ಆಲ್ ದಿ ಬೆಸ್ಟ್ ಅಣ್ಣಾ

Every cloud has a silver lining. Every Indian has a hope!! All the Best Anna. 

Visit http://www.annahazare.org/

 

……………….

ಬನ್ನೇರುಘಟ್ಟದಲ್ಲಿ ಕರಡಿಗಳ ಸರಣಿ ಸಾವು, ಹೇಳೋರಿಲ್ಲ ಕೇಳೋರಿಲ್ಲ

ಬನ್ನೇರುಘಟ್ಟದಲ್ಲಿ ಈಗ ಸೂತಕದ ಛಾಯೆ ಆವರಿಸಿದೆ. ಹುಲಿಗಳ ಸಾವಿನ ನಂತರ ಕರಡಿಗಳ ಸರದಿ ಆರಂಭವಾಗಿದೆ. ಕಳೆದ ಒಂದು ತಿಂಗಳಿನಿಂದ ಇಲ್ಲಿಯವರೆಗೆ ಆರು ಕರಡಿಗಳು ಸಾವನ್ನಪ್ಪಿವೆ. ಕ್ಷಯರೋಗದಿಂದ ಎಲ್ಲಾ ಕರಡಿಗಳು ಸಾವನ್ನಪ್ಪಿವೆ ಎಂಬುದು ವೈದ್ಯರ ಹೇಳಿಕೆ. ಇನ್ನೂ ಹತ್ತು ಕರಡಿಗಳು ಸಾವಿನಂಚಿನಲ್ಲಿವೆಯಂತೆ. ಪ್ರಮುಖ ಕಾರಣ ವಿಟಮಿನ್ ಕೊರತೆ. ಈ ಎಲ್ಲ ಕರಡಿಗಳನ್ನೂ ಕಲಂದರ್ ಗಳ ಕಡೆಯಿಂದ ವಶಪಡಿಸಿಕೊಳ್ಳಲಾಗಿದೆ. ಆಶ್ಚರ್ಯ ಅಂದ್ರೆ, ಕಲಂದರ್ ಗಳ ಬಳಿ ಆರೋಗ್ಯಕರವಾಗಿರುವ ಕರಡಿಗಳು ರಾಷ್ಟ್ರೀಯ ಉದ್ಯಾನವನದಲ್ಲಿ ಸಾವನ್ನಪ್ಪುತ್ತಿರುವುದು. ಕರಡಿಗಳಿಗೆ ಇಂಜೆಕ್ಷನ್ ಇಲ್ಲ, ಮಾತ್ರೆ ನೀಡಬೇಕು. ಆದ್ರೆ ಮಾತ್ರೆಯನ್ನು ಕರಡಿಗಳು ಸೇವಿಸುತ್ತಿಲ್ಲ ಎಂಬುದು ವೈದ್ಯರ ಒನ್ ಪಾಯಿಂಟ್ ಆನ್ಸರ್. ಲಕ್ಷಾಂತರ ರೂಪಾಯಿ ಬಂದರೂ ಆ ಎಲ್ಲ ಹಣ ಢೋಂಗೀ ಪ್ರಾಣಿಪ್ರಿಯರು ಹಾಗೂ ಬೇಜವಾಬ್ದಾರಿ ವೈದ್ಯರ ನಡುವೆ ಹಂಚಿಹೋಗುತ್ತಿದೆ ಎಂಬುದು ಸ್ಥಳೀಯ ಆರೋಪ.

ಆರನೇ ತರಗತಿಯ ಹುಡುಗ ಆ ಸಿಂಬಲ್ ತೋರಿಸಿದನಂತೆ…

picture for representation purpose only

ನನ್ನ ಸ್ಹೇಹಿತೆಯೊಬ್ಬರು ಬೆಂಗಳೂರಿನ ಸೋ ಕಾಲ್ಡ್ ಪ್ರತಿಷ್ಠಿತ ಶಾಲೆಯೊಂದರಲ್ಲಿ ಇಂಗ್ಲೀಷ್ ಹಾಗೂ ಹಿಂದಿ ಕಲಿಸುತ್ತಾರೆ. ಆರನೇ ತರಗತಿಯಲ್ಲಿ ಪಾಠ ಮಾಡುತ್ತಿರಬೇಕಾದರೆ, ಹುಡುಗಿಯೊಬ್ಬಳು ಬಂದು “ಮಿಸ್, ನೋಡಿ ಅವನು ನನಗೆ ‘ಹೀಗೆ’ (ಸಿಂಬಲ್ ತೋರಿಸುತ್ತ) ಮಾಡಿ ತೋರಿಸುತ್ತಿದ್ದಾನೆ” ಎಂದು ಕಂಪ್ಲೇಂಟ್ ಮಾಡಿದಳಂತೆ. ಆಕೆಯ ಸಹಪಾಠಿ ತೋರಿಸಿದ ಸಿಂಬಲ್ ಇಂದು ಸಾಮಾನ್ಯ ಎನ್ನಿಸಿಕೊಂಡಿರುವ FCUK ಸಿಂಬಲ್. ನನ್ನ ಟೀಚರ್ ಸ್ನೇಹಿತೆಯೇನೋ ಹುಡುಗನಿಗೆ ಗದರಿದಳಂತೆ.

ಆದರೆ ಆರನೇ ತರಗತಿಯಲ್ಲಿಯೇ ಈ ಪರಿಸ್ಥಿತಿಯಾದರೆ, ಅದೂ ಸೋ ಕಾಲ್ಡ್ ಇಂಟರ್ನಾಷನಲ್ ಶಾಲೆಯಲ್ಲಿ…..? ತಪ್ಪು ಯಾರದ್ದು, ಮಕ್ಕಳಿಗೆ ಬುದ್ಧಿ ಹೇಳಲಾರದ ತಂದೆ-ತಾಯಿಗಳದ್ದಾ? ಲಂಗುಲಗಾಮಿಲ್ಲದೆ ಬೆಳೆಯುತ್ತಿರುವ ಒಟ್ಟಾರೆ ಪರಿಸರದ್ದಾ? ಹುಡುಗರನ್ನು ಹದ್ದುಬಸ್ತಿನಲ್ಲಿಡಲಾರದ ಟೀಚರ್ ಗಳದ್ದಾ? ಶಿಕ್ಷಣ ವ್ಯವಸ್ಥೆಯದ್ದಾ? ಮೌಲ್ಯಗಳನ್ನು ಮರೆತು ಕೇವಲ ಜ್ಞಾನವನ್ನು ತುರುಕುತ್ತಿರುವ ಪದ್ಧತಿಯದ್ದಾ? ಉತ್ತರ ಗೊಜಲುಗೊಜಲಾಗಿದೆ.

ಇವರು ನೂತನ ಸಚಿವರು, ಉಳಿದ 9 ತಿಂಗಳಿನಲ್ಲಿ “ಅಭಿವೃದ್ಧಿ” ಕಾರ್ಯ ಮಾಡುವವರು…

ಇವರಲ್ಲಿ ಯಾರು ಯಾವ ಜಾತಿ, ಯಾರ ಮೇಲೆ ಎಷ್ಟು ಕೇಸ್ ಇದೆ, ಯಾರು ಯಾರನ್ನು ತುಳಿದು ಸಚಿವರಾಗಿದ್ದಾರೆ, ಯಾರು ಪರಮಭ್ರಷ್ಟರು, ಯಾರು ಸತ್ಯಸಂಧರು, ಸಚಿವರಾಗಲು ಯಾವ ರೀತಿಯ ಡೀಲಿಂಗ್ ನಡೆದಿದೆ? ಪ್ರಶ್ನೆಗಳು ಸಾಕಷ್ಟಿವೆ.

ಮುಖ್ಯಮಂತ್ರಿ – ಜಗದೀಶ್ ಶೆಟ್ಟರ್

ಉಪಮುಖ್ಯಮಂತ್ರಿ – ಕೆ. ಎಸ್. ಈಶ್ವರಪ್ಪ

ಉಪಮುಖ್ಯಮಂತ್ರಿ – ರಾಮಯ್ಯ ಅಶೋಕ್

ಸಚಿವರು-

ಗೋವಿಂದ ಕಾರಜೋಳ

ಸುರೇಶ್ ಕುಮಾರ್

ಸಿ ಎಂ ಉದಾಸಿ

ವಿಶ್ವೇಶ್ವರ ಹೆಗಡೆ ಕಾಗೇರಿ

ಉಮೇಶ್ ಕತ್ತಿ

ಬಸವರಾಜ ಬೊಮ್ಮಾಯಿ

ಮುರುಗೇಶ್ ಆರ್. ನಿರಾಣಿ

ವಿ. ಸೋಮಣ್ಣ

ಶೋಭಾ ಕರಂದ್ಲಾಜೆ

ಬಚ್ಚೇಗೌಡ

ರೇಣುಕಾಚಾರ್ಯ

ಸಿ. ಪಿ . ಯೋಗೇಶ್ವರ್

ರೇವುನಾಯಕ್ ಬೆಳಮಗಿ

ಬಾಲಚಂದ್ರ ಜಾರಕಿಹೊಳಿ

ಎ. ರಾಮದಾಸ್

ಆನಂದ ಅಸ್ನೋಟಿಕರ್

ಎ. ನಾರಾಯಣಸ್ವಾಮಿ

ಎಸ್. ಎ. ರವೀಂದ್ರನಾಥ್

ರಾಜೂಗೌಡ

ವರ್ತೂರು ಪ್ರಕಾಶ್

ಸೊಗಡು ಶಿವಣ್ಣ

ಸಿ. ಟಿ. ರವಿ

ಡಿ. ಎನ್. ಜೀವರಾಜ್

ಎಸ್. ಕೆ. ಬೆಳ್ಳುಬ್ಬಿ

ಬಿ. ಜೆ. ಪುಟ್ಟಸ್ವಾಮಿ

ಆನಂದ್ ಸಿಂಗ್

ಕಳಕಪ್ಪ ಬಂಡಿ

ಶ್ರೀನಿವಾಸ ಪೂಜಾರಿ

ಸುನೀಲ್ ವಲ್ಯಾಪುರೆ

ಅಪ್ಪಚ್ಚು ರಂಜನ್

ಅರವಿಂದ್ ಲಿಂಬಾವಳಿ

‘ಸಂಗ’ ಕಟ್ಟುವಾಗ ಇದ್ದವರಾರು? ಯಡಿಯೂರಪ್ಪಗೆ ಮಾಸ್ಟರ್ ಹಿರಣ್ಣಯ್ಯ ಖಡಕ್ ಪ್ರಶ್ನೆ

ಕೃಪೆ – ಪ್ರಜಾವಾಣಿ

…………

ಮಧುರೈ ಆಧೀನಂ ಮಠದಲ್ಲಿ ನಿತ್ಯಾನಂದ ಸಂದರ್ಶನ ಸಂದರ್ಭದಲ್ಲಿ…

‘ಸಮಯ’ದ ಒಂದು ಪ್ರಯತ್ನ

ಕನಸು ಪೂರ್ಣಗೊಳ್ಳಲು 8 ವರ್ಷಗಳು ಬೇಕಾದವು

ಅದು 2003. ಬೆಳಗಾವಿಯಿಂದ ಬೆಂಗಳೂರಿಗೆ ಪಿ.ಜಿ. ಮಾಡಲು ಬಂದಿದ್ದೆ. ಬೆಂಗಳೂರಿನ ಥಳಕು ಬಳುಕಿನ ಬದುಕು ಅಕ್ಷರಶಃ ನನ್ನನ್ನು ಕಂಗೆಡಿಸಿತ್ತು. ಇಲ್ಲಿನ ಜನ, ರಸ್ತೆಗಳು, ಮಾತು, ಲೈಟುಕಂಬ, ನನಗೆ ಹಾಡಹಗಲೇ ಅಣಕಿಸಿದ್ದವು. ಬೆಂಗಳೂರು ನನ್ನನ್ನು ಹೀರಿಕೊಳ್ಳಲು ತೆಗೆದುಕೊಂಡ ಸಮಯ ಸರಿಯಾಗಿ ಒಂದು ವರ್ಷ. ಭಾರತೀಯ ವಿದ್ಯಾಭವನದಲ್ಲಿ ಪಿ. ಜಿ. ಡಿಪ್ಲೋಮಾ ಇನ್ ಮಾಸ್ ಕಮ್ನೂನಿಕೇಷನ್ ಆಗ ತಾನೇ ಮುಗಿಸಿದ್ದೆ. ಮಾಧ್ಯಮ ರಂಗ ಪ್ರವೇಶಿಸಿಲು ಉತ್ಸುಕನಾಗಿದ್ದೆ. ನ್ಯೂಸ್ ಆಂಕರ್ ಆಗಬೇಕೆಂಬುದು ನನ್ನ ಮಹೋನ್ನತ ಕನಸುಗಳಲ್ಲಿ ಒಂದಾಗಿತ್ತು. ಯಾರೋ ಹೇಳಿದರು, “ಇದಕ್ಕೆಲ್ಲ ಮೊದಲು ಪೋರ್ಟ್ ಫೋಲಿಯೋ ಮಾಡಿಸ್ಕೊಳ್ಳಬೇಕು ಕಣಯ್ಯ” ಅಂತ. ಯಾವುದು ಬೆಸ್ಟ್ ಸ್ಟುಡಿಯೋ ಎಂದು ವಿಚಾರಿಸಿದಾಗ ಎಲ್ಲರಿಂದಲೂ ಒಮ್ಮೆಲೇ ಬಂದ ಹೆಸರು ಜಿ. ಕೆ. ವೇಲ್. ಸರಿ ನಾನು ಹಾಗೂ ದೀಪು (ದೀಪು ಈಗ ಸ್ಟಾಂಡರ್ಜ್ ಚಾರ್ಟರ್ಡ್ ಬ್ಯಾಂಕ್ ನಲ್ಲಿ ಬ್ರಾಂಚ್ ಮ್ಯಾನೇಜರ್) ಜೇಬು ತಡಕಾಡಿಕೊಂಡು ಎಂ. ಜಿ. ರೋಡ್ ನಲ್ಲಿದ್ದ ಜಿ. ಕೆ. ವೇಲ್ ಗೆ ಹೋದೆವು. ನಾನು ಹಿಂಗಿಂಗೆ ನ್ಯೂಸ್ ಆಂಕರ್ ಆಗ್ಬೇಕು ಅಂತಿದ್ದೀನಿ. ಅದಕ್ಕೆ ತಕ್ಕ ಹಾಗೆ ಫೋಟೋ ಬೇಕು ಅಂದೆ. ಓ ಯಸ್ ಅಂದವರೇ, ನನ್ನನ್ನು ಸ್ಟುಡಿಯೋಗೆ ಕಳುಹಿಸಿದರು. ಶಿವು ಎಂಬ ಫೋಟೋಗ್ರಾಫರ್ ನನ್ನ ಫೋಟೋಗಳನ್ನು ತೆಗೆದರು. ನಿಜಕ್ಕೂ ಆ ಫೋಟೋದಲ್ಲಿ ನಾನು ಅಪ್ಪಟ ಆಂಕರ್ ಥರಾನೇ ಕಾಣಿಸ್ತಿದ್ದೆ. ಆದರೆ, ಈ ಫೋಟೋಗಳನ್ನು ಹಿಡಿದುಕೊಂಡು ಅಲೆಯುವ ಪ್ರಸಂಗವೇ ಬರಲಿಲ್ಲ. ಯಾಕೆಂದರೆ ಆಗ ಇದ್ದಿದ್ದೇ ಎರಡು ಚ್ಯಾನಲ್. ಒಂದು ಈ ಟಿವಿ, ಮತ್ತೊಂದು ಉದಯ. ಈ ಟಿವಿಯಲ್ಲಿ ಆಂಕರ್ ಆಗಬೇಕೆಂದರೆ ಹೈದ್ರಾಬಾದ್ ನಲ್ಲಿ ಕೆಲಸ ಮಾಡಬೇಕು. ಆದರೆ ಈಟಿವಿ ಸೇರಿದ ಆರೇ ತಿಂಗಳಿಗೆ ನನ್ನನ್ನು ಬೆಂಗಳೂರಿಗೆ ಎತ್ತಿ ಹಾಕಿದ್ದರು. ಮುಂದೆ ರಿಪೋರ್ಟಿಂಗ್ ನಲ್ಲಿ ಕಳೆದುಹೋಗಿಬಿಟ್ಟೆ. ಈ ಮಧ್ಯೆ ಸೀರಿಯಲ್ ಕೈಹಿಡಿಯಿತು. ನ್ಯೂಸ್ ಆಂಕರ್ ಗಿಂತ ಹತ್ತು ಪಟ್ಟು ಕೀರ್ತಿಯನ್ನು ತಂದು ಕಣ್ಮುಂದೆ ಕೆಡವಿತು. ನಂತರ ‘ಸಮಯ’ ಸೇರಿ ಮತ್ತೆ ಮಾಧ್ಯಮ ರಂಗ ಮರುಪ್ರವೇಸಿಸಿದಾಗ ಅಂತೂ ಇಂತೂ ಆಂಕರ್ ಆದೆ. ಅಂದು ಜಿ. ಕೆ. ವೇಲ್ ಸ್ಟುಡಿಯೋದಲ್ಲಿ ಹಾಕಿಕೊಂಡಿದ್ದ ಅದೇ ಕೋಟ್ ಹಾಕಿಕೊಂಡು 8 ವರ್ಷಗಳ ಬಳಿಕ ನ್ಯೂಸ್ ರೀಡಿಂಗ್ ಮಾಡಿದಾಗ, “ಆಜ್ ಮೈ ಊಪರ್ ಆಸಮಾಂ ನೀಚೆ” ಅನುಭವ. ಆ ಎರಡೂ ಫೋಟೋಗಳು ಇಲ್ಲಿವೆ. ಅಫ್ ಕೋರ್ಸ್ ಅದೇ ಕೋಟಿನೊಂದಿಗೆ….

(ಅಂದ ಹಾಗೆ ಈ ಕೋಟ್ ಕೂಡ ನನ್ನ ಕಸಿನ್ ಅಣ್ಣ ವಿವೇಕ್ ಹಳಬೆ ನೀಡಿದ್ದು. “ಕೋಟು ಹಳೆಯದಾದರೇನು, ಲುಕ್ಕು ನವನವೀನ…”)

2003 ರಲ್ಲಿ ಜಿ. ಕೆ. ವೇಲ್ ಸ್ಟುಡಿಯೋದಲ್ಲಿ
2012 ರಲ್ಲಿ ಸಮಯ ಸ್ಟುಡಿಯೋದಲ್ಲಿ

‘ಹೊಸ ದಿಗಂತ’ದ ಜಾಣ ಕುರುಡುತನವೆ? ಅಥವಾ ಕಣ್ತಪ್ಪೆ?

ನಿನ್ನೆ ಪಿ. ಸಾಯಿನಾಥ್ ಬೆಂಗಳೂರಿನಲ್ಲಿದ್ದರು. ಪತ್ರಕರ್ತ ಜಿ. ಎನ್. ಮೋಹನ್ ಅನುವಾದಿಸಿರುವ “ಬರ ಅಂದ್ರೆ ಎಲ್ಲರಿಗೂ ಇಷ್ಟ” (Everybody loves a good drought)ಪುಸ್ತಕವನ್ನು ಬಿಡುಗಡೆ ಮಾಡಿದರು. ಅದರ ವರದಿ ‘ಹೊಸ ದಿಗಂತ’ ಪತ್ರಿಕೆಯಲ್ಲಿ ಬಂದಿದೆ. ಇಡೀ ವರದಿಯಲ್ಲಿ ಜಿ. ಎನ್. ಮೋಹನ್ ಹೆಸರೇ ಕಾಣೆಯಾಗಿದೆ. ಫೋಟೋವನ್ನೂ ಕೂಡ ಹಾಗೆಯೇ ಎಡಿಟ್ ಮಾಡಲಾಗಿದೆ. ಈ ಪತ್ರಿಕೋದ್ಯಮಕ್ಕೆ ಏನನ್ನೋಣ?

…………

ಶಾಸಕ ರಾಮಚಂದ್ರೇಗೌಡರಿಗೆ 37 ಸಿಲೆಂಡರ್, ಕರುಣಾಕರ ರೆಡ್ಡಿಗೆ 118

“ಪ್ರಜಾವಾಣಿ” ಕೃಪೆ

ಜೈಪಾಲ್ ರೆಡ್ಡಿ, ಎಕ್ಕಡ ಉನ್ನಾರು ಮೀರು?