ ಶ್ರೀ. ಶ್ರೀಪತಿ ಮಂಜನಬೈಲು ಅವರು. ಈ ಸಂದರ್ಭದಲ್ಲಿ ಖ್ಯಾತ ಹಿಂದೂಸ್ತಾನಿ ಯುವ ಕಲಾವಿದ ಶ್ರೀ. ಸದಾಶಿವ ಭಟ್ ರಾಗ ಚಾರುಕೇಶಿ ಪ್ರಸ್ತುತಪಡಿಸಿದರು. ಅವರಿಗೆ ತಬಲಾ ಸಾಥ್ ನೀಡಿದ್ದು ಶ್ರೀ. ವಿಕಾಸ್ ನರೇಗಲ್ ಹಾಗೂ ಹಾರ್ಮೋನಿಯಂನಲ್ಲಿ ಶ್ರೀ. ವಿಘ್ನೇಶ್ ಭಾಗವತ್ ಸಾಥ್ ನೀಡಿದರು. TiMMaSeNe – (Tingaligondu Maneyalli Seralondu Nepa) – A reason to meet every month at a (member’s) home – With this theme, the members of Timmasene meet every month at different homes, and organize cultural programs. Famous theatre person Shri. Shripathi Manjanabailu organized June month’s program. Famous Hindustani singer Shri. Sadashiv Bhat sang Raag Chaaru Keshi in the program. He was accompanied on Tabala by Shri. Vikas Naregal and on Harmonium by Shri. Vighnesh Bhagavat.

ಕರ್ನಾಟಕ ಏಕೀಕರಣದ ನಾಲ್ವರು ಚಿಂತಕರು II Karnataka Ekikaranad Nalvaru Chintakaru

ಕರ್ನಾಟಕ ಏಕೀಕರಣದ ನಾಲ್ವು ಚಿಂತಕರು – ಭಾರತೀಯ ಇತಿಹಾಸದಲ್ಲಿಯೇ ಕರ್ನಾಟಕದ ಏಕೀಕರಣ ಚಳುವಳಿಗೆ ಮಹತ್ವದ ಸ್ಥಾನವಿದೆ. ಕರ್ನಾಟಕದ ಏಕೀಕರಣಕ್ಕಾಗಿ ಹಲವು ಮಹನೀಯರು ತಮ್ಮ ತನು-ಮನ-ಧನ ಅರ್ಪಿಸಿದ್ದಾರೆ. ಅಂತಹ ಹಲವು ಮಹನೀಯರಲ್ಲಿ ನಾಲ್ವರನ್ನು ಆಯ್ದುಕೊಂಡು ಕೆ. ರಾಘವೇಂದ್ರರಾವ್ ಅವರು ಈ ಕೃತಿಯನ್ನು ರಚಿಸಿದ್ದಾರೆ. ಈ ಪುಸ್ತಕವನ್ನು ಆಚಾರ್ಯ ವಿಜಯಸಿಂಹ ಅವರು ಪರಿಚಯಿಸಿದ್ದಾರೆ.The unification movement of Karnataka has a significant place in Indian history. Many great souls have sacrificed their lives for the unification of Karnataka. Selected four of such great souls have been portrayed in the this book written by K Raghavendra Rao. This book is introduced by Acharya Vijayasimha.

“ನೀನೇ ದಯಾಳು ನಿರ್ಮಲಚಿತ್ತ ಗೋವಿಂದ” ಗಾಯನ – ವಿಜಯೇಂದ್ರ ಅಥಣೀಕರ II “Nine Dayaalu” By Vijayendra Athanikar

ನೀನೇ ದಯಾಳು ನಿರ್ಮಲಚಿತ್ತ ಗೋವಿಂದ” ಗಾಯನ- ವಿಜಯೇಂದ್ರ ಅಥಣೀಕರ. ಸದ್ಗುರು ಶ್ರೀ ಶ್ರೀಧರ ಸ್ವಾಮಿಗಳ 50 ನೇ ವರ್ಷದ ಆರಾಧನೆ ನಿಮಿತ್ತ ನಡೆದ ಕಾರ್ಯಕ್ರಮದಲ್ಲಿ ಗಾಯಕರಾದ ವಿಜಯೇಂದ್ರ ಅಥಣೀಕರ ಈ ರಚನೆಯನ್ನು ಪ್ರಸ್ತುತಪಡಿಸಿದರು. ಅವರಿಗೆ ಹಾರ್ಮೋನಿಯಂ ಸಾಥ್ ನೀಡಿದ್ದು ಮೇಘನಾ ಅಥಣೀಕರ ಹಾಗೂ ತಬಲಾ ಸಾಥಿ ಸಂತೋಷ ಹೆಗಡೆ. “Nine Dayalu Nirmalchitta Govinda” – sung by Vijayendra Athanikar on the occasion of Bhagwan Sadguru Shri Shridhar Swami’s 50th Aaradhane Mahotsava at Varadhalli, Sagara, Karnataka. He was accompanied on Harmonium by Meghana Athanikar and on Tabala by Santosh Hegade  @vijayathanikar