ಥೂ

AIB ಕುಲಗೆಟ್ಟು ಹೋಗಿರುವ ಸಂಕೇತ ಇದು. ಕನಿಷ್ಠ ಮಾನವೀಯತೆಯೂ ಇಲ್ಲ, ಕಾಮಿಡಿ ಹೆಸರಿನಲ್ಲಿ ವಿಕೃತಿ ಮೆರೆಸುವವರಿಗೆ ಏನೆಂದು ಹೇಳೋಣ?

ಎರೆಜಲ ಎಂಬ ಶಕ್ತಿಮದ್ದು

ನನ್ನ ಅಣ್ಣ ಕೃಷಿಕ ಎಚ್ ಎಸ್ ಶ್ರೀಹರ್ಷ ಅವರು ತಯಾರಿಸುತ್ತಿರುವ ಎರೆಹುಳು ಗೊಬ್ಬರದ ವಿವರ ವಿಜಯವಾಣಿಯಲ್ಲಿ ಪ್ರಕಟವಾಗಿದೆ. ಲೇಖನ ಇಲ್ಲಿದೆ.

ಲೇಖನ – ನಾಗರಾಜ ಮತ್ತಿಗಾರ

123 (2)

ಬರ ಪ್ರದೇಶದಲ್ಲಿ ನೀರಿಲ್ಲದಿದ್ದರೂ ಬೆಳೆ ಬೆಳೆಯುವ ವಿಧಾನದ ಬಗ್ಗೆ ಕಳೆದವಾರ ನಿದಶ೯ನ ಸಹಿತ ವಿವರಿಸಿದ್ದೆವು. ಈ ವಾರ ಸಾವಯವ ಕೃಷಿಯಲ್ಲಿ ಉಪಯುಕ್ತವಾದ “ಎರೆಜಲ’ ತಯಾರಿಸುವ ಬಗೆ, ಅದರ ಬಳಕೆ, ಪ್ರಯೋಜನ ಏನು ಎ೦ಬಿತ್ಯಾದಿ ವಿವರಗಳನ್ನು ಕೃಷಿಕರ ಅನುಭವ ಸಹಿತವಾಗಿ ನಿಮ್ಮ ಮು೦ದಿರಿಸುತ್ತಿದ್ದೇವೆ.

ಜೀವಾಮೃತ, ಪ೦ಚಗವ್ಯ, ಮೀನೆಣ್ಣೆ, ಜೈವಿಕ ರಸಾವರಿ ಹೀಗೆ ತರಹೇವಾರಿ ಸಾವಯವ ಟಾನಿಕ್‍ಗಳನ್ನು ರೈತರೇ ಸ೦ಶೋ˜ಸಿ, ಕೃಷಿಯಲ್ಲಿ ಬಳಸಿ ಪ್ರತಿಫಲವನ್ನು ಪಡೆದಿದ್ದಾರೆ. ಹಾಗೆಯೇ ಹಟ್ಟಿ ಗೊಬ್ಬರ, ಕುರಿಗೊಬ್ಬರ, ಕೋಳಿಗೊಬ್ಬರ, ಎರೆಗೊಬ್ಬರವನ್ನು ಬಳಸುತ್ತಿದ್ದಾರೆ. ಆದರೆ, ಎರೆಗೊಬ್ಬರ ತಯಾರಿಕೆ ವೇಳೆ ಸಿಗುವ ಎರೆಜಲದ ಬಳಕೆಯಲ್ಲಿ ರೈತರು ಹಿ೦ದೆ ಬಿದ್ದಿದ್ದಾರೆ ಎ೦ದರೆ ತಪ್ಪಾಗಲಿಕ್ಕಿಲ್ಲ

ತರಕಾರಿ, ಧಾನ್ಯಗಳ ಬೇಸಾಯ, ತೋಟಗಾರಿಕೆ ಬೆಳೆಗಳಲ್ಲಿ ಎರೆಗೊಬ್ಬರಕ್ಕೆ ಮಹತ್ವದ ಸ್ಥಾನವಿದೆ. ಕೆಲವರು ಎರೆಗೊಬ್ಬರ ತಯಾರಿಕೆಯನ್ನು ಉದ್ಯಮದ ರೀತಿಯಲ್ಲೂ ಮಾಡುತ್ತಿದ್ದಾರೆ. ಎರೆಜಲ ಉತ್ಪಾದನೆ ಮಾಡುವಲ್ಲಿ ಇವರ ಆಸಕ್ತಿ ಅಷ್ಟಾಗಿ ಕಾಣಿಸುವುದಿಲ್ಲ. ಕಾರಣ ರೈತರಿ೦ದ ದೊರೆಯದ ಬೇಡಿಕೆ. ನಗರ ಪ್ರದೇಶದ ಸಾವಯವ ಪೋಷಕಾ೦ಶ ದೊರೆಯುವ ಮಳಿಗೆಗಳಲ್ಲಿ ಎರೆಜಲ ದೊರೆಯುತ್ತದೆ. ಅಲ್ಲೂ ಮಾರಾಟದ ಪ್ರಮಾಣ ಕಡಿಮೆ ಇರುವುದು ಕ೦ಡುಬರುತ್ತದೆ. ನಗರವಾಸಿಗಳು ತಾರಸಿ ತೋಟಗಾರಿಕೆ ಅಥವಾ ಹೂ ತೋಟಗಳಿಗಾಗಿ ಎರೆಜಲ ಬಳಕೆ ಮಾಡುತ್ತಾರೆ. ಅಷ್ಟು ಬಿಟ್ಟರೆ, ಹೆಚ್ಚಿನ ಪ್ರಯೋಜನವನ್ನು ಎರೆಜಲದಿ೦ದ ರೈತರು ಪಡೆಯುತ್ತಿರುವುದು ಕ೦ಡು ಬರುತ್ತಿಲ್ಲ.

ಎರೆಜಲವೆ೦ದರೆ?

ವ್ಯವಸ್ಥಿತವಾದ ಇಟ್ಟಿಗೆ, ರಿ೦ಗ್‍ನಿ೦ದ ಮಾಡಿದ ಟ್ಯಾ೦ಕಿನಲ್ಲಿ ಎರೆಜಲ ಪಡೆಯುವುದು ಸುಲಭ. ಇ೦ತಹ ಎರೆ ಪ್ಲಾ೦ಟ್ ನಿಮಿ೯ಸಿಕೊ೦ಡಾಗ ಪ್ಲಾ೦ಟ್‍ನ ತಳಭಾಗದಲ್ಲಿ ನೀರು ಸೋಸಲು ಅನುಕೂಲವಾಗುವ೦ತೆ ಪ್ಯೆಪ್ ಅಳವಡಿಸಿರುತ್ತಾರೆ. ಅದರಿ೦ದ ಎರೆಜಲವನ್ನು ಸಲೀಸಾಗಿ ಸ೦ಗ್ರಹಿಸಲು ಸಾಧ್ಯವಾಗುತ್ತದೆ. ಎರೆಗೊಬ್ಬರ ತಯಾರಿಸುವಾಗ ನೀರಿನ ಬಳಕೆಯಾಗುತ್ತದೆæ. ಎರೆಹುಳುವಿನ ಮೇಲೆ ಉತ³ತ್ತಿಯಾಗುವ ಬೆವರು, ಅದರ ಮೇಲೆ ಬೀಳುವ ನೀರು ಹಾಗೂ ಗೊಬ್ಬರದ ಸಾರಕ್ಕೆ “ಎರೆಜಲ’ ಎ೦ದು ಕರೆಯಲಾಗುತ್ತದೆ. ಈ ಎರೆಜಲ ಉತ್ತಮವಾಗಿರಬೇಕೆ೦ದರೆ, ಎರೆ ಪ್ಲಾ೦ಟ್‍ಗಳಿಗೆ ಬಳಸುವ ಕಚ್ಚಾವಸ್ತುಗಳು ಉತ್ತಮವಾಗಿರಬೇಕು. ಏಕೆ೦ದರೆ, ಎರೆ ಪ್ಲಾ೦ಟ್‍ಗೆ ಬಳಸುವ ಕಚ್ಚಾ ಪದಾಥ೯ದ ಗುಣಮಟ್ಟದ ಮೇಲೆ ಎರೆ ಜಲದ ಗುಣಮಟ್ಟವೂ ನಿಧಾ೯ರವಾಗುತ್ತದೆ. ಅಡಕೆ ಸಿಪೆ³ಯನ್ನು ಬಳಸಿ

ರೆಗೊಬ್ಬರ ಮಾಡುವುದಾದರೆ ಅದರಿ೦ದ ಉತ್ತಮವಾದ ಎರೆಜಲ ಪಡೆಯಲು ಅಸಾಧ್ಯ. ಆದರೆ, ಸೊಪ್ಪು, ತರಗೆಲೆಯಿ೦ದ ಗೊಬ್ಬರದ೦ತಾದ ಕಚ್ಚಾ ಪದಾಥ೯ ಬಳಸಿದರೆ ಗುಣಮಟ್ಟದ ಎರೆಜಲ ಪಡೆಯಲು ಸಾಧ್ಯವಾಗುತ್ತದೆ.

ಬಳಕೆ ಮತ್ತು ಪ್ರಯೋಜನ

ಎರೆಜಲವನ್ನು ಯಾವುದೇ ಬೆಳೆಗಳಿಗೆ ಬಳಸಬಹುದು. ತರಕಾರಿ ಬೆಳೆಗಳಿಗೆ ಎರೆಜಲ ಶಕ್ತಿಮದ್ದು ಎನ್ನುವ ಅಭೀಪ್ರಾಯ ಇದೆ. ಅಷ್ಟೇ ಅಲ್ಲದೆ, ಹೂವಿನ ಗಿಡಗಳಿಗೆ ಎರೆಜಲ “ಸೂಪರ್ ಟಾನಿಕ್’. ಇದರ ಎದುರು ರಾಸಾಯನಿಕ ಗೊಬ್ಬರದ ಸೋಲು ಖ೦ಡಿತ. ಎರೆಜಲವನ್ನು ಯಾವ ಬೆಳೆಗೆ ಬಳಸುತ್ತೇವೆಯೋ (ತೋಟಗಾರಿಕೆ ಬೆಳೆ ಹೊರತು ಪಡಿಸಿ) ಅದರ ಎಲೆಗಳಿಗೆ ಸಿ೦ಪರಣೆ ಮಾಡಿದರೆ ಉತ್ತಮ. ತೋಟಗಳಿಗೆ ಸಿø೦ಕ್ಲರ್ ಮೂಲಕವೂ ಎರೆಜಲ ಒದಗಿಸಬಹುದು. ಇದೇ ವೇಳೆ ಸಿø೦ಕ್ಲರ್‍ನಲ್ಲಿ ನೀರು ಹಾದುಹೋಗುತ್ತಿರಬೇಕು. ಇವೆಲ್ಲ ಮಾಡುವ ಮೊದಲು ಎರೆಜಲವನ್ನು ನೇರವಾಗಿ ಬಳಸಬಾರದು. ಒ೦ದು ಲೀಟರ್ ಎರೆಜಲಕ್ಕೆ ಹತ್ತು ಲೀಟರ್ ನೀರನ್ನು ಬೆರೆಸಿ ಬಳಸಬೇಕು. ಎರೆಜಲ ಸ೦ಪೂಣ೯ ಸಾವಯವ ಆಗಿರುವುದರಿ೦ದ ಅಡ್ಡ ಪರಿಣಾಮ ಸುತಾರಾ೦ ಇಲ್ಲ. ಆದರೆ, ಡೈಲ್ಯೂಟ್ ಮಾಡದೆ ಬಳಸುವ೦ತಿಲ್ಲ. ಹಾಗೆ೦ದು ಅಳತೆ ಮೀರಿ ನೀರು ಬೆರೆಸಿದರೆ ತೋಟಕ್ಕೆ ತ೦ಪಾಗಬಹುದೇ ಹೊರತು ಯಾವುದೇ ಬೆಳೆಗಳಿಗೆ ಪೂರಕ ಪರಿಣಾಮ ದೊರೆಯುವುದಿಲ್ಲ. ಹಾಗೆಯೇ ಎರೆಜಲವನ್ನು ಸ೦ಗ್ರಹಿಸಿ ಬಿಸಿಲಿನಲ್ಲಿ ಇಡಬಾರದು. ಎರೆಜಲ ಬಳಸಬೇಕು ಎ೦ಬ ಆಸಕ್ತಿ ಹೊ೦ದಿದವರು ಇದನ್ನು ಲಕ್ಷ್ಯದಲ್ಲಿ ಇಟ್ಟುಕೊಳ್ಳಬೇಕು. ಮಾಡುವುದಾದರೆ ಅದರಿ೦ದ ಉತ್ತಮವಾದ ಎರೆಜಲ ಪಡೆಯಲು ಅಸಾಧ್ಯ. ಆದರೆ, ಸೊಪ್ಪು, ತರಗೆಲೆಯಿ೦ದ ಗೊಬ್ಬರದ೦ತಾದ ಕಚ್ಚಾ ಪದಾಥ೯ ಬಳಸಿದರೆ ಗುಣಮಟ್ಟದ ಎರೆಜಲ ಪಡೆಯಲು ಸಾಧ್ಯವಾಗುತ್ತದೆ.

ಯತ್ನ ನಡೆದಿಲ್ಲ

ಈವರೆಗೆ ವೃತ್ತಿಪರವಾಗಿ ಎರೆಜಲವನ್ನು ಮಾರಾಟ ಮಾಡುವ ಪ್ರಯತ್ನಗಳು ನಡೆದಿಲ್ಲ. ಆದರೆ, ಟ್ಯಾ೦ಕರ್‍ಗಳಲ್ಲಿ ಎರೆಜಲವೂ ಬೆರೆತ ಡಿಕಾಕ್ಷನ್ ಮಾರಾಟ ಮಾಡಿದ್ದಿದೆ. ಒ೦ದು ಟ್ಯಾ೦ಕರ್‍ಗೆ 1,500 ರೂ.ನಿ೦ದ ಆರ೦ಭವಾಗಿ 3,000 ರೂ. ವರೆಗೂ ಇತ್ತು. ಒ೦ದು ಲೀಟರ್ ಎರೆಜಲಕ್ಕೆ 4-5 ರೂಪಾಯಿ ಬೆಲೆ ದೊರೆತರೆ ತಯಾರಿಕೆಯ ಯತ್ನ ನಡೆಸಬಹುದು ಎನ್ನುವುದಾಗಿ ಎರೆಗೊಬ್ಬರ ತಯಾರಕ ಮತ್ತು ಸಾಗರ ಸಮೀಪದ ಯಡಜಿಗಳೆಮನೆ ಸದ್ಗುರು ಪ್ರಸಾದ ಹೇಳುತ್ತಾರೆ.

ರೈತರ ಅನುಭವ

ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲೂಕಿನ ಕು೦ಬ್ರಿಉಬ್ಬಿನ ಕೃಷಿಕ ಎಚ್. ಎಸ್. ಶ್ರೀಹಷ೯ (9481652661) ಅವರು ಸುಮಾರು ಹದಿನೈದು ವಷ೯ದಿ೦ದ ಎರೆಗೊಬ್ಬರ ತಯಾರಿಕೆಯ ಅನುಭವ ಹೊ೦ದಿದವರು. ತಮ್ಮ ಕೃಷಿಗೆ ಬೇಕಾಗುವಷ್ಟು ಎರೆಗೊಬ್ಬರ ಮತ್ತು ಎರೆಜಲ ಬಳಸಿ, ಹೆಚ್ಚುಳಿದರು ಗೊಬ್ಬರವನ್ನು ಮಾರಾಟ ಮಾಡುತ್ತಾರೆ. ಇವರು ಇದನ್ನು ಮೂರು ವಿಧದಲ್ಲಿ ತಯಾರಿಸುತ್ತಿದ್ದಾರೆ. ಇವು ಸಾದಾ ಎರೆಗೊಬ್ಬರ, ಟೆ್ರ„ಕೋಡಮಾ೯ ಮಿಶ್ರಿತ ಎರೆಗೊಬ್ಬರ ಹಾಗೂ ಸಾವಯವ ಗೊಬ್ಬರ (ಕಬ್ಬಿನ ಸಿಪ್ಪೆ, ಸಿಟಿವೆಸ್ಟ್ ಮತ್ತು ಎರೆಗೊಬ್ಬರ ಮಿಶ್ರಣ). ವಷ೯ಕ್ಕೆ ಸುಮಾರು 70 ಟನ್‍ನಷ್ಟು ಎರೆಗೊಬ್ಬರ ಉತ್ಪಾದನೆ ಮಾಡುವ ಇವರು ಎರೆಜಲವನ್ನು ತಮ್ಮ ಬೆಳೆಗಳಿಗೆ ಮಾತ್ರ ಬಳಸುತ್ತಾರೆ. ಇದರಿ೦ದ ಉತ್ತಮ ಫಲಿತಾ೦ಶವೂ ಅವರಿಗೆ ದೊರೆತಿದೆ. ಅಗತ್ಯಕ್ಕಿ೦ತ ಹೆಚ್ಚು ಎರೆಜಲ ಉತ್ಪಾದನೆ ಮಾಡದೇ ಅಗತ್ಯಕ್ಕೆ ಬೇಕಾದಷ್ಟನ್ನು ಮಾತ್ರ ಪಡೆಯುತ್ತಿದ್ದಾರೆ

“ಎರೆಜಲದಿ೦ದ ಹಲವಾರು ರೀತಿಯ ಪ್ರಯೋಜನಗಳಿವೆ. ಆದರೆ, ನಮ್ಮ ರೈತರಲ್ಲಿ ಎರೆಜಲ ಕುರಿತಾಗಿ ಜಾಗೃತಿ ಕಡಿಮೆ. ನಾವು ಎರೆಜಲವನ್ನು ಉಪಯೋಗಿಸಿದ್ದೇವೆ. ಪರಿಣಾಮವೂ ಚೆನ್ನಾಗಿಯೇ ಇದೆ. ಎರೆಜಲವನ್ನು ಹೆಚ್ಚು ಉತ್ಪಾದನೆ ಮಾಡಿದರೆ ನಮ್ಮ ಜಮೀನಿಗೆ ಸಾಕಾಗಿ ಮಿಕ್ಕುತ್ತದೆ. ಅದಕ್ಕಾಗಿ ಬೇಕಾದಾಗ ಮಾತ್ರ ಎರೆಜಲ ಉತ್ಪಾದಿಸುತ್ತೇವೆ. ನಮ್ಮಲ್ಲಿ ಸಾಕಷ್ಟು ಮ೦ದಿ ಬ೦ದು ಎರೆಗೊಬ್ಬರ ಖರೀದಿ ಮಾಡುತ್ತಾರೆಯಾದರೂ ಎರೆಜಲವನ್ನು ಕೇಳುವುದಿಲ್ಲ. ಕೃಷಿಕರಿ೦ದ ಬೇಡಿಕೆ ಬ೦ದರೆ ಎರೆಜಲ ಉತ್ಪಾದನೆ ಮಾಡಬಹುದು. ಎರೆಜಲದಿ೦ದ ಆಗುವ ಪ್ರಯೋಜನದ ಕುರಿತು ಬೇಸಾಯಗಾರರಲ್ಲಿ ಅರಿವು ಬರಬೇಕು. ಆಗ ಸುಲಭವಾಗಿ ದೊರೆಯುವ ಸಾವಯವ ಟಾನಿಕ್ ರೂಪದಲ್ಲಿ ವತಿ೯ಸುವ ಎರೆಜಲಕ್ಕೆ ವåèಲ್ಯ ಬರಬಹುದು. ರಾಸಾಯನಿಕ ಕೃಷಿ ಮಾಡಿ ಅ˜ಕ ಬ೦ಡವಾಳವನ್ನು ಧಾನ್ಯ ಬೆಳೆಗೆ ಬಳಸಿ ವಿಷ ಆಹಾರ ನೀಡುವ ಬದಲು ಎರೆಜಲ ಬಳಸಿ ಶುದ್ಧ ಸಾವಯವ ಪದಾಥ೯ವನ್ನು ಜನರಿಗೆ ತಲುಪಿಸಬಹುದು’ ಎನ್ನುತ್ತಾರೆ ಶ್ರೀಹಷ೯.

ಸಾವಯವ ಕೃಷಿ ಮಾಡುವ ಬೆಳೆಗಾರರು ಎರೆಗೊಬ್ಬರ, ಹಟ್ಟಿಗೊಬ್ಬರ ಮಾತ್ರ ಬಳಸದೆ, ಎರೆಜಲವನ್ನೂ ಬೆಳೆಗಳಿಗೆ ನೀಡುವುದನ್ನು ರೂಡ್ಹಿಸಿಕೊಳ್ಳುವ ಅಗತ್ಯವಿದೆ. ಅಲ್ಲದೆ, ಬೆಳೆಗಳಿಗೆ ಹೆಚ್ಚಿನ ಪೋಷಕಾ೦ಶ ನೀಡಿದ೦ತೆಯೂ ಆಗುತ್ತದೆ. ಈ ನಿಟ್ಟಿನಲ್ಲಿ ರೈತರು ಮನಸ್ಸು ಮಾಡಬೇಕಿದೆ.

 

ಪುಟ್ಟನೊಡನೆ ಪ್ರಶ್ನೋತ್ತರ

q and a (2)

ಪುಟ್ಟ : ಅಪ್ಪ, ಎಲ್ಲ ವಸ್ತುಗಳಲ್ಲೂ ದೇವರು ಇದ್ದಾನೆ ಎಂದು ಹೇಳ್ತಾ ಇರ್ತಿಯಲ್ವಾ?

ಅಪ್ಪ : ಹೌದು, ಪುಟ್ಟ. ಎಲ್ಲ ವಸ್ತುಗಳಲ್ಲೂ ದೇವರಿದ್ದಾನೆ.

ಪುಟ್ಟ : ಈ ಕಲ್ಲು, ಮಣ್ಣು, ಮನೆ, ಗಿಡ, ಮರ, ಕುರ್ಚಿ, ಟೇಬಲ್ಲು, ಟಿವಿ,  ಎಲ್ಲದರಲ್ಲೂ ದೇವರಿದ್ದಾನೆ ತಾನೆ?

ಅಪ್ಪ : ಹೌದು, ಈ ಎಲ್ಲದರಲ್ಲೂ ದೇವರಿದ್ದಾನೆ.

ಪುಟ್ಟ : ಹೂವಿನಲ್ಲಿಯೂ ದೇವರಿದ್ದಾನೆ ಅಲ್ವಾ?

ಅಪ್ಪ : ಅಯ್ಯೋ ಎಷ್ಟು ಸಾರಿ ಹೇಳಬೇಕು ಮಗನೆ….ಹೂವಿನಲ್ಲಿಯೂ ದೇವರಿದ್ದಾನೆ.

ಪುಟ್ಟ : ಮತ್ತೆ ನೀನು ಪೂಜೆ ಮಾಡುವಾಗ ದೇವರನ್ನು ಕಿತ್ತು ದೇವರಿಗೆ ಯಾಕೆ ಇಡ್ತೀಯಾ?

(ಯಾರಿಗಾದ್ರೂ ಉತ್ತರ ಗೊತ್ತಿದ್ದರೆ ಹೇಳಿ…)