ಮಣ್ಣ ತಿಂದು ಸಿಹಿಹಣ್ಣ ಕೊಡುವ ಮರಕ್ಕೆ 300

Picture 063

4

ಮೊನ್ನೆತಾನೆ ಬಿಡುಗಡೆಯಾದ ಕನ್ನಡ ಚಲನಚಿತ್ರವೊಂದಕ್ಕೆ ಹೋಗೋಣ ಎಂದು ನನ್ನ ಕಸಿನ್ ವಿಕಾಸ್ ಗೆ ಹೇಳಿದಾಗ, “ಆ ಚಿತ್ರ ನೋಡಲು ಬಟ್ಟೆ ಹಾಕಿಕೊಂಡು ಹೋಗಬಾರದು ಮಾರಾಯಾ” ಎಂದ. ಯಾಕೆ ಎಂದು ಆಶ್ಚರ್ಯದಿಂದ ಕೇಳಿದಾಗ, “ಥೇಟರ್ ನಲ್ಲಿ ಆ ಚಿತ್ರವನ್ನು ನೋಡತ್ತ ಬಟ್ಟೆ ಹರಿದುಕೊಳ್ಳಬೇಕಾಗುತ್ತದೆ” ಎಂದ.

ಈ ಮಾತನ್ನು ಇಂದು ಕಿರುತೆರೆಯಲ್ಲಿ ಪ್ರಸಾರವಾಗುತ್ತಿರುವ ಸಾಕಷ್ಟು ಧಾರವಾಹಿಗಳಿಗೆ ಕೂಡ ಅನ್ವಯಿಸಬಹುದು. ಹೆಣದ ಮುಂದೆ ವಿಕಾರವಾಗಿ ಅಳುವುದು, ತನ್ನ ಗಂಡೊನೊಬ್ಬನನ್ನು ಬಿಟ್ಟು ಭೂಮಂಡಲದ ಬೇರೆಲ್ಲರ ಗಂಡಂದಿರನ್ನು ಪ್ರೀತಿಸುವುದು(?), ಅವಾಚ್ಯ ಶಬ್ದಗಳಿಂದ ಬಯ್ಯುವುದು, ಹೀಗೆ ವಿಚಿತ್ರ ಸನ್ನಿವೇಶಗಳನ್ನು ಧಾರಾವಾಹಿಗಳಲ್ಲಿ ನೋಡುತ್ತಿದ್ದರೆ ಬಟ್ಟೆಯನ್ನು ಹರಿದುಕೊಳ್ಳುವುದರ ಜೊತೆಗೆ ತಲೆ ಕೂದಲು ಕಿತ್ತುಕೊಳ್ಳುವಷ್ಟು ರೇಜಿಗೆಯಾಗುತ್ತದೆ.

ಕನ್ನಡ ಧಾರಾವಾಹಿಗಳು ಸಮಾಜದ ಕೆಟ್ಟದ್ದನ್ನೇ ತೋರಿಸಿ ಟಿಆರ್ ಪಿ ಹೆಚ್ಚಿಸಿಕೊಳ್ಳವ ಪ್ರಯತ್ನ ಮಾಡುತ್ತಿರುವ ಸಂದರ್ಭದಲ್ಲೇ ಸಂತಸದ ಸುದ್ದಿಯೊಂದಿದೆ. ಸೆನ್ಸಿಬಲ್ ಎನ್ನಿಸುವ ಹಾಗೂ ಶ್ರೀಸಾಮಾನ್ಯನನ್ನು, ವ್ಯವಸ್ಥೆಯನ್ನು ಕಾಡುವ ಪ್ರಶ್ನೆಗಳನ್ನು, ಸವಾಲುಗಳನ್ನು ಮುಂದಿಟ್ಟುಕೊಂಡು ಕಿರುತೆರೆಯಲ್ಲಿ ಧಾರಾವಾಹಿಗಳನ್ನು ನಿರ್ದೇಶಿಸುತ್ತ ಬಂದಿರುವ ಟಿ. ಎನ್. ಸೀತಾರಾಮ್ ಇದೀಗ ಮತ್ತೊಂದು ಮೈಲಿಗಲ್ಲು ದಾಟಿದ್ದಾರೆ. ಅವರ ನಿರ್ದೇಶನದ ‘ಮುಕ್ತ ಮುಕ್ತ’ ಧಾರವಾಹಿ ನಿನ್ನೆ 300 ಸಂಚಿಕೆಗಳನ್ನು ಪೂರೈಸಿದೆ.

ಸಕಲೇಶಪುರದಲ್ಲಿ ನಡೆದ ಮುಕ್ತ ಮುಕ್ತ ಸಂವಾದದ ಸಂದರ್ಭದಲ್ಲಿ ಕಪ್ಪಣ್ಣನವರು “ಮುಕ್ತ ಮುಕ್ತ ಇತರ ಧಾರಾವಾಹಿಗಳಿಗಿಂತ ಏಕೆ ಭಿನ್ನ ಎನಿಸುತ್ತದೆ” ಎಂದು ಕೇಳಿದ್ದರು. ಅದಕ್ಕೆ ಉತ್ತರಿಸುತ್ತ ನಾನು, “ಪ್ರತಿಯೊಂದು ಸಮೂಹ ಮಾಧ್ಯಮಕ್ಕೆ ಸಾಮಾಜಿಕ ಜವಾಬ್ದಾರಿಯೊಂದಿರುತ್ತದೆ. ಮಾಧ್ಯಮ ಕೇವಲ ಹೊಟ್ಟೆಪಾಡಿನ ದಾರಿಯಾಗಬಾರದು. ನಾಟಕ, ವೃತ್ತಪತ್ರಿಕೆ, ಚಾನೆಲ್, ಹೀಗೆ ಪ್ರತಿಯೊಂದಕ್ಕೂ ಈ ಸಾಮಾಜಿಕ ಜವಾಬ್ದಾರಿಯಿದೆ. ಆದರೆ ಈ ಜವಾಬ್ದಾರಿಯನ್ನು ಎಷ್ಟರಮಟ್ಟಿಗೆ ಸಮರ್ಪಕವಾಗಿ ನಿರ್ವಹಿಸಲಾಗುತ್ತಿದೆ ಎಂದು ಪರಿಶೀಲಿಸಿದರೆ ನಿರಾಸೆಯಾಗುತ್ತದೆ. ಹತ್ತನೆ ತರಗತಿಯಲ್ಲಿ ಫೇಲ್ ಆದೆ ಎಂದು ಆತ್ಮಹತ್ಯೆ ಮಾಡಿಕೊಂಡಿರುವ ವಿದ್ಯಾರ್ಥಿಯ ಸುದ್ದಿ ಪ್ರಥಮ ಪುಟದಲ್ಲಿ ಬಂದಿದ್ದರೆ, ಕಾಲಿನಲ್ಲಿ ಪರೀಕ್ಷೆ ಬರೆದು ದ್ವೀತಿಯ ದರ್ಜೆಯಲ್ಲಿ ಪಾಸಾದ ವಿದ್ಯಾರ್ಥಿಯ ಸುದ್ದಿ ಒಳಪುಟದಲ್ಲೆಲ್ಲೋ ಅಡಗಿಕೊಂಡಿರುತ್ತದೆ. ಧಾರಾವಾಹಿಗಳು ಸಹ ಸಮೂಹ ಮಾಧ್ಯಮಗಳಾಗಿದ್ದು, ಪ್ರಸ್ತುತ ಸನ್ನಿವೇಶದಲ್ಲಿ ರೈತರು, ಎಸ್ಇಝೆಡ್, ಭ್ರಷ್ಟಾಚಾರ, ಹಲವಾರು ಕೌಟುಂಬಿಕ ಸಮಸ್ಯೆಗಳನ್ನಿಟ್ಟುಕೊಂಡು ಅವುಗಳನ್ನು ಹಲವು ಬಾರಿ ಹಾಸ್ಯದ ಮೂಲಕವೇ ಪ್ರಸ್ತುತ ಪಡಿಸುತ್ತಿರುವ ‘ಮುಕ್ತ ಮುಕ್ತ’ ಉಳಿದ ಧಾರಾವಾಹಿಗಳಿಗಿಂತ ಭಿನ್ನ ಎನಿಸುತ್ತದೆ” ಎಂದಿದ್ದೆ. ನಂತರ ನಡೆದ ಸಂವಾದದಲ್ಲಿ ಮಾತನಾಡುತ್ತ, ಟಿ. ಎನ್. ಸೀತಾರಾಮ್ “ನಾನು ಕೇವಲ ರೈತರು ಮತ್ತು ಬಡವರ ಸಮಸ್ಯೆಗಳನ್ನು ತೋರಿಸಿದರೆ ಆಡ್ಸ್ ಕೂಡ ಬರುವುದಿಲ್ಲ. ಕಂಟೆಂಟ್ ನ ಮೇಲೆ ಆಡ್ ನಿರ್ಧಾರಿತವಾಗುತ್ತದೆ. ಸಾಧ್ಯವಾದಷ್ಟರ ಮಟ್ಟಿಗೆ ಈ ರೀತಿಯ ಸಮಸ್ಯೆಗಳನ್ನು ಬಿಂಬಿಸುವ ಪ್ರಯತ್ನ ಮಾಡುತ್ತೇನೆ” ಎಂದಿದ್ದರು.

ಹೀಗೆ ತನ್ನ ಪ್ರಯತ್ನ ಮುಂದುವರೆಸುತ್ತಲೇ ಮುಕ್ತ ಮುಕ್ತ 300 ಸಂಚಿಕೆಗಳನ್ನು ಪೂರೈಸಿದೆ.

ಜನ ಮುಕ್ತ ಮುಕ್ತವನ್ನು ಎಷ್ಟು ಸೂಕ್ಷ್ಮವಾಗಿ ಅವಲೋಕಿಸುತ್ತಾರೆ ಎಂಬುದನ್ನು ಸಂವಾದದಲ್ಲಿ ಭಾಗವಹಿಸಿಯೇ ಅರಿಯಬೇಕು. ಪ್ರತಿಯೊಂದು ಶಾಟ್ ಬಗ್ಗೆ ಜನರ ಪ್ರಶ್ನೆಗಳಿರುತ್ತವೆ. ಒಂದು ನಗು, ಒಂದು ಅಳು, ಒಂದು ರಿಯಾಕ್ಷನ್, ಒಂದು ಮೂವ್ ಮೆಂಟ್ ಹೀಗೆ ಪ್ರತಿಯೊಂದು ಸೂಕ್ಷ್ಮತೆಯ ಬಗ್ಗೆ ಜನರು ವಿವರವಾಗಿ ಪ್ರಶ್ನೆ ಕೇಳುವುದನ್ನು ನೋಡಿದರೆ ಮುಕ್ತ ಮುಕ್ತದ ಕುರಿತು ಜನರ ಆಸಕ್ತಿ ಎಷ್ಟಿದೆ ಎಂಬುದರ ಅರಿವಾಗುತ್ತದೆ. ಸಂವಾದದಲ್ಲಿ ಪಾತ್ರಕ್ಕೆ ಅನ್ಯಾಯವಾಗುತ್ತಿದೆ ಎಂದು ಜನರು ಟಿ. ಎನ್. ಸೀತಾರಾಮ್ ರನ್ನು ಘೇರಾವ್ ಹಾಕಿದ್ದಿದೆ, ತಮ್ಮ ಪ್ರಶ್ನೆಗಳನ್ನು ಅಧಿಕಾರಯುತವಾಗಿ ಕೇಳಿದ್ದಿದೆ, ತಮಗೆ ತಪ್ಪು ಎನಿಸಿದ್ದನ್ನು ಖಡಾಖಂಡಿತವಾಗಿ  ಹೇಳಿದ್ದಿದೆ. ಹೀಗೆ ಜನರ ಫೀಡ್ ಬ್ಯಾಕ್ ಪಡೆದುಕೊಂಡು ಧಾರಾವಾಹಿಯೊಂದು ಸಾಗುತ್ತಿರುವುದು ಇದೇ ಪ್ರಥಮ. ಜನರ ಒತ್ತಡಕ್ಕೆ ಮಣಿದು ಕಥೆ ಬದಲಾಯಿಸಿದ ಉದಾಹರಣೆ ಇಲ್ಲಿ ಮಾತ್ರ ಸಾಧ್ಯ.

ಈ ಧಾರಾವಾಹಿಯಲ್ಲಿ ಪಾತ್ರ ಮಾಡುತ್ತಿರುವುದು ನನಗೆ ಸಂತಸದ ಜೊತೆಗೆ ಆತ್ಮತೃಪ್ತಿಯ ವಿಷಯ ಕೂಡ. ಇಲ್ಲಿನ ಹಲವು ಡೈಲಾಗ್ ಗಳು ಹಲವು ಬಾರಿ ನನ್ನ ನಿಜವಾದ ಅಭಿಪ್ರಾಯಗಳು ಎನಿಸಿದ್ದಿದೆ. ಹೀಗಾಗಿ ನಟನೆಯೆಂಬುದು ಸಹಜವಾಗುತ್ತದೆ. ಮುಕ್ತ ಮುಕ್ತ ಮತ್ತಷ್ಟು ಸತ್ವಯುತವಾಗಿ ಮೂಡಿಬರಲಿ ಎಂಬುದು ಆಶಯ. ಮಣ್ಣ ತಿಂದು ಸಿಹಿ ಹಣ್ಣ ಕೊಡುವ ಮರ ನೀಡಿ ನೀಡಿ ಮುಕ್ತ……

ಮೊನ್ನೆತಾನೆ ಬಿಡುಗಡೆಯಾದ ಕನ್ನಡ ಚಲನಚಿತ್ರವೊಂದಕ್ಕೆ ಹೋಗೋಣ ಎಂದು ನನ್ನ ಕಸಿನ್ ವಿಕಾಸ್ ಗೆ ಹೇಳಿದಾಗ, ಆ ಚಿತ್ರ ನೋಡಲು ಬಟ್ಟೆ ಹಾಕಿಕೊಂಡು ಹೋಗಬಾರದು ಮಾರಾಯಾ ಎಂದ. ಯಾಕೆ ಎಂದು ಆಶ್ಚರ್ಯದಿಂದ ಕೇಳಿದಾಗ, ಥೇಟರ್ ನಲ್ಲಿ ಆ ಚಿತ್ರವನ್ನು ನೋಡತ್ತ ಬಟ್ಟೆ ಹರಿದುಕೊಳ್ಳಬೇಕಾಗುತ್ತದೆ ಎಂದ.

ಈ ಮಾತನ್ನು ಇಂದು ಕಿರುತೆರೆಯಲ್ಲಿ ಪ್ರಸಾರವಾಗುತ್ತಿರುವ ಸಾಕಷ್ಟು ಧಾರವಾಹಿಗಳಿಗೆ ಕೂಡ ಅನ್ವಯಿಸಬಹುದು. ಹೆಣದ ಮುಂದೆ ವಿಕಾರವಾಗಿ ಅಳುವುದು, ತನ್ನ ಗಂಡೊನೊಬ್ಬನನ್ನು ಬಿಟ್ಟು ಭೂಮಂಡಲದ ಬೇರೆಲ್ಲರ ಗಂಡಂದಿರನ್ನು ಪ್ರೀತಿಸುವುದು(?), ಅವಾಚ್ಯ ಶಬ್ದಗಳಿಂದ ಬಯ್ಯುವುದು, ಹೀಗೆ ವಿಚಿತ್ರ ಸನ್ನಿವೇಶಗಳನ್ನು ಧಾರಾವಾಹಿಗಳಲ್ಲಿ ನೋಡುತ್ತಿದ್ದರೆ ಬಟ್ಟೆಯನ್ನು ಹರಿದುಕೊಳ್ಳುವುದರ ಜೊತೆಗೆ ತಲೆ ಕೂದಲು ಕಿತ್ತುಕೊಳ್ಳುವಷ್ಟು ರೇಜಿಗೆಯಾಗುತ್ತದೆ.

ಕನ್ನಡ ಧಾರಾವಾಹಿಗಳು ಸಮಾಜದ ಕೆಟ್ಟದ್ದನ್ನೇ ತೋರಿಸಿ ಟಿಆರ್ ಪಿ ಹೆಚ್ಚಿಸಿಕೊಳ್ಳವ ಪ್ರಯತ್ನ ಮಾಡುತ್ತಿರುವ ಸಂದರ್ಭದಲ್ಲೇ ಸಂತಸದ ಸುದ್ದಿಯೊಂದಿದೆ. ಸೆನ್ಸಿಬಲ್ ಎನ್ನಿಸುವ ಹಾಗೂ ಶ್ರೀಸಾಮಾನ್ಯನನ್ನು, ವ್ಯವಸ್ಥೆಯನ್ನು ಕಾಡುವ ಪ್ರಶ್ನೆಗಳನ್ನು, ಸವಾಲುಗಳನ್ನು ಮುಂದಿಟ್ಟುಕೊಂಡು ಕಿರುತೆರೆಯಲ್ಲಿ ಧಾರಾವಾಹಿಗಳನ್ನು ನಿರ್ದೇಶಿಸುತ್ತ ಬಂದಿರುವ ಟಿ. ಎನ್. ಸೀತಾರಾಮ್ ಇದೀಗ ಮತ್ತೊಂದು ಮೈಲಿಗಲ್ಲು ದಾಟಿದ್ದಾರೆ. ಅವರ ನಿರ್ದೇಶನದ ಮುಕ್ತ ಮುಕ್ತ ಧಾರವಾಹಿ ನಿನ್ನೆ 300 ಸಂಚಿಕೆಗಳನ್ನು ಪೂರೈಸಿದೆ.

ಸಕಲೇಶಪುರದಲ್ಲಿ ನಡೆದ ಮುಕ್ತ ಮುಕ್ತ ಸಂವಾದದ ಸಂದರ್ಭದಲ್ಲಿ ಕಪ್ಪಣ್ಣನವರು ಮುಕ್ತ ಮುಕ್ತ ಇತರ ಧಾರಾವಾಹಿಗಳಿಗಿಂತ ಏಕೆ ಭಿನ್ನ ಎನಿಸುತ್ತದೆ ಎಂದು ಕೇಳಿದ್ದರು. ಅದಕ್ಕೆ ಉತ್ತರಿಸುತ್ತ ನಾನು, ಪ್ರತಿಯೊಂದು ಸಮೂಹ ಮಾಧ್ಯಮಕ್ಕೆ ಸಾಮಾಜಿಕ ಜವಾಬ್ದಾರಿಯೊಂದಿರುತ್ತದೆ. ಮಾಧ್ಯಮ ಕೇವಲ ಹೊಟ್ಟೆಪಾಡಿನ ದಾರಿಯಾಗಬಾರದು. ನಾಟಕ, ವೃತ್ತಪತ್ರಿಕೆ, ಚಾನೆಲ್, ಹೀಗೆ ಪ್ರತಿಯೊಂದಕ್ಕೂ ಈ ಸಾಮಾಜಿಕ ಜವಾಬ್ದಾರಿಯಿದೆ. ಆದರೆ ಈ ಜವಾಬ್ದಾರಿಯನ್ನು ಎಷ್ಟರಮಟ್ಟಿಗೆ ಸಮರ್ಪಕವಾಗಿ ನಿರ್ವಹಿಸಲಾಗುತ್ತಿದೆ ಎಂದು ಪರಿಶೀಲಿಸಿದರೆ ನಿರಾಸೆಯಾಗುತ್ತದೆ. ಹತ್ತನೆ ತರಗತಿಯಲ್ಲಿ ಫೇಲ್ ಆದೆ ಎಂದು ಆತ್ಮಹತ್ಯೆ ಮಾಡಿಕೊಂಡಿರುವ ವಿದ್ಯಾರ್ಥಿಯ ಸುದ್ದಿ ಪ್ರಥಮ ಪುಟದಲ್ಲಿ ಬಂದಿದ್ದರೆ, ಕಾಲಿನಲ್ಲಿ ಪರೀಕ್ಷೆ ಬರೆದು ದ್ವೀತಿಯ ದರ್ಜೆಯಲ್ಲಿ ಪಾಸಾದ ವಿದ್ಯಾರ್ಥಿಯ ಸುದ್ದಿ ಒಳಪುಟದಲ್ಲೆಲ್ಲೋ ಅಡಗಿಕೊಂಡಿರುತ್ತದೆ. ಧಾರಾವಾಹಿಗಳು ಸಹ ಸಮೂಹ ಮಾಧ್ಯಮಗಳಾಗಿದ್ದು, ಪ್ರಸ್ತುತ ಸನ್ನಿವೇಶದಲ್ಲಿ ರೈತರು, ಎಸ್ಇಝೆಡ್, ಭ್ರಷ್ಟಾಚಾರ, ಹಲವಾರು ಕೌಟುಂಬಿಕ ಸಮಸ್ಯೆಗಳನ್ನಿಟ್ಟುಕೊಂಡು ಅವುಗಳನ್ನು ಹಲವು ಬಾರಿ ಹಾಸ್ಯದ ಮೂಲಕವೇ ಪ್ರಸ್ತುತ ಪಡಿಸುತ್ತಿರುವ ಮುಕ್ತ ಮುಕ್ತ ಉಳಿದ ಧಾರಾವಾಹಿಗಳಿಗಿಂತ ಭಿನ್ನ ಎನಿಸುತ್ತದೆ ಎಂದಿದ್ದೆ. ನಂತರ ನಡೆದ ಸಂವಾದದಲ್ಲಿ ಮಾತನಾಡುತ್ತ, ಟಿ. ಎನ್. ಸೀತಾರಾಮ್ ನಾನು ಕೇವಲ ರೈತರು ಮತ್ತು ಬಡವರ ಸಮಸ್ಯೆಗಳನ್ನು ತೋರಿಸಿದರೆ ಆಡ್ಸ್ ಕೂಡ ಬರುವುದಿಲ್ಲ. ಕಂಟೆಂಟ್ ನ ಮೇಲೆ ಆಡ್ ನಿರ್ಧಾರಿತವಾಗುತ್ತದೆ. ಸಾಧ್ಯವಾದಷ್ಟರ ಮಟ್ಟಿಗೆ ಈ ರೀತಿಯ ಸಮಸ್ಯೆಗಳನ್ನು ಬಿಂಬಿಸುವ ಪ್ರಯತ್ನ ಮಾಡುತ್ತೇನೆ ಎಂದಿದ್ದರು.

ಹೀಗೆ ತನ್ನ ಪ್ರಯತ್ನ ಮುಂದುವರೆಸುತ್ತಲೇ ಮುಕ್ತ ಮುಕ್ತ 300 ಸಂಚಿಕೆಗಳನ್ನು ಪೂರೈಸಿದೆ.

ಜನ ಮುಕ್ತ ಮುಕ್ತವನ್ನು ಎಷ್ಟು ಸೂಕ್ಷ್ಮವಾಗಿ ಅವಲೋಕಿಸುತ್ತಾರೆ ಎಂಬುದನ್ನು ಸಂವಾದದಲ್ಲಿ ಭಾಗವಹಿಸಿಯೇ ಅರಿಯಬೇಕು. ಪ್ರತಿಯೊಂದು ಶಾಟ್ ಬಗ್ಗೆ ಜನರ ಪ್ರಶ್ನೆಗಳಿರುತ್ತವೆ. ಒಂದು ನಗು, ಒಂದು ಅಳು, ಒಂದು ರಿಯಾಕ್ಷನ್, ಒಂದು ಮೂವ್ ಮೆಂಟ್ ಹೀಗೆ ಪ್ರತಿಯೊಂದು ಸೂಕ್ಷ್ಮತೆಯ ಬಗ್ಗೆ ಜನರು ವಿವರವಾಗಿ ಪ್ರಶ್ನೆ ಕೇಳುವುದನ್ನು ನೋಡಿದರೆ ಮುಕ್ತ ಮುಕ್ತದ ಕುರಿತು ಜನರ ಆಸಕ್ತಿ ಎಷ್ಟಿದೆ ಎಂಬುದರ ಅರಿವಾಗುತ್ತದೆ. ಸಂವಾದದಲ್ಲಿ ಪಾತ್ರಕ್ಕೆ ಅನ್ಯಾಯವಾಗುತ್ತಿದೆ ಎಂದು ಜನರು ಟಿ. ಎನ್. ಸೀತಾರಾಮ್ ರನ್ನು ಘೇರಾವ್ ಹಾಕಿದ್ದಿದೆ, ತಮ್ಮ ಪ್ರಶ್ನೆಗಳನ್ನು ಅಧಿಕಾರಯುತವಾಗಿ ಕೇಳಿದ್ದಿದೆ, ತಮಗೆ ತಪ್ಪು ಎನಿಸಿದ್ದನ್ನು ಖಡಾಖಂಡಿತವಾಗಿ ಹೇಳಿದ್ದಿದೆ. ಹೀಗೆ ಜನರ ಫೀಡ್ ಬ್ಯಾಕ್ ಪಡೆದುಕೊಂಡು ಧಾರಾವಾಹಿಯೊಂದು ಸಾಗುತ್ತಿರುವುದು ಇದೇ ಪ್ರಥಮ. ಜನರ ಒತ್ತಡಕ್ಕೆ ಮಣಿದು ಕಥೆ ಬದಲಾಯಿಸಿದ ಉದಾಹರಣೆ ಇಲ್ಲಿ ಮಾತ್ರ ಸಾಧ್ಯ.

ಈ ಧಾರಾವಾಹಿಯಲ್ಲಿ ಪಾತ್ರ ಮಾಡುತ್ತಿರುವುದು ನನಗೆ ಸಂತಸದ ಜೊತೆಗೆ ಆತ್ಮತೃಪ್ತಿಯ ವಿಷಯ ಕೂಡ. ಇಲ್ಲಿನ ಹಲವು ಡೈಲಾಗ್ ಗಳು ಹಲವು ಬಾರಿ ನನ್ನ ನಿಜವಾದ ಅಭಿಪ್ರಾಯಗಳು ಎನಿಸಿದ್ದಿದೆ. ಹೀಗಾಗಿ ನಟನೆಯೆಂಬುದು ಸಹಜವಾಗುತ್ತದೆ. ಮುಕ್ತ ಮುಕ್ತ ಮತ್ತಷ್ಟು ಸತ್ವಯುತವಾಗಿ ಮೂಡಿಬರಲಿ ಎಂಬುದು ಆಶಯ. ಮಣ್ಣ ತಿಂದು ಸಿಹಿ ಹಣ್ಣ ಕೊಡುವ ಮರ ನೀಡಿ ನೀಡಿ ಮುಕ್ತ……

1 thoughts on “ಮಣ್ಣ ತಿಂದು ಸಿಹಿಹಣ್ಣ ಕೊಡುವ ಮರಕ್ಕೆ 300

  1. ಸರ್,
    ಇದರ ಮೊದಲನೆ ಸಾಲುಗಳು ಮುಕ್ತ ಮುಕ್ತಕ್ಕೂ ಅನ್ವಯಿಸುತ್ತದೆ. ಮಾಯಾಮೃಗ ಮತ್ತು ಮನ್ವಂತರ ಚೆನ್ನಾಗಿದ್ದವು ಆಮೇಲೆ ಬಂದ ಎಲ್ಲ ಸೀತಾರಾಂ ಧಾರಾವಾಹಿಗಳು ಏಕತಾನತೆಯಿಂದ ಬಳಲುತ್ತಿವೆ. ಟಿ ಆರ್ ಪಿ ಗೋಸ್ಕರ ಹಿಗ್ಗಾ ಮುಗ್ಗಾ ಎಳೆದಾಡುವುದು ಅಸಹ್ಯವೆನಿಸುತ್ತಿದೆ. ನ್ಯಾಯಾಲಯದ ದೃಶ್ಯಗಳಲ್ಲಂತೂ ೫ ವರ್ಷದ ನನ್ನ ಮಗನೂ ಹೀಗೆ ಆಗುತ್ತೆ ಅಂತ ಊಹಿಸುತ್ತಿದ. ಇದರ ಮಧ್ಯೆ ರೈತ ಚಳುವಳಿ ಸೀತಾರಾಮರ ಇಷ್ಟದ ರಾಜಕೀಯ ಅಬ್ಬ ನೋಡದಿರುವುದೆ ಒಳಿತೆನಿಸುತ್ತಿದೆ. ಸರ್ ಸೀತಾರಾಂ ಅವರ ಧಾರಾವಾಹಿ ಹೀಗೆ ಇರುತ್ತದೆಯೆಂದು ಎಲ್ಲರೂ ಊಹಿಸಲು ಪ್ರಾರಂಭಿಸಿದ್ದಾರೆ.
    ನಿಮ್ಮ ಈ ಟೀವಿಯ ಗುಪ್ತಗಾಮಿನಿ ನಿಲ್ಲಿಸದಿದ್ದರೆ ನಾನು ನೇಣುಹಾಕಿಕೊಳ್ಳುತ್ತೇನೆಂದು ಬೆದರಿಕೆ ಹಾಕೋಣವೆ ಎಂದು ನನ್ನ ಸ್ನೇಹಿತ ಕೇಳುತ್ತಿರುತ್ತಾನೆ. ಆದ್ರೆ ಅದನ್ನೆ ಅದರ ಪ್ರಚಾರಕ್ಕೆ ಬಳಸಿಕೊಳ್ಳುವ ಭಯವಿದೆಯಲ್ಲ ಏನ್ಮಾಡೋದು?

    Like

Leave a reply to ಪ್ರಸನ್ನ ಪ್ರತ್ಯುತ್ತರವನ್ನು ರದ್ದುಮಾಡಿ

This site uses Akismet to reduce spam. Learn how your comment data is processed.